ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್  ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ


“ಸಾವಿರಾರು ವರ್ಷಗಳ ಏರಿಳಿತವನ್ನು ಎದುರಿಸಿ ಭಾರತವನ್ನು ಸ್ಥಿರವಾಗಿಡುವಲ್ಲಿ ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಯು ದೊಡ್ಡ ಪಾತ್ರ ವಹಿಸಿದೆ”

“ಏಕ ಭಾರತ ಶ್ರೇಷ್ಠ ಭಾರತದ ಪ್ರಮುಖ ಎಳೆ ಹನುಮಾನ್”

“ನಮ್ಮ ನಂಬಿಕೆ ಮತ್ತು ನಮ್ಮ ಸಂಸ್ಕೃತಿಯು ಸಾಮರಸ್ಯ, ಸಮಾನತೆ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದೆ"

"ಸಬ್ ಕಾ ಸಾಥ್ -ಸಬ್ kaa ಪ್ರಯಾಸ್‌ನ ಅತ್ಯುತ್ತಮ ಉದಾಹರಣೆ ರಾಮ್ ಕಥಾ ಮತ್ತು ಹನುಮಾನ್ ಇದರ ಜೀವಾಳ"

Posted On: 16 APR 2022 1:00PM by PIB Bengaluru

ಹನುಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಹಾಮಂಡಲೇಶ್ವರ ಮಾತೆ ಕನಕೇಶ್ವರಿ ದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹನುಮಾನ್ ಜಯಂತಿಯ ಸಂದರ್ಭದಲ್ಲಿ ಭಕ್ತರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿಯವರು, ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿರುವುದು ಪ್ರಪಂಚದಾದ್ಯಂತದ ಹನುಮಾನ್ ಭಕ್ತರಿಗೆ ಸಂತೋಷದ ಕ್ಷಣವಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಭಕ್ತರು ಮತ್ತು ಆಧ್ಯಾತ್ಮಿಕ ಮುಖಂಡರ ನಡುವೆ ತಾವು ಇರಲು ಅವಕಾಶ ದೊರೆತಿರುವುದು ಅತ್ಯಂತ ಸಂತೋಷದಾಯಕ ಎಂದರು. ಯುನಿಯಾ ಮಾತೆ, ಮಾತಾ ಅಂಬಾ ಜಿ ಮತ್ತು ಅನ್ನಪೂರ್ಣ ಜಿ ಧಾಮ್ ಭೇಟಿಯ  ಅವಕಾಶಗಳನ್ನು ಪ್ರಸ್ತಾಪಿಸಿದರು. ಇದನ್ನು ಅವರು ತಮಗೆ ದೊರೆತ 'ಹರಿಯ ಕೃಪೆ', ದೇವರ ಕೃಪೆ ಎಂದು ಕರೆದರು.

ದೇಶದ ನಾಲ್ಕು ಮೂಲೆಗಳಲ್ಲಿ ಇಂತಹ ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸುವ ಯೋಜನೆಯು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು. ಹನುಮಾನ್ ತನ್ನ ಸೇವಾ ಮನೋಭಾವದಿಂದ ಎಲ್ಲರನ್ನೂ ಒಗ್ಗೂಡಿಸುತ್ತಾನೆ ಮತ್ತು ಪ್ರತಿಯೊಬ್ಬರೂ ಅವನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ವಿವರಿಸಿದರು. ಹನುಮಾನ್ ಕಾಡಿನಲ್ಲಿ ವಾಸಿಸುವ ಸಮುದಾಯಗಳಿಗೆ ಘನತೆ ಮತ್ತು ಸಬಲೀಕರಣವನ್ನು ನೀಡಿದ ಶಕ್ತಿಯ ಸಂಕೇತವ. "ಹನುಮಾನ್ 'ಏಕ್ ಭಾರತ್ ಶ್ರೇಷ್ಠ್ ಭಾರತ್‌'ನ ಪ್ರಮುಖ ಎಳೆ" ಎಂದು ಅವರು ಹೇಳಿದರು.

ಅದೇ ರೀತಿ, ದೇಶದಾದ್ಯಂತ ವಿವಿಧ ಪ್ರದೇಶಗಳು ಮತ್ತು ಭಾಷೆಗಳಲ್ಲಿ ಆಯೋಜಿಸಲಾದ ರಾಮ್ ಕಥಾವು ಪ್ರತಿಯೊಬ್ಬರನ್ನು ದೇವರ ಭಕ್ತಿಯಲ್ಲಿ ಒಂದಾಗಿ ಹಿಡಿದಿಡುತ್ತದೆ ಎಂದು ಪ್ರಧಾನಿ ವಿವರಿಸಿದರು. ಇದು ನಮ್ಮ ಆಧ್ಯಾತ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯದ ಶಕ್ತಿಯಾಗಿದ್ದು, ಗುಲಾಮಗಿರಿಯ ಕಷ್ಟದ ಅವಧಿಯಲ್ಲಿಯೂ ಪ್ರತ್ಯೇಕ ಭಾಗಗಳನ್ನು ಒಗ್ಗೂಡಿಸಿತ್ತು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇದು ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಪ್ರತಿಜ್ಞೆಯ ಏಕೀಕೃತ ಪ್ರಯತ್ನಗಳನ್ನು ಬಲಪಡಿಸಿತು. "ಸಾವಿರಾರು ವರ್ಷಗಳ ಏರಿಳಿತಗಳ ನಡುವೆಯೂ, ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಯು ಭಾರತವನ್ನು ಸ್ಥಿರವಾಗಿಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ" ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು.

ನಮ್ಮ ನಂಬಿಕೆ ಮತ್ತು ನಮ್ಮ ಸಂಸ್ಕೃತಿಯು ಸಾಮರಸ್ಯ, ಸಮಾನತೆ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಗವಾನ್ ರಾಮನು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದರೂ, ತನ್ನ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರತಿಯೊಬ್ಬರ ಶಕ್ತಿಯನ್ನು ಬಳಸಿಕೊಂಡಿದ್ದಾನೆ ಎಂಬ ಅಂಶವು ಇದನ್ನು ಉತ್ತಮವಾಗಿ ಸೂಚಿಸುತ್ತದೆ. “ರಾಮ ಕಥಾವು 'ಸಬ್‌ ಕಾ ಸಾಥ್-ಸಬ್‌ ಕಾ ಪ್ರಯಾಸ್‌'ನ ಅತ್ಯುತ್ತಮ ಉದಾಹರಣೆಯಾಗಿದೆ, ಹನುಮಾನ್ ಇದರ ಜೀವಾಳ." ಈ ಸಂಕಲ್ಪವನ್ನು ಈಡೇರಿಸಲು ಸಬ್‌ ಕಾ ಪ್ರಯಾಸ್‌ನ ಅದೇ ಮನೋಭಾವವನ್ನು ಪ್ರೇರೇಪಿಸಿದರು ಎಂದು ಶ್ರೀ ಮೋದಿ ಹೇಳಿದರು.

ಗುಜರಾತಿ ಭಾಷೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಕೇಶವಾನಂದ ಬಾಪು ಮತ್ತು ಮೊರ್ಬಿ ಅವರೊಂದಿಗಿನ ಹಳೆಯ ಒಡನಾಟವನ್ನು ನೆನಪಿಸಿಕೊಂಡರು. ಮಛ್ಛು ಅಣೆಕಟ್ಟು ಅಪಘಾತದ ಹಿನ್ನೆಲೆಯಲ್ಲಿ ಹನುಮಾನ್ ಧಾಮದ ಪಾತ್ರವನ್ನು ಅವರು ಸ್ಮರಿಸಿದರು. ಅಪಘಾತದ ಸಮಯದಲ್ಲಿ ಕಲಿತ ಪಾಠಗಳು ಕಛ್ ಭೂಕಂಪದ ಸಮಯದಲ್ಲಿಯೂ ಸಹಾಯ ಮಾಡಿದವು ಎಂದು ಅವರು ಹೇಳಿದರು. ಇಂದು ಕೈಗಾರಿಕೆಗಳ ಅಭಿವೃದ್ಧಿ ಹೊಂದುತ್ತಿರುವ ಮೋರ್ಬಿಯ ಸ್ಥಿತಿಸ್ಥಾಪಕತ್ವದ ಬಗ್ಗೆ ಅವರು ಗಮನ‌ ಸೆಳೆದರು. ನಾವು ಜಾಮ್‌ನಗರದ ಹಿತ್ತಾಳೆ, ರಾಜ್‌ಕೋಟ್‌ನ ಇಂಜಿನಿಯರಿಂಗ್ ಮತ್ತು ಮೊರ್ಬಿಯ ಗಡಿಯಾರ ಉದ್ಯಮವನ್ನು ನೋಡಿದರೆ ಅದು 'ಮಿನಿ ಜಪಾನ್' ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

'ಯಾತ್ರಾ ಧಾಮ'ವು ಕಾಠಿಯಾವಾಡವನ್ನು ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡಿದೆ ಎಂದು ಪ್ರಧಾನಿ ಗಮನ ಸೆಳೆದರು. 'ಮಾಧವಪುರ ಮೇಳ' ಮತ್ತು 'ರಣ್ ಉತ್ಸವ'ದ ಕುರಿತು ಅವರು ಮಾತನಾಡಿದರು, ಇದು ಮೋರ್ಬಿಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ ಎಂದರು.

ಸ್ವಚ್ಚತೆ ಮತ್ತು 'ವೋಕಲ್ ಫಾರ್ ಲೋಕಲ್' ಅಭಿಯಾನಕ್ಕಾಗಿ ಭಕ್ತರು ಮತ್ತು ಸಂತ ಸಮಾಜದ ಸಹಾಯವನ್ನು ಪಡೆದುಕೊಳ್ಳಲು ತಮ್ಮ ವಿನಂತಿಯನ್ನು ಪುನರುಚ್ಚರಿಸುವ ಮೂಲಕ ಶ್ರೀ ಮೋದಿಯವರು ಮಾತು ಮುಗಿಸಿದರು.

ಇಂದು ಅನಾವರಣಗೊಂಡ ಬೃಹತ್ ಪ್ರತಿಮೆಯು "#ಹನುಮಾನ್ ಜೀ4ಧಾಮ್" ಯೋಜನೆಯ ಭಾಗವಾಗಿ ದೇಶದಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾಗುತ್ತಿರುವ 4 ಪ್ರತಿಮೆಗಳಲ್ಲಿ ಎರಡನೆಯದು. ಇದನ್ನು ಪಶ್ಚಿಮದಲ್ಲಿ ಮೊರ್ಬಿಯಲ್ಲಿರುವ ಪರಮ ಪೂಜ್ಯಬಾಪುಕೇಶವಾನಂದರ ಆಶ್ರಮದಲ್ಲಿ ಸ್ಥಾಪಿಸಲಾಗಿದೆ.

ಸರಣಿಯ ಮೊದಲ ಪ್ರತಿಮೆಯನ್ನು 2010ರಲ್ಲಿ ಉತ್ತರದಲ್ಲಿ ಶಿಮ್ಲಾದಲ್ಲಿ ಸ್ಥಾಪಿಸಲಾಗಿದೆ. ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರತಿಮೆಯ ಕೆಲಸವನ್ನು ಪ್ರಾರಂಭಿಸಲಾಗಿದೆ.

 


*****


(Release ID: 1817367) Visitor Counter : 141