ಸಂಸ್ಕೃತಿ ಸಚಿವಾಲಯ

`ವಿಜ್ಞಾನ ಸರ್ವತ್ರ ಪೂಜ್ಯತೆ' ಅಭಿಯಾನದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ 75 ವರ್ಷಗಳ ಸಾಧನೆಗಳನ್ನು ಚಿತ್ರಿಸುವ ಸ್ಮರಣಾರ್ಥ ಪ್ರದರ್ಶನಗಳನ್ನು ದೇಶಾದ್ಯಂತ 75 ಸ್ಥಳಗಳಲ್ಲಿ ಆಯೋಜಿಸಲಿರುವ ಸಂಸ್ಕೃತಿ ಸಚಿವಾಲಯ


ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಡಾ. ಜಿತೇಂದ್ರ ಸಿಂಗ್ ಅವರು ನಾಳೆ ಒಂದು ವಾರದ 'ವಿಜ್ಞಾನ ಸರ್ವತ್ರ ಪೂಜ್ಯತೆ' ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ

ʻಧಾರಾ- ಭಾರತೀಯ ಜ್ಞಾನ ವ್ಯವಸ್ಥೆಗೆ ಒಂದು ಪ್ರಗಾಥʼ ಸರಣಿ ಉಪನ್ಯಾಸ ಪ್ರದರ್ಶನಗಳನ್ನು ಘೋಷಿಸಲಾಗಿದೆ

Posted On: 21 FEB 2022 5:39PM by PIB Bengaluru

ʻವಿಜ್ಞಾನ ಸರ್ವತ್ರ ಪೂಜ್ಯತೆ' ಅಭಿಯಾನದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ 75 ವರ್ಷಗಳ ಸಾಧನೆಗಳನ್ನು ಚಿತ್ರಿಸುವ ಸ್ಮರಣಾರ್ಥ ಪ್ರದರ್ಶನಗಳನ್ನು ಸಂಸ್ಕೃತಿ ಸಚಿವಾಲಯವು ದೇಶಾದ್ಯಂತ 75 ಸ್ಥಳಗಳಲ್ಲಿ ಆಯೋಜಿಸಲಿದೆ. ʻವಿಜ್ಞಾನ ಸರ್ವತ್ರ ಪೂಜ್ಯತೆʼ - ಇದು 2022 ಫೆಬ್ರವರಿ 22ರಿಂದ 28ರವರೆಗೆ ʻಆಜಾದಿ ಕಾ ಅಮೃತ್ ಮಹೋತ್ಸವʼ ಸಂದರ್ಭದಲ್ಲಿ ಆಚರಿಸಲಾಗುವ ʻಎಸ್‌ಸಿಒಪಿಇʼ (ವಿಜ್ಞಾನ ಸಂವಹನ ಜನಪ್ರಿಯಗೊಳಿಸುವುದರ ವಿಸ್ತರಣೆ) ಸಾಪ್ತಾಹಿಕ ಉತ್ಸವವಾಗಿದೆ. 'ವಿಜ್ಞಾನ ಸರ್ವತ್ರ ಪೂಜ್ಯತೆಅಭಿಯಾನಕ್ಕೆ ನಾಳೆ ನವದೆಹಲಿಯ ವಿಜ್ಞಾನ ಭವನದಲ್ಲಿ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಭಾರತ ವಲಯದ ಅಭಿವೃದ್ಧಿ ಖಾತೆ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ; ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಹಾಯಕ ಸಚಿವ(ಸ್ವತಂತ್ರ ಉಸ್ತುವಾರಿ); ಪಿಎಂಒ ಸಹಾಯಕ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ ಖಾತೆ ಸಹಾಯಕ ಸಚಿವ; ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಚಾಲನೆ ನೀಡಲಿದ್ದಾರೆ.

ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯು  ʻನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂಸ್ʼ(ಎನ್‌ಸಿಎಸ್‌ಎಂ) ವಿಜ್ಞಾನ ಸರ್ವತ್ರ ಪೂಜ್ಯತೆʼ ಅಭಿಯಾನದಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿಯಾಗಿ '75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಧನೆಗಳು' ಎಂಬ ಸ್ಮರಣಾರ್ಥ ಪ್ರದರ್ಶನಗಳನ್ನು ಆಯೋಜಿಸಲು ಇದು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ʻ ವಿಜ್ಞಾನ ಪ್ರಸಾರ್ʼ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ. ಒಂದೇ ಆಡಳಿತಾತ್ಮಕ ಆಶ್ರಯದ ಅಡಿಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವಿಜ್ಞಾನ ಕೇಂದ್ರಗಳು ಮತ್ತು ವಸ್ತುಸಂಗ್ರಹಾಲಯಗಳ ಜಾಲವನ್ನು ʻಎನ್‌ಸಿಎಸ್‌ಎಂʼ ಹೊಂದಿದೆ.

ಸಂಸ್ಕೃತಿ ಸಚಿವಾಲಯವು ʻಧಾರಾʼ - ಭಾರತೀಯ ಜ್ಞಾನ ವ್ಯವಸ್ಥೆಗೆ ಒಂದು ಪ್ರಗಾಥʼ ಎಂಬ ಸರಣಿ ಉಪನ್ಯಾಸ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಸರಣಿಯ ಅಡಿಯಲ್ಲಿ ಮೊದಲ ಕಾರ್ಯಕ್ರಮವೆಂದರೆ 'ಯುಗಯುಗಳಿಂದ ಗಣಿತಕ್ಕೆ ಭಾರತದ ಕೊಡುಗೆ'. ಇದು ಪ್ರಾಚೀನ ಗಣಿತವೆನಿಸಿದʻಸುಲಭಸೂತ್ರ ಜ್ಯಾಮಿತಿʼ, ʻಪಿಂಗಳನ ಚಂದಾಸ್-ಶಾಸ್ತ್ರʼ ಮತ್ತು ʻಶಾಸ್ತ್ರೀಯ ಅವಧಿ - ಭಾರತೀಯ ಬೀಜಗಣಿತದ ಹೆಗ್ಗುರುತುಗಳುʼ, ʻಜ್ಯೋತ್‌ಪಟ್ಟಿʼ, ʻಭಾರತದಲ್ಲಿ ತ್ರಿಕೋನಮಿತಿʼ, ʻಭಾರತೀಯ ಬೀಜಗಣಿತ ಮತ್ತು ಕೇರಳ ಶಾಲೆಯಲ್ಲಿ ಅನಿರ್ದಿಷ್ಟ ಸಮೀಕರಣಗಳು: ಮಾಧವ ಇನ್ಫಿನಿಟ್ ಸೀರೀಸ್ ಫಾರ್ πʼ, ʻಕ್ಯಾಲ್ಕುಲಸ್ ಆಫ್ ಟ್ರೈಗೊನೊಮೆಟ್ರಿಕ್ ಫಂಕ್ಷನ್ಸ್ʼ ಇವುಗಳನ್ನು ಒಳಗೊಂಡಿದೆ. ಪ್ರಾಚೀನ ಭಾರತದಲ್ಲಿ ಆರ್ಥಿಕ ಚಿಂತನೆ, ಲೋಹಶಾಸ್ತ್ರ, ಕೃಷಿ ಇತ್ಯಾದಿಗಳ ವಿಚಾರವಾಗಿಯೂ ಇದೇ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಕಾಶ್ಮೀರಿ, ಡೋಗ್ರಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು, ತೆಲಗು, ಒಡಿಯಾ, ಬಂಗಾಳಿ, ಅಸ್ಸಾಮಿ, ನೇಪಾಳಿ, ಮೈಥಿಲಿ ಮತ್ತು ಮಣಿಪುರ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಮತ್ತು ಭಾರತದಲ್ಲಿ ವೈಜ್ಞಾನಿಕ ಬೆಳವಣಿಗೆಗಳು/ ಸಾಧನೆಗಳ ಬಗ್ಗೆ 75 ಚಲನಚಿತ್ರಗಳ ಪ್ರದರ್ಶನವನ್ನೂ ಒಳಗೊಂಡಿರಲಿದೆ.

ಅಲ್ಲದೆ, ಸಂಸ್ಕೃತಿ ಸಚಿವಾಲಯವು ಸರಕಾರದ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಜಂಟಿಯಾಗಿ, ರಾಜ್ಯಗಳ ಮಟ್ಟದ ಸಂಸ್ಥೆಗಳ ನಿಕಟ ಪಾಲುದಾರಿಕೆಯಲ್ಲಿ ʻವಿಜ್ಞಾನ ಸರ್ವತ್ರ ಪೂಜ್ಯತೆʼಯನ್ನು ತಳಮಟ್ಟದಲ್ಲಿ ಆಚರಿಸುತ್ತಿದೆ. ಕಾರ್ಯಕ್ರಮವನ್ನು ಭಾರತದ ಯುವಕರಿಗೆ ಸ್ಫೂರ್ತಿ ತುಂಬಲು ಮತ್ತು ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸಲು ಅವರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಲೆಹ್ ಮತ್ತು ಶ್ರೀನಗರದಿಂದ ಲಕ್ಷದ್ವೀಪದ ಪೋರ್ಟ್ ಬ್ಲೇರ್ ಮತ್ತು ಕವರಟ್ಟಿ ದ್ವೀಪಗಳವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಅಹಮದಾಬಾದ್ ಮತ್ತು ದಮನ್‌ನಿಂದ ಇಟಾನಗರದವರೆಗೆ, ಕೊಹಿಮಾ ಮತ್ತು ಐಜ್ವಾಲ್ ವರೆಗೆ (ರಾಷ್ಟ್ರ ರಾಜಧಾನಿ ದೆಹಲಿಯನ್ನು ಹೊರತುಪಡಿಸಿ) ದೇಶದ ಉದ್ದಗಲಕ್ಕೂ 75 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ʻಅಮೃತ್ ಮಹೋತ್ಸವʼ ಪ್ರತೀಕವಾಗಿ ನಡೆಯಲಿದ್ದು, ಅನೇಕ ಸಚಿವಾಲಯಗಳು, ಇಲಾಖೆಗಳು, ಪ್ರಾದೇಶಿಕ ಮಧ್ಯಸ್ಥಗಾರರು ಮತ್ತು ಸಾಮಾನ್ಯರನ್ನು ಒಟ್ಟುಗೂಡಿಸುವ ಅದ್ಭುತ ಉದಾಹರಣೆಯಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://vigyanpujyate.in/locations

ʻವಿಜ್ಞಾನ ಸರ್ವತ್ರ ಪೂಜ್ಯತೆʼ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ: https://vigyanpujyate.in/

ಪತ್ರಿಕಾ ಪ್ರಕಟಣೆ ಲಿಂಕ್: https://www.pib.gov.in/PressReleaseIframePage.aspx?PRID=1799860

***



(Release ID: 1800458) Visitor Counter : 185