ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಹಾಕಿಯಲ್ಲಿ ಚಿನ್ನ ಗೆದ್ದ ಪಂಜಾಬ್ ಬಾಲಕರು ; ಕರ್ನಾಟಕದ ಬೋರ್ಜಿ ಮತ್ತು ರಾಜಸ್ಥಾನದ ಕಸ್ವಾನ್ ರೋಡ್ ರೇಸಿಂಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ
Posted On:
10 JUN 2022 5:36PM by PIB Bengaluru
ಹಿಂದಿನ ಆವೃತ್ತಿಗಳಲ್ಲಿ ಎರಡು ಬಾರಿ ಎಡವಿದ್ದ ಪಂಜಾಬ್, ಶುಕ್ರವಾರ ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು ಬಹು ನಿರೀಕ್ಷಿತ ಬಾಲಕರ ಹಾಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬೆಳಗಿನ ಸೆಷೆನ್‌ನ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ನಿರಂತರವಾಗಿ ಬದಲಾಗುತ್ತಿರುವ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿತು.
ಕರ್ನಾಟಕದ ಚೈತ್ರಾ ಬೋರ್ಜಿ ಅವರು ಬಾಲಕಿಯರ ರೋಡ್ ಸೈಕ್ಲಿಂಗ್ ಟೈಮ್ ಟ್ರಯಲ್ 20 ಕಿ.ಮೀ ಪಂದ್ಯನಲ್ಲಿ (32:51.84 ಸೆಕೆಂಡುಗಳು) 11ನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಹರಿಯಾಣ (33) ಮತ್ತು ಮಹಾರಾಷ್ಟ್ರ (32) ತಂಡಗಳು ತಮ್ಮ ಹಿಂದಿನ ಸಂಜೆಯ ಉನ್ನತ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಗಿನ ಪಂದ್ಯದಲ್ಲಿ ಯಾವುದೇ ಚಿನ್ನ ಗಳಿಸುವಲ್ಲಿ ವಿಫಲವಾದವು.
ತಮ್ಮ ತಂಡದಲ್ಲಿನ ಏಕೈಕ ಮಹಿಳಾ ಸೈಕ್ಲಿಸ್ಟ್ ಲೀಕ್ಜೆಸ್ ಆಂಗ್ಮೊ ಅವರು, 33:52.52 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಬೊರ್ಜಿಯ ನಂತರ ಎರಡನೇ ಸ್ಥಾನ ಪಡೆದು, ಆ ಮೂಲಕ ಪುಟ್ಟ ಲಡಾಖ್ ಕ್ರೀಡಾಕೂಟಕ್ಕೆ ತನ್ನ ಮೊದಲ ಪದಕವನ್ನು ಗೆಲ್ಲಲು ಸಹಾಯ ಮಾಡಿದರು. ರಾಜಸ್ಥಾನದ ಮುಖೇಶ್ ಕಸ್ವಾನ್ ಬಾಲಕರ ಟೈಮ್ ಟ್ರಯಲ್ 30 ಕಿ.ಮೀ. ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಆದಿಲ್ ಅಲ್ತಾಫಿಗಿಂತ ತ್ವರಿತವಾಗಿ ಗುರಿ ತಲುಪಿ ಪದಕ ತಮ್ಮದಾಗಿಸಿಕೊಂಡರು.
ನೀಲಿ ಹಾಕಿ ಟರ್ಫ್‌ನ ರೋಮಾಂಚಕ ಫೈನಲ್‌ನಲ್ಲಿ, ಭರತ್ ಠಾಕೂರ್ ಅವರ ಭರ್ಜರಿ ಪ್ರದರ್ಶನದೊಂದಿಗೆ ಉತ್ತರ ಪ್ರದೇಶವನ್ನು ಪಂಜಾಬ್ 3-1ರಿಂದ ಸೋಲಿಸಿತು.
ಭರತ್ ಠಾಕೂರ್ (4ನೇ ಮತ್ತು 47ನೇ) ಮತ್ತು ರಾಜಿಂದರ್ ಸಿಂಗ್ ತಮ್ಮ 5ನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪರಿವರ್ತಿಸಿ ರಾಷ್ಟ್ರೀಯ ಚಾಂಪಿಯನ್ನರ ದಾಳಿಯನ್ನು ಹತ್ತಿಕ್ಕಿದರು. 11ನೇ ನಿಮಿಷದಲ್ಲಿ ತಂಡದ ನಾಯಕಿ ಶಾರದಾ ನಂದ್ ತಿವಾರಿ ಅವರ ಮೂಲಕ ಯುಪಿ 10 ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತಾದರೂ ಕೇವಲ ಒಂದು ಪೆನಾಲ್ಟಿ ಕಾರ್ನರ್ ಅನ್ನು ಮಾತ್ರ ಪರಿವರ್ತಿಸುವಲ್ಲಿ ಸಫಲವಾಯಿತು.
"ನಾವು ಎರಡು ಬಾರಿ ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಪೋಡಿಯಂ ಏರಿದ್ದೇವು. ಆದರೆ ಇಂದು ಹುಡುಗರು ಪರಿಪೂರ್ಣ ಹಾಕಿಯನ್ನು ಪ್ರದರ್ಶಿಸಿದ್ದಾರೆ,ʼʼ ಎಂದು ತರಬೇತುದಾರ ಯುಧ್ವಿಂದರ್ ಸಿಂಗ್ ಹೇಳಿದರು.
ಒಡಿಶಾ ತಂಡ ಜಾರ್ಖಂಡ್ ತಂಡವನ್ನು 8-0 ಗೋಲಿನಿಂದ ಬಗ್ಗುಬಡಿದು ಕಂಚಿನ ಪದಕಕ್ಕೆ ಕೊರಳೊಡ್ಡಿತು.
ಏತನ್ಮಧ್ಯೆ, ತಮಿಳುನಾಡಿನ ಬಾಲಕಿಯರು ಆತಿಥೇಯ ಹರಿಯಾಣವನ್ನು 3-2ರಿಂದ ಸೋಲಿಸಿ ಜಾರ್ಖಂಡ್ ವಿರುದ್ಧ ರೋಚಕ ಫೈನಲ್ ಪ್ರವೇಶಿಸಿದರು, ಅವರು ಗುಜರಾತ್ ಅನ್ನು 3-0 ಅಂತರದಿಂದ ಸೋಲಿಸಿದರು.
ನಿಶಾ ಮತ್ತು ಆರತಿ ಅವರ ಹೊಡೆತದಿಂದಾಗಿ ಆತಿಥೇಯ ತಂಡವು 2-0 ಮುನ್ನಡೆ ಸಾಧಿಸುವುದರೊಂದಿಗೆ ತಮಿಳುನಾಡು ಅರ್ಧ ಆಟದಲ್ಲೇ ಮಂಕಾಯಿತು. ಆದರೆ ಮಹಾಲಕ್ಷ್ಮಿ ಅವರು ಪುನರಾರಂಭದ ವೇಳೆ ʻಬ್ರೇಸ್ʼ(ಎರಡು ಗೋಲ್) ಗಳಿಸಿದರು ಮತ್ತು ಆರ್ ಯುವರಾಣಿ ಹೆಚ್ಚುವರಿ ಸಮಯದಲ್ಲಿ ಸಡಿಲವಾದ ಚೆಂಡಿನ ಮೇಲೆ ಜಿಗಿದು ವಿಜೇತರಾಗಿ ಸ್ಕೋರ್ ಮಾಡಲು ಮತ್ತು ಆತಿಥೇಯರನ್ನು ಮಣಿಸಲು ಪ್ರಯತ್ನಿಸಿದರು.
ಆರ್ಚರಿಯಲ್ಲಿ, ʻಟಾಪ್ಸ್ ಡೆವೆಲಪ್‌ಮೆಂಟ್ʼ ಸ್ಕ್ವಾಡ್ ಅಥ್ಲೀಟ್ ಪಾರ್ಥ ಸಾಳುಂಕೆ ಅವರು ʻರಿಕರ್ವ್ ಬಾಯ್ʼ ಅರ್ಹತೆಯಲ್ಲಿ ಅಗ್ರಸ್ಥಾನ ಪಡೆದರೆ, ಚಂಡೀಗಢದ ದಿವ್ಯಾಂಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಜುಯೆಲ್ ಸರ್ಕಾರ್ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದರು.
ʻಕಾಂಪೌಂಡ್ ಗರ್ಲ್ಸ್ʼ ವಿಭಾಗದಲ್ಲಿ ರಾಜಸ್ಥಾನದ ಪ್ರಿಯಾ ಗುರ್ಜರ್ ಮೊದಲ ಸ್ಥಾನ ಗಳಿಸಿದರೆ, ಪಂಜಾಬ್‌ನ ಪ್ರಣೀತ್ ಕೌರ್ ಮತ್ತು ಅವ್ನೀತ್ ಕೌರ್ ನಂತರದ ಸ್ಥಾನದಲ್ಲಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ನಡೆದ ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನ ಬಾಲಕಿಯರ ವೈಯಕ್ತಿಕ ಟೈಮ್ ಟ್ರಯಲ್ 20 ಕಿ.ಮೀ. ಪಂದ್ಯದ ಪದಕ ವಿಜೇತರು.
ಫಲಿತಾಂಶಗಳು ಎಲ್ಲಾ ಫೈನಲ್ಸ್ (ಬೆಳಗಿನ ಸೆಷನ್)
ಜಿ: ಚಿನ್ನ; ಎಸ್: ಸಿಲ್ವರ್; ಬಿ: ಕಂಚು
ಸೈಕ್ಲಿಂಗ್
ಬಾಲಕಿಯರ ವೈಯಕ್ತಿಕ ಟೈಮ್ ಟ್ರಯಲ್ 20 ಕಿ.ಮೀ: ಜಿ: ಚೈತ್ರಾ ಬೋರ್ಜಿ (ಕರ್ನಾಟಕ) 32:51.84; ಎಸ್: ಲೀಕ್ಸ್ ಆಂಗ್ಮೋ (ಲಡಾಖ್) 33:52.52; ಬಿ: ರವೀನಾ ಬಿಷ್ಣೋಯ್ (ರಾಜಸ್ಥಾನ) 33:57.27.
ಹರಿಯಾಣದ ಪಂಚಕುಲದಲ್ಲಿ ನಡೆದ ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನ ಬಾಲಕರ ವೈಯಕ್ತಿಕ ಟೈಮ್ ಟ್ರಯಲ್ 30 ಕಿ.ಮೀ. ಪಂದ್ಯದ ವಿಜೇತರು.
ಬಾಲಕರ ವೈಯಕ್ತಿಕ ಟೈಮ್ ಟ್ರಯಲ್ 30 ಕಿ.ಮೀ: ಜಿ: ಮುಖೇಶ್ ಕಸ್ವಾನ್ (ರಾಜಸ್ಥಾನ) 38:38.63; ಎಸ್: ಆದಿಲ್ ಅಲ್ತಾಫ್ (ಜಮ್ಮು ಮತ್ತು ಕಾಶ್ಮೀರ) 39:22.69; ಬಿ: ಪರಮ ರಾಮ್ (ರಾಜಸ್ಥಾನ) 39:48.32.
ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼನ ಬಾಲಕರ ಹಾಕಿಯ ಫೈನಲ್‌ನಲ್ಲಿ ತಮ್ಮ ವಿಜಯೋತ್ಸವ ಆಚರಿಸುತ್ತಿರುವ ಪಂಜಾಬ್ ಬಾಲಕರ ಹಾಕಿ ತಂಡ
ಹಾಕಿ
ಬಾಲಕರು
ಫೈನಲ್: ಉತ್ತರ ಪ್ರದೇಶವನ್ನು ಪಂಜಾಬ್ 3-1ರಿಂದ ಮಣಿಸಿತು
ಕಂಚು: ಜಾರ್ಖಂಡ್ ಅನ್ನು ಒಡಿಶಾ ಒಡಿಶಾ 8-0 ರಿಂದ ಮಣಿಸಿತು
ಇತರ ಪ್ರಮುಖ ಫಲಿತಾಂಶಗಳು:
ಫುಟ್ಬಾಲ್ (ಬಾಲಕಿಯರು)
ಸೆಮಿಫೈನಲ್- ಫೈನಲ್ 1: ಗುಜರಾತ್ ಅನ್ನು3-0 ರಿಂದ ಸೋಲಿಸಿದ ಜಾರ್ಖಂಡ್
ಸೆಮಿ ಫೈನಲ್ 2: ಹರಿಯಾಣವನ್ನು 3-2 ರಿಂದ ಮಣಿಸಿದ ತಮಿಳುನಾಡು
ಟೆನಿಸ್
ಬಾಲಕರ ಸಿಂಗಲ್ಸ್:
1. ರುಶಿಲ್ ಖೋಸ್ಲಾ (ಉತ್ತರ ಪ್ರದೇಶ) ದಕ್ಷ್ ಪ್ರಸಾದ್ (ಮಧ್ಯಪ್ರದೇಶ) ಅವರನ್ನು 6-2; 6-2 ರಿಂದ ಸೋಲಿಸಿದರು
2. ಪರ್ವ್ ನಾಗೆ (ಹರಿಯಾಣ) ಅವರನ್ನು 6-3; 6-4 ರಿಂದ ಮಣಿಸಿದ ಧ್ರುವ್ ಹಿರ್ಪಾರಾ (ಗುಜರಾತ್)
ಬಾಲಕಿಯರ ಸಿಂಗಲ್ಸ್:
1. ಸುಹಿತಾ ಮರೂರಿಗೆ (ಕರ್ನಾಟಕ) ಶ್ರುತಿ ಅಹ್ಲಾವತ್ (ಹರಿಯಾಣ) ವಿರುದ್ಧ 2-6; 6-1; 7-6 ಗೆಲುವು
2. ಆಕಾಂಕ್ಷಾ ನಿಟ್ಟೂರ್ (ಮಹಾರಾಷ್ಟ್ರ)ಗೆ ವೈಷ್ಣವಿ ಅಡ್ಕರ್ (ಮಹಾರಾಷ್ಟ್ರ) ವಿರುದ್ಧ 6-2; 6-4 ಗೆಲುವು
*****
(Release ID: 1833052)
Visitor Counter : 177