ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಜನಾಂಗೀಯ ವಿವಿಧತೆಯ ಸಂವೇದನೆ ಕುರಿತ ವಿಚಾರ ಸಂಕಿರಣ ಆಯೋಜಿಸಿದ ರಾಷ್ಟ್ರೀಯ ಮಹಿಳಾ ಆಯೋಗ
Posted On:
26 MAR 2022 5:20PM by PIB Bengaluru
ರಾಷ್ಟ್ರೀಯ ಮಹಿಳಾ ಆಯೋಗ [ಎನ್.ಸಿ.ಡಬ್ಲ್ಯೂ], ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಡೈವರ್ಸಿಟಿ, ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ, ದೆಹಲಿ ಪೊಲೀಸ್ ವಿಭಾಗ ಹಾಗೂ ಈಶಾನ್ಯ ವಲಯದ ವಿಶೇಷ ಪೊಲೀಸ್ ಘಟಕ [ಎಸ್.ಪಿ.ಯು.ಎನ್.ಇ.ಆರ್] ದಿಂದ “ಜನಾಂಗೀಯ ವಿವಿಧತೆಯ ಸಂವೇದನೆ” ಕುರಿತ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಭಾರತದ ವಿವಿಧ ಸಂಸ್ಕೃತಿ ಮತ್ತು ವೈವಿಧ್ಯಮಯ ಪದ್ಧತಿಗಳ ನಡುವೆ ಪರಸ್ಪರ ಅರಿವು ಮೂಡಿಸುವುದನ್ನು ಬಲಪಡಿಸುವ ಕಾರ್ಯತಂತ್ರಗಳನ್ನು ಶಿಫಾರಸ್ಸು ಮಾಡುವ ಉದ್ದೇಶವನ್ನು ಇದು ಒಳಗೊಂಡಿದೆ.
ವಿದೇಶಾಂಗ ವ್ಯವಹಾರಗಳು ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ರಾಜ್ ಕುಮಾರ್ ರಂಜನ್ ಸಿಂಗ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ರೇಖಾ ಶರ್ಮಾ, ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾದ ಶ್ರೀಮತಿ ಸಯ್ಯೆದ್ ಶಹೆಝಾದಿ, ಬಿ.ಪಿ.ಆರ್ ಅಂಡ್ ಡಿ ನ ಮಹಾ ನಿರ್ದೇಶಕ ಬಾಲಾಜಿ ಶ್ರೀವಾತ್ಸವ್ ಮತ್ತು ಎಸ್.ಪಿ.ಯು.ಎನ್.ಇ.ಆರ್ ಜಂಟಿ ಆಯುಕ್ತ ಶ್ರೀ ಹಿಬು ತಮಂಗ್ ಉಪಸ್ಥಿತರಿದ್ದರು.
ವಿದೇಶಾಂಗ ವ್ಯವಹಾರಗಳು ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಯ ಸ್ಫೂರ್ತಿಯನ್ನು ಉತ್ತೇಜಿಸುವ ಉದ್ದೇಶವನ್ನು ಈ ವಿಚಾರ ಸಂಕಿರಣ ಹೊಂದಿದೆ. ಇಂತಹ ಸಂವೇದನಾಶೀಲ ಕಾರ್ಯಕ್ರಮಗಳು ಖಂಡಿತವಾಗಿ ಪರಸ್ಪರರನ್ನು ಸಹಾನುಭೂತಿಯಿಂದ ಒಂದು ಕಡೆ ತರಲು ಕೊಡುಗೆ ನೀಡುತ್ತವೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ರೇಖಾ ಶರ್ಮಾ, “ಏಕ್ ಭಾರತ್, ಶ್ರೇಷ್ಠ ಭಾರತ್ “ ದ್ಯೇಯ ವಾಕ್ಯವನ್ನು ಒತ್ತಿ ಹೇಳಿದರು. ಮಾಹಿತಿ ಪ್ರಸಾರ ಮತ್ತು ಸಂಸ್ಕೃತಿ ಹಾಗೂ ಸಂವೇದನೆಯ ವಿನಿಮಯ ಈ ಸಂದರ್ಭದ ಅಗತ್ಯವಾಗಿದೆ ಎಂದು ಹೇಳಿದರು. ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ನಂಬಿಕೆ ಭಾರತದ ಶಕ್ತಿಯ ಅಡಿಪಾಯವಾಗಿದೆ ಮತ್ತು ಭಾರತದ ಎಲ್ಲಾ ಮೂಲೆಗಳಲ್ಲೂ ಸಾಂಸ್ಕೃತಿಕ ನೆಲೆಯಲ್ಲಿ ಸಮಗ್ರವಾಗಿ ಬದುಕುವ ಭಾವನೆ ಮೂಡಬೇಕು ಎಂದು ಶ್ರೀಮತಿ ಶರ್ಮಾ ಹೇಳಿದರು. ಅವರು ಪೊಲೀಸರ ಸಂವೇದನಾಶೀಲತೆಯ ಮಹತ್ವದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು ಮತ್ತು ಪೊಲೀಸ್ ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸಲು ಆಯೋಗ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ವೈವಿಧ್ಯಮಯ ದೃಷ್ಟಿಕೋನದ ಮಾಹಿತಿ ಪಡೆಯಲು ಆಯೋಗ ವಿವಿಧ ವಲಯಗಳ ತಜ್ಞರನ್ನು ವಿಚಾರ ಸಂಕಿರಣ ಕ್ಕೆ ಆಹ್ವಾನಿಸಿತ್ತು: ಭಾರತದ ಫುಟ್ ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ, ಲಡಾಖ್ ನ ಶಿಕ್ಷಣ ಸುಧಾರಕ/ನಾವೀನ್ಯತೆ ಮತ್ತು ಇಂಜಿನಿಯರ್ ಆದ ಸೋನಮ್ ವಾಂಗ್ ಚುಕ್, ಈಶಾನ್ಯ ಭಾಗದ ವಿಶೇಷ ಪೊಲೀಸ್ ಪಡೆಯ ಜಂಟಿ ಪೊಲೀಸ್ ಆಯುಕ್ತ ಹಿಬು ತಮಂಗ್, ಟಿ.ವಿ.9 ನ ಕಾರ್ಯಕಾರಿ ಸಂಪಾದಕ ಆದಿತ್ಯ ರಾಜ್ ಕೌಲ್, ಸಶಸ್ತ್ರ ಪೊಲೀಸ್ ವಿಭಾಗದ ವಿಶೇಷ ಆಯುಕ್ತ, ದೆಹಲಿ ಪೊಲೀಸ್ ಮತ್ತು ಎನ್.ಜಿ.ಒ ಹೆಲ್ಪಿಂಗ್ ಹ್ಯಾಂಡ್ ನ ಅಧ್ಯಕ್ಷ ರೊಬಿನ್ ಹಿತು, ರಾಷ್ಟ್ರೀಯ ಪೊಲೀಸ್ ಅಭಿಯಾನದ ನಿರ್ದೇಶಕ ತಜೆಂದರ್ ಸಿಂಗ್ ಲೂತ್ರಾ, ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ರಿಂಚನ್ ಲಾಮೋ, ಎನ್.ಸಿ.ಡಬ್ಲ್ಯೂ ಮಾಜಿ ಸದಸ್ಯ ಸೊಸೊಶೈಝಾ, ಇಂಫಾಲ್ ಪೂರ್ವ ಭಾಗದ ಎಸ್.ಡಿ.ಒ ಪ್ರಾಂಪೆಟ್ ನ ಐಎಎಸ್ ಅಧಿಕಾರಿ ಪೂಜಾ ಎಲಂಗ್ಬಂ, ಹೈದ್ರಾಬಾದ್ ವಿಶ್ವವಿದ್ಯಾಲಯದ ಸಾಮಾಜಿಕವಾಗಿ ಹೊರಗಿರುವ ಮತ್ತು ಒಳಗೊಳ್ಳುವ ವಲಯದ ನೀತಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಅಜೈಲಿಯುಮೈ ಪಾಲ್ಗೊಂಡಿದ್ದರು.
ಈ ವಿಚಾರ ಸಂಕಿರಣ ವಿವಿಧತೆಯಲ್ಲಿ ಏಕತೆಯನ್ನು ಸಂಭ್ರಮಿಸುವ ಮತ್ತು ನಮ್ಮ ದೇಶದ ಜನರ ನಡುವಿನ ಸಾಂಪ್ರದಾಯಿಕವಾಗಿ ಅಸ್ತಿತ್ವದಲ್ಲಿರುವ ಭಾವನಾತ್ಮಕ ಬಂಧಗಳ ಎಳೆಯನ್ನು ಬಲಪಡಿಸುವ ಮತ್ತು ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿತ್ತು. ವಿವಿಧ ಜನಾಂಗ ಮತ್ತು ಸಂಸ್ಕೃತಿಗಳ ಬಗ್ಗೆ ಮುಂಚೂಣಿ ಕಾರ್ಯಕರ್ತರನ್ನು ಸಂವೇದನಾಶೀಲಗೊಳಿಸುವುದು ಮತ್ತು ಜನಾಂಗೀಯ ಸಂಘರ್ಷಗಳಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ದೆಹಲಿಯಲ್ಲಿ ನೆಲೆಸಿರುವ ವಿವಿಧ ಅಲ್ಪ ಸಂಖ್ಯಾತ ಸಮುದಾಯಗಳ ಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಮ್ಮ ಕೆಲವು ತಜ್ಞರು ಮಾಡಿದ ಭಾಷಣದ ಅಂಶಗಳು
ಬೈಚುಂಗ್ ಭುಟಿಯಾ, ಭಾರತದ ಫುಟ್ ಬಾಲ್ ತಂಡದ ಮಾಜಿ ನಾಯಕ
ಕ್ರೀಡೆ ಒಂದು ಮಾಧ್ಯಮವಾಗಿದ್ದು, ಇಲ್ಲಿ ಕ್ರೀಡಾಪಟುಗಳ ಹಿನ್ನೆಲೆ ಕಾರಣಕ್ಕೆ ಯಾವುದೇ ತಾರತಮ್ಯ ಮಾಡಲು ಸಾಧ್ಯವಿಲ್ಲ. ಈಶಾನ್ಯ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡುವಲ್ಲಿ ಕ್ರೀಡಾ ಪಟುಗಳು ಪ್ರಮುಖ ಪಾತ್ರ ವಹಿಸಿದ್ದಾರೆ.
ಲಡಾಖ್ ನ ಶಿಕ್ಷಣ ಸುಧಾರಕ/ನಾವೀನ್ಯತೆ ಮತ್ತು ಇಂಜಿನಿಯರ್ ಸೋನಮ್ ವಾಂಗ್ ಚುಕ್
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಇದು ಮತ್ತು ಎಲ್ಲಾ ದೇಶಗಳು ಭಾರತದಂತೆ ಇಲ್ಲ. ಸಮಗ್ರತೆ ವಿಚಾರದಲ್ಲಿ ಮಾಧ್ಯಮಗಳು ಹೆಚ್ಚಿನ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಚಲನಚಿತ್ರಗಳು, ಡಿಜಿಟಲ್ ಮತ್ತು ವಿದ್ಯುನ್ಮಾನ ಸೇರಿದಂತೆ ಎಲ್ಲಾ ಮಾಧ್ಯಮಗಳು ಜನರನ್ನು ಪರಸ್ಪರ ಸನಿಹಕ್ಕೆ ತರಲು ಮುಖ್ಯ ಪಾತ್ರ ವಹಿಸುತ್ತವೆ.
ಈಶಾನ್ಯ ಭಾಗದ ವಿಶೇಷ ಪೊಲೀಸ್ ಪಡೆಯ ಜಂಟಿ ಪೊಲೀಸ್ ಆಯುಕ್ತ ಹಿಬು ತಮಂಗ್
ಈಶಾನ್ಯ ಭಾಗದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ದೆಹಲಿ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಐದು ವರ್ಷಗಳ ತಮ್ಮ ಅನುಭವದಲ್ಲಿ ಹೇಳುವುದಾದರೆ ಜನಾಂಗೀಯ ನಿಂದನೆಗಳು ಕಡಿಮೆಯಾಗಿವೆ ಮತ್ತು ಜನತೆ ಹೆಚ್ಚು ಜಾಗೃತರಾಗಿದ್ದಾರೆ.
ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯ ರಿಂಚನ್ ಲಾಮೋ
ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲಡಾಕ್ ಅಭಿವೃದ್ಧಿಗಾಗಿ ಸಾಕಷ್ಟು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ವಲಯದಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯುತ್ತಿರುವ ಹಾಗೂ ಲಡಾಕ್ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸರ್ಕಾರಕ್ಕೆ ಅಭಿನಂದನೆ.
ಹೈದರಾಬಾದ್ ವಿಶ್ವವಿದ್ಯಾಲಯದ ಸಾಮಾಜಿಕವಾಗಿ ಹೊರಗಿರುವ ಮತ್ತು ಒಳಗೊಳ್ಳುವ ವಲಯದ ನೀತಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಅಜೈಲಿಯುಮೈ
ಈಶಾನ್ಯದ ಮಹಿಳೆಯರನ್ನು ಸುಲಭದ ಬೇಟೆ ಎಂದು ಪರಿಗಣಿಸಲಾಗುತ್ತದೆ. ಈಶಾನ್ಯದ ಜನರ ಕಡೆಗೆ ಜನಾಂಗೀಯ ವಿಷಯ ಅಜ್ಞಾನದಿಂದ ಕೂಡಿವೆ. ಈ ವಿಷಯದಲ್ಲಿ ಹಲವಾರು ಜನಾಂಗೀಯ ಘಟನೆಗಳು ನಡೆದಿದ್ದು, ಇವು ದುರದೃಷ್ಟಕರ. ಆದರೆ ಇದೀಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ.
ಇಂಫಾಲ್ ಪೂರ್ವ ಭಾಗದ ಎಸ್.ಡಿ.ಒ ಪ್ರಾಂಪೆಟ್ ನ ಐಎಎಸ್ ಅಧಿಕಾರಿ ಪೂಜಾ ಎಲಂಗ್ಬಂ,
ಜನಾಂಗೀಯ ಎಂಬುದು ಸಾಮಾಜಿಕ ರಚನೆಯಾಗಿರುವಂತೆಯೇ ಜನಾಂಗ ಕೂಡ ಸಾಮಾಜಿಕವಾಗಿ ನಿರ್ಮಾಣಗೊಂಡಿದೆ. ಜನರನ್ನು ಒಗ್ಗೂಡಿಸಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಪ್ರಮುಖ ವೇದಿಕೆ ಇದಾಗಿದೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಿಕ್ಷಣ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾರತದ ವೈವಿಧ್ಯದ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯ ಪ್ರತಿಬಿಂಬಿಸಬೇಕು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಅಗತ್ಯವಿರುವ ಸಂವೇದನೆಯನ್ನು ಮೂಡಿಸಲು ಇದರಿಂದ ಸಾಧ್ಯವಾಗುತ್ತದೆ ಮತ್ತು ಇದು ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ.
ಎನ್.ಸಿ.ಡಬ್ಲ್ಯೂ ಮಾಜಿ ಸದಸ್ಯ ಸೊಸೊಶೈಝಾ
ನಮ್ಮ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ. ಭಾರತದ ಪ್ರಜೆಗಳಾಗಿ ನಾವು ಇತರ ಸಮುದಾಯಗಳನ್ನು ಸ್ವೀಕರಿಸಲು ಮತ್ತು ಗೌರವಿಸಲು ಸಾಧ್ಯವಾದರೆ ನಾವು ಪರಕೀಯ ಭಾವನೆಯನ್ನು ಅನುಭವಿಸುವುದಿಲ್ಲ. ಆದ್ದರಿಂದ ಸ್ವೀಕಾರ ಅತ್ಯಂತ ಪ್ರಮುಖ ಸಾಧನವಾಗಿದೆ.
ರಾಷ್ಟ್ರೀಯ ಪೊಲೀಸ್ ಅಭಿಯಾನದ ನಿರ್ದೇಶಕ ತಜೆಂದರ್ ಸಿಂಗ್ ಲೂತ್ರಾ
ನಿಸರ್ಗ ನಮ್ಮೆಲ್ಲರನ್ನೂ ಅಸಾಧಾರಣವಾಗಿ ನಿರ್ಮಿಸಿದೆ ಮತ್ತು ಹೀಗಾಗಿಯೇ ನಾವು ವಿವಿಧ ಬಣ್ಣಗಳಲ್ಲಿದ್ದೇವೆ. ನಾವು ವಿವಿಧ ಭಾಷೆಗಳನ್ನು ಮಾತನಾಡುತ್ತೇವೆ, ನಾವೆಲ್ಲರೂ ನಂಬಲಾಗದ, ಅನನ್ಯ ಮತ್ತು ವಿಶೇಷ.
***
(Release ID: 1810115)
Visitor Counter : 264