ಉಕ್ಕು ಸಚಿವಾಲಯ
azadi ka amrit mahotsav

ಉಕ್ಕು ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.) ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ಮತ್ತು ರಾಷ್ಟ್ರೀಯ ಉಕ್ಕು ನೀತಿ ಗುರಿಗಳನ್ನು ಸಾಧಿಸುವ ಯೋಜನೆಗಳನ್ನು ಕೇಂದ್ರ ಉಕ್ಕು ಸಚಿವರಿಂದ ಪರಿಶೀಲನೆ.

Posted On: 19 APR 2022 4:27PM by PIB Bengaluru

2021-22 ರ ಹಣಕಾಸು ವಾರ್ಷಿಕ ಅವಧಿಯಲ್ಲಿ ಉಕ್ಕು ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.ಗಳು)  ಮಾಡಿದ ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್ ) ಪರಿಶೀಲಿಸಲು ಮತ್ತು ಪ್ರಸಕ್ತ 2022-23 ವರ್ಷದ (ಕ್ಯಾಪೆಕ್ಸ್ ) ಗುರಿಗಳನ್ನು ಸಾಧಿಸಲು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.)  ಗಳ ಯೋಜನೆಗಳನ್ನು ನಿರ್ಣಯಿಸಲು ಕೇಂದ್ರ ಉಕ್ಕು ಸಚಿವ ಶ್ರೀ ರಾಮ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ದೆಹಲಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದರು. ಉಕ್ಕು ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.)ಗಳಾದ  ಎಸ್.ಎ.ಐ.ಎಲ್., ಎನ್.ಎಂ.ಡಿ.ಸಿ., ಆರ್.ಐ.ಎನ್.ಎಲ್.,  ಕೆ.ಐ.ಒ.ಸಿ.ಎಲ್.  , ಎಂ.ಒ.ಐ.ಎಲ್. ಮತ್ತು ಎಂ.ಇ.ಸಿ.ಒ.ಎನ್. ಮುಂತಾದ ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರುಗಳು (ಸಿ.ಎಂ.ಡಿ.) ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು, ಹಳೆಯ ಸ್ಥಾವರಗಳ ಉಪಕರಣಗಳನ್ನು ಆಧುನೀಕರಿಸಲು ಮತ್ತು ಭವಿಷ್ಯಕ್ಕಾಗಿ ಪರಿಸರ ದಕ್ಷ ತಂತ್ರಜ್ಞಾನಗಳನ್ನು ಬಳಸಲು ಸಮಯೋಚಿತ ಬಂಡವಾಳ ವೆಚ್ಚದ ಪ್ರಾಮುಖ್ಯವನ್ನು ಕೇಂದ್ರ  ಉಕ್ಕು ಸಚಿವರು ವಿವರಿಸಿದರು. ಅಂತಹ ವೆಚ್ಚವು ಕೂಡಾ ಭಾರತೀಯ ಆರ್ಥಿಕತೆಗೆ ಪೂರಕವಾಗಿದೆ.  2021-22ರ ಹಣಕಾಸು ವಾರ್ಷಿಕದಲ್ಲಿ ಉಕ್ಕು ಕ್ಷೇತ್ರದ   ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.) ಬಂಡವಾಳ ವೆಚ್ಚ (ಕ್ಯಾಪೆಕ್ಸ್ )  ರೂ. 10,038 ಕೋಟಿ ಆಗಿದ್ದು, ಇದು  2020-21ರ ಹಣಕಾಸು ವಾರ್ಷಿಕದ ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ರೂ.7266.70 ಕೋಟಿಗಿಂತ ಶೇ.38 ಹೆಚ್ಚಳವಾಗಿದೆ.


ಉಕ್ಕಿನ ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿ.ಪಿ.ಎಸ್.ಇ.)  ಗಳಿಗೆ ಸಂಬಂಧಿಸಿದಂತೆ 2022-23 ಹಣಕಾಸು ವಾರ್ಷಿಕದ ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ಗುರಿಯು ರೂ.  1,3156.46 ಕೋಟಿಯಾಗಿದೆ. ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿ.ಪಿ.ಎಸ್.ಇ.)  ಗಳು ಕಾಲಮಿತಿಯ ಅನುಷ್ಠಾನ ಮತ್ತು ವಾರ್ಷಿಕ ಗುರಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಾ, ತಮ್ಮ ಮಾಸಿಕ ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ಯೋಜನೆಗಳಿಗೆ ಬದ್ಧವಾಗಿರುವಂತೆ ಕೇಂದ್ರ ಉಕ್ಕು ಖಾತೆ ಸಚಿವರು ಸಲಹೆ ನೀಡಿದರು. 2022-23ರ ಹಣಕಾಸು ವಾರ್ಷಿಕದ ಬಂಡವಾಳ ವೆಚ್ಚ (ಕ್ಯಾಪೆಕ್ಸ್ ) ಗುರಿಗಳನ್ನು ಸಾಧಿಸಲಾಗುವುದು ಎಂದು ಉಕ್ಕು ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.) ಸಿ.ಎಂ.ಡಿ.ಗಳು  ಸಚಿವರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು.


ಪರಿಶೀಲನಾ ಸಭೆಯಲ್ಲಿ , ರಾಷ್ಟ್ರೀಯ ಉಕ್ಕು ನೀತಿ (ಎನ್.ಎಸ್.ಪಿ.) 2017 ರ ಅಡಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (ಸಿ.ಪಿ.ಎಸ್.ಇ.) ಯೋಜನೆಗಳ ಕುರಿತು ಚರ್ಚಿಸಲಾಯಿತು. ಜಾಗತಿಕವಾಗಿ ಸ್ಪರ್ಧಾತ್ಮಕ ಉಕ್ಕಿನ ಉದ್ಯಮ ವಲಯವನ್ನು ಭಾರತ ರಚಿಸುವ ನಿಟ್ಟಿನಲ್ಲಿ ಇಂತಹ ಮಾಹಿತಿಪೂರ್ಣ ಚರ್ಚೆಗಳು ಸಹಾಯಕವಾಗುತ್ತವೆ.  ಭಾರತದಲ್ಲಿ ಎನ್.ಎಸ್.ಪಿ. 2017 ಈಗ 300 ಮಿಲಿಯನ್ ಟನ್ (ಎಂಟಿ.) ಉಕ್ಕು-ತಯಾರಿಕೆ ಸಾಮರ್ಥ್ಯವನ್ನು ಮತ್ತು 158 ಕೆಜಿಗಳ ತಲಾ ಬಳಕೆಯನ್ನು ಕಲ್ಪಿಸುತ್ತದೆ. ಭಾರತೀಯ ಉಕ್ಕಿನ ವಲಯವು ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲೂ ಕೂಡಾ 16.29 ಎಂ.ಟಿ.ಪಿ.ಎ ಸಾಮರ್ಥ್ಯವನ್ನು ಸೇರಿಸಿಕೊಂಡು, ಕಳೆದ ಐದು ವರ್ಷಗಳಲ್ಲಿ ಒಟ್ಟಾರೆಯಾಗಿ 154.27 ಎಂ.ಟಿ.ಪಿ.ಎ. ಸಾಮರ್ಥ್ಯವನ್ನು ತಲುಪಿದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರವು 2030-31 ರ ಅವಧಿಯ ವೇಳೆಗೆ 300 ಎಂ.ಟಿ.ಪಿ.ಎ.  ಸಾಮರ್ಥ್ಯವನ್ನು ತಲುಪುವ ವಿಶ್ವಾಸ ಹೊಂದಿದೆ.  ಸಾಮರ್ಥ್ಯದ ವಿಸ್ತರಣೆಯು 2025-30 ರಿಂದ ಕೆಲವು ಗ್ರೀನ್‌ಫೀಲ್ಡ್ ವಿಸ್ತರಣೆಗಳಿಂದ ಬರಬಹುದು ಆದರೆ, ಹೆಚ್ಚಿನ ಸಾಮರ್ಥ್ಯದ ವಿಸ್ತರಣೆಯು ಬ್ರೌನ್ ಫೀಲ್ಡ್ ವಿಸ್ತರಣೆ ಮೂಲಕ ಬರಲಿವೆ.


ಎನ್.ಎಸ್.ಪಿ. - 2017 ಕ್ಕೆ ಅನುಗುಣವಾಗಿ ತಮ್ಮ ಬಂಡವಾಳ ಯೋಜನೆಗಳನ್ನು ಸೂಕ್ತರೀತಿಯಲ್ಲಿ ಯೋಜಿಸುವಂತೆ ಉಕ್ಕು ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿ.ಪಿ.ಎಸ್.ಇ.)ಗಳಿಗೆ ಕೇಂದ್ರ ಸಚಿವರು ನಿರ್ದೇಶನಗಳನ್ನು ನೀಡಿದರು. ಸಾಮರ್ಥ್ಯವು ಪ್ರಸ್ತುತ 25 ಎಂ.ಟಿ.ಪಿ.ಎ. ಮಟ್ಟದಿಂದ ಸುಮಾರು ಶೇ.80 ರಷ್ಟು ಏರಿಕೆಯಾಗಿ 2030-31 ರ ವೇಳೆಗೆ 45 ಎಂ.ಟಿ.ಪಿ.ಎ. ಯ ಗುರಿಯನ್ನು ತಲುಪುವಂತಾಗಲು,  ಅಗತ್ಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸಚಿವರು ಸೂಚಿಸಿದರು.  ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.) ತಮ್ಮ ಭವಿಷ್ಯದ ಯೋಜನೆಗಳಲ್ಲಿ ಹಿಂದಿನ ಮತ್ತು ಪ್ರಸ್ತುತ ವಿಸ್ತರಣಾ ಯೋಜನೆಗಳಿಂದ ಆಗಿರುವ ಅನುಭವಗಳ ಮೂಲಕ ಕಲಿಕೆಯನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ  ಹೇಳಿದರು. 

ಸಂಸ್ಥೆಗಳು ತಮ್ಮ ತಮ್ಮ ಪರಿಶೋಧನೆಗಳ ಪರಿಣತಿಯನ್ನು ಅಭಿವೃದ್ಧಿಪಡಿಸುವುದು, ಹವಾಮಾನ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಸಾಮರ್ಥ್ಯ ವರ್ಧನೆಗಾಗಿ ಕೆಲಸ ಮಾಡುವುದು, ಭವಿಷ್ಯದ ಅಗತ್ಯಗಳಿಗಾಗಿ ಪರಿಣತಿಯನ್ನು ಮರುಶೋಧಿಸುವುದು ಮತ್ತು ಅಭಿವೃದ್ಧಿಪಡಿಸುವುದು ಹಾಗು ಅದಕ್ಕೆ ಅನುಗುಣವಾಗಿ ಸಂಸ್ಥೆಯ ಕೌಶಲ್ಯದ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯುವ ದೃಷ್ಟಿಯಿಂದ ಸಂಸ್ಥೆಯ ಕಾರ್ಯಕ್ಷೇತ್ರ(ಪೋರ್ಟ್‌ಫೋಲಿಯೊ)ಗಳನ್ನು ವೈವಿಧ್ಯಗೊಳಿಸುವ ಅಗತ್ಯವಿದೆ. ಹಸಿರು ಉಕ್ಕಿನ ಉತ್ಪಾದನೆಗೆ ಕೆಲಸ ಮಾಡಲು, 'ಅಮೃತ್ ಕಾಲ್' ಗಾಗಿ ಯೋಜನೆಯನ್ನು ಆದಷ್ಟು ಬೇಗನೆ ಸಿದ್ಧಪಡಿಸಬೇಕು ಎಂದು ಉಕ್ಕಿನ ಕ್ಷೇತ್ರದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿ.ಪಿ.ಎಸ್.ಇ.)  ಗಳ ಸಿ.ಎಂ.ಡಿ.ಗಳಿಗೆ ಕೇಂದ್ರ ಉಕ್ಕು ಖಾತೆ ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಸೂಚಿಸಿದರು.  .

 ***** 


(Release ID: 1818142) Visitor Counter : 174