ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕ್ರೀಡೆಗಳಲ್ಲಿ ಮಾದಕ ವಸ್ತು ಸೇವನೆ(ಡೋಪಿಂಗ್) ನಿರ್ಮೂಲನೆಗಾಗಿ ಯುನೆಸ್ಕೊ ನಿಧಿಗೆ 2022 ರ ಭಾರತದ ಕೊಡುಗೆಯಾಗಿ 72,124 ಡಾಲರನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ಬಿಡುಗಡೆ


ಇದು ಪೂರ್ವ ಸೂಚಿತ ಮೌಲ್ಯಕ್ಕಿಂತ ಎರಡು ಪಟ್ಟಿನಷ್ಟು ಗಣನೀಯವಾಗಿ ವರ್ಧಿತ ಕೊಡುಗೆ ಇದಾಗಿದೆ

ಯುನೆಸ್ಕೊ ನಿಧಿಗೆ ಭಾರತ ಸರ್ಕಾರದ ನಿರಂತರ ಕೊಡುಗೆ ಮತ್ತು ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧ ಹೋರಾಡುವ ಭಾರತದ ಬದ್ಧತೆಗೆ ಯುನೆಸ್ಕೊ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ

Posted On: 07 APR 2022 6:04PM by PIB Bengaluru

29-31 ಸೆಪ್ಟೆಂಬರ್, 2019 ರಂದು ಪ್ಯಾರಿಸ್‌ನಲ್ಲಿ ನಡೆದ 7ಸಿಒಪಿ ಸಭೆಯ ನಿರ್ಣಯದ ಪ್ರಕಾರ, ಕ್ರೀಡೆಯಲ್ಲಿ ಡೋಪಿಂಗ್ ನಿರ್ಮೂಲನೆಗಾಗಿ ಯುನೆಸ್ಕೋ ನಿಧಿಗೆ ಆಯಾ ರಾಷ್ಟ್ರದ ನಿಯಮಿತ ವಾರ್ಷಿಕ ಬಜೆಟ್‌ನ ಶೇ.1 ರಷ್ಟು ಕೊಡುಗೆಯನ್ನು ನೀಡಲು ಎಲ್ಲ ರಾಷ್ಟ್ರಗಳು ಒಪ್ಪಿಕೊಂಡಿವೆ. 2021 ರ ಅಕ್ಟೋಬರ್ 26 ರಿಂದ 28 ರವರೆಗೆ ಪ್ಯಾರಿಸ್‌ನ ಯುನೆಸ್ಕೊ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಸದಸ್ಯರಾಷ್ಟ್ರಗಳ ಎಂಟನೇ ಸಮ್ಮೇಳನದ (ಸಿ.ಒ.ಪಿ.8) ಅಧಿವೇಶನದ 8ಸಿ.ಪಿ/14 ನಿರ್ಣಯಕ್ಕೆ ಅನುಗುಣವಾಗಿ ಮತ್ತು ಬದ್ಧತೆ ಆಧಾರದಲ್ಲಿ, ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಹೆಚ್ಚುವರಿ (ವರ್ಧಿತ) ಕೊಡುಗೆಯನ್ನು ಬಿಡುಗಡೆ ಮಾಡಿದೆ. 2022 ರಲ್ಲಿ ಕ್ರೀಡೆಯಲ್ಲಿ ಡೋಪಿಂಗ್ ನಿರ್ಮೂಲನೆಗಾಗಿ ಯುನೆಸ್ಕೋ ನಿಧಿಗೆ ಭಾರತದ ಕೊಡುಗೆ ಸೂಚಿತ ಅಂದಾಜು ಮೌಲ್ಯದ ಇಮ್ಮಡಿ ಅಂದರೆ ಡಾಲರ್ 72,124 ಕೊಡುಗೆಯನ್ನು ನೀಡಿದೆ.. ಮೊದಲ ಬಾರಿಗೆ 2021 ರಲ್ಲಿ, ಯುನೆಸ್ಕೊದಿಂದ ನಿಧಿಗಾಗಿ ಬಂದಿರುವ ವಿನಂತಿ ಸ್ವೀಕರಿಸಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಯುನೆಸ್ಕೊ ನಿಧಿಗೆ ಡಾಲರ್ 28172 ಕೊಡುಗೆ ನೀಡಿತ್ತು.

ಹಿನ್ನಲೆ ಮಾಹಿತಿ:  2003 ರ ಮಾರ್ಚ್‌ನಲ್ಲಿ ಭಾರತ ಸರ್ಕಾರವು ಕ್ರೀಡೆಯಲ್ಲಿ ಡೋಪಿಂಗ್ ವಿರೋಧಿ ಕೋಪನ್‌ ಹೇಗನ್ ಘೋಷಣೆಗೆ ಒಪ್ಪಿಗೆ ನೀಡಿತು, ಇದರ ಮೂಲಕ ಸರ್ಕಾರಗಳು ವಿಶ್ವ ಡೋಪಿಂಗ್ ವಿರೋಧಿ ಕೋಡ್ ಅನ್ನು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ಸಂಸ್ಥೆಯ ಮೂಲಕ ಔಪಚಾರಿಕವಾಗಿ ಗುರುತಿಸುವ ಮತ್ತು ಜಾರಿಗೊಳಿಸುವ ಉದ್ದೇಶವನ್ನು ಸೂಚಿಸುವ ರಾಜಕೀಯ ದಾಖಲೆ ರೂಪಿಸಲಾಗಿದೆ. ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧ ಯುನೆಸ್ಕೊ ಅಂತರರಾಷ್ಟ್ರೀಯ ಸಮಾವೇಶದ ತಯಾರಿಯತ್ತ ಇದು ಮೊದಲ ಹೆಜ್ಜೆಯಾಗಿದೆ.   2007 ರ ನವೆಂಬರ್ 07 ರಂದು ಭಾರತದಿಂದ ಅಂಗೀಕರಿಸಲ್ಪಟ್ಟ "ಯುನೆಸ್ಕೋ ಡೋಪಿಂಗ್ ವಿರೋಧಿ ಸಮಾವೇಶ" ಎಂದೂ ಕರೆಯಲಾಗುವ ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧದ ಅಂತರರಾಷ್ಟ್ರೀಯ ಸಮಾವೇಶಕ್ಕೆ ಭಾರತ ಸರ್ಕಾರವು ಸಹಿ ಹಾಕಿದೆ. ಈ ಸಮಾವೇಶದ ಉದ್ದೇಶವು ಕ್ರೀಡೆಯಲ್ಲಿ ಡೋಪಿಂಗ್ ತಡೆಗಟ್ಟುವಿಕೆ ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸುವುದು. ಕ್ರೀಡೆಯಲ್ಲಿ ಡೋಪಿಂಗ್, ಅದರ ನಿರ್ಮೂಲನೆಯ ದೃಷ್ಟಿಯಿಂದ, ಕೇಂದ್ರ ಯುವ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯು ಭಾರತದಲ್ಲಿ ಡೋಪಿಂಗ್ ವಿರೋಧಿ ಕಾರ್ಯಕ್ರಮಗಳನ್ನು ರೂಪಿಸುವ, ಅಳವಡಿಸಿಕೊಳ್ಳುವ, ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಏಷ್ಯಾ-ಓಷಿಯಾನಿಯಾ ಪ್ರದೇಶದಲ್ಲಿರುವ ಒಟ್ಟು 55 ಸದಸ್ಯ ರಾಷ್ಟ್ರಗಳು (ಏಷ್ಯಾದಲ್ಲಿ 40 ಮತ್ತು ಓಷಿಯಾನಿಯಾದಲ್ಲಿ 15) ಈ ಸಮಾವೇಶಕ್ಕೆ ಒಪ್ಪಿಗೆ ನೀಡಿ ಸಹಿ ಹಾಕಿವೆ.

ಭಾರತ ಸರ್ಕಾರದ ನಿರಂತರ ಕೊಡುಗೆ ಮತ್ತು ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧದ ಹೋರಾಟಕ್ಕೆ ಬದ್ಧತೆಯನ್ನು ಯುನೆಸ್ಕೊ ಶ್ಲಾಘಿಸಿದೆ. ಭಾರತ ಸರ್ಕಾರದ ಬದ್ಧತೆ ಹಾಗೂ ನಿಧಿಗಾಗಿ ಅಭೂತಪೂರ್ವ ಕೊಡುಗೆ ನೀಡಿದ್ದಕ್ಕಾಗಿ ಯುನೆಸ್ಕೊ ಧನ್ಯವಾದವನ್ನು ತಿಳಿಸಿದೆ.  ವಿಶೇಷವಾಗಿ 2022-2023 ರ ನಿಧಿಯ ಅನುಮೋದನೆ ಸಮಿತಿಯ ಸದಸ್ಯರಾಗಿ ಸಮಾವೇಶದ ಆಡಳಿತದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಕನಿಷ್ಠ ಶೇ.1ರ ಕೊಡುಗೆಯ ಮೊತ್ತವನ್ನು ದ್ವಿಗುಣಗೊಳಿಸುವ ಈ ಕೊಡುಗೆಯನ್ನು ನಿಧಿಯ ಪ್ರಮಾಣೀಕೃತ ಹಣಕಾಸು ಹೇಳಿಕೆಯಲ್ಲಿ ಸೇರಿಸಲಾಗುತ್ತದೆ, ಇದನ್ನು ಮುಂಬರುವ ಸಿಒಪಿ9 ಸಭೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ, ಸದಸ್ಯ ರಾಷ್ಟ್ರಗಳ ಕೊಡುಗೆಗಳು  ನಿಧಿ ಕಾರ್ಯಾಚರಣಾ ಕಾರ್ಯತಂತ್ರ 2020-2025 ಅನುಷ್ಠಾನಕ್ಕೆ ಸಹಾಯಕವಾಗುತ್ತದೆ ಎಂದು ಯುನೆಸ್ಕೊ ತಿಳಿಸಿದೆ.

***
 



(Release ID: 1814689) Visitor Counter : 131