ರಕ್ಷಣಾ ಸಚಿವಾಲಯ
azadi ka amrit mahotsav g20-india-2023

ಭೂಮಿಯಿಂದ ಗಗನಕ್ಕೆ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯ ಸೇನಾ ಆವೃತ್ತಿಯು ಅಭಿವೃದ್ಧಿ ಪ್ರಯೋಗಗಳನ್ನು ಪೂರ್ಣಗೊಳಿಸಿದೆ


ಒಡಿಶಾ ಕರಾವಳಿಯಲ್ಲಿ ಎರಡು ಯಶಸ್ವಿ ಪರೀಕ್ಷೆಗಳೊಂದಿಗೆ ಸಾಮರ್ಥ್ಯವನ್ನು ಸಾಬೀತುಪಡಿಸಿದೆ

ಯಶಸ್ವಿ ಪರೀಕ್ಷೆಗಳಿಗಾಗಿ ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ರವರು ಡಿಆರ್‌ಡಿಒ, ಭಾರತೀಯ ಸೇನೆ ಮತ್ತು ಉದ್ಯಮವನ್ನು ಶ್ಲಾಘಿಸಿದರು

Posted On: 30 MAR 2022 2:38PM by PIB Bengaluru

ಮಾರ್ಚ್‌ 30, 2022ರಂದು ಒಡಿಶಾದ ಕರಾವಳಿಯ ಚಂಡೀಪುರದ ʼಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿʼ ಎರಡು ಕ್ಷಿಪಣಿಗಳು ಪರೀಕ್ಷೆಯ ಸಮಯದಲ್ಲಿ, ಹೆಚ್ಚಿನ ವೇಗದ ವೈಮಾನಿಕ ಗುರಿಗಳ ವಿರುದ್ಧ ನೇರ ಹೊಡೆತ ಸಾಧಿಸಿದ  ಭೂಮಿಯಿಂದ ಗಗನಕ್ಕೆ ಚಿಮ್ಮುವ ಮಧ್ಯಮ ಶ್ರೇಣಿಯ ಕ್ಷಿಪಣಿ (ಎಮ್‌ಆರ್‌ಎಸ್‌ಎಎಮ್‌) ಸೇನಾ ಶಸ್ತ್ರಾಸ್ತ್ರ ವ್ಯವಸ್ಥೆಯು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.  ಶಸ್ತ್ರಾಸ್ತ್ರ ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು  ಪರೀಕ್ಷಿಸಲು ಸೀ ಸ್ಕಿಮ್ಮಿಂಗ್‌ ಕಡಲತೀರ ಮತ್ತು ಎತ್ತರದ ಕಾರ್ಯಚಟುವಟಿಕೆಯನ್ನು ಒಳಗೊಂಡ ಕಾರ್ಯತಂತ್ರದ ಭಾಗವಾಗಿ ಇವುಗಳನ್ನು ಪರೀಕ್ಷಿಸಲಾಯಿತು.   ಈ ಪ್ರಯೋಗಗಳ ಸಮಯದಲ್ಲಿ ಕ್ಷಿಪಣಿ, ವೆಪನ್ ಸಿಸ್ಟಮ್ ರಾಡಾರ್ ಮತ್ತು ಕಮಾಂಡ್ ಪೋಸ್ಟ್ ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಾರಾಟ ಪರೀಕ್ಷೆ ನಡೆಸಲಾಯಿತು. ವಿವಿಧ ಶ್ರೇಣಿಗಳು ಮತ್ತು ಸನ್ನಿವೇಶಗಳಿಗಾಗಿ ಹಾರಾಟದ ಪ್ರಯೋಗಗಳು ಪೂರ್ಣಗೊಳ್ಳುವುದರೊಂದಿಗೆ, ಶಸ್ತ್ರಾಸ್ತ್ರ ವ್ಯವಸ್ಥೆಯು ತನ್ನ ಅಭಿವೃದ್ಧಿ ಪ್ರಯೋಗಗಳನ್ನು ಪೂರ್ಣಗೊಳಿಸಿದೆ.

https://static.pib.gov.in/WriteReadData/userfiles/image/PIC229CG.JPG

ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ಎಮ್‌ಆರ್‌ಎಸ್‌ಎಎಮ್‌  - ಸೇನೆಯ ಯಶಸ್ವಿ ಉಡಾವಣೆಗಳಿಗಾಗಿ ಡಿಆರ್‌ಡಿಒ, ಭಾರತೀಯ ಸೇನೆ ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ ಮತ್ತು ಯಶಸ್ವಿ ಉಡಾವಣೆಗಳು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ ಎಂದು ಹೇಳಿದರು.  ರಕ್ಷಣಾ ಇಲಾಖೆಯ ಕಾರ್ಯದರ್ಶಿ ಆರ್ & ಡಿ ಮತ್ತು ಡಿಆರ್‌ಡಿಒ  ಅಧ್ಯಕ್ಷರಾದ ಡಾ ಜಿ ಸತೀಶ್ ರೆಡ್ಡಿ ಅವರು ಶಸ್ತ್ರಾಸ್ತ್ರ ವ್ಯವಸ್ಥೆಯ ಯಶಸ್ವಿ ಪರೀಕ್ಷಾ ಉಡಾವಣೆಗೆ ಸಂಬಂಧಿಸಿದ ತಂಡಗಳನ್ನು ಅಭಿನಂದಿಸಿದರು.

ಮಾರ್ಚ್ 27, 2022 ರಂದು, ಲೈವ್ ಫೈರಿಂಗ್ ಪ್ರಯೋಗಗಳ ಭಾಗವಾಗಿ ವಿವಿಧ ಶ್ರೇಣಿಗಳಿಗೆ ಹೆಚ್ಚಿನ ವೇಗದ ವೈಮಾನಿಕ ಗುರಿಗಳ ವಿರುದ್ಧ ಕ್ಷಿಪಣಿಯನ್ನು ಎರಡು ಬಾರಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

 https://www.pib.gov.in/PressReleasePage.aspx?PRID=1810241

***(Release ID: 1811826) Visitor Counter : 200