ಹಣಕಾಸು ಸಚಿವಾಲಯ

ನಾಳೆ ಹಣಕಾಸು ಸಚಿವಾಲಯದ ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಡಿಐಪಿಎಎಂ ‘ಮಾರುಕಟ್ಟೆಗಳ ಮೂಲಕ ಸಂಪತ್ತನ್ನು ಸೃಷ್ಟಿಸುವುದು’ ಕುರಿತ ಸಮಾವೇಶವನ್ನು ಆಯೋಜಿಸಲಿದೆ.


ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಿನಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 75 ನಗರಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ

Posted On: 09 JUN 2022 6:16PM by PIB Bengaluru

ಆಜಾದಿ ಕಾ ಅಮೃತ ಮಹೋತ್ಸವ (ಎಕೆಎಎಂ) ದ ಆಚರಣೆಯಲ್ಲಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮಾರುಕಟ್ಟೆಯ ಮೂಲಕ ಸಂಪತ್ತನ್ನು ಸೃಷ್ಟಿಸುವುದು ಎಂಬ ವಿಷಯದ ಮೇಲೆ ಸಮಾವೇಶವನ್ನು ಆಯೋಜಿಸಿದೆ. ಈ ಉಪಕ್ರಮವು ಹೂಡಿಕೆಗಳು ಮತ್ತು ಸಂಪತ್ತನ್ನು ಸೃಷ್ಟಿಸುವ ಬಗ್ಗೆ ಮತ್ತು ನಾಗರಿಕರ ಆರ್ಥಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಭಾರತದಾದ್ಯಂತ 75 ನಗರಗಳ ಜನರಿಗೆ ಶಿಕ್ಷ ಣ, ಪ್ರೋತ್ಸಾಹ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಿಂದ ಸಮ್ಮೇಳನದಲ್ಲಿಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್‌ ಕಿಸಾನ್‌ ರಾವ್‌ ಕರಾಡ್‌ ಅವರು ನವದೆಹಲಿಯ ವಿಜ್ಞಾನ ಭವನದಿಂದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಭಾಷಣದ ನಂತರ 75 ನಗರಗಳ ಸ್ಥಳೀಯ ಸ್ಥಳದಲ್ಲಿಹಣಕಾಸು ತಜ್ಞರು / ವೃತ್ತಿಪರರು / ಬ್ಯಾಂಕರ್‌ಗಳು / ಪ್ರಭಾವಶಾಲಿಗಳು ಇತ್ಯಾದಿಗಳನ್ನು ಒಳಗೊಂಡ ಪ್ರಸಿದ್ಧ ಭಾಷಣಕಾರರೊಂದಿಗೆ ಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮವು ವಿಶಾಲವಾದ ವಿಷಯಗಳ ಬಗ್ಗೆ ಚರ್ಚೆಗಳನ್ನು ಒಳಗೊಂಡಿರುತ್ತದೆ, ಅವುಗಳೆಂದರೆ:

1. ಕಳೆದ 75 ವರ್ಷಗಳಲ್ಲಿಭಾರತೀಯ ಬಂಡವಾಳ ಮಾರುಕಟ್ಟೆಗಳ ಬೆಳವಣಿಗೆ.
2.ಉದಯೋನ್ಮುಖ ಸ್ವತಂತ್ರ ಹೂಡಿಕೆದಾರರಾಗಿ ಮಹಿಳೆಯರು.
3. ಮಾರುಕಟ್ಟೆ ವಿಶ್ವಾಸವನ್ನು ಸುಧಾರಿಸುವಲ್ಲಿ ಸರ್ಕಾರ ಮತ್ತು ಇತರ ಮಾರುಕಟ್ಟೆಗಾರರ ಪಾತ್ರ.
4. ಆರ್ಥಿಕ ಸಾಕ್ಷ ರತೆ - ಆರ್ಥಿಕ ಯೋಗಕ್ಷೇಮದ ಒಂದು ಮಾರ್ಗ.
5. ಭಾರತೀಯ ಬಂಡವಾಳ ಮಾರುಕಟ್ಟೆಗಳ ಭವಿಷ್ಯ ಅಂದರೆ ಅಮೃತ್‌ ಕಾಲ್‌

ಆಜಾದಿ ಕಾ ಅಮೃತ ಮಹೋತ್ಸವವನ್ನು ಭಾರತದ ಸ್ವಾತಂತ್ರ್ಯದ 75 ನೇ ವರ್ಷ ಮತ್ತು ಅಲ್ಲಿನ ಜನರ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳ ಸ್ಮರಣಾರ್ಥವಾಗಿ ದೇಶದಲ್ಲಿ ಆಚರಿಸಲಾಗುತ್ತಿದೆ. ಇದು 5000+ ವರ್ಷಗಳ ಪ್ರಾಚೀನ ಇತಿಹಾಸದ ಪರಂಪರೆಯನ್ನು ಹೊಂದಿರುವ 75 ವರ್ಷಗಳಷ್ಟು ಹಳೆಯದಾದ ಸ್ವತಂತ್ರ ದೇಶವಾಗಿ ನಮ್ಮ ಸಾಮೂಹಿಕ ಸಾಧನೆಗಳ ಆಚರಣೆಯಾಗಿದೆ. ಸ್ವಾತಂತ್ರ್ಯ ಸಂಗ್ರಾಮ, 75ರಲ್ಲಿನ ವಿಚಾರಗಳು, 75ರಲ್ಲಿಸಾಧನೆಗಳು, 75ರಲ್ಲಿನ ಕಾರ್ಯಗಳು ಮತ್ತು 75ನೇ ವಯಸ್ಸಿನಲ್ಲಿ ಸಂಕಲ್ಪಗಳು, ಕನಸುಗಳು ಮತ್ತು ಕರ್ತವ್ಯಗಳನ್ನು ಸೂಧಿರ್ತಿಯಾಗಿಟ್ಟುಕೊಂಡು ಮುನ್ನಡೆಯಲು ಮಾರ್ಗದರ್ಶಕ ಶಕ್ತಿಯಾಗಿ ಈ ಆಚರಣೆಯು ಪ್ರಧಾನ ಮಂತ್ರಿಗಳು ವಿವರಿಸಿದ ಐದು ಸ್ತಂಭಗಳ ಮೇಲೆ ನಿಂತಿದೆ. ಈ ಮಹೋತ್ಸವವನ್ನು ಜನ-ಭಾಗಿದಾರಿ ಮನೋಭಾವದಿಂದ ಜನ-ಉತ್ಸವವಾಗಿ ಆಚರಿಸಲಾಗುವುದು.
ಆಜಾದಿ ಕಾ ಅಮೃತ ಮಹೋತ್ಸವದ ಪ್ಯಾನ್‌-ಇಂಡಿಯಾ ಸಾರಕ್ಕೆ ಬದ್ಧವಾಗಿರುವ ಡಿಐಪಿಎಎಂ, ಜನರಲ್ಲಿಉತ್ತಮ ಮತ್ತು ಸುಲಭ ಸ್ವೀಕಾರಾರ್ಹತೆಗಾಗಿ 75 ನಗರಗಳಲ್ಲಿಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿಈ ಕಾರ್ಯಕ್ರಮವನ್ನು ನಡೆಸಲಿದೆ. ಈ ಕಾರ್ಯಕ್ರಮವು ಲಡಾಖ್‌ ನಿಂದ ಲಕ್ಷ ದ್ವೀಪ ಮತ್ತು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳವರೆಗಿನ ದೇಶದ ಎಲ್ಲಾ ಭೌಗೋಳಿಕ ಪ್ರದೇಶಗಳನ್ನು ಒಳಗೊಳ್ಳುತ್ತದೆ ಮತ್ತು ದೇಶದ ಯಾವುದೇ ಪ್ರದೇಶವನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗಿಲ್ಲ

For more details, CLICK HERE.

*****



(Release ID: 1832750) Visitor Counter : 395