ಚುನಾವಣಾ ಆಯೋಗ

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ನೇತೃತ್ವದ ಭಾರತೀಯ ಚುನಾವಣಾ ಆಯೋಗ ನಿಯೋಗವು ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ಗೆ ಭೇಟಿ ನೀಡಿದೆ


ಮುಖ್ಯ ಚುನಾವಣಾ ಆಯುಕ್ತರು ಭಾರತೀಯ ಸಮುದಾಯದ ಸದಸ್ಯರನ್ನು ಸಾಗರೋತ್ತರ ಮತದಾರರನ್ನಾಗಿ ನೋಂದಾಯಿಸಿಕೊಳ್ಳಲು ಒತ್ತಾಯಿಸಿದರು

ಸಾಗರೋತ್ತರ ಮತದಾರರಿಗೆ ಇಟಿಪಿಬಿಎಸ್ ಸೌಲಭ್ಯ ವಿಸ್ತರಣೆ ಪರಿಗಣನೆಯಲ್ಲಿದೆ: ಸಿಇಸಿ ಶ್ರೀ ಸುಶೀಲ್ ಚಂದ್ರ

Posted On: 22 APR 2022 1:04PM by PIB Bengaluru

ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ನೇತೃತ್ವದ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿಯೋಗವು ಏಪ್ರಿಲ್ 9-19, 2022 ರವರೆಗೆ ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ಗೆ ಭೇಟಿ ನೀಡಿತು. ಈ ಭೇಟಿಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದೊಂದಿಗೆ ಸರಣಿ ಸಭೆಗಳನ್ನು. ಮತ್ತು ಮಾರಿಷಸ್ ಹಾಗೂ ಎರಡು ದೇಶಗಳಲ್ಲಿನ ದೊಡ್ಡ ಅನಿವಾಸಿ ಭಾರತೀಯ (ಎನ್‌ಆರ್‌ಐ )ಸಮುದಾಯದೊಂದಿಗೆ ಸಂವಾದ ನಡೆಸಲಾಯಿತು. ಎರಡೂ ಚುನಾವಣಾ ನಿರ್ವಹಣಾ ಸಂಸ್ಥೆಗಳು (ಇಎಮ್‌ಬಿ ಗಳು) ಆಯೋಗದೊಂದಿಗೆ  ಎಮ್‌ಒಯು  ಪಾಲುದಾರರಾಗಿದ್ದಾರೆ. ಮೂರು ದೇಶಗಳು ತಮ್ಮ ಜನರ ಸಾಮೂಹಿಕ ಅನುಭವಗಳು ಮತ್ತು ಒಟ್ಟಾದ ಶಕ್ತಿಯಲ್ಲಿ ಮೂಲಭೂತವಾದ, ವಿಶಿಷ್ಟವಾದ ಮತ್ತು ಬೇರೂರಿರುವ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ಪ್ರಸ್ತುತ ಸಂಖ್ಯೆಗಳು ತೀರಾ ಕಡಿಮೆ ಇರುವುದರಿಂದ ಸಾಗರೋತ್ತರ ಮತದಾರರಾಗಿ ನೋಂದಾಯಿಸಲು ಸಿಇಸಿ ಅವರನ್ನು ಒತ್ತಾಯಿಸಿತು. ಸಾಗರೋತ್ತರ ಮತದಾರರಿಗೂ ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ (ಇಟಿಪಿಬಿಎಸ್) ಸೌಲಭ್ಯವನ್ನು ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಸದಸ್ಯರೊಂದಿಗೆ ಹಂಚಿಕೊಂಡರು.

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ಅವರು ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ಅಧ್ಯಕ್ಷರನ್ನು ಭೇಟಿಯಾದರು

ಏಪ್ರಿಲ್ 12, 2022 ರಂದು ಎ-ವೆಬ್ ಪ್ರಧಾನ ಕಾರ್ಯದರ್ಶಿ ಶ್ರೀ ಗ್ಲೆನ್ ವಿ. ಮಶಿನಿನಿ ಮತ್ತು ಶ್ರೀ ಜೊಂಗ್ಯುನ್ ಚೋ ಭೇಟಿಯಾದರು


ಭಾರತದ ಮುಖ್ಯ ಚುನಾವಣಾ ಆಯುಕ್ತರು, ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ಅಧ್ಯಕ್ಷರಾದ ಶ್ರೀ ಗ್ಲೆನ್ ಮಶಿನಿನಿ ಮತ್ತು ವಿಶ್ವ ಚುನಾವಣಾ ಸಂಸ್ಥೆಗಳ ಒಕ್ಕೂಟದ (ಎ ಡಬ್ಲ್ಯೂ ಇಬಿ) ಪ್ರಧಾನ ಕಾರ್ಯದರ್ಶಿಯಾದ ಶ್ರೀ ಜೊಂಗ್ಯುನ್ ಚೋ ಅವರ ನಡುವಿನ ತ್ರಿಪಕ್ಷೀಯ ಸಭೆಯ ಅಪರೂಪದ ಸಂದರ್ಭವು ಭೇಟಿಯ ಪ್ರಮುಖ ಅಂಶವಾಗಿದೆ. 12ನೇ ಏಪ್ರಿಲ್ 2022. ಭಾರತವು ಪ್ರಸ್ತುತ ಎ ಡಬ್ಲ್ಯೂ ಇಬಿ ಯ ಅಧ್ಯಕ್ಷರಾಗಿದ್ದು, ವಿಶ್ವದ 118 ಇಎಂಬಿ ಗಳ ದೊಡ್ಡ ಸಮೂಹವಾಗಿದೆ ಮತ್ತು ದಕ್ಷಿಣ ಆಫ್ರಿಕಾವು ಇದ್‌ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದೆ.

ಎ ಡಬ್ಲ್ಯೂ ಇಬಿ ತನ್ನ ಸ್ಥಾಪನೆಯ ಹತ್ತು ವರ್ಷಗಳನ್ನು ಪೂರ್ಣಗೊಳಿಸಿ ಹೊಸ ದಶಕಕ್ಕೆ ಕಾಲಿಡುತ್ತಿದ್ದಂತೆ, ಸಭೆಯು ಸರಿಯಾದ ಘಟ್ಟದಲ್ಲಿ ಸ್ಥಾನ ಪಡೆದಿದೆ, ಇದರಲ್ಲಿ ಸಂಸ್ಥೆಯಾಗಿ ಎ ಡಬ್ಲ್ಯೂ ಇಬಿಯು ತನ್ನ ಮುಂದಿನ ಹಾದಿಯನ್ನು ಪ್ರತಿಬಿಂಬಿಸುವ ಸಮಯವಾಗಿದೆ. ಎ ಡಬ್ಲ್ಯೂ ಇಬಿ ತನ್ನ ಸದಸ್ಯರ ನಡುವೆ ಜ್ಞಾನ ಮತ್ತು ಮಾಹಿತಿಯ ವಿನಿಮಯಕ್ಕಾಗಿ ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಸಭೆಯಲ್ಲಿ, ಈ ಅಂಬ್ರೆಲಾ ಸಂಸ್ಥೆಯು ಬಹಳಷ್ಟು ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಇಎಂಬಿಗಳನ್ನು ಹೊಂದಿದ್ದು ಅದು ತಮ್ಮ ವ್ಯವಸ್ಥೆಗಳ ಮತ್ತಷ್ಟು ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ ಹುಡುಕುತ್ತಿರುವ ಆ ಇಎಂಬಿಗಳಿಗೆ ಸಹಾಯ ಮಾಡಬಹುದು ಮತ್ತು ಸಲಹೆ ನೀಡಬಹುದು ಎಂದು ಒಪ್ಪಂದ ಮಾಡಿಕೊಳ್ಳಲಾಯಿತು. ಈಗ ಸದಸ್ಯತ್ವವನ್ನು ಹೆಚ್ಚಿಸುವ ಮತ್ತು ಚುನಾವಣೆ ಬಗ್ಗೆ ಸದಸ್ಯರ ಜ್ಞಾನವನ್ನು ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು. ಸದಸ್ಯರು ಸಂವಹನ ನಡೆಸಲು ಮತ್ತು ಹೆಚ್ಚಾಗಿ ಭೇಟಿಯಾಗಲು ಹೆಚ್ಚಿನ ಮಾರ್ಗಗಳನ್ನು ಅನ್ವೇಷಿಸಬೇಕು ಎಂದು ಅಭಿಪ್ರಾಯ ಪಡಲಾಯಿತು.

ಸಭೆಯಲ್ಲಿ, ಆಯುಕ್ತರಾದ  ಶ್ರೀ ಸುಶೀಲ್ ಚಂದ್ರ ಅವರು ಈ ಸಭೆಯನ್ನು ಆಯೋಜಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ಅಧ್ಯಕ್ಷರಿಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾ ಪ್ರಜಾಪ್ರಭುತ್ವದಲ್ಲಿ ದೊಡ್ಡ ದಾಪುಗಾಲುಗಳನ್ನು ಮಾಡಿದೆ ಮತ್ತು ಅಕ್ಟೋಬರ್ 2022 ರಲ್ಲಿ ಎ ಡಬ್ಲ್ಯೂ ಇಬಿ ಯ ಮುಂದಿನ ಸಾಮಾನ್ಯ ಸಭೆಯನ್ನು ಆಯೋಜಿಸಲಿದೆ ಎಂದು ಅವರು ಹೇಳಿದರು. ಭಾರತವು ಎ ಡಬ್ಲ್ಯೂ ಇಬಿ ಯೊಂದಿಗೆ ಅತ್ಯಂತ ತೀವ್ರವಾದ ಮತ್ತು ಸಕ್ರಿಯ ಸಂಬಂಧವನ್ನು ಹೊಂದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಈ ಸಂಸ್ಥೆಯ ಸ್ಥಾಪಕ ಸದಸ್ಯರು. ಗಾಂಧೀಜಿಯಿಂದ ಮಹಾತ್ಮರನ್ನು ರೂಪಿಸಿದ ನಾಡಿಗೆ ಮತ್ತು ನೆಲ್ಸನ್ ಮಂಡೇಲಾ ಅವರ  ನೆಲಕ್ಕೆ ಬರುವುದು ತಮಗೆ ನಿಜವಾದ ತೀರ್ಥಯಾತ್ರೆಯಾಗಿದೆ ಎಂದು ಅವರು ಹೇಳಿದರು.

ವೆವಿನಾರ್‌ಗಳು, ಅಂತರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮಗಳ ಕಾರ್ಯಕ್ರಮಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಪ್ರಕಟಣೆಗಳೊಂದಿಗೆ ಹೊರಬರುವ ಮೂಲಕ ಎ ಡಬ್ಲ್ಯೂ ಇಬಿ ಸದಸ್ಯರ ನಡುವೆ ಸಹಕಾರವನ್ನು ಬಲಪಡಿಸಲು ಭಾರತದ ಚುನಾವಣಾ ಆಯೋಗವು ತೆಗೆದುಕೊಂಡ ಹಲವಾರು ಚಟುವಟಿಕೆಗಳು ಮತ್ತು ಉಪಕ್ರಮಗಳನ್ನು ಶ್ರೀ ಚಂದ್ರು ಪುನರುಚ್ಚರಿಸಿದರು. ನಂತರ, ಅವರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ 11 ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ವಿವಿಧ ಉಪಚುನಾವಣೆಗಳನ್ನು ನಡೆಸುವ ಭಾರತದ ಅನುಭವವನ್ನು ಹಂಚಿಕೊಂಡರು ಮತ್ತು ಮತದಾರರು, ಮತಗಟ್ಟೆ ಸಿಬ್ಬಂದಿ ಮತ್ತು ಮತಗಟ್ಟೆಗಳ ದೃಷ್ಟಿಕೋನದಿಂದ ಸುರಕ್ಷಿತ ಚುನಾವಣೆಗಳನ್ನು ನಡೆಸಲು ಆಯೋಗವು ರೂಪಿಸಿದ ಹೊಸ ಮಾರ್ಗದರ್ಶನಗಳನ್ನು ಹಂಚಿಕೊಂಡರು.

ಎ ಡಬ್ಲ್ಯೂ ಇಬಿ ತನ್ನನ್ನು ತಾನು ಮರುಶೋಧಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತಾ, ಆಯುಕ್ತ ಶ್ರೀ ಚಂದ್ರು ಅವರು ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮೂರು ಕ್ಷೇತ್ರಗಳಿಗೆ ಒತ್ತು ನೀಡಿದರು. ಮೊದಲನೆಯದಾಗಿ, ಎ ಡಬ್ಲ್ಯೂ ಇಬಿ  ಚುನಾವಣಾ ನಿರ್ವಹಣೆಯ ವಿವಿಧ ಅಂಶಗಳಿಗೆ ಪ್ರಮಾಣಿತ ಮಾರ್ಗದರ್ಶನಗಳೊಂದಿಗೆ ಬರಲು ಪ್ರಯತ್ನಿಸಬೇಕು, ಇದನ್ನು ಎಡಬ್ಲ್ಯೂಇಬಿ ಜಾಗತಿಕ ಮಾನದಂಡಗಳು ಎಂದು ಕರೆಯಲಾಗುತ್ತದೆ ಮತ್ತು ಈ ಗುರಿಗಳನ್ನು ಸಾಧಿಸಲು ಇಎಂಬಿಗಳಿಗೆ ಸಹಾಯ ಮಾಡುತ್ತದೆ. ಎರಡು, ಪ್ರಾದೇಶಿಕ ವಿಷಯಾಧಾರಿತ ಶೃಂಗಸಭೆಗಳ ಮೂಲಕ ಸದಸ್ಯರ ನಡುವಿನ ಸಂವಾದವನ್ನು ಹೆಚ್ಚಿಸುವುದು, ಭಾರತದ ರಾಷ್ಟ್ರೀಯ ಮತದಾರರ ದಿನದ ಮಾದರಿಯಲ್ಲಿ ಎಡಬ್ಲ್ಯೂ ಇಬಿ ಕ್ಯಾಲೆಂಡರ್‌ನಲ್ಲಿ ಅದರ ಸಂಸ್ಥಾಪನಾ ದಿನದಂತಹ ಮಹತ್ವದ ದಿನಾಂಕಗಳನ್ನು ಆಚರಿಸುವುದು ಮತ್ತು ಎಡಬ್ಲ್ಯೂಇಬಿಗಾಗಿ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸುವುದು. ಮೂರು, ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ತೀವ್ರಗೊಳಿಸುವುದು, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ. ಇಂಡಿಯಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್‌ಮೆಂಟ್ (ಐಐಐಡಿಇಎಂ) ನಲ್ಲಿ ಎಡಬ್ಲ್ಯೂಇಬಿ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಮಾಡಿದ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

ಅವರ ಭೇಟಿಯ ಸಮಯದಲ್ಲಿ, ಆಯುಕ್ತರು 2022 ರ ಏಪ್ರಿಲ್ 15 ರಂದು ಜೋಹಾನ್ಸ್‌ಬರ್ಗ್‌ನಲ್ಲಿರುವ ಹಿಂದಿನ ಜೈಲು ಸಂಕೀರ್ಣವನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾದ ಕಾನ್ಸ್ಟಿಟ್ಯೂಶನ್ ಹಿಲ್‌ನಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದರು.  ಕಾನ್ಸ್ಟಿಟ್ಯೂಷನ್ ಹಿಲ್‌ನಲ್ಲಿರುವ ಗಾಂಧಿ-ಮಂಡೇಲಾ ವಸ್ತುಪ್ರದರ್ಶನ ಕೇಂದ್ರಕ್ಕೂ ಭೇಟಿ ನೀಡಿದರು.

ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರ ಭೇಟಿಯ ಸಂದರ್ಭದಲ್ಲಿ  ದಕ್ಷಿಣ ಆಫ್ರಿಕಾದ ಕಾನ್ಸ್ಟಿಟ್ಯೂಷನ್ ಹಿಲ್‌ನಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಿದರು.


ಏಪ್ರಿಲ್ 15, 2022 ರಂದು ಕಾನ್ಸ್ಟಿಟ್ಯೂಶನ್ ಹಿಲ್‌ನಲ್ಲಿರುವ ಗಾಂಧಿ-ಮಂಡೇಲಾ ಪ್ರದರ್ಶನ ಕೇಂದ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರು


ಭಾರತದ ಚುನಾವಣಾ ಆಯುಕ್ತರು 18 ಏಪ್ರಿಲ್ 2022 ರಂದು ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್‌ನ ಚುನಾವಣಾ ಆಯುಕ್ತರಾದ ಶ್ರೀ ಮೊಹಮ್ಮದ್ ಇರ್ಫಾನ್ ಅಬ್ದುಲ್ ರಹಮಾನ್ ಅವರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ, ಅವರು ಎರಡು ದೇಶಗಳು ಸಹೋದರತ್ವ, ಪೂರ್ವಜರು, ರಕ್ತಸಂಬಂಧ ಮತ್ತು ವಾತ್ಸಲ್ಯದ ಬಂಧವನ್ನು ಹಂಚಿಕೊಂಡಿವೆ ಎಂದು ಹೇಳಿದರು. ಎರಡು ಇಎಂಬಿ ಗಳು ಕೇವಲ ಒಡಂಬಡಿಕೆಯ ಔಪಚಾರಿಕ ಸಂಬಂಧದ ಮೂಲಕ ನಿಕಟವಾಗಿ ಸಂಪರ್ಕ ಹೊಂದಿವೆ ಆದರೆ ಪರಸ್ಪರರ ವ್ಯವಸ್ಥೆಗಳ ತಿಳಿವಳಿಕೆ, ಬೆಂಬಲ ಮತ್ತು ಪರಸ್ಪರ ಶಕ್ತಿಯನ್ನು ಸೆಳೆಯುವ ನಿಕಟ ಸಂಬಂಧದ ಮೂಲಕವೂ ಆತ್ಮೀಯ ಸಂಪರ್ಕ ಹೊಂದಿದೆ ಎಂದರು.  ಭಾರತದ ಚುನಾವಣಾ ಆಯುಕ್ತರು ಭಾರತದಲ್ಲಿ ನಡೆದ ಇತ್ತೀಚಿನ ಚುನಾವಣೆಗಳ  ವಿವರಗಳನ್ನು ನೀಡಿದರು ಮತ್ತು ಎರಡು ಆಯೋಗಗಳು ಪರಸ್ಪರ ಪ್ರಯೋಜನಕ್ಕಾಗಿ ಉತ್ತಮ ಅಭ್ಯಾಸಗಳು, ಕೌಶಲ್ಯಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.

ಭಾರತದ ಚುನಾವಣಾ ಆಯುಕ್ತರು 18ನೇ ಏಪ್ರಿಲ್ 2022 ರಂದು ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್‌ನ ಚುನಾವಣಾ ಆಯುಕ್ತರಾದ ಶ್ರೀ. ಮೊಹಮ್ಮದ್. ಇರ್ಫಾನ್ ಅಬ್ದುಲ್ ರಹಮಾನ್ ರನ್ನು  ಭೇಟಿಯಾದರು

 

ಅನಿವಾಸಿ ಭಾರತೀಯರೊಂದಿಗೆ ಸಭೆ

ಉಭಯ ದೇಶಗಳ ಭೇಟಿಯ ಸಮಯದಲ್ಲಿ, ಏಪ್ರಿಲ್ 10 ರಂದು ಕೇಪ್ ಟೌನ್‌ನಲ್ಲಿ ಏಪ್ರಿಲ್ 12 ರಂದು ಜೋಹಾನ್ಸ್‌ಬರ್ಗ್ ಮತ್ತು 18 ಏಪ್ರಿಲ್ 2022 ರಂದು ಪೋರ್ಟ್ ಲೂಯಿಸ್‌ನಲ್ಲಿ ಅನಿವಾಸಿ ಭಾರತೀಯರೊಂದಿಗೆ  ಸಂವಾದವನ್ನು ಆಯೋಜಿಸಲಾಗಿತ್ತು.  ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ಅವರು ಅನಿವಾಸ ಭಾರತೀಯರೊಂದಿಗೆ  ಚುನಾವಣೆಗಳನ್ನು ನಡೆಸುವ ಭಾರತದ ಅನುಭವವನ್ನು ಹಂಚಿಕೊಂಡರು. ಭಾರತವು ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವುದರಿಂದ 950 ದಶಲಕ್ಷಕ್ಕೂ ಹೆಚ್ಚು ಮತದಾರರಿಗೆ ಒಂದು ದಶಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಚುನಾವಣೆಗಳನ್ನು ನಡೆಸುತ್ತದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಿಂದ, ಭಾರತೀಯ ಚುನಾವಣೆಗಳು ಮಹಿಳೆಯರು, ವಿಕಲಾಂಗಚೇತನರು ಮತ್ತು ಹಿರಿಯ ನಾಗರಿಕರ ಹೆಚ್ಚಿನ ಭಾಗವಹಿಸುವಿಕೆಗೆ ಕಾರಣವಾದ ಚುನಾವಣೆಗಳನ್ನು ನಡೆಸುವಂತೆ ಮಾಡುವಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸಿವೆ. ಸಿವಿಜಿಲ್, ಮತದಾರರ ಶಿಕ್ಷಣದಂತಹ ಅಪ್ಲಿಕೇಶನ್‌ಗಳ ಮೂಲಕ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿರುವ ದೃಢವಾದ ಚುನಾವಣಾ ನಿರ್ವಹಣಾ ಅಭ್ಯಾಸಗಳ ಪರಿಣಾಮವಾಗಿ ,  ಭಾಷಾ, ಭೌಗೋಳಿಕವಾಗಿ ವೈವಿಧ್ಯಮಯವಾದ ಭಾರತದಲ್ಲಿ ಎಸ್‌ವಿಇಇಪಿ ಮೂಲಕ, ಇವಿಎಂ-ವಿಪಿಎಟಿ ಬಳಕೆ, ಮಹಿಳೆಯರಿಂದಲೇ  ಮತಗಟ್ಟೆಗಳ ನಿರ್ವಹಣೆ, ಒಂದೇ ಡಿಜಿಟಲ್ ವೇದಿಕೆಯಲ್ಲಿ ಏಕ ಏಕೀಕೃತ ಮತದಾರರ ಪಟ್ಟಿ, ಕೇಂದ್ರ ವೀಕ್ಷಕರ ನಿಯೋಜನೆ ಮತ್ತು ಅತ್ಯಂತ ದೃಢವಾದ ಖರ್ಚು ಮಾನಿಟರಿಂಗ್ ಕಾರ್ಯವಿಧಾನಗಳು. ಮುಕ್ತ, ನ್ಯಾಯಸಮ್ಮತ ಮತ್ತು ಭಾಗವಹಿಸುವ ಚುನಾವಣೆಗಳನ್ನು ನಡೆಸುವುದು ಈ ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಹೇಳಿದರು.  


ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರು ಇಸಿಐನ ಹಿರಿಯ ಅಧಿಕಾರಿಗಳೊಂದಿಗೆ ಏಪ್ರಿಲ್ 10, 2022 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ಗೆ ತಮ್ಮ ಭೇಟಿಯ ಸಂದರ್ಭದಲ್ಲಿ ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಮತ್ತು ಎನ್‌ಆರ್‌ಐ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

 
ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರು 18ನೇ ಏಪ್ರಿಲ್ 2022 ರಂದು ಮಾರಿಷಸ್‌ನ ಪೋರ್ಟ್ ಲೂಯಿಸ್‌ನಲ್ಲಿ ಭಾರತದ ಹೈ ಕಮಿಷನ್‌ನ ಅಧಿಕಾರಿಗಳು ಮತ್ತು ಅನಿವಾಸಿ ಭಾರತೀಯರ   ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.


 
ಚುನಾವಣಾ ಆಯುಕ್ತ ಶ್ರೀ ಚಂದ್ರ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಕೈಗೊಂಡ ಹೊಸ ಚುನಾವಣಾ ಸುಧಾರಣೆಗಳನ್ನು ಎತ್ತಿ ತೋರಿಸಿದರು, ಇದು ವರ್ಷಕ್ಕೆ ಒಂದು ಬಾರಿ ಇರುವಂತೆ ಹೋಲಿಸಿದರೆ ಅರ್ಹ ನಾಗರಿಕರನ್ನು ಮತದಾರರಾಗಿ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ಒಳಗೊಂಡಿದೆ,ಇದರಲ್ಲಿ  ಮತದಾರರ ಪಟ್ಟಿ ಮತ್ತು ಆಧಾರ್ ದತ್ತಾಂಶವನ್ನು ಲಿಂಕ್ ಮಾಡುವುದು ಮತ್ತು ಹೊಸ ವರ್ಗದ ಮತದಾರರಿಗೆ ಅಂದರೆ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಕೋವಿಡ್ ಪೀಡಿತ ವ್ಯಕ್ತಿಗಳಿಗೆ ಅಂಚೆ ಮತಪತ್ರ ಸೌಲಭ್ಯವನ್ನು ವಿಸ್ತರಿಸುವುದು ಸೇರಿದೆ. 

 

***



(Release ID: 1819155) Visitor Counter : 4924