ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಉದ್ದೀಪನ ಮದ್ದು ಸೇವನೆ ಪರೀಕ್ಷೆಯನ್ನು ಶಕ್ತಗೊಳಿಸುವ ಹೊಸ ಅಪರೂಪದ ರಾಸಾಯನಿಕ ದ್ರವ್ಯ ಬಿಡುಗಡೆ ಮಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್


ಈ ಬೆಳವಣಿಗೆ ಉದ್ದೀಪನ ಮದ್ದು ಸೇವನೆ ನಿಗ್ರಹ ವಿಜ್ಞಾನದಲ್ಲಿ ಭಾರತವನ್ನು ಸ್ವಾವಲಂಬಿಗೊಳಿಸಲಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 03 APR 2022 1:46PM by PIB Bengaluru

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಪ್ರಯೋಗಾಲಯ (ಎನ್ ಡಿಟಿಎಲ್) ಆರು ಹೊಸ ಮತ್ತು ಅಪರೂಪದ  ರಾಸಾಯನಿಕ ದ್ರವ್ಯಗಳನ್ನು (ಆರ್ ಎಂ)ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಇವು ವಾಡಾದಿಂದ-ಮಾನ್ಯತೆ ಪಡೆದ ಜಗತ್ತಿನ ಎಲ್ಲ  ಪ್ರಯೋಗಾಲಯಗಳಲ್ಲಿ ಉದ್ದೀಪನ ಮದ್ದು ನಿಗ್ರಹ ವಿಶ್ಲೇಷಣೆಗೆ ಅಗತ್ಯವಾದ ರಾಸಾಯನಿಕದ ಶುದ್ಧ ರೂಪವಾಗಿದೆ. ಈ ಆರು ಆರ್ ಎಂಗಳನ್ನು ಎನ್ ಡಿಟಿಎಲ್, ಗುವಾಹಟಿಯ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ (ಎನ್ ಐಪಿಇಆರ್) ಮತ್ತು ಜಮ್ಮುವಿನ ಸಿಎಸ್ ಐಆರ್ –ಭಾರತೀಯ ಸಮಗ್ರ ಔಷಧೀಯ ಸಂಸ್ಥೆ (ಐಐಐಎಂ) ಸಹಯೋಗದಲ್ಲಿ ಒಂದು ವರ್ಷದೊಳಗೆ ಅಭಿವೃದ್ಧಿಪಡಿಸಲಾಗಿದೆ. 
 


ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ ಮತ್ತು ಕ್ರೀಡಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಎನ್ ಡಿಟಿಎಲ್ ನ 15ನೇ ಆಡಳಿತ ಮಂಡಳಿ ಸಭೆಯಲ್ಲಿ ಆರ್ ಎಂಗಳನ್ನು ಬಿಡುಗಡೆ ಮಾಡಿದರು. 
ಈ ಆರ್‌ಎಂಗಳ ಸೃಷ್ಟಿಯಿಂದಾಗಿ, ಸ್ವತಃ ಎನ್‌ಡಿಟಿಎಲ್, ಆರ್‌ಎಂಗಳನ್ನು ಅಭಿವೃದ್ಧಿಪಡಿಸಿದ ವಿಶ್ವದ ಕೆಲವೇ ಪ್ರಯೋಗಾಲಯಗಳಲ್ಲಿ ಒಂದಾಗಿದೆ ಎಂಬ ಖ್ಯಾತಿಯನ್ನು ಗಳಿಸಿದೆ. ಈ ಮಹತ್ವದ ಸಾಧನೆ ಕುರಿತು ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್  “ಈ ರೆಫರೆನ್ಸ್ ಮೆಟೀರಿಯಲ್‌ಗಳನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸಿದ ಮೂರು ಸಂಸ್ಥೆಗಳ ವಿಜ್ಞಾನಿಗಳ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ಈ ರೆಫರೆನ್ಸ್ ಮೆಟೀರಿಯಲ್‌ಗಳು ಪ್ರಪಂಚದಾದ್ಯಂತ ಸುಲಭವಾಗಿ ಲಭ್ಯವಿಲ್ಲ, ಆದರೆ ಪ್ರತಿ ವಾಡಾದಿಂದ ಮಾನ್ಯತೆ ಪಡೆದ ಪ್ರಯೋಗಾಲಯವು ಅವರ ಉದ್ದೀಪನ ಮುದ್ದು ವಿರೋಧಿ ವಿಶ್ಲೇಷಣೆಗೆ ಅತ್ಯಗತ್ಯವಾಗಿದೆ’’ ಎಂದು ಹೇಳಿದರು. 

 

 
“ಭಾರತವು ಸ್ವತಃ ಕೆನಡಾ ಮತ್ತು ಆಸ್ಟ್ರೇಲಿಯಾದಿಂದ ಆರ್ ಎಂ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆದರೆ ಈ ವೈಜ್ಞಾನಿಕ ಬೆಳವಣಿಗೆಯಿಂದಾಗಿ ಭಾರತವು ನಿಜವಾಗಿಯೂ ಉದ್ದೀಪನ ಮದ್ದು ನಿಗ್ರಹ  ವಿಜ್ಞಾನ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ದೂರದೃಷ್ಟಿಯ ಆತ್ಮನಿರ್ಭರ ಭಾರತ ಗುರಿ ಸಾಧನೆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿದೆ. ಶೀಘ್ರದಲ್ಲೇ, ನಾವು ಈ ಆರ್‌ಎಂಗಳನ್ನು ಇತರ ದೇಶಗಳಿಗೂ ರಫ್ತು ಮಾಡುಲಿದ್ದೇವೆ’’ ಎಂದರು. 

“ಈ ಅಪರೂಪದ ರಾಸಾಯನಿಕ ದ್ರವ್ಯ ಲಭ್ಯತೆಯು ಇಡೀ ಉದ್ದೀಪನ ಮದ್ದು ನಿಗ್ರಹ ಸಮುದಾಯಕ್ಕೆ ತಮ್ಮ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು  ನೆರವಾಗುತ್ತದೆ ಮತ್ತು ಪ್ರಪಂಚದಾದ್ಯಂತ ಕ್ರೀಡಾ ನೀತಿಯಲ್ಲಿ ನ್ಯಾಯಯುತ ಆಟ ಉತ್ತೇಜಿಸಲು ದೇಶಗಳ ನಡುವೆ ಪರಸ್ಪರ ಸಹಕಾರದ ಯುಗ ಪ್ರಾರಂಭಕ್ಕೆ ನಾಂದಿ ಹಾಡುತ್ತದೆ’’ ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು.
ಕಳೆದ ವರ್ಷ ಎನ್ ಡಿಟಿಎಲ್, ಎರಡು ರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳೊಂದಿಗೆ ಜ್ಞಾಪನಾ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದಾಗ ಈ ರೆಫರೆನ್ಸ್ ಮೆಟೀರಿಯಲ್‌ಗಳ ಸಂಶೋಧನೆಯು ಆರಂಭವಾಯಿತು.ಇದು 2-3 ವರ್ಷಗಳ ಹಂತ ಹಂತವಾಗಿ ಅವಧಿಯಲ್ಲಿ  20 ಅಂತಹ ನಿಷೇಧಿತ ವಸ್ತುಗಳ ರೆಫೆರೆನ್ಸ್ ಮೆಟ್ಟಿರಿಯಲ್ಸ್ ಸ್ಥಳೀಯವಾಗಿ ವಿಶ್ಲೇಷಿಸಲು ಮತ್ತು ಅಭಿವೃದ್ಧಿಪಡಿಸಲಾಗುವುದು. ಎನ್ ಡಿ ಟಿ ಎಲ್ ಮತ್ತು ನೈಪರ್-ಜಿ ಮತ್ತು ಸಿಎಸ್ ಐಆರ್-ಐಐಐಎಂ, ಜಮ್ಮು ನಡುವಿನ ಈ ಸಂಶೋಧನಾ & ಅಭಿವೃದ್ಧಿ ಚಟುವಟಿಕೆಗಳನ್ನು ಭಾರತ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಧನ ಸಹಾಯದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. 
ಬಿಡುಗಡೆ ಮಾಡಲಾದ ಆರು ರೆಫರೆನ್ಸ್ ಮೆಟೀರಿಯಲ್‌ಗಳಲ್ಲಿ, ಮೂರು ಪ್ರತಿಯೊಂದನ್ನು ಗುವಾಹಟಿಯ ಎನ್ ಐಪಿಇಆರ್  ಮತ್ತು ಜಮ್ಮುವಿನ ಸಿಎಸ್ ಐಆರ್-ಐಐಐಎಂ ಸಹಯೋಗದೊಂದಿಗೆ ಸಂಯೋಜಿಸಲಾಗಿದೆ. ಕಳೆದ ವರ್ಷವೂ ಎನ್ ಡಿಟಿಎಲ್ ಮತ್ತು ಗುವಾಹಟಿಯ ಎನ್ ಐಪಿಇಆರ್ ವಿಜ್ಞಾನಿಗಳು 2021 ರಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎರಡು ಅಪರೂಪದ ರೆಫರೆನ್ಸ್ ಮೆಟೀರಿಯಲ್‌ಗಳನ್ನು ವಿಶ್ಲೇಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವುಗಳನ್ನು ವಾಡಾ-ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಆರಂಭಿಸಲಾಯಿತು ಮತ್ತು ವಿನಿಮಯ ಮಾಡಿಕೊಳ್ಳಲಾಯಿತು. 
ಈ ರಾಸಾಯನಿಕ ದ್ರವ್ಯಗಳ ಬಿಡುಗಡೆ ಸುಧಾರಿತ ಉದ್ದೀಪನ ಮದ್ದು ನಿಗ್ರಹ ಪರೀಕ್ಷೆಯನ್ನು ಖಾತ್ರಿಪಡಿಸುತ್ತದೆ, ಇದು ದೇಶದಲ್ಲಿ ಉದ್ದೀಪನ ಮದ್ದು ನಿಗ್ರಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರೀಡಾ ಸಚಿವಾಲಯದ ಬದ್ಧತೆಗೆ ಮತ್ತು ಕ್ರೀಡೆಯಲ್ಲಿ ನ್ಯಾಯೋಚಿತ ಆಟದ ಏಕೈಕ ಉದ್ದೇಶಕ್ಕೆ ಅನುಗುಣವಾಗಿದೆ. 

 

***



(Release ID: 1812967) Visitor Counter : 240