ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಎನ್‌ಎಲ್‌ ಸಿ ಇಂಡಿಯಾ ಲಿಮಿಟೆಡ್‌ 2600 ಹೆಕ್ಟೇರ್‌ ಭೂಮಿಯನ್ನು ಗಣಿಗಾರಿಕೆ ಪ್ರದೇಶದಿಂದ ಹಿಂಪಡೆದಿದೆ


ಸುಸ್ಥಿರ ಗಣಿಗಾರಿಕೆಗಾಗಿ ಸಮರ್ಪಿತ ಪ್ರಯತ್ನಗಳು ನಡೆಯುತ್ತಿವೆ

Posted On: 10 MAR 2022 4:53PM by PIB Bengaluru

 ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿನ ನವರತ್ನ ಸಾರ್ವಜನಿಕ ವಲಯದ ಉದ್ಯಮವಾಗಿರುವ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌, ಪ್ರಸ್ತುತ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಸೌರ ವಿದ್ಯುತ್‌ ಉತ್ಪಾದನೆಯಲ್ಲಿಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. ಸುಸ್ಥಿರ ಭೂ ಸುಧಾರಣಾ ಚಟುವಟಿಕೆ ಮತ್ತು ಇತರ ಪರಿಸರ ಸ್ನೇಹಿ ಉಪಕ್ರಮಗಳು ಗಣನೀಯ ಯಶಸ್ಸಿನೊಂದಿಗೆ ನಡೆಯುತ್ತಿವೆ. ಗಣಿ ಮುಚ್ಚುವ ಯೋಜನೆಗೆ ಅನುಗುಣವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮಾಡಿದ ಬದ್ಧತೆಗೆ ಅನುಗುಣವಾಗಿ ಎಲ್ಲಾ ಗಣಿಗಾರಿಕೆ ಪ್ರದೇಶಗಳಲ್ಲಿಅರಣ್ಯೀಕರಣ ಮತ್ತು ಹಸಿರು ಪಟ್ಟಿಯನ್ನು ರಚಿಸುವ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.

         ಪಳೆಯುಳಿಕೆ ಇಂಧನ ಗಣಿಗಾರಿಕೆ ಮತ್ತು ಉಷ್ಣ ವಿದ್ಯುತ್‌ ಉತ್ಪಾದನೆಯಲ್ಲಿತೊಡಗಿರುವ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ ತನ್ನ ಗ್ರೀನ್‌ ಬೆಲ್ಟ… ರಚನೆಯ ಉಪಕ್ರಮದ ಭಾಗವಾಗಿ ನೇವೇಲಿ ಟೌನ್‌ಶಿಪ್‌ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿಎರಡು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದೆ. ಪಿಎಸ್‌ಯು ಇದುವರೆಗೆ 2600 ಹೆಕ್ಟೇರ್‌ ಭೂಮಿಯನ್ನು ಗಣಿಗಾರಿಕೆಯಿಂದ ಹೊರತೆಗೆದಿದೆ ಮತ್ತು 2188 ಹೆಕ್ಟೇರ್‌ಗಳಲ್ಲಿಅರಣ್ಯೀಕರಣವನ್ನು ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿವಿವಿಧ ರೀತಿಯ ಸ್ಥಳೀಯ ಮರಗಳನ್ನು ನೆಡಲಾಗಿದೆ. ಪುನಃ ಭೂಮಿಯಲ್ಲಿಈವರೆಗೆ 27.96 ಲಕ್ಷ ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, 100 ಹೆಕ್ಟೇರ್‌ ಪ್ರದೇಶದಲ್ಲಿಹೈಟೆಕ್‌ ತರಕಾರಿ ಕೃಷಿ ನಡೆಯುತ್ತಿದೆ.

ತೆರೆದ ಬಯಲುಗಳಲ್ಲಿಗಣಿಗಾರಿಕೆಯಿಂದ ದೊಡ್ಡ ಕುಳಿಗಳು ನಿರ್ಮಾಣವಾಗುತ್ತದೆ.ಇದರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಇಡೀ ಭೂಮಿಯನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ಸಸ್ಯ ಪೋಷಕಾಂಶಗಳಿಲ್ಲದ ವೈವಿಧ್ಯಮಯ ಸ್ವಭಾವದಿಂದಾಗಿ ಈ ರೀತಿಯ ಮಣ್ಣು ಕೃಷಿಗೆ ಸೂಕ್ತವಲ್ಲ. ಇದಲ್ಲದೆ, ಅಂತಹ ರೀತಿಯ ಮಣ್ಣು ಸಸ್ಯ ವರ್ಗದ ಬೆಳವಣಿಗೆಗೆ ಅಗತ್ಯವಾದ ಸರಿಯಾದ ವಿನ್ಯಾಸ ಮತ್ತು ರಚನೆಯನ್ನು ಹೊಂದಿಲ್ಲ. ಎನ್‌ಎಲ್‌ಸಿಎಲ್‌ ಸಮರ್ಪಿತ ಪ್ರಯತ್ನದಿಂದ, ಮಣ್ಣಿನ ಗುಣಮಟ್ಟವನ್ನು ಪೂರ್ವ-ಗಣಿಗಾರಿಕೆ ಮಟ್ಟಕ್ಕೆ ಸುಧಾರಿಸುವ ಮೂಲಕ ಅಂತಹ ಮರುಪೂರಣ ಪ್ರದೇಶಗಳನ್ನು ಕೃಷಿ ಕ್ಷೇತ್ರಗಳಾಗಿ ಪರಿವರ್ತಿಸುತ್ತದೆ ಮತ್ತು ಅದಕ್ಕಾಗಿ ವೈಜ್ಞಾನಿಕ ಕೃಷಿ ವಿಧಾನಗಳನ್ನು ಬಳಸಲಾಗುತ್ತದೆ.

ಸುಸ್ಥಿರ ಗಣಿಗಾರಿಕೆ ಉಪಕ್ರಮಗಳಿಗೆ ಅನುಗುಣವಾಗಿ  ಎನ್‌ಎಲ್‌ಸಿಎಲ್‌ನಿಂದ ಮಳೆ ನೀರು ಕೊಯ್ಲುಮಾಡಲು 104 ಹೆಕ್ಟೇರ್‌ಗಳಲ್ಲಿಐವತ್ತೆರಡು ಜಲಮೂಲಗಳನ್ನು ರಚಿಸಲಾಗಿದೆ. ಬೋಟಿಂಗ್‌ ಸೌಲಭ್ಯದೊಂದಿಗೆ ಪರಿಸರ ಪ್ರವಾಸೋದ್ಯಮ ಉದ್ಯಾನವನ, ವಿವಿಧ ಪಕ್ಷಿಗಳನ್ನು ಹೊಂದಿರುವ ಮಿನಿ ಮೃಗಾಲಯವು ಇತರ ಕೆಲವು ಮುಖ್ಯಾಂಶಗಳು. ಎನ್‌ಎಲ್‌ಸಿಎಲ್‌ನ ನಿರಂತರ ಪರಿಸರ ಸ್ನೇಹಿ ಉಪಕ್ರಮಗಳೊಂದಿಗೆ, ಈ ಪ್ರದೇಶವು ಹೆಚ್ಚಿನ ಸಂಖ್ಯೆಯ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ.

****


(Release ID: 1804949) Visitor Counter : 211