ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಣತಿಯೊಂದಿಗೆ ಒಂದು ನಿರ್ದಿಷ್ಟ ಕೆಲಸಕ್ಕಾಗಿ ಉತ್ತಮ ಪ್ರತಿಭೆಗಳನ್ನು ಒಗ್ಗೂಡಿಸಲು ಲ್ಯಾಟರಲ್ ಎಂಟ್ರಿ ನೇಮಕಾತಿಗಳನ್ನು ಸುವ್ಯವಸ್ಥಿತಗೊಳಿಸಿದೆ : ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ತಮ್ಮ 15 ದಿನಗಳ ಪ್ರವೇಶ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ/ ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಮಟ್ಟದ 15 ದಿನಗಳ ಕೇಂದ್ರ ಸರ್ಕಾರದ 30 ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಜಿತೇಂದ್ರ ಸಿಂಗ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಪ್ರಮುಖ ಯೋಜನೆಗಳಿಗೆ ಹೊಸ ಕೌಶಲ್ಯ ಮತ್ತು ಪರಿಣತಿಯ ಅಗತ್ಯವಿರುವವರನ್ನು ಲ್ಯಾಟರಲ್ ಎಂಟ್ರಿ ಕಾರ್ಯವಿಧಾನವನ್ನು ಮೂಲಕ ನೇಮಕಾತಿ ನಡೆಸುವ ಅಂತಿಮ ಗುರಿ ವಿಶಾಲವಾದದ್ದನ್ನು ಪಡೆಯುವುದಾಗಿದೆ
ಕಾರ್ಪೋರೇಟ್ ಮತ್ತು ಸರ್ಕಾರಿ ವಲಯದ ನಡುವಿನ ಅಂತರ ವೇಗವಾಗಿ ಕಡಿಮೆಯಾಗುತ್ತಿದೆ ಮತ್ತು ಇಂದಿನ ಹೊಸ ಕೆಲಸದ ವಿಧಾನದ ವ್ಯವಸ್ಥೆಯಲ್ಲಿ ಕೌಶಲ್ಯಗಳ ವರ್ಧನೆ ಅಗತ್ಯವಾಗಿದೆ
Posted On:
22 MAR 2022 7:18PM by PIB Bengaluru
ಶ್ರೀ ನರೇಂದ್ರ ಮೋದಿ ಸರ್ಕಾರ ಪರಿಣತಿಯೊಂದಿಗೆ ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ಉತ್ತಮ ಪ್ರತಿಭೆಗಳನ್ನು ಒಳಗೊಳ್ಳಲು ಲ್ಯಾಟರಲ್ ಎಂಟ್ರಿ ನೇಮಕಾತಿಗಳನ್ನು ಸುವ್ಯವಸ್ಥಿತಗೊಳಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ[ಸ್ವತಂತ್ರ ಜವಾಬ್ದಾರಿ]; ಭೂ ವಿಜ್ಞಾನ [ಸ್ವತಂತ್ರ ಜವಾಬ್ದಾರಿ] ಖಾತೆ ರಾಜ್ಯ ಸಚಿವ, ಪಿಎಂಒ ಕಚೇರಿಯ ಎಂ.ಒ.ಎಸ್, ಸಾರ್ವಜನಿಕ ಸಿಬ್ಬಂದಿ, ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಹಿಂದಿನ ಸರ್ಕಾರಗಳಲ್ಲಿ ಕೂಡ ಲ್ಯಾಟರಲ್ ನೇಮಕಾತಿಗಳನ್ನು ಮಾಡಲಾಗಿತ್ತು ಮತ್ತು 1972 ರಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅವಧಿಯ ಕೆಲವು ಪ್ರಸಿದ್ಧ ಲ್ಯಾಟರಲ್ ನೇಮಕಾತಿಗಳನ್ನು ಡಾ. ಜಿತೇಂದ್ರ ಸಿಂಗ್ ಸ್ಮರಿಸಿಕೊಂಡರು. ಆದಾಗ್ಯೂ ಶ್ರೀ ನರೇಂದ್ರ ಮೋದಿ ಸರ್ಕಾರ ಯು.ಪಿ.ಎಸ್.ಸಿ ಮೂಲಕ ಅದಕ್ಕೆ ಸೂಕ್ತ ಮಾರ್ಗ ರೂಪಿಸುವ ಮೂಲಕ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸಲು ಪ್ರಯತ್ನಿಸಿದೆ. ವಸ್ತುನಿಷ್ಠ, ಪಾರದರ್ಶಕ ಮತ್ತು ಸಂಪೂರ್ಣವಾಗಿ ಅರ್ಹತೆ ಮತ್ತು ಅನುಭವ ಆಧಾರಿತ ಆಯ್ಕೆಗೆ ಮಾನದಂಡವನ್ನು ಇದು ನಿಗದಿಪಡಿಸುತ್ತದೆ.
ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟೇಷನ್ ನಲ್ಲಿ ಜಂಟಿ ಕಾರ್ಯದರ್ಶಿ/ ನಿರ್ದೇಶಕರು ಮತ್ತು ಉಪ ನಿರ್ದೇಶಕರ 15 ದಿನಗಳ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 30 ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಜಿತೇಂದ್ರ ಸಿಂಗ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ವಿವಿಧ ಪ್ರಮುಖ ಯೋಜನೆಗಳಿಗೆ ಹೊಸ ಕೌಶಲ್ಯ ಮತ್ತು ನಿಪುಣತೆಯ ಅಗತ್ಯವಿರುವುದರಿಂದ ಲ್ಯಾಟರಲ್ ಎಂಟ್ರಿ ಕಾರ್ಯ ವಿಧಾನದ ಅಂತಿಮ ಗುರಿ ವಿಶಾಲವಾದ ಆಯ್ಕೆಯಿಂದ ಉತ್ತಮವಾದದ್ದನ್ನು ಪಡೆಯುವುದಾಗಿದೆ. ಪ್ರಧಾನಮಂತ್ರಿ ಅವರು ಭಾರತವನ್ನು ವಿಶ್ವದಲ್ಲಿ ಮುಂಚೂಣಿ ರಾಷ್ಟ್ರವನ್ನಾಗಿ ಮುನ್ನಡೆಸುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ಇದು ನಡೆಯುತ್ತಿದೆ ಎಂದು ಹೇಳಿದರು.
ಡಾ. ಜಿತೇಂದ್ರ ಸಿಂಗ್ ಅವರು ಐಐಪಿಎ ಕಾರ್ಯಕಾರಿ ಮಂಡಳಿ ಅಧ್ಯಕ್ಷರೂ ಸಹ ಆಗಿದ್ದು, ಭಾರತ ಸರ್ಕಾರದಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಾಗರಿಕ ಕೇಂದ್ರಿತ ವಿಧಾನದ ವಿಶಿಷ್ಟ ಲಕ್ಷಣವಾಗಿರಬೇಕು ಎಂದು ಸೇರ್ಪಡೆಯಾದವರಿಗೆ ಸಲಹೆ ನೀಡಿದರು.
ಕಾರ್ಪೋರೇಟ್ ಮತ್ತು ಸರ್ಕಾರಿ ವಲಯದ ನಡುವಿನ ಅಂತರ ವೇಗವಾಗಿ ಕಡಿಮೆಯಾಗುತ್ತಿದೆ ಮತ್ತು ಇಂದಿನ ಹೊಸ ಕೆಲಸದ ವಿಧಾನದ ವ್ಯವಸ್ಥೆಯಲ್ಲಿ ಕೌಶಲ್ಯ ವರ್ಧನೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕವಾಗಿ ಭಾರತದ ಘನತೆ ಹೆಚ್ಚುತ್ತಿರುವ ಕಾರಣ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಇದೀಗ ಪ್ರವೇಶ ಪಡೆಯುತ್ತಿರುವುದು ಈ ಉತ್ತಮ ಅವಕಾಶಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ಇಂದಿನ ಪ್ರಯತ್ನಗಳಿಂದ ಮುಂದಿನ 25 ವರ್ಷಗಳಲ್ಲಿ ಅಂದರೆ ದೇಶ 100 ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಭಾರತ ವಿಶ್ವ ನಾಯಕನಾಗಿ ಹೊರ ಹೊಮ್ಮಲಿದೆ ಎಂದು ಹೇಳಿದರು.
30 ಲ್ಯಾಟರಲ್ ಎಂಟ್ರಿಯಲ್ಲಿ ಮೂವರು ಜಂಟಿ ಕಾರ್ಯದರ್ಶಿಗಳು, 18 ಮಂದಿ ನಿರ್ದೇಶಕರು ಮತ್ತು 9 ಮಂದಿ ಉಪ ಕಾರ್ಯದರ್ಶಿಗಳು ಭಾರತ ಸರ್ಕಾರದ 21 ಸಚಿವಾಲಯಗಳು/ ಇಲಾಖೆಗಳನ್ನು ಪ್ರತಿನಿಧಿಸಲಿದ್ದಾರೆ.
ಶ್ರೀ ಎಸ್.ಎನ್. ತ್ರಿಪಾಠಿ, ಡಿಜಿ, ಐಐಪಿಎ, ಶ್ರೀ ಅಮಿತಾಬ್ ರಂಜನ್, ರಿಜಸ್ಟ್ರಾರ್ ಐಐಪಿಎ ಮತ್ತು ಸಿಬ್ಬಂದಿ ಹಾಗು ತರಬೇತಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರಶ್ಮಿ ಚೌಧರಿ ಸೇರಿ ಮತ್ತಿತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
***
(Release ID: 1808490)
Visitor Counter : 223