ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಎನ್ಸಿಡಬ್ಲ್ಯೂನಿಂದ ಮಾನವ ಕಳ್ಳಸಾಗಣೆ ನಿಗ್ರಹ ಘಟಕ ಆರಂಭ.


ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣಾಮಕಾರಿತ್ವ ಉತ್ತಮಪಡಿಸಲು ಮತ್ತು ಮಾನವ ಕಳ್ಳಸಾಗಣೆ ನಿಗ್ರಹ ಘಟಕಗಳ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಹೆಚ್ಚಿಸಲಿರುವ ಕೋಶ.

ಕಳ್ಳಸಾಗಣೆಯಿಂದ ಪಾರಾದವರಿಗೆ ತಮ್ಮ ಜೀವನವನ್ನು ಪುನರ್ನಿರ್ಮಿಸಿಕೊಳ್ಳಲು ಹಾಗೂ ಮಹಿಳೆಯರು ಮತ್ತು ಬಾಲಕಿಯರಲ್ಲಿ ಜಾಗೃತಿ ಮೂಡಿಸಲು ಸಹ ಸಹಾಯ ಮಾಡಲಿರುವ ಕೋಶ.

Posted On: 02 APR 2022 4:54PM by PIB Bengaluru

ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣಾಮಕಾರಿತ್ವವನ್ನು ಉತ್ತಮಪಡಿಸಲು, ಮಹಿಳೆಯರು ಮತ್ತು ಬಾಲಕಿಯರಲ್ಲಿ ಜಾಗೃತಿ ಮೂಡಿಸಲು, ಮಾನವ ಕಳ್ಳಸಾಗಣೆ ನಿಗ್ರಹ ಘಟಕಗಳ ಸಾಮರ್ಥ್ಯ ವರ್ಧನೆ ಹಾಗೂ ತರಬೇತಿ ಮತ್ತು ಕಾನೂನು ಜಾರಿ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಹೆಚ್ಚಿಸಲು ರಾಷ್ಟ್ರೀಯ ಮಹಿಳಾ ಆಯೋಗವು ಇಂದು ಮಾನವ ಕಳ್ಳಸಾಗಣೆ ನಿಗ್ರಹ ಕೋಶವನ್ನು ಪ್ರಾರಂಭಿಸಿದೆ.
ಕಾನೂನು ಜಾರಿ ಮಾಡುವ ಅಧಿಕಾರಿಗಳಲ್ಲಿ ಜಾಗೃತಿಯನ್ನು ಹೆಚ್ಚಿಸುವ ಮತ್ತು ಅವರ ಸಾಮರ್ಥ್ಯ ವರ್ಧನೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕೋಶವನ್ನು ಸ್ಥಾಪಿಸಲಾಗಿದೆ. ಈ ಕೋಶವು ಪೊಲೀಸ್ ಅಧಿಕಾರಿಗಳಿಗೆ ಮತ್ತು ಪ್ರಾದೇಶಿಕ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಸಿಕ್ಯೂಟರ್ ಗಳಿಗೆ ಮಾನವ ಕಳ್ಳಸಾಗಣೆಯನ್ನು ನಿಭಾಯಿಸಲು ಲಿಂಗ ಸಂವೇದನಾಶೀಲ ತರಬೇತಿಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತದೆ. ಆಯೋಗವು ಸ್ವೀಕರಿಸಿದ ಮಾನವ ಕಳ್ಳಸಾಗಣೆಗೆ ಸಂಬಂಧಿತ ದೂರುಗಳನ್ನು ಈ ಕೋಶವು ನಿರ್ವಹಿಸುತ್ತದೆ.
ಕಳ್ಳಸಾಗಣೆ ನಿಗ್ರಹಿಸುವಲ್ಲಿ ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳಲ್ಲಿ, ಪಾರಾದವರಿಗೆ ಪುನರ್ವಸತಿಯ ಕೊರತೆ ಮತ್ತು ಕಳ್ಳಸಾಗಣೆಯ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಬಗ್ಗೆ ಸಂವೇದನಾ ರಹಿತ ಮನೋಭಾವವೂ ಸೇರಿವೆ ಎಂಬುದನ್ನು ಆಯೋಗವು ಗಮನಿಸಿದೆ. ಆದ್ದರಿಂದ, ಕೋಶವು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಉತ್ತಮಪಡಿಸುತ್ತದೆ ಮತ್ತು ಕಳ್ಳಸಾಗಣೆ ನಿಗ್ರಹ ಮತ್ತು ಸಂತ್ರಸ್ತರ ಪುನರ್ವಸತಿಗಾಗಿ ಅನುಸರಿಸಲಾಗುತ್ತಿರುವ ಕ್ರಮಗಳ ಬಗ್ಗೆ ಸರ್ಕಾರಿ ಸಂಸ್ಥೆಗಳನ್ನು ಉತ್ತೇಜಿಸುತ್ತದೆ.
ಈ ಕೋಶವು ಕಳ್ಳಸಾಗಣೆಯಿಂದ ಪಾರಾದವರಿಗೆ ಅಗತ್ಯ-ಆಧಾರಿತ ತರಬೇತಿಯನ್ನು ಒದಗಿಸುವ ಮೂಲಕ ಮತ್ತು ಸಂತ್ರಸ್ತರ ಮರು-ಆಘಾತವನ್ನು ತಡೆಗಟ್ಟಲು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಜೀವನವನ್ನು ಪುನರ್ ನಿರ್ಮಿಸಲು ನೆರವಾಗುತ್ತದೆ.


***


(Release ID: 1812842) Visitor Counter : 257