ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 13ನೇ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ.

Posted On: 21 APR 2022 6:17PM by PIB Bengaluru

ಈ ದಿನವು ಎನ್ಐಎ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಪಾಲಿಗೆ ಬಹಳ ಮುಖ್ಯ; ಎನ್ಐಎ ತ್ವರಿತವಾಗಿ ಮತ್ತು ದಕ್ಷತೆಯೊಂದಿಗೆ ಆಂತರಿಕ ಭದ್ರತೆಯ ಸವಾಲನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಮುಂದುವರಿಯುತ್ತಿದೆ; ಎನ್ಐಎಗೆ ಅಗತ್ಯವಿರುವ ಎಲ್ಲಾ ಸಹಾಯಕ್ಕೆ ಭಾರತ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ನಾನು ಎನ್ಐಎ ಕುಟುಂಬಕ್ಕೆ ಭರವಸೆ ನೀಡಲು ಬಯಸುತ್ತೇನೆ

ಶೇ.90 ಕ್ಕಿಂತ ಹೆಚ್ಚು ಶಿಕ್ಷೆಯ ಪ್ರಮಾಣದೊಂದಿಗೆ ಎನ್ಐಎ 'ಗೋಲ್ಡ್ ಸ್ಟ್ಯಾಂಡರ್ಡ್'  ನಿಗದಿಪಡಿಸಿದೆ; ಭಯೋತ್ಪಾದನೆ-ಮುಕ್ತ ಭಾರತ ಮತ್ತು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನ ಮಂತ್ರಿಯವರ ಗುರಿ ಸಾಧಿಸಲುಎನ್ಐಎ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
 
ಪುರಾವೆಗಳನ್ನು ಸಂಗ್ರಹಿಸುವುದು ಹಾಗು ಕಷ್ಟಕರವಾದ ಅಪರಾಧಗಳನ್ನು ಎನ್ಐಎ ತನಿಖೆ ಮಾಡುತ್ತದೆ, ಆದಾಗ್ಯೂ ಅದರ ಸಾಧನೆಗಳು ಪೊಲೀಸರಿಗೆ ಮತ್ತು ದೇಶದ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳಿಗೆ ಸ್ಫೂರ್ತಿಯಾಗಿದೆ.

ಭಯೋತ್ಪಾದನೆಗಿಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಇನ್ನೊಂದಿಲ್ಲ, ಅದಕ್ಕಾಗಿಯೇ, ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆ ಬಹಳ ಮುಖ್ಯ, ಭಯೋತ್ಪಾದನೆಯನ್ನು ಕೊನೆಗೊಳಿಸಲು ಎನ್ಐಎ ದೃಢವಾಗಿ ಕೆಲಸ ಮಾಡಬೇಕು

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವುದು ಒಂದಾದರೆ, ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದು ಮತ್ತೊಂದು; ನಾವು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ಬಯಸುವುದಾದರೆ, ನಾವು ಭಯೋತ್ಪಾದನೆಗೆ ಹಣ ಪೂರೈಕೆ ಮಾಡುವ  ವ್ಯವಸ್ಥೆಯನ್ನು ಕೆಡವಬೇಕಾಗುತ್ತದೆ.

 
ಶ್ರೀ ಮೋದಿ ಅವರು ಪ್ರಧಾನ ಮಂತ್ರಿಯಾದ ನಂತರ ಭಯೋತ್ಪಾದನೆ ಹಣಕಾಸು ಪೂರೈಕೆ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಎನ್ಐಎ ಮಹತ್ತರ ಸಹಾಯ ಮಾಡಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.
 
ಎನ್ಐಎ ಎಚ್ಚರಿಕೆಯಿಂದಾಗಿ, ಭಯೋತ್ಪಾದಕರ ಹಣಕಾಸು ಮಾರ್ಗಗಳನ್ನು ಮುಚ್ಚಲಾಗಿದೆ, ಎನ್ಐಎ ಜಮ್ಮು-ಕಾಶ್ಮೀರ ನೆಲದ ಭಯೋತ್ಪಾದಕರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದೆ ಮತ್ತು ಅವರ ಅಡಗು ತಾಣಗಳನ್ನು ನಾಶಪಡಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ

ಭಯೋತ್ಪಾದನೆ ನಿಧಿಗೆ ಸಂಬಂಧಿಸಿದಂತೆ 105 ಪ್ರಕರಣಗಳನ್ನು ದಾಖಲಿಸಲಾಗಿದೆ, 876 ಆರೋಪಿಗಳ ವಿರುದ್ಧ 94 ಚಾರ್ಜ್ ಶೀಟ್‌ಗಳನ್ನು ದಾಖಲಿಸಲಾಗಿದೆ, 796 ಆರೋಪಿಗಳನ್ನು ಬಂಧಿಸಲಾಗಿದೆ, ಅದರಲ್ಲಿ 100 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ, ಇದು ದೊಡ್ಡ ಸಾಧನೆಯಾಗಿದೆ.
 
ಯಾವುದೇ ಸುಸಂಸ್ಕೃತ ಸಮಾಜಕ್ಕೆ ಭಯೋತ್ಪಾದನೆ ಶಾಪವಾಗಿದ್ದು, ಈ ಶಾಪದಿಂದ ಭಾರತವು ಅತ್ಯಂತ ದೊಡ್ಡ ನೋವು ಅನುಭವಿಸಿದೆ
 
ತನಿಖಾ ವಿಧಾನದಲ್ಲಿ ಪ್ರಮುಖ ಬದಲಾವಣೆಗಳಿರಬೇಕು, ಅದು ಇನ್ನು ಮುಂದೆ 3ನೇ ಹಂತದ ವಿಧಾನಗಳನ್ನು ಅವಲಂಬಿಸಿರಬಾರದು; ಬದಲಿಗೆ ತಂತ್ರಜ್ಞಾನ, ದತ್ತಾಂಶ ಮತ್ತು ಮಾಹಿತಿಯ ಮೇಲೆ ಅವಲಂಬಿತವಾಗಿದೆ

ಈ ಬದಲಾವಣೆ ತರಲು ಡೇಟಾಬೇಸ್ ಇರಬೇಕು, ಮಾದಕ ದ್ರವ್ಯ, ಹವಾಲಾ ವಹಿವಾಟು, ಶಸ್ತ್ರಾಸ್ತ್ರ ಕಳ್ಳಸಾಗಣೆ, ನಕಲಿ ಕರೆನ್ಸಿಗಳು, ಬಾಂಬ್ ಸ್ಫೋಟಗಳು, ಭಯೋತ್ಪಾದಕ ನಿಧಿ ಮತ್ತು ಭಯೋತ್ಪಾದನೆ ಎಂಬ 7 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಡೇಟಾಬೇಸ್ ರಚಿಸುವ ಕಾರ್ಯವನ್ನು ಎನ್ಐಎಗೆ ನೀಡಲಾಗಿದೆ, ಅಲ್ಲಿ ಉತ್ತಮವಾಗಿ ಕೆಲಸ ಪ್ರಾರಂಭವಾಗಿದೆ
 
ಎಲ್ಲಾ ರಾಜ್ಯಗಳ ಪೊಲೀಸರು ಮತ್ತು ಏಜೆನ್ಸಿಗಳೊಂದಿಗೆ ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಹಂಚಿಕೊಳ್ಳುವುದು, ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಬಲಪಡಿಸುವುದು, ಭಯೋತ್ಪಾದನಾ ವಿರೋಧಿ ಸಂಸ್ಥೆಗಳಿಗೆ ಅಧಿಕಾರ ನೀಡುವುದು ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಶೇ.100ರ ಶಿಕ್ಷೆಯಾಗುವುದು ಸರ್ಕಾರದ ಪ್ರಯತ್ನವಾಗಿದೆ.
 
ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳು 4 ಆಧಾರಸ್ತಂಭಗಳ ಮೇಲೆ ಪ್ರಗತಿ ಹೊಂದಬಹುದು; ಎನ್ಐಎ ಉತ್ತಮವಾಗಿ ಪ್ರಗತಿ ಸಾಧಿಸಿದೆ ಎಂದು ನನಗೆ ಸಂತೋಷವಾಗಿದೆ
ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ಎನ್ಐಎ ಸಬಲೀಕರಣಕ್ಕಾಗಿ 2014ರಿಂದ ಹೆಚ್ಚಿನ ಕೆಲಸಗಳನ್ನು ಮಾಡಲಾಗಿದೆ; ಎನ್ಐಎ ಬಲಿಷ್ಠವಾಗಬೇಕೆಂದು ನಾವು ಬಯಸುತ್ತೇವೆ ಮತ್ತು ಅದು ಭಯೋತ್ಪಾದನಾ ವಿರೋಧಿ ಸಂಸ್ಥೆಯಾಗಿ ಜಾಗತಿಕ ಮನ್ನಣೆ ಪಡೆಯಬೇಕು.
 
ಎನ್ಐಎ ಕಾಯಿದೆ ಮತ್ತು ಯುಎಪಿಎ ಕಾಯಿದೆ ಬಲಪಡಿಸಲು ನಾವು ಕೆಲಸ ಮಾಡಿದ್ದೇವೆ, ಭಾರತದ ಹೊರಗಿನ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸಾವು ನೋವುಗಳು ಸಂಭವಿಸಿದರೆ, ಅಂತಹ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರವನ್ನು ಎನ್ಐಎಗೆ ನೀಡಲಾಗಿದೆ
 
ಈ ಹಿಂದೆ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವ ಅಧಿಕಾರವನ್ನು ಎನ್‌ಐಎ ಹೊಂದಿತ್ತು, ಈಗ ನಾವು ಮೊದಲ ಬಾರಿಗೆ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಲು ಎನ್‌ಐಎಗೆ ಅಧಿಕಾರ ನೀಡಿದ್ದೇವೆ; ಇದುವರೆಗೆ 36 ಜನರನ್ನು ಭಯೋತ್ಪಾದಕರು ಎಂದ ಘೋಷಿಸಲಾಗಿದೆ.

 

ಪ್ರಧಾನಿ ಮೋದಿ ಅವರು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದಾರೆ; ಈ ಗುರಿ ಸಾಧಿಸಲು ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ
 
ರಾಷ್ಟ್ರವು ತನ್ನ 75ನೇ ಸ್ವಾತಂತ್ರ್ಯದ ಅಮೃತ ವರ್ಷ ಆಚರಿಸುತ್ತಿದೆ,  ಆಜಾದಿ ಕಾ ಅಮೃತ್ ಮಹೋತ್ಸವದ ಸಮಯದಲ್ಲಿ, ಎನ್ಐಎ ಮುಂದಿನ 25 ವರ್ಷಗಳವರೆಗೆ ತನ್ನ ಗುರಿಗಳನ್ನು ನಿಗದಿಪಡಿಸಬೇಕು; ತನ್ನ ಗುರಿಗಳನ್ನು ಸಾಧಿಸಲು ಮಾರ್ಗಸೂಚಿ ಸಿದ್ಧಪಡಿಸಬೇಕು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 13ನೇ ದಿನಾಚರಣೆಯ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಎನ್‌ಐಎ ಅಧಿಕಾರಿಗಳಿಗೆ ಗೃಹ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಅಜಯ್ ಕುಮಾರ್ ಮಿಶ್ರಾ ಮತ್ತು ಶ್ರೀ ನಿಶಿತ್ ಪ್ರಮಾಣಿಕ್, ಡಿಜಿ, ಎನ್ಐಎ, ದೆಹಲಿ ಪೊಲೀಸ್ ಕಮಿಷನರ್ ಮತ್ತು ಎನ್ಐಎ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   

     

     
ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎನ್‌ಐಎ ಮತ್ತು ಗೃಹ ಸಚಿವಾಲಯದ ಪಾಲಿಗೆ ಈ ದಿನವು ಬಹಳ ಪ್ರಮುಖವಾಗಿದೆ. ಏಕೆಂದರೆ, ಎನ್‌ಐಎ ಸಂಸ್ಥೆ ಬಹಳ ಮುಖ್ಯವಾದ ಆಂತರಿಕ ಭದ್ರತೆಯ ಕ್ಷೇತ್ರವನ್ನು ತ್ವರಿತವಾಗಿ ಮತ್ತು ದಕ್ಷತೆಯೊಂದಿಗೆ ನಿರ್ವಹಿಸುತ್ತಿದೆ.  ಕಷ್ಟಕರವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅಪರಾಧಗಳನ್ನು ಎನ್‌ಐಎ ತನಿಖೆ ಮಾಡುತ್ತದೆ, ಆದಾಗ್ಯೂ ಅದರ ಸಾಧನೆಗಳು ಪೊಲೀಸರಿಗೆ ಮತ್ತು ದೇಶದ ಎಲ್ಲಾ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಿಗೆ ಸ್ಫೂರ್ತಿಯಾಗಿದೆ ಮತ್ತು ಇದಕ್ಕಾಗಿ ನಾನು ಎನ್‌ಐಎ ಕುಟುಂಬವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

ಎನ್‌ಐಎ ಶೇ.90ಕ್ಕಿಂತ ಹೆಚ್ಚಿನ ಶಿಕ್ಷೆಯ ಪ್ರಮಾಣದೊಂದಿಗೆ 'ಗೋಲ್ಡ್ ಸ್ಟ್ಯಾಂಡರ್ಡ್' ನಿಗದಿಪಡಿಸಿದೆ ಎಂದು ನಾನು ದೇಶದ ಗೃಹ ಸಚಿವರಾಗಿ, ಖಚಿತವಾಗಿ ಹೇಳಬಲ್ಲೆ. ಭಯೋತ್ಪಾದನೆ ಮುಕ್ತ ಭಾರತ ಮತ್ತು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನ ಮಂತ್ರಿ ಅವರ ಗುರಿ ಈಡೇರಿಸುವಲ್ಲಿ ಎನ್‌ಐಎ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಮುಂದುವರಿಯುತ್ತಿದೆ. ಅಗತ್ಯವಿರುವ ಎಲ್ಲಾ ಸಹಾಯಕ್ಕೆ ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ನಾನು ಎನ್ಐಎ ಕುಟುಂಬಕ್ಕೆ ಭರವಸೆ ನೀಡಲು ಬಯಸುತ್ತೇನೆ ಎಂದು ಗೃಹ ಸಚಿವರು ಹೇಳಿದರು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದೆ, ಭಾರತವಿಲ್ಲದೆ ಜಾಗತಿಕ ಗುರಿಗಳನ್ನು ಪೂರೈಸಲು ಸಾಧ್ಯವಿಲ್ಲ, ಆದ್ದರಿಂದ ರಾಷ್ಟ್ರದ ಆಂತರಿಕ ಭದ್ರತೆಯು ಬಲವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.


ಯಾವುದೇ ಸುಸಂಸ್ಕೃತ ಸಮಾಜಕ್ಕೆ ಭಯೋತ್ಪಾದನೆ ಶಾಪವಾಗಿದೆ. ಈ ಶಾಪದಿಂದ ಭಾರತವು ಅತ್ಯಂತ ದೊಡ್ಡ ನೋವು ಅನುಭವಿಸಿದೆ.  ಭಯೋತ್ಪಾದನೆಗಿಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಇನ್ನೊಂದಿಲ್ಲ, ಅದಕ್ಕಾಗಿಯೇ, ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆ ಬಹಳ ಮುಖ್ಯ, ಭಯೋತ್ಪಾದನೆಯನ್ನು ಕೊನೆಗೊಳಿಸಲು ಎನ್ಐಎ ದೃಢವಾಗಿ ಕೆಲಸ ಮಾಡಬೇಕು ಎಂದು ಅಮಿತ್ ಶಾ ಕರೆ ನೀಡಿದರು.
ಕಳೆದ 7 ವರ್ಷಗಳಿಂದ ಹಲವು ಕಷ್ಟಕರ ಪ್ರದೇಶಗಳಲ್ಲಿ ಎನ್‌ಐಎ ಅದ್ಭುತ ಕೆಲಸ ಮಾಡಿದೆ. ಅದರಲ್ಲೂ ನಾನು ಜಮ್ಮು-ಕಾಶ್ಮೀರದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಲು ಬಯಸುತ್ತೇನೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವುದು ಒಂದು ಅಂಶವಾದರೆ, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವುದು ಮತ್ತೊಂದು ಅಂಶವಾಗಿದೆ. ನಾವು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ಬಯಸಿದರೆ, ನಾವು ಅದರ ಭಯೋತ್ಪಾದನೆಗೆ ಹಣಕಾಸು ಪೂರೈಸುವ ವ್ಯವಸ್ಥೆಯನ್ನು ಕಿತ್ತೊಗೆಯಬೇಕಾಗುತ್ತದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ಪ್ರಧಾನಿಯಾದ ನಂತರ ಎನ್‌ಐಎ ಭಯೋತ್ಪಾದನೆ ನಿಧಿ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ, ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಎನ್‌ಐಎ ಹೆಚ್ಚು ಸಹಾಯ ಮಾಡಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದರು.
ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಎನ್‌ಐಎ ಹೆಚ್ಚು ಸಹಾಯ ಮಾಡಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಎನ್‌ಐಎ ಎಚ್ಚರಿಕೆಯಿಂದಾಗಿ, ಭಯೋತ್ಪಾದಕರ ಆರ್ಥಿಕ ಮಾರ್ಗಗಳನ್ನು ಮುಚ್ಚಲಾಗಿದೆ, ಜಮ್ಮು-ಕಾಶ್ಮೀರ ನೆಲದ ಭಯೋತ್ಪಾದಕರ ವಿರುದ್ಧ ಎನ್‌ಐಎ ಹಲವಾರು ಪ್ರಕರಣಗಳನ್ನು ದಾಖಲಿಸಿದೆ ಮತ್ತು ಅವರ ಅಡಗುತಾಣಗಳನ್ನು ನಾಶಪಡಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. 2018 ಮತ್ತು 2019ರಲ್ಲಿ ಮೊದಲ ಬಾರಿಗೆ ಎನ್ಐಎ ದಾಖಲಿಸಿದ ಪ್ರಕರಣಗಳು ಇಂದು ಭಯೋತ್ಪಾದಕರಿಗೆ ಹಣ ಒದಗಿಸಲು ಸುಲಭವಾದ ಮಾರ್ಗಗಳನ್ನು ಬಿಟ್ಟಿಲ್ಲ. ಇದು ಅವರ ಸರಕು ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ ಎರಡಕ್ಕೂ ತೀವ್ರ ಹೊಡೆತ ನೀಡಿದೆ. ಭಯೋತ್ಪಾದನೆಗೆ ಸಹಾಯ ಮಾಡುವವರು ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕುವವರ ಗುರುತನ್ನು ಎನ್‌ಐಎ ಬಹಿರಂಗಪಡಿಸಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಎನ್‌ಐಎ ಸಂಸ್ಥೆಯು ಎಡಪಂಥೀಯ ಉಗ್ರವಾದದ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಿದೆ. ಭಯೋತ್ಪಾದಕ ನಿಧಿ ಮತ್ತು ಎಡಪಂಥೀಯ ಉಗ್ರಗಾಮಿ ಸಂಘಟನೆಗಳ ನಿಧಿಯ ಮೂಲವನ್ನು ತನಿಖೆ ಮಾಡಲು ಎನ್ಐಎಗೆ ಅಧಿಕಾರ ನೀಡಲಾಗಿದೆ, ತನಿಖೆಯ ಮಟ್ಟವು  ಆಶಾದಾಯಕವಾಗಿದೆ. ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ 105 ಪ್ರಕರಣಗಳು ದಾಖಲಾಗಿವೆ, 876 ಆರೋಪಿಗಳ ವಿರುದ್ಧ 94 ಚಾರ್ಜ್ ಶೀಟ್‌ಗಳನ್ನು ದಾಖಲಿಸಲಾಗಿದೆ, 796 ಆರೋಪಿಗಳನ್ನು ಬಂಧಿಸಲಾಗಿದೆ, ಅದರಲ್ಲಿ 100 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ, ಇದು ಬಹುದೊಡ್ಡ ಸಾಧನೆಯಾಗಿದೆ.

      


ಎಲ್ಲಾ ರಾಜ್ಯಗಳ ಪೊಲೀಸರು ಮತ್ತು ಏಜೆನ್ಸಿಗಳೊಂದಿಗೆ ಭಯೋತ್ಪಾದನೆ ಸಂಬಂಧಿತ ಮಾಹಿತಿ ಹಂಚಿಕೊಳ್ಳುವುದು, ಭಯೋತ್ಪಾದನೆ ಪ್ರತಿಬಂಧಕ  ಕಾನೂನುಗಳನ್ನು ಬಲಪಡಿಸುವುದು, ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಿಗೆ ಅಧಿಕಾರ ನೀಡುವುದು ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ 100% ಶಿಕ್ಷೆ ಆಗಬೇಕೆಂಬುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ ಎಂದು ಶ್ರೀ ಶಾ ಹೇಳಿದರು. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಈ 4 ಆಧಾರಸ್ತಂಭಗಳ ಮೇಲೆ ಪ್ರಗತಿ ಹೊಂದಬೇಕು, ಈ ಆಧಾರ ಸ್ತಂಭಗಳ ಮೇಲೆ ಎನ್ಐಎ ಉತ್ತಮವಾಗಿ ಪ್ರಗತಿ ಸಾಧಿಸಿರುವುದು ನನಗೆ ಖುಷಿ ತಂದಿದೆ. 2000ರಿಂದ 2022ರ ವರೆಗಿನ ಭಯೋತ್ಪಾದನೆ ಪ್ರಕರಣಗಳನ್ನು ನಾವು ವಿಶ್ಲೇಷಿಸಿದರೆ, ಹಲವಾರು ಘಟನೆಗಳು ನೆನಪಿಗೆ ಬರುತ್ತವೆ, ಆದರೆ ಕೆಲವು ಘಟನೆಗಳು ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಬಯಸುತ್ತಿವೆ ಎಂದು ಅವರು ಹೇಳಿದರು. ಮುಂಬೈ ಭಯೋತ್ಪಾದಕ ದಾಳಿಯು ಅಂತಹ ಒಂದು ಘಟನೆಯಾಗಿದ್ದು, ಅದರ ನಂತರ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಂಸ್ಥೆಯನ್ನು ರಚಿಸಲಾಯಿತು, ಕರಾವಳಿ ಭದ್ರತೆಗಾಗಿ ಯೋಜನೆಯನ್ನು ಸಹ ಜಾರಿಗೆ ತರಲಾಯಿತು, ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವ ಅಗತ್ಯದ ಬಗ್ಗೆ ಎಲ್ಲಾ ಏಜೆನ್ಸಿಗಳು ಅರಿತುಕೊಂಡವು, ಗುಣಾತ್ಮಕ ಅಂಶಗಳು ಇದರಲ್ಲಿ  ಕಂಡುಬಂದಿದೆ. ಭಯೋತ್ಪಾದನಾ ತನಿಖೆಯಲ್ಲಿ ಸುಧಾರಣೆ ಮತ್ತು ಗುಪ್ತಚರ ವ್ಯವಸ್ಥೆಗಳ ಸರಿಯಾದ ಬಳಕೆ ಮತ್ತು ಸರಿಯಾದ ಸಮಯದಲ್ಲಿ ಗುಪ್ತಚರ ಕುರಿತು ಸಮಯಕ್ಕೆ ಸೀಮಿತವಾದ ಕಾರ್ಯಕ್ರಮಗಳಿವೆ. ಈ ಬರ್ಬರ ದಾಳಿಯಿಂದ ಪಾಠ ಕಲಿತ ಪೊಲೀಸರು ಮತ್ತು ಎಲ್ಲಾ ಸಂಸ್ಥೆಗಳು ಇಂದು ತಮ್ಮ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಬಲಪಡಿಸಿವೆ ಎಂದು ಅಮಿತ್ ಶಾ ಹೇಳಿದರು.
13 ವರ್ಷಗಳಿಂದ ಎನ್‌ಐಎ ಅಸ್ತಿತ್ವದಲ್ಲಿದೆ, ಈ ಅವಧಿಯಲ್ಲಿ 400ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ, 349ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಚಲನ್‌ಗಳನ್ನು ದಾಖಲಿಸಲಾಗಿದೆ, 2,494 ಅಪರಾಧಿಗಳನ್ನು ಬಂಧಿಸಲಾಗಿದೆ, 391 ಜನರನ್ನು ಯಶಸ್ವಿಯಾಗಿ ಶಿಕ್ಷೆಗೊಳಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಶಿಕ್ಷೆಯ ಅನುಪಾತವು ಪ್ರತಿಶತ 93.25ರಷ್ಟಿದೆ. ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ಎನ್ಐಎ ಸಬಲೀಕರಣ ಕುರಿತು 2014ರಿಂದ ಸಾಕಷ್ಟು ಕೆಲಸ ಮಾಡಲಾಗಿದೆ. ಎನ್‌ಐಎ ಬಲಿಷ್ಠವಾಗಿರಬೇಕೆಂದು ನಾವು ಬಯಸುತ್ತೇವೆ ಮತ್ತು ಅದು ಭಯೋತ್ಪಾದನೆ ನಿಗ್ರಹ ಸಂಸ್ಥೆಯಾಗಿ ಜಾಗತಿಕ ಮನ್ನಣೆ ಪಡೆಯಬೇಕು. ಎನ್‌ಐಎ ಕಾಯ್ದೆ ಮತ್ತು ಯುಎಪಿಎ ಕಾಯ್ದೆಯನ್ನು ಬಲಪಡಿಸಲು ನಾವು ಕೆಲಸ ಮಾಡಿದ್ದೇವೆ, ಭಾರತದ ಹೊರಗಿನ ಯಾವುದೇ ಭಯೋತ್ಪಾದಕ ದಾಳಿಯಲ್ಲಿ ಭಾರತೀಯರು ಸಾವನ್ನಪ್ಪಿದರೆ, ಅಂತಹ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರವನ್ನು ಎನ್‌ಐಎಗೆ ನೀಡಲಾಗಿದೆ. ಹೊಸ ತಿದ್ದುಪಡಿಯಲ್ಲಿ, ಒಳನುಸುಳುವಿಕೆ, ಸ್ಫೋಟಕ ವಸ್ತುಗಳು ಮತ್ತು ಸೈಬರ್ ಅಪರಾಧಗಳನ್ನು ತಡೆಯುವ ಅಧಿಕಾರವನ್ನು ನಾವು ಎನ್‌ಐಎಗೆ ನೀಡಿದ್ದೇವೆ. ಈ ಹಿಂದೆ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವ ಅಧಿಕಾರವನ್ನು ಎನ್‌ಐಎ ಹೊಂದಿತ್ತು, ಈಗ ನಾವು ಮೊದಲ ಬಾರಿಗೆ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸುವ ಅಧಿಕಾರವನ್ನು ಎನ್‌ಐಎಗೆ ನೀಡಿದ್ದೇವೆ. ಇದುವರೆಗೆ 36 ಜನರನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ.


ತನಿಖಾ ವಿಧಾನದಲ್ಲಿ ಪ್ರಮುಖ ಬದಲಾವಣೆಗಳಾಗಬೇಕು, ಅದು ಇನ್ನು ಮುಂದೆ 3ನೇ ಹಂತದ ವಿಧಾನಗಳ ಮೇಲೆ ಅವಲಂಬಿತವಾಗಿಲ್ಲ, ಬದಲಿಗೆ ತಂತ್ರಜ್ಞಾನ, ದತ್ತಾಂಶ ಮತ್ತು ಮಾಹಿತಿಯ ಮೇಲೆ ಅವಲಂಬಿತವಾಗಿದೆ. ಈ ಬದಲಾವಣೆಯನ್ನು ತರಲು ಡೇಟಾಬೇಸ್ ಇರಬೇಕು, ಮಾದಕ ದ್ರವ್ಯ, ಹವಾಲಾ ವಹಿವಾಟು, ಶಸ್ತ್ರಾಸ್ತ್ರ ಕಳ್ಳಸಾಗಣೆ, ನಕಲಿ ಕರೆನ್ಸಿಗಳು, ಬಾಂಬ್ ಸ್ಫೋಟಗಳು, ಭಯೋತ್ಪಾದಕ ನಿಧಿ ಮತ್ತು ಭಯೋತ್ಪಾದನೆ ಎಂಬ 7 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಡೇಟಾಬೇಸ್ ರಚಿಸುವ ಕಾರ್ಯವನ್ನು ಎನ್ಐಎಗೆ ನೀಡಲಾಗಿದೆ, ಇದರ ಕೆಲಸ ಪ್ರಾರಂಭವಾಗಿದೆ. ಈ ರಾಷ್ಟ್ರೀಯ ಡೇಟಾಬೇಸ್ ರಚಿಸಿದರೆ, ಅದು ರಾಷ್ಟ್ರೀಯ ಏಜೆನ್ಸಿಗಳಿಗೆ ಮಾತ್ರವಲ್ಲದೆ ಪೊಲೀಸ್ ಏಜೆನ್ಸಿಗಳಿಗೂ ಹೆಚ್ಚಿನ ಸಹಾಯ ಮಾಡುತ್ತದೆ. ಚಿಕ್ಕ ಹುಡುಗರನ್ನು ಬಲೆಗೆ ಬೀಳಿಸಲು ಭಯೋತ್ಪಾದಕರು ಬಳಸುವ ವಿಧಾನದ ಕಾರ್ಯಾಚರಣೆಯ ಅಧ್ಯಯನ ಮಾಡಲು ಎನ್ಐಎ ಬಿಪಿಆರ್ & ಡಿಗೆ  ಸಹಾಯ ಮಾಡಬೇಕು ಎಂದು ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಸಿಆರ್‌ಪಿಸಿ, ಐಪಿಸಿ ಮತ್ತು ಸಾಕ್ಷ್ಯಾಧಾರ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಬಯಸುತ್ತದೆ. ನಾನು ಎನ್‌ಐಎ ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೆ. ಎನ್‌ಐಎ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಗಾಗಿ ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯೊಂದಿಗೆ 2021 ಜುಲೈನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಕಾರ್ಯವು ಮುಂದುವರಿಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು. ಇತರ ಪ್ರಬಲ ಜಾಗತಿಕ ಏಜೆನ್ಸಿಗಳಿಗೆ ಸಮಾನವಾಗಿ ಎನ್ಐಎ  ಅಭಿವೃದ್ಧಿಪಡಿಸಲು ಮತ್ತು ಅದರ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಲು ಇಬ್ಬರು ತಜ್ಞರ ಕೋಶವನ್ನು ಸಹ ಸ್ಥಾಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.          
ಪ್ರಧಾನ ಮಂತ್ರಿ ಶ್ರೀ ಮೋದಿ ಅವರು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದಾರೆ, ಈ ಗುರಿ ಸಾಧಿಸಲು ಆಂತರಿಕ ಭದ್ರತೆ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ರಾಷ್ಟ್ರವು ತನ್ನ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಎನ್ಐಎ ಮುಂದಿನ 25 ವರ್ಷಗಳಿಗೆ ಗುರಿಗಳನ್ನು ನಿಗದಿಪಡಿಸಬೇಕು ಮತ್ತು ಆ ಗುರಿಗಳನ್ನು ಸಾಧಿಸಲು ಮಾರ್ಗಸೂಚಿ ಸಿದ್ಧಪಡಿಸಬೇಕು. ಎನ್ಐಎ ತನ್ನ ಯಶಸ್ಸನ್ನು ಕ್ರೋಡೀಕರಿಸಬೇಕು ಮತ್ತು ಸಾಂಸ್ಥಿಕಗೊಳಿಸಬೇಕು. ಎನ್ಐಎ ರಾಷ್ಟ್ರೀಯ ಏಜೆನ್ಸಿಯಾಗಿದೆ ಮತ್ತು ಅದನ್ನು ಸಾಂಸ್ಥಿಕಗೊಳಿಸದ ಹೊರತು ಮತ್ತು ಮಾಹಿತಿಯ ವ್ಯವಸ್ಥೆಗಳು, ಮಾಹಿತಿ ಮತ್ತು ಬಳಕೆಯ ವಿಧಾನಗಳನ್ನು ಸಾಂಸ್ಥಿಕಗೊಳಿಸದ ಹೊರತು, ಹೆಚ್ಚಿನ ಪ್ರಗತಿ ಸಾಧ್ಯವಿಲ್ಲ ಎಂದು ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು.

 

***


(Release ID: 1818962) Visitor Counter : 487