ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ನಾಗರಿಕ ಸೇವೆಗಳ ದಿನವಾದ ಏಪ್ರಿಲ್ 21ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅತ್ಯುತ್ತಮ ಸಾರ್ವಜನಿಕ ಆಡಳಿತ ಪ್ರಶಸ್ತಿ ಪ್ರದಾನ


ನಾಳೆ ನಡೆಯಲಿರುವ ನಾಗರಿಕ ಸೇವೆಗಳ ದಿನವನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

Posted On: 19 APR 2022 6:16PM by PIB Bengaluru

ಸಿಬ್ಬಂದಿ, ನಾಗರಿಕ ಸುಧಾರಣೆ ಹಾಗೂ ಪಿಂಚಣಿ ಸಚಿವಾಲಯ ಹಾಗೂ ಆಡಳಿತ ಸುಧಾರಣೆಗಳು ಮತ್ತು ನಾಗರಿಕ ಕುಂದುಕೊರತೆಗಳ ಇಲಾಖೆಯು 2022ರ ಏಪ್ರಿಲ್ 20 ಮತ್ತು 21ರಂದು ಎರಡು ದಿನಗಳ ನಾಗರಿಕ ಸೇವೆಗಳ ದಿನದ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದೆ.

ನಾಳೆ (ಏಪ್ರಿಲ್ 20, 2022) ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ), ಭೂ ವಿಜ್ಞಾನ , ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣು ಶಕ್ತಿ ಹಾಗೂ ಬಾಹ್ಯಾಕಾಶ ಖಾತೆಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ.

15ನೇ ನಾಗರಿಕ ಸೇವೆಗಳ ದಿನದ ಅಂಗವಾಗಿ ಏಪ್ರಿಲ್ 21, 2022ರಂದು ಗುರುತಿಸಲಾದ ಆದ್ಯತಾ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಜಿಲ್ಲೆಗಳಲ್ಲಿ ನಾವೀನ್ಯತೆ, ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಘಟಕಗಳ ಅನುಷ್ಠಾನದಲ್ಲಿ ಅತ್ಯುತ್ತಮ ಸಾರ್ವಜನಿಕ ಆಡಳಿತ –2021 ಪ್ರಶಸ್ತಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರದಾನ ಮಾಡಲಿದ್ದಾರೆ.

ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ನಡೆದಿರುವ ಅಸಾಧಾರಣ ಮತ್ತು ಹೊಸತನದ ಕೆಲಸವನ್ನು ಗುರುತಿಸುವುದಕ್ಕಾಗಿ ಅತ್ಯುತ್ತಮ ಸಾರ್ವಜನಿಕ ಆಡಳಿತ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಪ್ರಧಾನಮಂತ್ರಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ನಾಗರಿಕ ಸೇವೆಗಳ ದಿನ – 2022 ಪ್ರಶಸ್ತಿಗಳನ್ನು ನೀಡುವುದಕ್ಕಾಗಿ ಈ ಕೆಳಗಿನ ಆದ್ಯತೆಯ ಕಾರ್ಯಕ್ರಮಗಳನ್ನು ಗುರುತಿಸಲಾಗಿದೆ:

ಪೋಷಣ ಅಭಿಯಾನದಲ್ಲಿ ಜನರ ಸಹಭಾಗಿತ್ವವನ್ನು ಉತ್ತೇಜಿಸುವುದಕ್ಕಾಗಿ ‘ಜನ ಭಾಗೀದಾರಿ’

ಖೆಲೋ ಇಂಡಿಯಾ ಯೋಜನೆ ಮೂಲಕ ಅತ್ಯುತ್ತಮ  ಕ್ರೀಡೆ ಮತ್ತು ಸ್ವಾಸ್ಥ್ಯ

ಸ್ವನಿಧಿ ಯೋಜನೆಯಲ್ಲಿ ಡಿಜಿಟಲ್ ಪಾವತಿ ಮತ್ತು ಉತ್ತಮ ಆಡಳಿತ

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿ

ಮಾನವನ ಹಸ್ತಕ್ಷೇಪವಿಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ತಡೆರಹಿತ (ಜಿಲ್ಲೆ/ ಇತರ) ಸೇವೆ ಮತ್ತು ಹೊಸತನಗಳನ್ನು (ಕೇಂದ್ರ, ರಾಜ್ಯ ಮತ್ತು ಜಿಲ್ಲೆಗಳು) ಉತ್ತೇಜಿಸಲಾಗುತ್ತಿದೆ.

ಈ ವರ್ಷದ ಗುರುತಿಸಲಾದ 5 ಆದ್ಯತಾ ಕಾರ್ಯಕ್ರಮಗಳಿಗೆ 10 ಪ್ರಶಸ್ತಿಗಳನ್ನು ಹಾಗೂ ನಾವೀನ್ಯತೆಗಳಿಗಾಗಿ ಕೇಂದ್ರ/ ರಾಜ್ಯ ಸರ್ಕಾರ/ ಜಿಲ್ಲೆಗಳ ಸಂಸ್ಥೆಗಳಿಗೆ 6 ಪ್ರಶಸ್ತಿಗಳನ್ನು ವಿತರಿಸಲಾಗುವುದು.

2019, 2020 ಹಾಗೂ 2021ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ ಗುರುತಿಸಲಾದ ಆದ್ಯತಾ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗಳ ಕುರಿತ ಉಪಕ್ರಮಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಾ. ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಲಿದ್ದಾರೆ.  ಉದ್ಘಾಟನಾ ಸಮಾರಂಭದಲ್ಲಿ ಎರಡು ವಿಷಯಗಳ ಮೇಲೆ ಗೋಷ್ಠಿ ನಡೆಯಲಿದೆ.  ‘ವಿಷನ್ ಇಂಡಿಯಾ @ 2047-ಆಡಳಿತ’ ವಿಷಯದ ಗೋಷ್ಠಿಯು ಡಾ. ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮತ್ತು ‘ಆತ್ಮನಿರ್ಭರ್ ಭಾರತ್– ಫೋಕಸ್ ಆನ್ ಎಕ್ಸ್‌ಪೋರ್ಟ್ಸ್’ ಕುರಿತ  ಎರಡನೇ ಗೋಷ್ಠಿಯು ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರಗಳು, ಆಹಾರ, ಸಾರ್ವಜನಿಕ ವಿತರಣೆ ಹಾಗೂ ಜವಳಿ ಖಾತೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಜೊತೆಗೆ ಪ್ರಧಾನಮಂತ್ರಿ ಗತಿ ಶಕ್ತಿ, ಸ್ವನಿಧಿ ಯೋಜನೆ ಮೂಲಕ ಡಿಜಿಟಲ್ ಪಾವತಿ ಮತ್ತು ಉತ್ತಮ ಆಡಳಿತ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಹಾಗೂ ಮಹತ್ವಾಕಾಂಕ್ಷಿ ಜಿಲ್ಲಾ ಕಾರ್ಯಕ್ರಮಗಳ ವಿಷಯಗಳಿಗೆ ಸಂಬಂಧಿಸಿದ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿದೆ

ಪಿಎಂ ಗತಿ ಶಕ್ತಿ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ, ಸ್ವನಿಧಿ ಯೋಜನೆ ಮೂಲಕ ಡಿಜಿಟಲ್ ಪಾವತಿ ಮತ್ತು ಉತ್ತಮ ಆಡಳಿತ ಗೋಷ್ಠಿಯನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ  ಪಿಎಂ ಸ್ವನಿಧಿ ಯೋಜನೆ ಮೂಲಕ ಡಿಜಿಟಲ್ ಪಾವತಿ ಮತ್ತು ಉತ್ತಮ ಆಡಳಿತ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಐಸಿಐಸಿಐ ಮುಖ್ಯಸ್ಥ ಜಿ.ಸಿ. ಚತುರ್ವೇದಿ ವಹಿಸಿಸಲಿದ್ದಾರೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಗೋಷ್ಠಿಯ ಅಧ್ಯಕ್ಷತೆಯನ್ನು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಮಹತ್ವಾಕಾಂಕ್ಷಿ ಜಿಲ್ಲಾ ಯೋಜನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 21, 2022 ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,  ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗಳ ಅನುಷ್ಠಾನದ ಯಶಸ್ಸಿನ ಕಥೆಗಳನ್ನು ಒಳಗೊಂಡಿರುವ ಆದ್ಯತೆಯ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗಳ ಕುರಿತ ಇ– ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.  ಪ್ರಶಸ್ತಿಗಳನ್ನು ಪ್ರದಾನ ಮಾಡುವುದಕ್ಕೆ ಮುಂಚೆ, ಪ್ರಶಸ್ತಿ ವಿಜೇತ ಉಪಕ್ರಮಗಳನ್ನು ಕುರಿತ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು,  ಎಸಿಎಸ್, ಉಪ ಕಾರ್ಯದರ್ಶಿಗಳು, ಕೇಂದ್ರ ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸ್ಥಾನಿಕ ಕಮಿಷನರ್‌ಗಳು ಕಾರ್ಯಕ್ರಮದಲ್ಲಿ ಭೌತಿಕವಾಗಿ ಭಾಗವಹಿಸಲಿದ್ದಾರೆ.  ಪಿಸಿಸಿಎಫ್‌ಗಳು, ಡಿಜಿಪಿಗಳು, ಹೆಚ್ಚುವರಿ ಡಿಜಿಪಿಗಳು, ಅಕಾಡೆಮಿಕ್ ಸಂಸ್ಥೆಗಳು, ರಾಜ್ಯ ಎಟಿಐಗಳು, 2014–217ರ ಅವಧಿಯ ಸಹಾಯಕ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಹಾಯಕ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ 2013-17ನೇ ಬ್ಯಾಚ್‌ನ ಐಎಎಸ್ ಅಧಿಕಾರಿಗಳು ಸಹ ವರ್ಚುವಲ್ ಆಗಿ ಸಮಾರಂಭದಲ್ಲಿ ಭಾಗವಹಿಸಲಿದ್ದು, ಎರಡು ದಿನಗಳ ಈ ಕಾರ್ಯಕ್ರಮಕ್ಕೆ 2,500ಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ.

***

 



(Release ID: 1818296) Visitor Counter : 157