ಸಂಸ್ಕೃತಿ ಸಚಿವಾಲಯ
azadi ka amrit mahotsav

ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ಹತ್ತು ಪುರಾತನ ವಸ್ತುಗಳನ್ನು [ಶಿಲ್ಪಗಳನ್ನು] ವಾಪಸ್ ಪಡೆಯಲಾಗಿದೆ. ನವದೆಹಲಿಯಲ್ಲಿಂದು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ


ಕಳೆದ 8 ವರ್ಷಗಳಲ್ಲಿ 228 ಪಾರಂಪರಿಕ ವಸ್ತುಗಳನ್ನು ಮರಳಿ ತರಲಾಗಿದೆ; 2013 ರ ವರೆಗೆ ಕೇವಲ 13 ವಸ್ತುಗಳನ್ನು ಮಾತ್ರ ಭಾರತಕ್ಕೆ ತರಲಾಗಿತ್ತು – ಶ್ರೀ ಜಿ. ಕಿಶನ್ ರೆಡ್ಡಿ

“ ಪ್ರಧಾನಿಯವರ ವೈಯಕ್ತಿಕ ಸಂಬಂಧಗಳು ಮತ್ತು ಆ ದೇಶಗಳ ಜಾಗತಿಕ ನಾಯಕರೊಂದಿಗೆ ಆತ್ಮೀಯ ಬಾಂಧವ್ಯ, ಆಯಾ ದೇಶಗಳು ಕದ್ದ ಪ್ರಾಚೀನ ವಸ್ತುಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಅವುಗಳು ಹಿಂಪಡೆಯುವರೆಗೆ ನಿರಂತರ ಸಹಕಾರ ಪಡೆಯಲು ಇದು ಸಹಕಾರಿಯಾಗಿವೆ – ಶ್ರೀ ಕಿಶನ್ ರೆಡ್ಡಿ

ಇತಿಹಾಸ ಅದರ ಭೌಗೋಳಿಕ ಭಾಗವಾಗಿದೆ. ನಿರಂತರ ಜೀವಂತ ನಾಗರಿಕತೆಯಾಗಿ, ಭಾರತದ ಪರಂಪರೆಯು ದೇವಾಲಯಗಳು ಮತ್ತು ಅದನ್ನು ಪಡೆದ ಸ್ಥಳಗಳಿಗೆ ಸೇರಿದ್ಧಾಗಿದೆ. ನಮ್ಮ ದೇವರನ್ನು ಮನೆಗೆ ತರುವುದು ನಮ್ಮ ಪರಂಪರೆಯನ್ನು ರಕ್ಷಿಸುವ, ಪ್ರಚಾರ ಮಾಡುವಲ್ಲಿ ಪ್ರಮುಖ ಅಂಶವಾಗಿದೆ – ಜಿ. ಕಿಶನ್ ರೆಡ್ಡಿ

Posted On: 01 JUN 2022 7:10PM by PIB Bengaluru

ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಸಂಸ್ಕೃತಿ ಕಲಾ ಕೇಂದ್ರ [ಐ.ಜಿ.ಎನ್.ಸಿ.ಇ] ದಿಂದ ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ತಮಿಳುನಾಡು ಸರ್ಕಾರಕ್ಕೆ 10 ಶಿಲ್ಪ ಕೃತಿಗಳನ್ನು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ [ಡಿ.ಒ.ಎನ್.ಇ.ಆರ್] ಶ‍್ರೀ ಜಿ. ಕಿಶನ್ ರೆಡ್ಡಿ ಹಸ್ತಾಂತರಿಸಿದರು. ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ, ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ‍್ರೀ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಎಲ್. ಮುರುಗನ್, ಸಂಸ್ಕೃತಿ ಸಚಿವಾಲಯ,  ಭಾರತೀಯ ಸರ್ವೇಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳು ಮತ್ತು ತಮಿಳು ನಾಡು ಸರ್ಕಾಋದ ಅಧಿಕಾರಿಗಳು ಉಪಸ್ಥಿತರಿದ್ದರು.


 

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಕಳೆದ 8 ವರ್ಷಗಳಲ್ಲಿ ಪ್ರಧಾನಮಂತ್ರಿ ಶ‍್ರೀ ನರೇಂದ್ರಮೋದಿ ನೇತೃತ್ವದ ಸರ್ಕಾರ ನಮ್ಮ ಪ್ರಾಚೀನ ನಾಗರಿಕತೆ ತತ್ವಗಳನ್ನು ಸಂರಕ್ಷಿಸಲು, ಪ್ರಪಂಚದ ಸಂಪ್ರದಾಯಗಳು, ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ರಕ್ಷಿಸಲು, ಭಾರತೀಯ ಜ್ಞಾನ ವ್ಯವಸ್ಥೆಯನ್ನು ಪ್ರಚಾರ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಮ್ಮ ದೇವರನ್ನು ಮನೆಗೆ ತರುವುದು ಅಂತಹ ಒಂದು ಉಪಕ್ರಮವಾಗಿದ್ದು, ಅದು ನಮ್ಮ ಪರಂಪರೆಯನ್ನು ರಕ್ಷಿಸುವ, ಪ್ರಚುರಪಡಿಸುವ ಹಾಗೂ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ನಮ್ಮ ಬಾಂಧವ್ಯ ವೃದ್ಧಿಯಾಗಲು ಪ್ರಧಾನಿಯವರ ವೈಯಕ್ತಿಕ ಸಂಬಂಧಗಳು ಸಹ ಕಾರಣವಾಗಿವೆ”. ಪ್ರಧಾನಿಯವರ ವೈಯಕ್ತಿಕ ಸಂಬಂಧಗಳು ಮತ್ತು ಈ ದೇಶಗಳೊಂದಿಗಿನ ಆತ್ಮೀಯ ಸಂಬಂಧಗಳು ಆಯಾ ದೇಶಗಳು ಮತ್ತು ಕದ್ದ ಪ್ರಾಚೀನ ವಸ್ತುಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಹಿಂಪಡೆಯುವ ತನಕ ಅನುಸರಿಸಿದ ಕ್ರಮಗಳಲ್ಲಿ ನಿರಂತರ ಸಹಕಾರ ದೊರೆತಿದೆ” ಎಂದರು.

ಸಂಗ್ರಹಿಸಿದ ಪ್ರಾಚೀನ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಇಂದು ಹಸ್ತಾಂತರಿಸಲಾಯಿತು. ಅದರಲ್ಲಿ ದ್ವಾರಪಾಲ, ನಟರಾಜ, ಕಂಕಲಮೂರ್ತಿ ಕದಯಂ, ನಂದಿಕೇಶ್ವರ ಕದಯಮ್, ಚತುರ್ಭುಜ ವಿಷ್ಣು, ಶ್ರೀ ದೇವಿ, ಶಿವ ಮತ್ತು ಪಾರ್ವತಿ, ನಿಂತಿರುವ ಮಗುವಿನ ಶಿಲ್ಪವನ್ನು ಹಸ್ತಾಂತರಿಸಲಾಯಿತು.  

ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಶ‍್ಲಾಘಿಸಿದರು  ಮತ್ತು 2014 ರಿಂದ ಸ್ವದೇಶಕ್ಕೆ ಮರಳಿದ ವಿಗ್ರಹಗಳ ಸಂಖ್ಯೆಯಲ್ಲಿ ಆದ ಹೆಚ್ಚಳವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. “ಪ್ರಧಾನಮಂತ್ರಿ ಅವರು ಅಮೆರಿಕಗೆ ತೆರಳಿದ್ದಾಗ 157 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಿದ್ದು, ಇದು ಈವರೆಗಿನ ಅತಿ ಹೆಚ್ಚಿನ ವಸ್ತುಗಳು ಸ್ವದೇಶಕ್ಕೆ ವಾಪಸ್ ಬಂದಂತಾಗಿವೆ. ಕಳೆದ 8 ವರ್ಷಗಳಲ್ಲಿ 228 ವಸ್ತುಗಳನ್ನು ವಾಪಸ್ ತರಲಾಗಿದೆ. ಸ್ವಾತಂತ್ರ್ಯ ದೊರೆತ ನಂತರ ಮತ್ತು 2013 ರ ವರೆಗೆ ಕೇವಲ 13 ವಸ್ತುಗಳು ಭಾರತಕ್ಕೆ ಬಂದಿವೆ. ಸ್ನೇಹಿತರೇ ಈ ಅಂಕಿ ಅಂಶಗಳು ಸ್ವತಃ ಮಾತನಾಡುತ್ತವೆ ಮತ್ತು ಈ ಸರ್ಕಾರ ನಮ್ಮ ಪರಂಪರೆಗೆ ನೀಡುವ ಮಹತ್ವವನ್ನು ಇವು ಪ್ರತಿಬಿಂಬಿಸುತ್ತವೆ. ಸುಸ್ಥಿರ ಪ್ರಯತ್ನಗಳ ಫಲವಾಗಿ 2014 ರ ನಂತರ 228 ವಸ್ತುಗಳನ್ನು ತರಲಾಗಿದ್ದು, ಈವರೆಗೆ 241 ವಸ್ತುಗಳು ಭಾರತಕ್ಕೆ ಮರಳಿವೆ”.

 

ದೇಶ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಹಾಗೂ ದೇಶ 25 ವರ್ಷಗಳ ಅಮೃತ ಕಾಲ ಪ್ರವೇಶಿಸುತ್ತಿರುವಾಗ ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯ ಜಾಗತಿಕ ರಕ್ಷಕನಾಗಿ ಮುನ್ನಡೆಸಲು ಇದು ಒಂದು ಅವಕಾಶವಾಗಿದೆ. ಕಳುವಾದ ಪ್ರಾಚೀನ ವಸ್ತುಗಳನ್ನು ಸ್ವದೇಶಕ್ಕೆ ಹಿಂಪಡೆಯುವ ಬಗ್ಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಾದಕ್ಕೆ ಅವಕಾಶ ಕಲ್ಪಿಸುತ್ತದೆ” ಎಂದು ಹೇಳಿದರು.   

ಇದೇ ಸಂದರ್ಭದಲ್ಲಿ ಹತ್ತು ಪುರಾತನ ವಸ್ತುಗಳನ್ನು ಪರಿಚಯಿಸುವ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Click here for booklet.

*****

 


(Release ID: 1830377) Visitor Counter : 217