ಕೃಷಿ ಸಚಿವಾಲಯ

ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ಅವರು ನಾಳೆ 'ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ


ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಒಂದು ದಿನದ ಕೃಷಿ ಮೇಳವನ್ನು ಆಯೋಜಿಸಲಾಗುವುದು

Posted On: 25 APR 2022 4:31PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು 26.04.2022 ರಂದು 'ಕಿಸಾನ್ ಭಾಗೀದಾರಿ ಪ್ರಥಮಿಕ ಹಮಾರಿ' ಅಭಿಯಾನದ ಅಡಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಾನಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ. 'ಆಜಾದಿ ಕಾ ಅಮೃತ ಮಹೋತ್ಸವ'ದ ಅಡಿಯಲ್ಲಿ 2022ರ ಏಪ್ರಿಲ್ 25ರಿಂದ 30ರವರೆಗೆ ʻಕಿಸಾನ್ ಭಾಗಿದರಿ ಪ್ರಾಥಮಿಕ ಹಮಾರಿʼ ಅಭಿಯಾನವನ್ನು ಆಯೋಜಿಸಲಾಗಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಇತರ ಸಚಿವಾಲಯಗಳ ಸಹಯೋಗದೊಂದಿಗೆ ತನ್ನ ಮತ್ತು ಇತರ ಸಂಬಂಧಿತ ಸಚಿವಾಲಯಗಳಾದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ರೈತರಲ್ಲಿ ಜಾಗೃತಿ ಮತ್ತು ಪ್ರಚಾರವನ್ನು ಮೂಡಿಸಲು ಚಟುವಟಿಕೆಗಳನ್ನು ಆಯೋಜಿಸಲಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ, ಪಶುಸಂಗೋಪನೆ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಸಹಕಾರ ಸಚಿವಾಲಯ ಮುಂತಾದವು ಅಂತಹ ಇತರೆ ಸಚಿವಾಲಯಗಳ ಪಟ್ಟಿಯಲ್ಲಿ ಸೇರಿವೆ.

'ಕಿಸಾನ್ ಭಾಗೀದಾರಿ ಪ್ರಾಥಮಿಕ ಹಮಾರಿ' ಅಭಿಯಾನದ ಭಾಗವಾಗಿ, ದಿನಾಂಕ 26.04.2022ರಂದು, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಎಟಿಎಂಎ) ಸಹಯೋಗದೊಂದಿಗೆ ದೇಶಾದ್ಯಂತದ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆಗಳು) ಒಂದು ದಿನದ ಕೃಷಿ ಮೇಳವನ್ನು ಆಯೋಜಿಸಲಾಗುವುದು. ಒಂದು ದಿನದ ಕೃಷಿ ಮೇಳದ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ನೀಡಲಾಗುವುದು. ಪ್ರಗತಿಪರ ಮತ್ತು ನವೀನ ರೈತರಿಗೆ ಸನ್ಮಾನ, ಸಣ್ಣ ಮತ್ತು ಮಧ್ಯಮ ರೈತರಿಗೆ ನೈಸರ್ಗಿಕ ಕೃಷಿ ಕುರಿತ ಕ್ಷೇತ್ರ ಪ್ರದರ್ಶನಗಳು, ಮಹಿಳಾ ರೈತರು ಮತ್ತು ʻಎಫ್ಪಿಒʼಗಳು, ರೈತರು-ವಿಜ್ಞಾನಿಗಳ ಸಂವಾದ ಇತ್ಯಾದಿಗಳನ್ನು ನಡೆಸಲಾಗುವುದು. 26.04.2022 ರಂದು ನಡೆಯಲಿರುವ ಅಭಿಯಾನದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವಿವಿಧ ವಿಭಾಗಗಳ ವತಿಯಿಂದ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಬೆಳೆ ವಿಭಜನೆ, ʻಆರ್‌ಕೆವಿವೈʼ, ಕೃಷಿ ಮಾರುಕಟ್ಟೆ, ತೋಟಗಾರಿಕೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಂತಹ ಚಟುವಟಿಕೆಗಳನ್ನು ಆಯೋಜಿಸಲಾಗುವುದು. 

ಒಂದು ವಾರ ಕಾಲ ನಡೆಯುವ ಅಭಿಯಾನದಲ್ಲಿ, ಕೇಂದ್ರ ಕೃಷಿ ಸಚಿವರು ʻಸಾಮಾನ್ಯ ಸೇವಾ ಕೇಂದ್ರʼ(ಸಿಎಸ್ಸಿ) ಆಯೋಜಿಸಿರುವ ಬೆಳೆ ವಿಮೆ ಕುರಿತ ರಾಷ್ಟ್ರವ್ಯಾಪಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ ʻಡಿಎಔ-ಎನ್‌ಆರ್‌ಎಲ್‌ಎಂʼ ಅಡಿಯಲ್ಲಿ ಕೃಷಿ ಪರಿಸರ ಮತ್ತು ಜಾನುವಾರು ಪದ್ಧತಿಗಳ ಬಗ್ಗೆ ಪ್ರವಚನ ನಡೆಯಲಿದೆ. ಈ ವಾರದಲ್ಲಿ ವಾಣಿಜ್ಯ ಸಚಿವಾಲಯ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ʻಒಂದು ಜಿಲ್ಲೆ ಒಂದು ಉತ್ಪನ್ನʼ (ಒಡಿಒಪಿ) ಕುರಿತು ವೆಬಿನಾರ್ ನಡೆಯಲಿದೆ. ಆಯ್ದ 75 ರೈತರು ಮತ್ತು ಉದ್ಯಮಿಗಳ `ರಾಷ್ಟ್ರೀಯ ಆತ್ಮ ನಿರ್ಭರ ಭಾರತ್’ ಸಮಾವೇಶವೂ ನಡೆಯಲಿದೆ.

ದೇಶಾದ್ಯಂತ ನೇರ (ಆಫ್‌ಲೈನ್) ಮತ್ತು ವರ್ಚುವಲ್ (ಆನ್‌ಲೈನ್) ಮಾಧ್ಯಮದ ಮೂಲಕ 1 ಕೋಟಿಗೂ ಹೆಚ್ಚು ರೈತರು ಮತ್ತು ಮಧ್ಯಸ್ಥಗಾರರು ಈ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

***



(Release ID: 1821300) Visitor Counter : 230


Read this release in: Tamil , English , Urdu , Hindi , Telugu