ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರ ಅಧ್ಯಕ್ಷತೆಯಲ್ಲಿ 6 ಪಶ್ಚಿಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಲಯ ಸಮ್ಮೇಳನ ನಾಳೆ ಮುಂಬೈನಲ್ಲಿ ನಡೆಯಲಿದೆ.


ಅಪೌಷ್ಟಿಕತೆಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ, ಸಬಲೀಕರಣ ಮತ್ತು ರಕ್ಷಣೆಗಾಗಿ ಕಾರ್ಯತಂತ್ರದ ಕ್ರಮಗಳನ್ನು ಕುರಿತು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಮತ್ತು ಮಧ್ಯಸ್ಥಗಾರರನ್ನು ವಲಯ ಸಮ್ಮೇಳನಗಳ ಮೂಲಕ ತಲುಪಲಾಗುತ್ತಿದೆ.

Posted On: 11 APR 2022 9:54AM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ನಾಳೆ, ಅಂದರೆ ಏಪ್ರಿಲ್ 12, 2022 ರಂದು ಮುಂಬೈನಲ್ಲಿ ನಡೆಯಲಿರುವ ಪಶ್ಚಿಮ ಪ್ರದೇಶದ ರಾಜ್ಯ/ಕೇಂದ್ರಾಡಳಿತ ಪ್ರದೇಶ  ಸರ್ಕಾರಗಳು ಮತ್ತು ಪಾಲುದಾರರ ವಲಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಗೋವಾ, ಗುಜರಾತ್, ಮಧ್ಯ ಪ್ರದೇಶ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸರ್ಕಾರಗಳು ಸಭೆಯಲ್ಲಿ ಭಾಗವಹಿಸಲಿವೆ.  ಇತ್ತೀಚೆಗೆ ಪ್ರಾರಂಭಿಸಲಾಗಿರುವ  ಮೂರು ಅಭಿಯಾನಗಳ -ಪೋಷಣ 2.0, ವಾತ್ಸಲ್ಯ ಮತ್ತು ಶಕ್ತಿ- ಅತ್ಯುತ್ತಮ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶದ ಪ್ರತಿಯೊಂದು ಪ್ರದೇಶದಲ್ಲಿ ರಾಜ್ಯ ಸರ್ಕಾರಗಳು ಮತ್ತು ಪಾಲುದಾರರೊಂದಿಗೆ ವಲಯ ಸಮಾಲೋಚನೆಗಳ ಸರಣಿಯನ್ನು ಪ್ರಾರಂಭಿಸಿದೆ. ಮುಂಬೈನಲ್ಲಿ ನಡೆಯುವ ವಲಯ ಸಭೆಯು ಸರಣಿಯಲ್ಲಿ ನಾಲ್ಕನೆಯದಾಗಿದೆ. ಇಂತಹ ಮೊದಲ ಸಭೆಯು 2022 ರ ಏಪ್ರಿಲ್ 2 ರಂದು ಚಂಡೀಗಢದಲ್ಲಿ, ಎರಡನೆಯ ಸಭೆ ಏಪ್ರಿಲ್ 4 ರಂದು ಬೆಂಗಳೂರಿನಲ್ಲಿ ಮತ್ತು ಏಪ್ರಿಲ್ 10 ರಂದು ಗುವಾಹಟಿಯಲ್ಲಿ ಮೂರನೆಯ ಸಭೆ ನಡೆದವು.
ಭಾರತದ ಜನಸಂಖ್ಯೆಯ ಶೇ. 67.7 ರಷ್ಟಿರುವ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಮತ್ತು ರಕ್ಷಣೆ ಮತ್ತು ಸುರಕ್ಷಿತ ವಾತಾವರಣದಲ್ಲಿ ಅವರ ಆರೋಗ್ಯಕರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು ದೇಶದ ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗೆ ಮತ್ತು ಪರಿವರ್ತನೆಯ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ಸಾಧಿಸಲು ಪ್ರಮುಖವಾಗಿದೆ. ಈ ಉದ್ದೇಶವನ್ನು ಸಾಧಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇತ್ತೀಚೆಗೆ ಮಿಷನ್ ಮೋಡ್‌ನಲ್ಲಿ ಅನುಷ್ಠಾನಗೊಳಿಸಲು ಸಚಿವಾಲಯದ ಮೂರು ಪ್ರಮುಖ ಯೋಜನೆಗಳನ್ನು ಅನುಮೋದಿಸಿದೆ, ಅವುಗಳೆಂದರೆ, ಮಿಷನ್ ಪೋಷಣ್  2.0, ಮಿಷನ್ ಶಕ್ತಿ ಮತ್ತು ಮಿಷನ್ ವಾತ್ಸಲ್ಯ. ಈ 3 ಅಭಿಯಾನಗಳನ್ನು 15 ನೇ ಹಣಕಾಸು ಆಯೋಗದ ಅವಧಿಯಲ್ಲಿ, 2021-22 ರಿಂದ 2025-26 ರ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಈ ಅಭಿಯಾನಗಳ ಅಡಿಯಲ್ಲಿರುವ ಯೋಜನೆಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಾಗಿವೆ, ಇವುಗಳನ್ನು ವೆಚ್ಚ ಹಂಚಿಕೆ ಮಾನದಂಡಗಳ ಪ್ರಕಾರ ವೆಚ್ಚ ಹಂಚಿಕೆ ಆಧಾರದ ಮೇಲೆ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸುತ್ತವೆ. ಯೋಜನೆಗಳ ಮಾರ್ಗಸೂಚಿಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮುಖ್ಯ ಉದ್ದೇಶವು ಮಹಿಳೆಯರು ಮತ್ತು ಮಕ್ಕಳಿಗಾಗಿ ರಾಜ್ಯಗಳಲ್ಲಿರುವ ಅಂತರವನ್ನು ಪರಿಹರಿಸುವುದು ಮತ್ತು ಲಿಂಗ ಸಮಾನತೆ ಮತ್ತು ಮಕ್ಕಳ ಕೇಂದ್ರಿತ ಕಾನೂನು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಪ್ರವೇಶಿಸಬಹುದಾದ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಎಲ್ಲಾ ರೀತಿಯ ತಾರತಮ್ಯ ಮತ್ತು ಹಿಂಸಾಚಾರ ಮುಕ್ತವಾದ ವಾತಾವರಣವನ್ನು ಒದಗಿಸಲು ಅಂತರ ಸಚಿವಾಲಯ ಮತ್ತು ಅಂತರ-ವಲಯಗಳ ಸಮನ್ವಯವನ್ನು ಉತ್ತೇಜಿಸುವುದಾಗಿದೆ. ಈ ನಿಟ್ಟಿನಲ್ಲಿ, ಸಚಿವಾಲಯದ ಯೋಜನೆಗಳ ಉದ್ದೇಶಗಳನ್ನು ಅನುಷ್ಠಾನಗೊಳಿಸುವ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಸರ್ಕಾರಗಳ ಬೆಂಬಲದೊಂದಿಗೆ ಸಾಧಿಸಲು ಪ್ರಯತ್ನಿಸಲಾಗುತ್ತಿದೆ.
ದೇಶದ ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮಿಷನ್‌ಗಳ ಅಡಿಯಲ್ಲಿ ಉದ್ದೇಶಿಸಲಾಗಿರುವ ಸಾಮಾಜಿಕ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರ ಒಕ್ಕೂಟ ವ್ಯವಸ್ಥೆಯ ನಿಜವಾದ ಸ್ಪೂರ್ತಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಯೋಜನೆಗಳ ಸೂಕ್ತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ರಾಜ್ಯ/ಕೇಂದ್ರಾಡಳಿ ಪ್ರದೇಶ ಸರ್ಕಾರಗಳನ್ನು ಸಂವೇದನಾಶೀಲಗೊಳಿಸುವುದು ವಲಯ ಸಮ್ಮೇಳನಗಳ ಉದ್ದೇಶವಾಗಿದೆ. 
ಪೋಷಣಾ ಅಭಿಯಾನ 2.0 ಒಂದು ಸಮಗ್ರ ಪೋಷಣೆ ಬೆಂಬಲ ಕಾರ್ಯಕ್ರಮವಾಗಿದೆ. ಇದು ಮಕ್ಕಳು, ಹದಿಹರೆಯದ ಹೆಣ್ಣುಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸಲು ಪೌಷ್ಠಿಕಾಂಶ ವಿಷಯದಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಕಾರ್ಯತಂತ್ರದ ಬದಲಾವಣೆಯ ಮೂಲಕ ಮತ್ತು ಆರೋಗ್ಯ, ಸ್ವಾಸ್ಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬೆಳೆಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಸಮನ್ವಯ ವ್ಯವಸ್ಥೆಯನ್ನು ರಚಿಸುತ್ತದೆ. ಪೋಷಣಾ 2.0 ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ ಅಡಿಯಲ್ಲಿ ಆಹಾರದ ಗುಣಮಟ್ಟ ಮತ್ತು ವಿತರಣೆಯನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸುತ್ತದೆ. ಪೋಷಣಾ 2.0 ತನ್ನ ವ್ಯಾಪ್ತಿಯ ಅಡಿಯಲ್ಲಿ 3 ಪ್ರಮುಖ ಕಾರ್ಯಕ್ರಮಗಳು/ಯೋಜನೆಗಳನ್ನು ಹೊಂದಿದೆ. ಅವುಗಳೆಂದರೆ, ಅಂಗನವಾಡಿ ಸೇವೆಗಳು, ಹದಿಹರೆಯದ ಹುಡುಗಿಯರ ಯೋಜನೆ ಮತ್ತು ಪೋಷಣಾ ಅಭಿಯಾನ.
ಮಹಿಳೆಯರು ತಮ್ಮ ಜೀವನದಲ್ಲಿ ವಿವಿಧ ಹಂತಗಳ ಮೂಲಕ ಪ್ರಗತಿ ಹೊಂದಲು  ಸಂಕೋಲೆಗಳನ್ನು ತೊಡೆದುಹಾಕಲು ಸಮಗ್ರ ಆರೈಕೆ, ಸುರಕ್ಷತೆ, ರಕ್ಷಣೆ, ಪುನರ್ವಸತಿ ಮತ್ತು ಸಬಲೀಕರಣದ ಮೂಲಕ ಮಹಿಳೆಯರಿಗೆ ಏಕೀಕೃತ ನಾಗರಿಕ ಕೇಂದ್ರಿತ ಬೆಂಬಲವನ್ನು ಮಿಷನ್ ಶಕ್ತಿ ನೀಡುತ್ತದೆ. ಮಿಷನ್ ಶಕ್ತಿಯು 'ಸಂಬಾಲ್' ಮತ್ತು 'ಸಾಮರ್ಥ್ಯ' ಎಂಬ ಎರಡು ಉಪ ಯೋಜನೆಗಳನ್ನು ಹೊಂದಿದೆ. "ಸಂಬಾಲ್" ಉಪ ಯೋಜನೆಯು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಇದ್ದರೆ, "ಸಾಮರ್ಥ್ಯ" ಉಪ ಯೋಜನೆಯು ಮಹಿಳೆಯರ ಸಬಲೀಕರಣಕ್ಕಾಗಿ ಇದೆ.
ಮಿಷನ್ ವಾತ್ಸಲ್ಯದ ಉದ್ದೇಶವು ದೇಶದ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಭದ್ರಪಡಿಸುವುದಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮಕ್ಕಳ ಅಭಿವೃದ್ಧಿಗಾಗಿ ಸೂಕ್ಷ್ಮ, ಬೆಂಬಲ ಮತ್ತು ಸೂಕ್ತ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತದೆ. ಬಾಲಾಪರಾಧಿ ನ್ಯಾಯ ಕಾಯಿದೆ 2015 ರ ಅನುಷ್ಠಾನಕ್ಕೆ ರಾಜ್ಯಗಳು/ಯುಟಿಗಳಿಗೆ ಸಹಾಯ ಮಾಡುತ್ತದೆ. ಮಿಷನ್ ವಾತ್ಸಲ್ಯ ಅಡಿಯಲ್ಲಿನ ಘಟಕಗಳು ಶಾಸನಬದ್ಧ ಸಂಸ್ಥೆಗಳು, ಸೇವಾ ವಿತರಣಾ ರಚನೆಗಳು, ಸಾಂಸ್ಥಿಕ ಆರೈಕೆ/ಸೇವೆಗಳು, ಸಾಂಸ್ಥಿಕೇತರದ ಸಮುದಾಯ ಆಧಾರಿತ ಆರೈಕೆ, ತುರ್ತು ಸಂಪರ್ಕ ಸೇವೆಗಳು, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣಗಳನ್ನು ಒಳಗೊಂಡಿರುತ್ತವೆ.

***



(Release ID: 1815629) Visitor Counter : 145