ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಜಪಾನ್ ವಾಣಿಜ್ಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಇಂಗ್ಲಿಷ್ ಅನುವಾದ
Posted On:
19 MAR 2022 11:00PM by PIB Bengaluru
ನನ್ನ ಆತ್ಮೀಯ ಸ್ನೇಹಿತರು, ಪ್ರಧಾನ ಮಂತ್ರಿ ಕಿಶಿದಾ ಜೀ ಅವರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ,
ಗುಜರಾತ್‌ನ ಹಣಕಾಸು ಸಚಿವ ಶ್ರೀ ಕನುಭಾಯಿ ದೇಸಾಯಿ,
ಭಾರತ-ಜಪಾನ್ ಉದ್ಯಮ ಮುಖಂಡರ ವೇದಿಕೆಯ ಎಲ್ಲಾ ಸದಸ್ಯರೇ,
ನಿಮಗೆಲ್ಲರಿಗೂ ಸ್ವಾಗತ,
ಎಲ್ಲರಿಗೂ ನಮಸ್ಕಾರ!
ಪ್ರಧಾನಮಂತ್ರಿ ಕಿಶಿದಾ ಜೀ ಮತ್ತು ಜಪಾನ್‌ನಿಂದ ಭಾರತಕ್ಕೆ ಬಂದಿರುವ ಎಲ್ಲಾ ಸ್ನೇಹಿತರಿಗೆ ಹಾರ್ದಿಕ ಸ್ವಾಗತ. ಎರಡು ವರ್ಷಗಳ ಅಂತರದ ನಂತರ ನಾವು ಭಾರತ ಮತ್ತು ಜಪಾನ್ ನಡುವಿನ ಶೃಂಗಸಭೆ ಮಟ್ಟದ ಸರಣಿ ಸಭೆಗಳನ್ನು ಪುನರಾರಂಭಿಸಲು ಸಾಧ್ಯವಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆರ್ಥಿಕ ಸಂಬಂಧಗಳು ಕೋವಿಡ್ ನಂತರದ ಯುಗದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಬಲವಾದ ಆಧಾರ ಸ್ತಂಭಗಳಾಗಿವೆ. ಆರ್ಥಿಕ ಚೇತರಿಕೆ ಮತ್ತು ಆರ್ಥಿಕ ಭದ್ರತೆಗಾಗಿ ಭಾರತ-ಜಪಾನ್ ಆರ್ಥಿಕ ಪಾಲುದಾರಿಕೆಯು ಎರಡೂ ದೇಶಗಳಿಗೆ ಮಾತ್ರವಲ್ಲದೆ, ಈ ಇಡೀ ಪ್ರದೇಶ ಮತ್ತು ವಿಶ್ವಕ್ಕೆ ವಿಶ್ವಾಸ ಹಾಗೂ ಸ್ಥಿತಿಸ್ಥಾಪಕತ್ವವನ್ನು ಒದಗಿಸುತ್ತದೆ. ಭಾರತದಲ್ಲಿ ವ್ಯಾಪಕವಾಗಿ ಕೈಗೊಳ್ಳಲಾಗುತ್ತಿರುವ ಸುಧಾರಣೆಗಳು ಮತ್ತು ನಮ್ಮ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳು ಹಿಂದೆಂದಿಗಿಂತಲೂ ಹೆಚ್ಚು ಸಕಾರಾತ್ಮಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿವೆ.
ಘನತೆವೆತ್ತವರೇ,
ಭಾರತದ ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗವು 1.8 ಟ್ರಿಲಿಯನ್ ಡಾಲರ್ ಮೌಲ್ಯದ 9000ಕ್ಕೂ ಹೆಚ್ಚು ಯೋಜನೆಗಳನ್ನು ಹೊಂದಿದ್ದು, ಇದು ಸಹಕಾರಕ್ಕೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಜಪಾನಿನ ಕಂಪನಿಗಳು ನಮ್ಮ ಪ್ರಯತ್ನಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಮತ್ತು ಇದಕ್ಕಾಗಿ, ಭಾರತದಲ್ಲಿ ಜಪಾನಿನ ಕಂಪನಿಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ.
ಸ್ನೇಹಿತರೇ,
ಪ್ರಗತಿ, ಸಮೃದ್ಧಿ ಮತ್ತು ಪಾಲುದಾರಿಕೆ ಭಾರತ-ಜಪಾನ್ ಬಾಂಧವ್ಯದ ತಿರುಳಾಗಿದೆ. ಭಾರತ ಜಪಾನ್ ಉದ್ಯಮ ಮುಖಂಡರ ವೇದಿಕೆಯು ಎರಡೂ ದೇಶಗಳ ಆರ್ಥಿಕ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಬಯಸುತ್ತೇನೆ.
ತುಂಬ ಧನ್ಯವಾದಗಳು!
ಸೂಚನೆ: ಇದು ಪ್ರಧಾನ ಮಂತ್ರಿಯವರ ಹೇಳಿಕೆಗಳ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.
***
(Release ID: 1807401)
Visitor Counter : 263
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam