ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕಾಂಬೋಡಿಯಾ ಪ್ರಧಾನಿ ಶ್ರೀ ಸಮದೇಚ್ ಅಕ್ಕ ಮೋಹ ಸೇನಾ ಪದೆಯಿ ತೆಚೊ ಹುನ್ ಸೇನ್ ನಡುವೆ ವರ್ಚುವಲ್ ಸಭೆ ನಡೆಯಿತು

Posted On: 18 MAY 2022 8:40PM by PIB Bengaluru

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಂಬೋಡಿಯಾದ ಪ್ರಧಾನ ಮಂತ್ರಿ ಸಂದೇಚ್ ಅಕ್ಕ ಮೋಹ ಸೇನಾ ಪಡೆಯ ಟೆಚೋ ಹುನ್ ಸೇನ್ ಅವರೊಂದಿಗೆ  ವರ್ಚುವಲ್ ಸಭೆ ನಡೆಸಿದರು.

ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿನ ಸಹಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ರಕ್ಷಣೆ ಮತ್ತು ಭದ್ರತೆ, ಅಭಿವೃದ್ಧಿ ಸಹಕಾರ, ಸಂಪರ್ಕ, ಸಾಂಕ್ರಾಮಿಕದ ನಂತರದ ಆರ್ಥಿಕ ಚೇತರಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.  ದ್ವಿಪಕ್ಷೀಯ ಸಹಕಾರದ ವೇಗದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಹುನ್ ಸೇನ್ ಅವರು ಭಾರತದೊಂದಿಗೆ ಕಾಂಬೋಡಿಯಾದ ಸಂಬಂಧದ ಮಹತ್ವವನ್ನು ಒತ್ತಿ ಹೇಳಿದರು.   ಪ್ರಧಾನಮಂತ್ರಿ ಮೋದಿಯವರು ಈ ಭಾವನೆಯನ್ನು ಪ್ರತಿಪಾದಿಸಿದರು ಮತ್ತು ಭಾರತದ ಆಕ್ಟ್ ಈಸ್ಟ್ ನೀತಿಯಲ್ಲಿ ಕಾಂಬೋಡಿಯಾದ ಮೌಲ್ಯಯುತ ಪಾತ್ರವನ್ನು ಒತ್ತಿ ಹೇಳಿದರು. ಮೆಕಾಂಗ್-ಗಂಗಾ ಸಹಕಾರ ಚೌಕಟ್ಟಿನ ಅಡಿಯಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು ಮತ್ತು ತ್ವರಿತ ಪರಿಣಾಮ ಯೋಜನೆಗಳು ಸೇರಿದಂತೆ ಎರಡೂ ದೇಶಗಳ ನಡುವಿನ ದೃಢವಾದ ಅಭಿವೃದ್ಧಿ ಪಾಲುದಾರಿಕೆಯನ್ನು ನಾಯಕರು ಪರಿಶೀಲಿಸಿದರು.

ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ನಾಗರೀಕ ಸಂಬಂಧಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ ಮೋದಿಯವರು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಭಾಷಿಕ ಸಂಪರ್ಕವನ್ನು ಬಿಂಬಿಸುವ ಕಾಂಬೋಡಿಯಾದ ಅಂಕೋರ್ ವಾಟ್ ಮತ್ತು ಪ್ರೀಹ್ ವಿಹೀರ್ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ ಸಂತೋಷ ವ್ಯಕ್ತಪಡಿಸಿದರು.

ಕ್ವಾಡ್ ವ್ಯಾಕ್ಸಿನ್ ಉಪಕ್ರಮದ ಅಡಿಯಲ್ಲಿ ಕಾಂಬೋಡಿಯಾಗೆ 3.25 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಭಾರತವು ಒದಗಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಹುನ್ ಸೇನ್ ಭಾರತಕ್ಕೆ ಧನ್ಯವಾದ ಅರ್ಪಿಸಿದರು.

ಭಾರತ ಮತ್ತು ಕಾಂಬೋಡಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಅಭಿನಂದಿಸಿದರು.

ಈ ಆಚರಣೆಗಳ ಭಾಗವಾಗಿ, ಪ್ರಧಾನ ಮಂತ್ರಿ ಮೋದಿ ಅವರು ಕಾಂಬೋಡಿಯಾದ ರಾಜ ಮತ್ತು ರಾಣಿಯುವರಿಗೆ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೋದಿಯವರು ಆಹ್ವಾನಿಸಿದರು.  

ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ASEAN (ಆಸಿಯಾನ್)ನ ಅಧ್ಯಕ್ಷಗಿರಿ ವಹಿಸಿಕೊಂಡ ಕಾಂಬೋಡಿಯಾ ದೇಶವನ್ನು ಪ್ರಧಾನಮಂತ್ರಿ ಮೋದಿಅವರು ಅಭಿನಂದಿಸಿದರು ಮತ್ತು ಅದರ ಅಧ್ಯಕ್ಷತೆಯ ಯಶಸ್ಸಿಗೆ ಕಾಂಬೋಡಿಯಾಕ್ಕೆ ಭಾರತದ ಸಂಪೂರ್ಣ ಬೆಂಬಲ ಮತ್ತು ಸಹಾಯದ ಭರವಸೆ ನೀಡಿದರು.

****

 



(Release ID: 1826630) Visitor Counter : 144