ರೈಲ್ವೇ ಸಚಿವಾಲಯ

ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತಾ ಸೇವೆಗಳಿಗಾಗಿ ಭಾರತೀಯ ರೈಲ್ವೆಯ ದೂರಸಂಪರ್ಕದ ಆಧುನೀಕರಣಕ್ಕಾಗಿ ರೈಲ್ವೆ ಮತ್ತು ಸಿ-ಡಾಟ್‌ (C-DoT) ಒಟ್ಟಾಗಿ ಕೆಲಸ ಮಾಡಲಿವೆ


ರೈಲ್ವೆಯಲ್ಲಿ ಸಿ-ಡಾಟ್‌ನ ಟೆಲಿಕಾಂ ಪರಿಹಾರಗಳು ಮತ್ತು ಸೇವೆಗಳ ವಿತರಣೆ ಹಾಗೂ ಅನುಷ್ಠಾನದಲ್ಲಿ ದೂರಸಂಪರ್ಕ ಸೌಲಭ್ಯಗಳನ್ನು ಒದಗಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

Posted On: 28 APR 2022 2:31PM by PIB Bengaluru

ರೈಲ್ವೆಯಲ್ಲಿ ದೂರಸಂಪರ್ಕ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಸಮನ್ವಯ ಮತ್ತು ಸಂಪನ್ಮೂಲ ಹಂಚಿಕೆಗಾಗಿ ದೃಢವಾದ ಸಹಯೋಗದ ಪಾಲುದಾರಿಕೆಯನ್ನು ಸ್ಥಾಪಿಸಲು ಮತ್ತು ಸಿ-ಡಾಟ್ನ ಟೆಲಿಕಾಂ ಪರಿಹಾರಗಳು ಮತ್ತು ಸೇವೆಗಳ ವಿತರಣೆ ಮತ್ತು ಅನುಷ್ಠಾನಕ್ಕಾಗಿ ರೈಲ್ವೆ ಸಚಿವಾಲಯವು ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರದೊಂದಿಗೆ (ಸಿ-ಡಾಟ್) 27 ಏಪ್ರಿಲ್ 2022 ರ ಬುಧವಾರದಂದು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ಈ ತಿಳುವಳಿಕೆ ಒಡಂಬಡಿಕೆಯೊಂದಿಗೆ, ಸಿ-ಡಾಟ್ ಮತ್ತು ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆಯಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತಾ ಸೇವೆಗಳಿಗಾಗಿ ಎಲ್‌ಟಿಇ-ಆರ್ ಅನ್ನು ಬಳಸಿಕೊಂಡು ವಿಶ್ವದರ್ಜೆಯ ಗುಣಮಟ್ಟವನ್ನು ಬಳಸಿಕೊಂಡು ದೂರಸಂಪರ್ಕದ ಆಧುನೀಕರಣಕ್ಕೆ ಒಟ್ಟಾಗಿ ಕೆಲಸ ಮಾಡುತ್ತವೆ. ಮೇಕ್ ಇನ್ ಇಂಡಿಯಾ (ಎಂಐಐ) ನೀತಿಗೆ ಅನುಗುಣವಾಗಿ ಭಾರತೀಯ ರೈಲ್ವೆಯಲ್ಲಿ 5ಜಿ ಬಳಕೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ)/ ಯಂತ್ರದಿಂದ ಯಂತ್ರಕ್ಕೆ (ಎಂ2ಎಂ) ಅಪ್ಲಿಕೇಶನ್‌ಗಳು, ಏಕೀಕೃತ ನೆಟ್‌ವರ್ಕ್ ನಿರ್ವಹಣಾ ವ್ಯವಸ್ಥೆ, ಒಎಫ್‌ಸಿ ಮಾನಿಟರಿಂಗ್/ನೆಟ್‌ವರ್ಕ್ ನಿರ್ವಹಣಾ ವ್ಯವಸ್ಥೆ (ಎನ್‌ಎಂಎಸ್), ವೀಡಿಯೊ ಕಾನ್ಫರೆನ್ಸ್ ಸಾಫ್ಟ್‌ವೇರ್ (ವಿಸಿ ಡಿಒಟಿ), ಚಾಟಿಂಗ್ ಅಪ್ಲಿಕೇಶನ್, ರೂಟರ್‌ಗಳು, ಸ್ವಿಚ್‌ಗಳಲ್ಲಿ ಇವು ಕೆಲಸ ಮಾಡುತ್ತವೆ.
ಎಂಒಯು ಸಹಿ ಕಾರ್ಯಕ್ರಮದಲ್ಲಿ ಸಿ-ಡಾಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಜ್‌ಕುಮಾರ್ ಉಪಾಧ್ಯಾಯ ಮತ್ತು ಟೆಲಿಕಾಂ/ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯೆ ಶ್ರೀಮತಿ ಅರುಣಾ ಸಿಂಗ್ ಹಾಗೂ ಎರಡೂ ಸಂಸ್ಥೆಗಳ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 
ಸಿ-ಡಾಟ್ ಮತ್ತು ರೈಲ್ವೇ ಸಚಿವಾಲಯದ ನಡುವಿನ ಸಮನ್ವಯವು ಒಟ್ಟು ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈಲು ಕಾರ್ಯಾಚರಣೆ, ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತಾ ಅಪ್ಲಿಕೇಶನ್‌ಗಳಿಗಾಗಿ ದೇಶೀಯ ಕೈಗೆಟುಕುವ ಟೆಲಿಕಾಂ ಉಪಕರಣಗಳು ಮತ್ತು ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಉತ್ತೇಜಿಸುತ್ತದೆ ಮತ್ತು ದೇಶದಲ್ಲಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

***(Release ID: 1821299) Visitor Counter : 195