ಗೃಹ ವ್ಯವಹಾರಗಳ ಸಚಿವಾಲಯ

ಬಸವ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿಂದು ಶ್ರೀ ಬಸವಣ್ಣನವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ.

Posted On: 03 MAY 2022 3:55PM by PIB Bengaluru

ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನೆ ಸೇರಿದಂತೆ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಅಮಿತ್ ಶಾ.
 

ನೂರಾರು ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಕನ್ನಡ ಸಮಾಜದಲ್ಲಿ ಸಾರ್ವತ್ರಿಕ ಮತ್ತು ಸರ್ವವ್ಯಾಪಿ ಪ್ರಜಾಪ್ರಭುತ್ವಕ್ಕೆ ಬಸವಣ್ಣ ಮಾದರಿಯಾಗಿದ್ದರು
 

ಸಮಾಜದ ವಿವಿಧ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವಣ್ಣನವರು ಸುಂದರ ಮತ್ತು ಸರಳ ಪರಿಹಾರಗಳನ್ನು ನೀಡಿದ್ದು, ಯುವಕರು ಬಸವಣ್ಣನವರ ವಚನಗಳನ್ನು ಓದಬೇಕು.

ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವದ (ಸ್ವಾತಂತ್ರ್ಯದ 75 ನೇ ವರ್ಷ) ವರ್ಷವಾಗಿದೆ, 75 ನೇ ಸ್ವಾತಂತ್ರ್ಯ ವರ್ಷವನ್ನು ಪ್ರಮುಖ ಘಟನೆಗಳೊಂದಿಗೆ ಗುರುತಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.

 

ಮುಂದಿನ 25 ವರ್ಷಗಳಲ್ಲಿ ಅಂದರೆ ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷ  2047 ರಲ್ಲಿ ಭಾರತವನ್ನು ವಿಶ್ವ ನಾಯಕನನ್ನಾಗಿ ಮಾಡಲು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವ ಪ್ರತಿಜ್ಞೆಯನ್ನು ನಾವು ಮಾಡಬೇಕು.

130 ಕೋಟಿ ಜನರು ಪ್ರತಿಜ್ಞೆ ಕೈಗೊಂಡಾಗ, ದೇಶವು 130 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ರಲ್ಲಿ ಹೊಸ ಶಿಕ್ಷಣ ನೀತಿಯನ್ನು ತಂದಿದ್ದಾರೆ.
 

ಭಾರತವನ್ನು ಮಹಾನ್ ರಾಷ್ಟ್ರ ಮಾಡುವುದು, ಯುವಕರಿಗೆ ಅವಕಾಶಗಳನ್ನು ಒದಗಿಸುವುದು ಮತ್ತು ಕರ್ನಾಟಕ ಮತ್ತು ಭಾರತದ ಯುವಕರು ವಿಶ್ವದ ಯುವಕರೊಂದಿಗೆ ಆತ್ಮವಿಶ್ವಾಸದಿಂದ ಸ್ಪರ್ಧಿಸಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಒಂದು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
 

ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದನ್ನು ಉತ್ತೇಜಿಸಲು ಹೊಸ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ, ಇದು ವಿಶ್ವಕ್ಕೆ ಮಾರ್ಗದರ್ಶನ ನೀಡುವಲ್ಲಿ ಭಾರತದ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ಭಾರತವನ್ನು ಜ್ಞಾನದ ಮಹಾನ್ ಶಕ್ತಿಯಾಗಿ ಮಾಡುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ

 

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ, 6 ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳು, ಏಳು ಐಐಎಂಗಳು, ಏಳು ಐಐಟಿಗಳು, 15 ಏಮ್ಸ್, 209 ಹೊಸ ವೈದ್ಯಕೀಯ ಕಾಲೇಜುಗಳು, 320 ಹೊಸ ವಿಶ್ವವಿದ್ಯಾಲಯಗಳು ಮತ್ತು 5,709 ಹೊಸ ಕಾಲೇಜುಗಳನ್ನು ತೆರೆಯಲಾಗಿದೆ.
 

ಉನ್ನತ ಶಿಕ್ಷಣದಲ್ಲಿ ಗ್ರಾಮೀಣ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು, 410 ಕ್ಕೂ ಹೆಚ್ಚು ಗ್ರಾಮೀಣ ವಿಶ್ವವಿದ್ಯಾಲಯಗಳು, ಈಶಾನ್ಯದಲ್ಲಿ 22 ಹೊಸ ವಿಶ್ವವಿದ್ಯಾಲಯಗಳು, ಲಡಾಖ್ ನಲ್ಲಿ ದೇಶದ ಮೊದಲ ಸಿಂಧೂ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಗಿದೆ.
 

ಯುವ ವೃತ್ತಿಪರರಿಗೆ ಅವಕಾಶಗಳನ್ನು ಕಲ್ಪಿಸಲು, ಶ್ರೀ ನರೇಂದ್ರ ಮೋದಿ ಅವರು ವಿಧಿವಿಜ್ಞಾನ ವಿಶ್ವವಿದ್ಯಾಲಯ, ರಕ್ಷಾ ಶಕ್ತಿ ವಿಶ್ವವಿದ್ಯಾಲಯ, ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯಗಳಂತಹ ವೃತ್ತಿಪರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ.
 

ಶ್ರೀ ನರೇಂದ್ರ ಮೋದಿ ಅವರ ಎಲ್ಲಾ ಪ್ರಯತ್ನ ಮತ್ತು ಕಾಳಜಿ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರವನ್ನು ವಿಶ್ವದ ಅತ್ಯುತ್ತಮ ರಾಷ್ಟ್ರವನ್ನಾಗಿ ಮಾಡುವುದಾಗಿದೆ.
 

ಇದನ್ನು ಸಾಧಿಸಲು ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ.
 

2014ಕ್ಕಿಂತ ಮೊದಲು, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದೇಶದ ಮೇಲೆ ದಾಳಿ ಮಾಡುತ್ತಿದ್ದರೂ, ಅಂದಿನ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇರತ್ತಿರಲಿಲ್ಲ, ಅಂದಿನ ಸರ್ಕಾರವು ಹೇಳಿಕೆಗಳನ್ನು ಮಾತ್ರ ನೀಡಿತ್ತಿತ್ತು.
 

ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ತರುವಾಯ ಉರಿ ಮತ್ತು ಪುಲ್ವಾಮಾದ ಮೇಲೆ ದಾಳಿಗಳು ನಡೆದವು. 10 ದಿನಗಳಲ್ಲಿ ಅವರು ನಿರ್ದಿಷ್ಟ ಗುರಿದಾಳಿ ಮತ್ತು ವಾಯುದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು.
 

ಈ ಮೊದಲು, ಅಮೆರಿಕ ಮತ್ತು ಇಸ್ರೇಲ್ ಮಾತ್ರ ತಮ್ಮ ಗಡಿಗಳನ್ನು ಉಲ್ಲಂಘಿಸಿದ ಮತ್ತು ತಮ್ಮ ಸಶಸ್ತ್ರ ಪಡೆಗಳಿಗೆ ಹಾನಿ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತಿದ್ದವು, ಇಂದು ಪ್ರಧಾನಮಂತ್ರಿ ಮೋದಿ ಆ ಪಟ್ಟಿಗೆ ಭಾರತದ ಹೆಸರನ್ನು ಸೇರಿಸಿದ್ದಾರೆ.
 

ಶ್ರೀ ಮೋದಿ ಅವರು ವಿಧಿ 370 ಮತ್ತು 35 ಎ ಮತ್ತು ಸಿಎಎಯಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ.
 

2019 ರ ಆಗಸ್ಟ್ 5, ದಿನಾಂಕವನ್ನು ನಮ್ಮ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುವುದು, ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ, ನರೇಂದ್ರ ಮೋದಿ ಅವರು ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸಿದ್ದಾರೆ.
 

ಮೋದಿ ಸರ್ಕಾರವು ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದೆ, ಇದರಿಂದಾಗಿ ಜನರ ವಿಶ್ವಾಸ ಹೆಚ್ಚಾಗಿದ್ದು,  ನಾವು ನಮ್ಮ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುತ್ತದೆ ಮತ್ತು ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ನಂಬುತ್ತಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ಬೆಂಗಳೂರಿನಲ್ಲಿ ಬಸವ ಜಯಂತಿಯ ಸಂದರ್ಭದಲ್ಲಿ ಶ್ರೀ ಬಸವಣ್ಣನವರಿಗೆ ಗೌರವ ನಮನ ಸಲ್ಲಿಸಿದರು. ಮತ್ತೊಂದು ಕಾರ್ಯಕ್ರಮದಲ್ಲಿ, ಶ್ರೀ ಅಮಿತ್ ಶಾ ಅವರು ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನೆ ಸೇರಿದಂತೆ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

 
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಮ್ಮ ಭಾಷಣದಲ್ಲಿ ನೂರಾರು ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಕನ್ನಡ ಸಮಾಜದಲ್ಲಿ ಸಾರ್ವತ್ರಿಕ ಮತ್ತು ಸರ್ವವ್ಯಾಪಿಯಾದ ಪ್ರಜಾಪ್ರಭುತ್ವಕ್ಕೆ ಬಸವಣ್ಣನವರು ಮಾದರಿಯಾಗಿದ್ದರು. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದ ಪ್ರತಿಯೊಂದು ವರ್ಗದ ಸಮಸ್ಯೆಗಳಿಗೆ ಸುಂದರವಾದ ಮತ್ತು ಸರಳವಾದ ಪರಿಹಾರಗಳನ್ನು ನೀಡಿದರು ಎಂದರು. ಯುವಕರು ತಮ್ಮ ಶಿಕ್ಷಣದ ಜೊತೆಗೆ ಬಸವಣ್ಣನವರ ವಚನಗಳನ್ನು ಓದಬೇಕು, ಏಕೆಂದರೆ ಬಸವಣ್ಣನವರ ಸಂದೇಶಗಳನ್ನು ಓದುವುದರಿಂದ ಜೀವನದಲ್ಲಿ ಎಂದಿಗೂ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಹೇಳಿದರು. ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಸವಣ್ಣನವರ ವಚನಗಳಲ್ಲಿ ಕಂಡುಬರುತ್ತವೆ ಎಂದರು. ಬಸವ ಜಯಂತಿಯ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಾ ಅವರು, ಕರ್ನಾಟಕ ಮಾತ್ರವಲ್ಲದೆ ದೇಶ ಮತ್ತು ಜಗತ್ತು ಶಾಂತಿ, ಸೌಹಾರ್ದತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಲು ಬಯಸುತ್ತೇನೆ ಎಂದು ಹೇಳಿದರು.
ಯಾವುದೇ ದೇಶದ ಭವಿಷ್ಯವು ಅದರ ಯುವಜನತೆ ಮತ್ತು ಅವರ ಚಾರಿತ್ರ್ಯದ ಮೇಲೆ ನಿರ್ಮಾಣವಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನೃಪತುಂಗ ಕಾಲೇಜಿನಲ್ಲಿ 100 ವರ್ಷಗಳಿಂದ ನಿರಂತರವಾಗಿ ಜ್ಞಾನವನ್ನು ಬೋಧಿಸಲಾಗುತ್ತಿದೆ ಮತ್ತು ಇಲ್ಲಿನ ಅನೇಕ ವಿದ್ಯಾರ್ಥಿಗಳು ಕರ್ನಾಟಕ ಮತ್ತು ದೇಶಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು. ಈ ಕಾಲೇಜು ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. 2020 ರಿಂದ, ಈ ಕಾಲೇಜನ್ನು ನೃಪತುಂಗ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತಿದೆ, ಇಂದು ಇದನ್ನು ಔಪಚಾರಿಕವಾಗಿ ಉದ್ಘಾಟಿಸಲಾಗಿದ್ದು, ಅದರ ಲಾಂಛನವನ್ನೂ ಸಹ ಅನಾವರಣಗೊಳಿಸಲಾಗಿದೆ ಎಂದರು.

 

 


ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವದ ವರ್ಷ (ಸ್ವಾತಂತ್ರ್ಯದ 75 ನೇ ವರ್ಷ) ಎಂದು ಗೃಹ ಸಚಿವರು ಹೇಳಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಸಂದಿವೆ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. 75 ವರ್ಷಗಳ ಈ ಪಯಣದಲ್ಲಿ, ದೇಶವು ಅನೇಕ ಗುರಿಗಳನ್ನು ದಾಟಿದೆ. 75 ನೇ ಸ್ವಾತಂತ್ರ್ಯ ವರ್ಷವನ್ನು ಪ್ರಮುಖ ಘಟನೆಗಳೊಂದಿಗೆ ಗುರುತಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಆಜಾದಿ ಕಾ ಅಮೃತ್ ಮಹೋತ್ಸವದ ಮುಖ್ಯ ಉದ್ದೇಶವೆಂದರೆ ಯುವಕರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವ ಮೂಲಕ ದೇಶವನ್ನು ಮುನ್ನಡೆಸಬೇಕು ಎಂಬುದಾಗಿದೆ. ಸ್ವಾತಂತ್ರ್ಯದ 75ನೇ ವರ್ಷವೂ ಒಂದು ನಿರ್ಣಯವನ್ನು ಮಾಡುವ ಸಮಯವಾಗಿದೆ ಎಂದು ಶ್ರೀ ಶಾ ಹೇಳಿದರು. ಮುಂದಿನ 25 ವರ್ಷಗಳಲ್ಲಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ, ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047 ರ ವೇಳೆಗೆ ಭಾರತವನ್ನು ವಿಶ್ವ ನಾಯಕನನ್ನಾಗಿ ಮಾಡುವ ಮೂಲಕ ನಾವು ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಬೇಕು ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದರು. 130 ಕೋಟಿ ಜನರು ಪ್ರತಿಜ್ಞೆ ಮಾಡಿದಾಗ, ದೇಶವು 130 ಕೋಟಿ ಹೆಜ್ಜೆಗಳನ್ನು ಮುಂದೆ ಸಾಗುತ್ತದೆ ಎಂದೂ ಅವರು ಹೇಳಿದರು. 
 

 


ಪ್ರಧಾನಮಂತ್ರಿ ಶ್ರೀ ಅಮಿತ್ ಶಾ ಅವರು 2020ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯನ್ನು ತಂದಿದ್ದಾರೆ ಎಂದು ಹೇಳಿದರು. ಭಾರತವನ್ನು ಮಹಾನ್ ರಾಷ್ಟ್ರವಾಗಿಸುವುದು, ಯುವಕರಿಗೆ ಅವಕಾಶಗಳನ್ನು ಕಲ್ಪಿಸುವುದು ಮತ್ತು ಕರ್ನಾಟಕ ಮತ್ತು ಭಾರತದ ಯುವಕರು ವಿಶ್ವದ ಯುವಕರೊಂದಿಗೆ ಆತ್ಮವಿಶ್ವಾಸದಿಂದ ಸ್ಪರ್ಧಿಸಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಒಂದು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದ ಅವರು, ಇದಕ್ಕಾಗಿ ರಾಜ್ಯವನ್ನು ಅಭಿನಂದಿಸಿದರು. ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಸಂಸ್ಕೃತಿಯ ತಿಳಿವಳಿಕೆಯನ್ನು ಉತ್ತೇಜಿಸಲು ಒತ್ತು ನೀಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಇದರೊಂದಿಗೆ, ವಿಶ್ವಕ್ಕೆ ಮಾರ್ಗದರ್ಶನ ನೀಡುವ ಮತ್ತು ಭಾರತವನ್ನು ಜ್ಞಾನದ ಮಹಾನ್ ಶಕ್ತಿಯನ್ನಾಗಿ ಮಾಡುವ ಭಾರತದ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಗುರಿಯನ್ನು ಸಹ ನಿಗದಿಪಡಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ, ಶಿಕ್ಷಣದ ಮೂಲಭೂತ ಆಧಾರವು ಸ್ಥಳೀಯ ಭಾಷೆಯಾಗಿರಬೇಕು ಎಂದು ಒತ್ತಿ ಹೇಳಲಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಕಾರ್ಯಪಡೆಯನ್ನು ರಚಿಸುವ ಮೂಲಕ ಕರ್ನಾಟಕವು ಮಾದರಿಯಾಗಿದೆ ಎಂದು ಅವರು ಹೇಳಿದರು.
 


ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅವರ ಸರ್ಕಾರ ರಚನೆಯಾದ ನಂತರ, 6 ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳು, 7 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂಗಳು), 7 ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು), 15 ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು (ಏಮ್ಸ್), 209 ಹೊಸ ವೈದ್ಯಕೀಯ ಕಾಲೇಜುಗಳು, ದೇಶದಲ್ಲಿ 320 ಹೊಸ ವಿಶ್ವವಿದ್ಯಾಲಯಗಳು ಮತ್ತು 5,709 ಹೊಸ ಕಾಲೇಜುಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳ ಉನ್ನತ ಶಿಕ್ಷಣದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, 410 ಕ್ಕೂ ಹೆಚ್ಚು ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಸರ್ಕಾರವು ಈಶಾನ್ಯದಲ್ಲಿ 22 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ, ಲಡಾಖ್ ನಲ್ಲಿ ದೇಶದ ಮೊದಲ ಸಿಂಧು ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಯುವ ವೃತ್ತಿಪರರಿಗೆ ಅವಕಾಶಗಳನ್ನು ನೀಡಲು, ಶ್ರೀ ನರೇಂದ್ರ ಮೋದಿ ಅವರು ವಿಧಿವಿಜ್ಞಾನ ವಿಶ್ವವಿದ್ಯಾಲಯ, ರಕ್ಷಾ ಶಕ್ತಿ ವಿಶ್ವವಿದ್ಯಾಲಯ, ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯಗಳಂತಹ ವೃತ್ತಿಪರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ ಎಂದರು.
 


ಶ್ರೀ ನರೇಂದ್ರ ಮೋದಿ ಅವರ ಎಲ್ಲ ಪ್ರಯತ್ನ ಮತ್ತು ಕಾಳಜಿ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರವನ್ನು ವಿಶ್ವದಲ್ಲೇ ಅತ್ಯುತ್ತಮ ರಾಷ್ಟ್ರವನ್ನಾಗಿ ಮಾಡುವುದಾಗಿದ್ದು, ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಮತ್ತು ಅವುಗಳನ್ನು ದೃಢವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಭದ್ರತೆಯ ಬಗ್ಗೆ ಉಲ್ಲೇಖಿಸಿದ ಗೃಹ ಸಚಿವರು, 2014 ಕ್ಕಿಂತ ಮೊದಲು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಪ್ರತಿದಿನ ದೇಶದ ಮೇಲೆ ದಾಳಿ ಮಾಡುತ್ತಿದ್ದರು ಮತ್ತು ಅಂದಿನ ಸರ್ಕಾರದ ಪ್ರತಿಕ್ರಿಯೆ ಶೂನ್ಯವಾಗಿತ್ತು ಮತ್ತು ಕೇವಲ ಹೇಳಿಕೆಗಳನ್ನು ಮಾತ್ರ ನೀಡಲಾಗುತ್ತಿತ್ತು ಎಂದು ಹೇಳಿದರು. ಶ್ರೀ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ, ಉರಿ ಮತ್ತು ಪುಲ್ವಾಮಾದಲ್ಲಿ ದಾಳಿ ನಡೆಯಿತು, 10 ದಿನಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ನಿರ್ದಿಷ್ಟ ಗುರಿದಾಳಿ ಮತ್ತು ವಾಯುದಾಳಿ ನಡೆಸುವ ಮೂಲಕ ಸೂಕ್ತ ಪ್ರತ್ಯುತ್ತರ ನೀಡಿದರು ಎಂದರು.  ಇದು ಒಂದು ದೊಡ್ಡ ವ್ಯತ್ಯಾಸವನ್ನುಂಟು ಮಾಡಿದೆ ಮತ್ತು ಭಾರತದ ಗಡಿಗಳನ್ನು ಯಾರೂ ಹಾಳುಮಾಡಲು ಸಾಧ್ಯವಿಲ್ಲ ಅಥವಾ ಮಾಡಿದರೆ ತಕ್ಕ ಉತ್ತರ ನೀಡಲಾಗುತ್ತದೆ ಎಂಬುದು ಇಂದು ಜಗತ್ತಿಗೆ ತಿಳಿದಿದೆ. ಈ ಹಿಂದೆ ಪ್ರಪಂಚದಾದ್ಯಂತ ಅಮೆರಿಕ ಮತ್ತು ಇಸ್ರೇಲ್ ಮಾತ್ರ ತಮ್ಮ ಗಡಿಗಳನ್ನು ಉಲ್ಲಂಘಿಸಿದ ಮತ್ತು ತಮ್ಮ ಸಶಸ್ತ್ರ ಪಡೆಗಳಿಗೆ ಹಾನಿ ಮಾಡಿದವರ ವಿರುದ್ಧ ಪ್ರತಿಕ್ರಿಯಿಸುತ್ತಿದ್ದವು ಎಂದು ಶ್ರೀ ಶಾ ಹೇಳಿದರು. ಆ ಪಟ್ಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಹೆಸರನ್ನೂ ಸೇರಿಸಿದ್ದಾರೆ ಎಂದು ತಿಳಿಸಿದರು. 
ವಿಧಿ 370 ಮತ್ತು 35ಎ ರದ್ದು ಪಡಿಸಿದ್ದು, ಸಿಎಎಯಂತಹ ಅನೇಕ ಸಮಸ್ಯೆಗಳನ್ನು ಶ್ರೀ ಮೋದಿ ಅವರು ಪರಿಹರಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಗಸ್ಟ್ 5, 2019 ರ ದಿನಾಂಕವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುವುದು ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಜೀ ಅವರು 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಕಾಶ್ಮೀರವನ್ನು ಭಾರತದೊಂದಿಗೆ ಶಾಶ್ವತವಾಗಿ ಜೋಡಿಸಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳನ್ನು ತರುವ ಮೂಲಕ ಭಾರತವನ್ನು ಕೈಗಾರಿಕಾ ಕೇಂದ್ರವನ್ನಾಗಿ ಮಾಡಲು ನಾವು ಕೆಲಸ ಮಾಡಿದ್ದೇವೆ, ಭಾರತವು ಉತ್ಪಾದನಾ ಕೇಂದ್ರವಾದರೆ, ಅದು ಎರಡು ದೃಷ್ಟಿಕೋನಗಳಿಂದ ನಮಗೆ ಮುಖ್ಯವಾಗುತ್ತದೆ. 130 ಕೋಟಿ ಜನಸಂಖ್ಯೆಯ ಮಾರುಕಟ್ಟೆ ಲಭ್ಯವಾಗುತ್ತದೆ ಮತ್ತು ಭಾರತವು ಉತ್ಪಾದನಾ ಕೇಂದ್ರವಾಗಿ ಯುವಕರಿಗೆ ಅವಕಾಶಗಳು ಸಹ ಸಿಗುತ್ತವೆ ಎಂದರು. ನರೇಂದ್ರ ಮೋದಿ ಸರ್ಕಾರವು ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದೆ ಮತ್ತು ಈ ಕಾರಣದಿಂದಾಗಿ, ಇಂದು ದೇಶವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸಿದಾಗ, ಭಾರತವು ವಿಶ್ವದಲ್ಲೇ ನಂಬರ್ ಒನ್ ಆಗುತ್ತದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ವಿಶ್ವಾಸ ಜನರಲ್ಲಿ ಹೆಚ್ಚಿದೆ ಎಂದು ಅವರು ಹೇಳಿದರು.
ಇಂದು ಬಳ್ಳಾರಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸಹ ಉದ್ಘಾಟಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕರ್ನಾಟಕವು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಗಳ ಪರಿಕಲ್ಪನೆಯನ್ನು ಬಹಳ ಚೆನ್ನಾಗಿ ಅನುಷ್ಠಾನಗೊಳಿಸಿದೆ ಎಂದ ಅವರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಅಭಿನಂದಿಸಿದರು. ವೈಜ್ಞಾನಿಕ ತನಿಖೆಯಿಲ್ಲದೆ, ಶಿಕ್ಷೆಯ ಅನುಪಾತವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಾಸಿಕ್ಯೂಶನ್ ಏಜೆನ್ಸಿಯು ವೈಜ್ಞಾನಿಕ ಪುರಾವೆಗಳನ್ನು ಹೊಂದಿರದ ಹೊರತು, ಯಾವುದೇ ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಇಂದು ಪೊಲೀಸ್ ಬೀಟ್ ಮತ್ತು ಇ ಬೀಟ್ ನ ಹೊಸ ಪರಿಕಲ್ಪನೆಯನ್ನು ಸಹ ಇಲ್ಲಿ ಪ್ರಾರಂಭಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಇ-ಬೀಟ್ ಪರಿಕಲ್ಪನೆಯನ್ನು ಕರ್ನಾಟಕದಾದ್ಯಂತ ಪ್ರಾರಂಭಿಸಲಾಗಿದೆ ಮತ್ತು ಇದು ಪೊಲೀಸ್ ಸೇವೆಗಳನ್ನು ಕಾಲಮಿತಿಯೊಳಗೆ ಬಡ ವ್ಯಕ್ತಿಯವರೆಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದರು.

***

 



(Release ID: 1822373) Visitor Counter : 241