ಆಯುಷ್

ಪ್ರಧಾನಮಂತ್ರಿ ಅವರು ನಾಳೆ ಜಾಮನಗರದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯು ಎಚ್ ಒನ ಜಾಗತಿಕ ಕೇಂದ್ರವನ್ನು  ಉದ್ಘಾಟಿಸಲಿದ್ದಾರೆ


ಮಾರಿಷಸ್ ಪ್ರಧಾನ ಮಂತ್ರಿ ಮತ್ತು ಡಬ್ಲ್ಯೂ ಎಚ್ ಒನ ಮಹಾನಿರ್ದೇಶಕರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

'ಭಾರತಕ್ಕೆ ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಳ್ಳುವ ಇದು ಸುಸಮಯ ಮತ್ತು ಅದನ್ನು ಜಗತ್ತಿಗೆ ಸೇವೆಗೆ ಬಳಸಿಕೊಳ್ಳುತ್ತದೆ' ಎಂದು ಆಯುಷ್ ಸಚಿವರು ಹೇಳಿದ್ದಾರೆ.

Posted On: 18 APR 2022 4:44PM by PIB Bengaluru

ಇಂದು, ಆಯುಷ್ ಸಚಿವಾಲಯ ಮತ್ತು ಗುಜರಾತ್ ಸರ್ಕಾರ ಭಾರತದಲ್ಲಿನ ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿನ ಎರಡು ಸಂಬಂಧಿತ ಬೆಳವಣಿಗೆಗಳನ್ನು ಚರ್ಚಿಸಲು ಕರ್ಟನ್ ರೈಸರ್ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದೆ.  ಒಂದು ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯೂ ಎಚ್ ಒನ ಜಾಗತಿಕ ಕೇಂದ್ರ (GCTM) ಮತ್ತು ಮತ್ತೊಂದು ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ (GAIIS). ಎರಡೂ ಕಾರ್ಯಕ್ರಮಗಳು ಗುಜರಾತ್‌ನಲ್ಲಿ ನಡೆಯುತ್ತಿವೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾರಿಷಸ್‌ನ ಪ್ರಧಾನ ಮಂತ್ರಿ ಶ್ರೀ ಪ್ರವಿಂದ್ ಜುಗ್ನೌತ್ ಮತ್ತು ಡಬ್ಲ್ಯೂ ಎಚ್ ಒನ ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಅವರ ಉಪಸ್ಥಿತಿ ಇರಲಿದೆ. ಎರಡೂ ಕಾರ್ಯಕ್ರಮಗಳನ್ನು ಅಲಂಕರಿಸುವ ರಾಯಭಾರಿಗಳ ಸಮೂಹ ಇರುತ್ತದೆ.

ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯೂ ಎಚ್ ಒನ ಜಾಗತಿಕ ಕೇಂದ್ರ, ವಿಶ್ವದಲ್ಲೇ ಮೊದಲನೆಯದು.  2022ರ ಏಪ್ರಿಲ್‌ 19 ರಂದು ಜಾಮನಗರದಲ್ಲಿ ಉದ್ಘಾಟನೆಗೊಳ್ಳಲಿದೆ. ತಾಂತ್ರಿಕ ಪ್ರಗತಿಗಳು ಮತ್ತು ಪುರಾವೆ ಆಧಾರಿತ ಸಂಶೋಧನೆಯೊಂದಿಗೆ ಅದನ್ನು ಸಂಯೋಜಿಸುವ ಮೂಲಕ ಸಾಂಪ್ರದಾಯಿಕ ಔಷಧದ ಸಾಮರ್ಥ್ಯವನ್ನು ವಿಸ್ತರಿಸುವುದು ಈ ಕೇಂದ್ರದ ಗುರಿಯಾಗಿದೆ. ಜಾಮ್‌ನಗರವು ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ಹೊಸ ಕೇಂದ್ರವು ಜಗತ್ತನ್ನು ತೊಡಗಿಸಿಕೊಳ್ಳುವ ಮತ್ತು ಪ್ರಯೋಜನ ಪಡೆಯುವ ಗುರಿಯನ್ನು ಹೊಂದಿದೆ. ಜಿಸಿಟಿಎಮ್ ನಾಲ್ಕು ಮುಖ್ಯ ಕಾರ್ಯತಂತ್ರದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ: ಸಾಕ್ಷ್ಯ ಮತ್ತು ಕಲಿಕೆ; ಡೇಟಾ ಮತ್ತು ವಿಶ್ಲೇಷಣೆ; ಸಮರ್ಥನೀಯತೆ ಮತ್ತು ಇಕ್ವಿಟಿ; ಮತ್ತು ಜಾಗತಿಕ ಆರೋಗ್ಯಕ್ಕೆ ಸಾಂಪ್ರದಾಯಿಕ ಔಷಧದ ಕೊಡುಗೆಯನ್ನು ಅತ್ಯುತ್ತಮವಾಗಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನ ಬಳಸಿಕೊಳ್ಳುವುದಾಗಿದೆ.

ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯು 2022ರ ಏಪ್ರಿಲ್ 20 ರಿಂದ ಏಪ್ರಿಲ್ 22 ರವರೆಗೆ ಗಾಂಧಿನಗರದಲ್ಲಿ ನಡೆಯಲಿದೆ. ಶೃಂಗಸಭೆಯು ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಇದು ದೀರ್ಘಕಾಲೀನ ಪಾಲುದಾರಿಕೆಗಳನ್ನು ಉತ್ತೇಜಿಸಲು, ರಫ್ತುಗಳನ್ನು ಹೆಚ್ಚಿಸಲು ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಒಂದು ಅನನ್ಯ ಪ್ರಯತ್ನವಾಗಿದೆ.

ಮುಂಬರುವ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಆಯುಷ್ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನಾವಾಲ್, "ಎರಡೂ ಘಟನೆಗಳು ಭಾರತದ ಆಯುಷ್ ಉದ್ಯಮಕ್ಕೆ ಒಂದು ಮೈಲಿಗಲ್ಲು. ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯು ಆಯುರ್ವೇದ ಮತ್ತು ಗಿಡಮೂಲಿಕೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಲು ಭಾರತಕ್ಕೆ ಅವಕಾಶವನ್ನು ಒದಗಿಸುತ್ತದೆ. ನಾವು ಸುವರ್ಣ ಯುಗದ ಬಾಗಿಲಲ್ಲಿ ನಿಂತಿದ್ದೇವೆ. ಅಲ್ಲಿ ನಾವು ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಳ್ಳಬಹುದು ಮತ್ತು ಜಗತ್ತಿಗೆ ಸೇವೆ ಸಲ್ಲಿಸಲು ಬಳಸಬಹುದು ಎಂದು ಹೇಳಿದರು. ಮುಂದುವರಿದು, “ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯೂ ಎಚ್ ಒನ ಜಾಗತಿಕ ಕೇಂದ್ರವು ಮತ್ತು ಜಾಗತಿಕ ಆರೋಗ್ಯಕ್ಕೆ ಭಾರತದ ಅತ್ಯುತ್ತಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಸುಧಾರಿತ ತಂತ್ರಜ್ಞಾನ ಮತ್ತು ಪ್ರಾಚೀನ  ಜ್ಞಾನವನ್ನು ಕೂಡಿಸಲು ನಿಂತಿರುವಾಗ, ನಮ್ಮ ಮುಂದಿರುವ ಏಕೈಕ ಮಾರ್ಗವು ಮೇಲ್ಮುಖವಾಗಿದೆ," ಎಂದರು.

ರಾಜ್‌ಕೋಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಗೌರವಾನ್ವಿತ ಅತಿಥಿಗಳಾದ ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನಾವಾಲ್ ; ಆಯುಷ್ ರಾಜ್ಯ ಸಚಿವ ಡಾ. ಶ್ರೀ ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ; ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೊಟೆಚಾ ಅವರು,  ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯೂ ಎಚ್ಒನ  ಜಾಗತಿಕ ಕೇಂದ್ರ ಮತ್ತು ಜಾಗತಿಕ ಆಯುಷ್ ನಾವೀನ್ಯತೆ ಮತ್ತು ಹೂಡಿಕೆ ಶೃಂಗಸಭೆಯನ್ನು (GAIIS) ಪರಿಚಯಿಸಿದರು. ಅವರು, ಆಯುಷ್ ಸಚಿವಾಲಯ ಮತ್ತು ಡಬ್ಲ್ಯೂ ಎಚ್ಒ ನಡುವಿನ ಪಾಲುದಾರಿಕೆಯ ಪ್ರಮುಖ ಮುಖ್ಯಾಂಶಗಳನ್ನು ಚರ್ಚಿಸಿದರು ಮತ್ತು ಕೋವಿಡ್ ನಂತರದ ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಹೂಡಿಕೆ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಮನೋಜ್ ಅಗರವಾಲ್ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಜಿಸಿಟಿಎಮ್ ಸಾಂಪ್ರದಾಯಿಕ ಔಷಧ ಉತ್ಪನ್ನಗಳ ಮೇಲೆ ನೀತಿಗಳು ಮತ್ತು ಮಾನದಂಡಗಳನ್ನು ಹೊಂದಿಸಲು ಪ್ರಯತ್ನಿಸುತ್ತದೆ ಮತ್ತು ರಾಷ್ಟ್ರಗಳಿಗೆ ಸಮಗ್ರ, ಸುರಕ್ಷಿತ ಮತ್ತು ಉತ್ತಮ-ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ.
ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯು ಸಾಂಪ್ರದಾಯಿಕ ಉತ್ಪನ್ನಗಳು, ಅಭ್ಯಾಸಗಳು ಮತ್ತು ಸಂಬಂಧಿತ ಸೇವೆಗಳ ಜಾಗತಿಕ ಕೇಂದ್ರವಾಗಲು ಭಾರತದ ಪ್ರಯತ್ನಗಳನ್ನು ಕಾರ್ಯತಂತ್ರ ರೂಪಿಸಲು ಒಂದು ಉಪಕ್ರಮವಾಗಿದೆ.

***



(Release ID: 1817889) Visitor Counter : 187