ನೌಕಾ ಸಚಿವಾಲಯ
azadi ka amrit mahotsav

ಬ್ರಹ್ಮಪುತ್ರ (ಎನ್ ಡಬ್ಲ್ಯೂ2) ನದಿ ಇಂಡೋ ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗದ ಮೂಲಕ ಗಂಗಾ (ಎನ್ ಡಬ್ಲ್ಯೂ1) ನದಿಯೊಂದಿಗೆ ಸಂಪರ್ಕವನ್ನು ಪಡೆಯುತ್ತದೆ; ಪಾಟ್ನಾದಿಂದ ಆಹಾರ ಧಾನ್ಯಗಳನ್ನು ಸಾಗಿಸುವ ಸರಕು ಹಡಗು ಪಾಂಡುವಿನಲ್ಲಿ ನಿಂತಿದೆ


ಅಸ್ಸಾಂನಲ್ಲಿ ಸರಕು ಸಾಗಣೆಯ ಹೊಸ ಯುಗವನ್ನು ಪ್ರಾರಂಭಿಸಲು  ಎನ್ ಡಬ್ಲ್ಯೂ1 ಮತ್ತು ಎನ್ ಡಬ್ಲ್ಯೂ2ನಡುವೆ ಐ ಡಬ್ಲ್ಯೂಎ ಐ ನಿಂದ ನಿಗದಿತ ನೌಕಾಯಾನದ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ

ಐಬಿಆರ್‌ಪಿಯಲ್ಲಿ ಸಿರಾಜ್‌ಗಂಜ್-ದೈಖೋವಾ ಮತ್ತು ಅಶುಗಂಜ್-ಝಕಿಗಂಜ್ ಅಭಿವೃದ್ಧಿಪಡಿಸಲು ರೂ 305.84 ಕೋಟಿ ಹೂಡಿಕೆ ಮಾಡಲಾಗಿದೆ

ಮೊದಲ ಬಾರಿಗೆ ನಾಲ್ಕು ಸರಕು ಹಡಗುಗಳು ಆಹಾರ ಧಾನ್ಯಗಳು ಮತ್ತು ಟಿಎಮ್ಟಿ ಬಾರ್ಗಳನ್ನು ಸಾಗಿಸುತ್ತಿವೆ

Posted On: 06 MAR 2022 5:19PM by PIB Bengaluru

ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಇಂದು ಗುವಾಹಟಿಯಲ್ಲಿ ಪಾಟ್ನಾದಿಂದ ಬಾಂಗ್ಲಾದೇಶದ ಮೂಲಕ ಪಾಂಡುವಿಗೆ ಮೊದಲ ಸಮುದ್ರಯಾನದಿಂದ ಬಂದ ಆಹಾರ ಧಾನ್ಯಗಳನ್ನು ಸ್ವೀಕರಿಸಿದರು. ಅಸ್ಸಾಂನ ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ ಮತ್ತು ಗುವಾಹಟಿಯ ಲೋಕಸಭೆಯ ಸಂಸದರಾದ ರಾಣಿ ಓಜಾ ಅವರು ಸ್ವಯಂ ಚಾಲಿತ ನೌಕೆ ಎಂವಿ ಲಾಲ್ ಬಹದ್ದೂರ್ ಶಾಸ್ತ್ರಿಯನ್ನು ಸ್ವಾಗತಿಸಲು ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರದ (ಐಡಬ್ಲ್ಯುಎಐ) ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ ಅವರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಭಾರತೀಯ ಆಹಾರ ನಿಗಮಕ್ಕೆ 200 ಮೆಟ್ರಿಕ್ ಟನ್  ಆಹಾರಧಾನ್ಯಗಳು ಪಾಟ್ನಾದಿಂದ ಬಾಂಗ್ಲಾದೇಶದ ಮೂಲಕ ಪಾಂಡುವಿಗೆ ಮೊದಲ ಪ್ರಾಯೋಗಿಕ ಪ್ರಯಾಣವನ್ನು ಪೂರ್ಣಗೊಳಿಸಿದವು. ಐಡಬ್ಲ್ಯುಎಐ ಅಸ್ಸಾಂ ಮತ್ತು ಈಶಾನ್ಯ ಭಾರತಕ್ಕೆ ಒಳನಾಡಿನ ಜಲ ಸಾರಿಗೆಯ ಹೊಸ ಯುಗವನ್ನು ಪ್ರಾರಂಭಿಸುವ ಮೂಲಕ ಎನ್ ಡಬ್ಲ್ಯೂ1 ಮತ್ತು ಎನ್ ಡಬ್ಲ್ಯೂ2ರ ನಡುವೆ ಸ್ಥಿರ ವೇಳಾಪಟ್ಟಿಯ ನೌಕಾಯಾನವನ್ನು ನಡೆಸಲು ಯೋಜಿಸುತ್ತಿದೆ.

ನೌಕೆಯು ಪಾಟ್ನಾದಿಂದ ರಾಷ್ಟ್ರೀಯ ಜಲಮಾರ್ಗ-1 (ಗಂಗಾ ನದಿ) ರಲ್ಲಿ ತನ್ನ ನೌಕಾಯಾನವನ್ನು ಪ್ರಾರಂಭಿಸಿತು ಮತ್ತು ಭಾಗಲ್ಪುರ್, ಮಣಿಹಾರಿ, ಸಾಹಿಬ್‌ಗಂಜ್, ಫರಕ್ಕಾ, ತ್ರಿಬೇನಿ, ಕೋಲ್ಕತ್ತಾ, ಹಲ್ದಿಯಾ, ಹೇಮ್‌ನಗರ ಮೂಲಕ ಹಾದುಹೋಯಿತು; ಇಂಡೋ ಬಾಂಗ್ಲಾದೇಶ ಪ್ರೋಟೋಕಾಲ್ (ಐಬಿಕಪಿ) ಮಾರ್ಗವು ಖುಲ್ನಾ, ನಾರಾಯಣಗಂಜ್, ಸಿರಾಜ್‌ಗಂಜ್, ಚಿಲ್ಮರಿ ಮತ್ತು ರಾಷ್ಟ್ರೀಯ ಜಲಮಾರ್ಗ-2 ಮೂಲಕ ಧುಬ್ರಿ ಮತ್ತು ಜೋಗಿಘೋಪಾ ಮೂಲಕ 2,350 ಕಿ.ಮೀ. ಸರಕು ಸಾಗಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿರುವ ಈ ಅದ್ಭುತ ಆರಂಭವನ್ನು ಗಣ್ಯರು ಸ್ವಾಗತಿಸಿದರು. ಕಲ್ಪನಾ ಚಾವ್ಲಾ ಮತ್ತು ಎಪಿಜೆ ಅಬ್ದುಲ್ ಕಲಾಂ ಎಂಬ ಎರಡು ನಾಡದೋಣಿಗಳೊಂದಿಗೆ ಮತ್ತೊಂದು ನೌಕೆ ಎಂವಿ ರಾಮ್ ಪ್ರಸಾದ್ ಬಿಸ್ಮಿಲ್ ಫೆ.17 ರಂದು ಹಲ್ದಿಯಾದಿಂದ ಯಾನ ಆರಂಭಿಸಿ ಪಾಂಡುವಿಗೆ ತೆರಳುತ್ತಿದೆ. ನೌಕೆಯು 1800 ಮೆಟ್ರಿಕ್ ಟನ್ ಟಾಟಾ ಸ್ಟೀಲ್ ಅನ್ನು ಹೊತ್ತೊಯ್ದು ಈಗಾಗಲೇ ಧುಬ್ರಿಯಲ್ಲಿ ಬಾಂಗ್ಲಾದೇಶದ ಗಡಿಯನ್ನು ತಲುಪಿದೆ. ನುಮಾಲಿಗಢ್ ಜೈವಿಕ-ಸಂಸ್ಕರಣಾಗಾರದ ಒಡಿಸಿ (ಓವರ್ ಡೈಮೆನ್ಷನಲ್ ಕಾರ್ಗೋ, 252 ಮೆ.ಟ) ಫೆಬ್ರವರಿ 15 ರಂದು ಹಲ್ದಿಯಾದಿಂದ ಐಡಬ್ಲ್ಯುಟಿ  ಮೂಲಕ ಐಬಿಪಿ ಮಾರ್ಗವಾಗಿ ಸಿಲ್ಘಾಟ್ ತಲುಪಿತು. ಮತ್ತೊಂದು ಒಡಿಸಿ (250ಮೆ.ಟ) ಸರಕು ಸಿಲ್ಘಾಟ್‌ಗೆ ಹೋಗುವ ದಾರಿಯಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಇಂಡೋ ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗ (ಐಬಿಆರ್‌ಪಿ) ಮೂಲಕ ಹಡಗುಗಳ ಮೂಲಕ ಸರಕು ಸಾಗಣೆಯ ಪ್ರಾರಂಭವು ಈಶಾನ್ಯದ ಇಡೀ ಪ್ರದೇಶದ ಆರ್ಥಿಕ ಸಮೃದ್ಧಿಯ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ದೂರದೃಷ್ಟಿ ಮತ್ತು ನಮ್ಮ ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಡಂಗೋರಿಯಾ ಅವರ ಶ್ರಮವು ಒಳನಾಡು ಜಲಸಾರಿಗೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.

ಈ ಮಹತ್ವದ ಕ್ಷಣದ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, “ಇಂದು ಅಸ್ಸಾಂನಲ್ಲಿ ಒಳನಾಡು ಜಲ ಸಾರಿಗೆಯ ಹೊಸ ಯುಗ ಆರಂಭವಾಗಿದೆ. ಇದು ವ್ಯಾಪಾರ ಸಮುದಾಯಕ್ಕೆ ಕಾರ್ಯಸಾಧ್ಯವಾದ, ಆರ್ಥಿಕ ಮತ್ತು ಪರಿಸರ ಪರ್ಯಾಯವನ್ನು ಒದಗಿಸಲಿದೆ. ತಡೆರಹಿತ ಸರಕು ಸಾಗಣೆಯು ಅಸ್ಸಾಂನ ಜನರ ಈಡೇರದ ಆಸೆಗಳು ಮತ್ತು ಆಕಾಂಕ್ಷೆಗಳ ಪ್ರಯಾಣವಾಗಿದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಈಶಾನ್ಯ ಪ್ರದೇಶವು ಅಷ್ಟಲಕ್ಷ್ಮಿಯ ಮೌಲ್ಯವನ್ನು ಅನ್ಲಾಕ್ ಮಾಡಲು ಸಿದ್ಧವಾಗಿದೆ. ಜಲಮಾರ್ಗಗಳ ಮೂಲಕ ಸರಕು ಸಾಗಣೆಯು ಭಾರತದ ಈಶಾನ್ಯವನ್ನು ಬೆಳವಣಿಗೆಯ ಎಂಜಿನ್‌ನಂತೆ ಶಕ್ತಿಯುತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ನಮಗೆ ವಿಶ್ವಾಸವಿದೆ” ಎಂದು ಹೇಳಿದರು

ಬಾಂಗ್ಲಾದೇಶದ ಮೂಲಕ ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ನಿರಂತರ ಪ್ರಯತ್ನವು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯ ಅಡಿಯಲ್ಲಿ ನೆರವೇರಿತು. ಈಶಾನ್ಯವು ನಿಧಾನವಾಗಿ ಸಂಪರ್ಕ ಕೇಂದ್ರವಾಗಿ ಬದಲಾಗುತ್ತದೆ ಎಂದು ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಗತಿ ಶಕ್ತಿಯ ಅಡಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಬ್ರಹ್ಮಪುತ್ರದ ಮೇಲೆ ಸರಕುಗಳ ತ್ವರಿತ ಚಲನೆಯನ್ನು ಹೆಚ್ಚಿಸುವ ಸಲುವಾಗಿ ಯೋಜಿಸಲಾಗಿದೆ.

ಐಡಬ್ಲ್ಯುಎಐ ಈ ಮಾರ್ಗಗಳಲ್ಲಿ ನಿಯಮಿತ ನಿಗದಿತ ಸೇವೆಯನ್ನು ನಡೆಸಲು ಯೋಜಿಸುತ್ತಿದೆ. ನಾವು ಪ್ರದೇಶದಲ್ಲಿ ಸರಕು ವ್ಯಾಪಾರದಿಂದ ಮೌಲ್ಯವನ್ನು ಅನ್ಲಾಕ್ ಮಾಡಿದಾಗ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಒಳನಾಡಿನ ಜಲ ಸಾರಿಗೆ ಮತ್ತು ವ್ಯಾಪಾರದ (PIWTT) ಪ್ರೋಟೋಕಾಲ್ ಅತ್ಯುತ್ತಮವಾಗಿ ಪ್ರಯೋಜನಕಾರಿಯಾಗಿದೆ. ಸಂಚಾರವನ್ನು ಸುಧಾರಿಸಲು, ಐಬಿಪಿ ಮಾರ್ಗಗಳ ಎರಡು ವಿಸ್ತರಣೆಗಳು, ಅಂದರೆ, ಸಿರಾಜ್‌ಗಂಜ್-ದೈಖೋವಾ ಮತ್ತು ಅಶುಗಂಜ್-ಝಕಿಗಂಜ್ ರೂ. 305.84 ಕೋಟಿ ವೆಚ್ಚದಲ್ಲಿ 80:20 ಪಾಲಿನ ಆಧಾರದ ಮೇಲೆ (80% ಭಾರತ ಮತ್ತು 20% ಬಾಂಗ್ಲಾದೇಶ ಭರಿಸುತ್ತಿದೆ) ಅಭಿವೃದ್ಧಿಪಡಿಸಲಾಗುತ್ತಿದೆ. ಈ ವಿಸ್ತರಣೆಗಳ ಅಭಿವೃದ್ಧಿಯು  ಐಬಿಪಿ ಮಾರ್ಗದ ಮೂಲಕ ಎನ್ಇಆರ್.ಗೆ ತಡೆರಹಿತ ನೌಕಾಯಾನಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ. ಏಳು ವರ್ಷಗಳ ಅವಧಿಗೆ (2019 ರಿಂದ 2026 ರವರೆಗೆ) ಅಗತ್ಯವಿರುವ ಜ್ಞಾನವನ್ನು ಒದಗಿಸಲು ಮತ್ತು ನಿರ್ವಹಿಸಲು ಎರಡು ವಿಸ್ತರಣೆಗಳ ಮೇಲೆ ಹೂಳೆತ್ತುವ ಒಪ್ಪಂದಗಳು ನಡೆಯುತ್ತಿವೆ. ಒಮ್ಮೆ ಐಬಿಪಿ ಮಾರ್ಗ ಸಂ. 5 ಮತ್ತು 6 ಭಾರತದ ಫರಕ್ಕಾ ಬಳಿಯ ಮೈಯಾದಿಂದ ಬಾಂಗ್ಲಾದೇಶದ ಅರಿಚಾದವರೆಗೆ ಪೂರ್ಣಗೊಂಡರೆ, ಎನ್ ಡಬ್ಲ್ಯೂ1ನಿಂದ ಎನ್ ಡಬ್ಲ್ಯೂ2ವರೆಗೆ(ಈಶಾನ್ಯ ಪ್ರದೇಶ) ಸಂಪರ್ಕಿಸುವ ಐಡಬ್ಲ್ಯುಟಿ ಅಂತರವು ಸುಮಾರು 1000 ಕಿಮೀಗಳಷ್ಟು ಕಡಿಮೆಯಾಗುತ್ತದೆ, ಇದು ಸಮಯ ಮತ್ತು ವೆಚ್ಚವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

ಪ್ರಧಾನ ಮಂತ್ರಿಯವರ “ಆಕ್ಟ್ ಈಸ್ಟ್” ನೀತಿಗೆ ಅನುಗುಣವಾಗಿ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು, ಒಳನಾಡಿನ ಜಲಮಾರ್ಗಗಳ ಮೂಲಕ ರಾಷ್ಟ್ರೀಯ ಜಲಮಾರ್ಗಗಳು-1, ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗ, ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಮತ್ತು ಎನ್ ಡಬ್ಲ್ಯೂ 2 ಯೋಜನೆಯನ್ನು ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರದ (ಐಡಬ್ಲ್ಯುಎಐ) ಮೂಲಕ ಕೈಗೆತ್ತಿಕೊಂಡಿದೆ. ಈ ಕ್ರಮಗಳು ಜಲಮಾರ್ಗಗಳ ಮೂಲಕ ಈಶಾನ್ಯ ಪ್ರದೇಶದೊಂದಿಗೆ (ಎನ್ ಇ ಆರ್) ಸಂಪರ್ಕವನ್ನು ಸುಧಾರಿಸುತ್ತದೆ.

2000 ಟನ್‌ಗಳಷ್ಟು ಹಡಗುಗಳ ಸುರಕ್ಷಿತ ಮತ್ತು ಸುಸ್ಥಿರ ಚಲನೆಗಾಗಿ ಎನ್ ಡಬ್ಲ್ಯೂ1 (ಗಂಗಾ ನದಿ) ಸಾಮರ್ಥ್ಯ ವೃದ್ಧಿಗಾಗಿ ಸುಮಾರು 4600 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಮಹತ್ವಾಕಾಂಕ್ಷೆಯ ಜಲಮಾರ್ಗ ವಿಕಾಸ್ ಯೋಜನೆಯನ್ನು (ಜೆಎಂವಿಪಿ) ಸರ್ಕಾರವು ಕೈಗೆತ್ತಿಕೊಂಡಿದೆ. 

ಈ ಐತಿಹಾಸಿಕ ಸಾಧನೆಯು ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ಬೆಳವಣಿಗೆಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ. ಜಲಮಾರ್ಗವಿಲ್ಲದಿರುವುದ ದೀರ್ಘಕಾಲದವರೆಗೆ ಈ ಪ್ರದೇಶದಲ್ಲಿ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ಜಲಮಾರ್ಗಗಳು ಈ ಪ್ರದೇಶದ ಪ್ರಗತಿಯ ಹಾದಿಯಲ್ಲಿನ ಈ ಭೌಗೋಳಿಕ ಅಡಚಣೆಯನ್ನು ತೆಗೆದುಹಾಕುವುದಲ್ಲದೆ, ಈ ಪ್ರದೇಶದ ವ್ಯವಹಾರಗಳು ಮತ್ತು ಜನರಿಗೆ ಆರ್ಥಿಕ, ತ್ವರಿತ ಮತ್ತು ಅನುಕೂಲಕರ ಸಾರಿಗೆಯನ್ನು ಒದಗಿಸುತ್ತದೆ.

ಸಭೆಯಲ್ಲಿ ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರದ ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನ ಅಧ್ಯಕ್ಷ ವಿನಿತ್ ಕುಮಾರ್ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

***



(Release ID: 1803431) Visitor Counter : 202