ಉಕ್ಕು ಸಚಿವಾಲಯ
ಕೆ.ಐ.ಓ.ಸಿ.ಎಲ್.ನ ಕೋಕ್ ಓವನ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್
Posted On:
20 FEB 2022 4:53PM by PIB Bengaluru
ಕೇಂದ್ರ ಉಕ್ಕು ಖಾತೆ ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರಿಂದು ಮಂಗಳೂರಿನ ಪಣಂಬೂರಿನ ಕುದುರೇಮುಖ ಕಬ್ಬಿಣದ ಅದಿರು ಕಂಪನಿ ನಿಯಮಿತ (ಕೆ.ಐ.ಓ.ಸಿ.ಎಲ್.)ದ ಬ್ಲಾಸ್ಟ್ ಫರ್ನೆಸ್ ಘಟಕಕ್ಕೆ ಭೇಟಿ ನೀಡಿ, ಕೋಕ್ ಓವನ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಉದ್ದೇಶಿತ ಯೋಜನೆಯು 836.90 ಕೋಟಿ ರೂ.ಗಳ ವೆಚ್ಚದಲ್ಲಿ ಕ್ಯಾಪೆಕ್ಸ್ ನ ಬ್ಲಾಸ್ಟ್ ಫರ್ನೇಸ್ ಘಟಕದಲ್ಲಿ ಬ್ಯಾಕ್ ವರ್ಡ್ ಇಂಟಿಗ್ರೇಷನ್ ಯೋಜನೆ ಅಡಿಯಲ್ಲಿ 1.80 ಎಲ್.ಟಿ.ಪಿ.ಎ. ಕೋಕೇ ಒವನ್ ಸ್ಥಾವರ ಮತ್ತು ಫಾರ್ವರ್ಡ್ ಅಡಿಯಲ್ಲಿ 2.0 ಎಲ್.ಟಿ.ಪಿ.ಎ ಡಕ್ಟೈಲ್ ಐರನ್ ಸ್ಪನ್ ಪೈಪ್ ಸ್ಥಾವರ ಸ್ಥಾಪಿಸುವುದಾಗಿದ್ದು, ಇದು ಮುಖ್ಯ ತಾಂತ್ರಿಕ ಪ್ಯಾಕೇಜ್ ಪೂರೈಕೆದಾರರ ಬೇಡಿಕೆ ಸಲ್ಲಿಸಿದ ದಿನಾಂಕದಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ.
ಕೆ.ಐ.ಓ.ಸಿ.ಎಲ್.ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಟಿ. ಸಾಮಿನಾಥನ್, ಉಕ್ಕು ಸಚಿವಾಲಯದ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ, ಈ ಮಿನಿ ರತ್ನ ಸಿಪಿಎಸ್.ಯು ದೇಶದಲ್ಲಿ ಗಣಿಗಾರಿಕೆ ಮತ್ತು ಪೆಲೆಟೈಸೇಶನ್ ಉದ್ಯಮದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತನ್ನ ಗತ ವೈಭವವ ಮತ್ತು ಹೊಳಪನ್ನು ಮರಳಿ ಪಡೆಯಲು ಸಜ್ಜಾಗಿದೆ ಎಂದು ಹೇಳಿದರು.
ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಟಿ. ಶ್ರೀನಿವಾರ್, ಸಿ.ಎಂ.ಡಿ. ಶ್ರೀ ಟಿ. ಸಾಮಿನಾಥನ್, ಹಣಕಾಸು ವಿಭಾಗದ ನಿರ್ದೇಶಕ ಶ್ರೀ ಎಸ್.ಕೆ. ಗೋರೈ, ಉತ್ಪಾದನೆ ಮತ್ತು ಯೋಜನೆಗಳ ವಿಭಾಗದ ನಿರ್ದೇಶಕ ಶ್ರೀ ಕೆ.ವಿ. ಭಾಸ್ಕರ ರೆಡ್ಡಿ ಮತ್ತು ಕೆ.ಐ.ಓ.ಸಿ.ಎಲ್.ನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಂಪನಿ ಕೈಗೊಂಡಿರುವ ಮರು ಅರಣ್ಯೀಕರಣಕ್ಕಾಗಿ ಕುದುರೇಮುಖ ಸೌಲಭ್ಯ ಮತ್ತು ಲಕ್ಯಾ ಅಣೆಕಟ್ಟೆಗೆ ಸಚಿವರು ನಾಳೆ ಭೇಟಿ ನೀಡಲಿದ್ದಾರೆ.
***
(Release ID: 1799876)
Visitor Counter : 267