ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತವು ವಿಶ್ವದ ಆದ್ಯತೆಯ ಸ್ಟಾರ್ಟ್-ಅಪ್ ತಾಣವಾಗಿ ಹೊರಹೊಮ್ಮುತ್ತಿದೆ : ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ಸಚಿವರು ಭಾರತದ ಮೊದಲ ಟೆಕ್ ಸ್ಟಾರ್ಟ್-ಅಪ್ (ನವೋದ್ಯಮ) ಸಮ್ಮೇಳನ ಮತ್ತು ಪ್ರಶಸ್ತಿಗಳ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು

ಸ್ಟಾರ್ಟ್-ಅಪ್ ಸಂಸ್ಕೃತಿಯು ಭಾರತದ ಬಿ-ಟೌನ್ಗಳಿಗೆ ಹರಡಬೇಕು, ಏಕೆಂದರೆ ಇದು ಈಗ ಹೆಚ್ಚಾಗಿ ಬೆಂಗಳೂರು, ಹೈದರಾಬಾದ್ ಮತ್ತು ಇತರ ದೊಡ್ಡ ನಗರಗಳಿಗೆ ಸೀಮಿತವಾಗಿದೆ: ಡಾ ಜಿತೇಂದ್ರ ಸಿಂಗ್

Posted On: 18 FEB 2022 5:05PM by PIB Bengaluru

ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಭೂ ವಿಜ್ಞಾನ; ಪ್ರಧಾನ ಮಂತ್ರಿ ಕಾರ್ಯಾಲಯ ರಾಜ್ಯ ಸಚಿವ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಒದಗಿಸಿದ ವ್ಯವಹಾರ ಮಾಡಲು ಸುಲಭ ಮತ್ತು ನಿಯಂತ್ರಕ ವಾತಾವರಣದ ಜೊತೆಗೆ ಅದರ ವ್ಯಾಪಕವಾದ ಇನ್ನೂ ಅನ್ವೇಷಿಸ ಬಹುದಾದ ಸಾಮರ್ಥ್ಯದಿಂದಾಗಿ ವಿಶ್ವದ ಆದ್ಯತೆಯ ಸ್ಟಾರ್ಟ್-ಅಪ್ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು ಇಲ್ಲಿ "ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟ್-ಅಪ್ ಕಾನ್ಕ್ಲೇವ್-2022" ಮತ್ತು ಪ್ರಶಸ್ತಿಗಳ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. 2025 ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸ್ಟಾರ್ಟ್-ಅಪ್ಗಳ ದೃಢವಾದ ಪರಿಸರ ವ್ಯವಸ್ಥೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

2016 ರಲ್ಲಿಯೇ ಪ್ರಧಾನಿ ಮೋದಿ ಅವರು ಸ್ಟಾರ್ಟ್-ಅಪ್ (ನವೋದ್ಯಮ) ಉಪಕ್ರಮದ ಬಗ್ಗೆ, ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಅಂತಹ ಹಲವಾರು ದೂರದೃಷ್ಟಿಯ ಉಪಕ್ರಮಗಳ ಬಗ್ಗೆ 2016 ರಲ್ಲಿ ಘೋಷಿಸಿದರು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಒದಗಿಸಿದ ವಿವಿಧ ಯೋಜನೆಗಳು, ಗಮನ ಮತ್ತು ಬೆಂಬಲದ ವ್ಯವಸ್ಥೆಯಿಂದಾಗಿ, 2021 ರಲ್ಲಿ ಭಾರತದಲ್ಲಿ 10,000 ಸ್ಟಾರ್ಟ್-ಅಪ್ಗಳು ನೋಂದಣಿಯಾಗಿವೆ ಎಂದು ಅವರು ಹೇಳಿದರು.  ಭಾರತದಲ್ಲಿ ಈಗ 50,000ಕ್ಕೂ ಹೆಚ್ಚು ಸ್ಟಾರ್ಟ್-ಅಪ್ಗಳು ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸುತ್ತಿವೆ ಎಂದು ಸಚಿವರು ಹೇಳಿದರು. 

2022-23 ರ ಇತ್ತೀಚಿನ ಸಾಮಾನ್ಯ ಬಜೆಟ್ "ವೈಜ್ಞಾನಿಕ ದೃಷ್ಟಿ ಮತ್ತು ಸ್ಟಾರ್ಟ್-ಅಪ್ ಪ್ರೋತ್ಸಾಹಗಳೊಂದಿಗಿನ ಭವಿಷ್ಯದ ಬಜೆಟ್" ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. 75 ಜಿಲ್ಲೆಗಳಲ್ಲಿ ಡಿಜಿಟಲ್ ರೂಪಾಯಿ, ಡಿಜಿಟಲ್ ಬ್ಯಾಂಕಿಂಗ್ ಘಟಕಗಳಂತಹ ನವೀನ ಹೊಸ ಉಪಕ್ರಮಗಳ ಘೋಷಣೆಗಳು, ಡಿಜಿಟಲ್ ವಿಶ್ವವಿದ್ಯಾಲಯ, ಮತ್ತು ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡ್ರೋನ್ ಶಕ್ತಿಗೆ ಸಂಬಂಧಿಸಿದ ಸ್ಟಾರ್ಟ್-ಅಪ್ಗಳು ಸರ್ಕಾರವು ಉತ್ತೇಜಿಸಲು ಬಯಸುವ ಡಿಜಿಟಲ್ ಪುಶ್ ಮತ್ತು ನವೀನ ಪರಿಸರ ವ್ಯವಸ್ಥೆಯ ಉದಾಹರಣೆಗಳಾಗಿವೆ ಎಂದು ಸಚಿವರು ಹೇಳಿದರು. ಅವರು 2024 ರವರೆಗೆ ಸ್ಟಾರ್ಟ್-ಅಪ್ಗಳಿಗೆ ತೆರಿಗೆ ವಿನಾಯಿತಿ ಮತ್ತು ದೇಶೀಯ ಮತ್ತು ರಫ್ತಿನ ಕ್ಷೇತ್ರಗಳಿಗೆ ಇತರ ಪ್ರೋತ್ಸಾಹಕಗಳು ಭಾರತವನ್ನು ವಿಶ್ವದಲ್ಲಿ ಸ್ಟಾರ್ಟ್-ಅಪ್ಗಳಲ್ಲಿ ಮುನ್ನಡೆ ಸಾಧಿಸಲು ಅನುವು ಮಾಡಿಕೊಡುತ್ತದೆ.

ಸರಕಾರಿ ಸೇವೆಗಳು, ಆರೋಗ್ಯ ರಕ್ಷಣೆ, ಕೃಷಿ, ಹಣಕಾಸು ಸೇವೆಗಳು, ಶಿಕ್ಷಣ, ಚಿಲ್ಲರೆ ವ್ಯಾಪಾರ ಮತ್ತು ಸಾಗಾಣಿಕೆಯಂತಹ ಕ್ಷೇತ್ರಗಳಲ್ಲಿ ಟೆಕ್ ಸ್ಟಾರ್ಟ್ಅಪ್ಗಳಲ್ಲಿನ ಹೂಡಿಕೆಯ ಅವಕಾಶಗಳ ಬೆಳವಣಿಗೆಯು ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತದ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಆದರೂ, ಡೈರಿ, ಟೆಲಿಮೆಡಿಸಿನ್ ಮತ್ತು ಡೀಪ್ ಸೀ ಓಷನ್ ಮಿಷನ್ನಂತಹ ಕ್ಷೇತ್ರಗಳನ್ನು ಸಂಪೂರ್ಣವಾಗಿ  ಮುಟ್ಟಬೇಕು ಎಂದು ಅವರು ಹೇಳಿದರು. ದೇಶೀಯ ಉತ್ಪಾದನೆ, ಉದ್ಯಮ-ನೇತೃತ್ವದ ಸಂಶೋಧನೆ ಮತ್ತು ನುರಿತ ಉದ್ಯೋಗಿಗಳ ಸೃಷ್ಟಿಗೆ ಉತ್ತೇಜನ ನೀಡಲು ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು, ಭಾರತವು ನಾವೀನ್ಯತೆಗಳಿಗೆ ಶೀಘ್ರವಾಗಿ  ಪ್ರಾರಂಭಿಸುವ ನೆಲೆಯಾಗುತ್ತಿದೆ ಮತ್ತು ಭವಿಷ್ಯದ ಪ್ರವೃತ್ತಿಗಳು ಬ್ಲಾಕ್ಚೈನ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆಯಂತಹ ತಂತ್ರಜ್ಞಾನಗಳೊಂದಿಗೆ ಮತ್ತು ಆವಿಷ್ಕರಿಸಲು ಸ್ಟಾರ್ಟ್-ಅಪ್ಗಳಿಗೆ ಅವಕಾಶಗಳನ್ನು ತೋರಿಸುತ್ತವೆ. ಸ್ಟಾರ್ಟ್ಅಪ್ ಸಂಸ್ಕೃತಿಯು ಭಾರತದ ಬಿ-ಟೌನ್ಗಳಿಗೆ ಹರಡಬೇಕು ಎಂದು ಸಚಿವರು ಒತ್ತಿ ಹೇಳಿದರು, ಇದು ಈಗ ಹೆಚ್ಚಾಗಿ ಬೆಂಗಳೂರು, ಹೈದರಾಬಾದ್ ಮತ್ತು ಇತರ ದೊಡ್ಡ ನಗರಗಳಿಗೆ ಸೀಮಿತವಾಗಿದೆ. ಆದಾಗ್ಯೂ, ದೆಹಲಿ, ಜೈಪುರ, ಚಂಡೀಗಢ, ಚೆನ್ನೈ ಮತ್ತು ಜೋಧ್ಪುರದಂತಹ ನಗರಗಳು ಆರ್ಥಿಕ ಮತ್ತು ಸ್ಟಾರ್ಟ್ಅಪ್ ಚಟುವಟಿಕೆಗಳಲ್ಲಿ ಹೆಚ್ಚಳವನ್ನು ಕಂಡಿವೆ ಎನ್ನುವ  ಅಂಶದ ಬಗ್ಗೆ ಅವರು ತೃಪ್ತಿ  ವ್ಯಕ್ತ ಪಡಿಸಿದರು.

ವಿಶ್ವದ ಯಾವುದೇ ಸರ್ಕಾರವು ತನ್ನ ಎಲ್ಲಾ ನಾಗರಿಕರಿಗೆ ಮಾಸಿಕ ಸಂಬಳದ ಉದ್ಯೋಗಗಳನ್ನು ನೀಡಲು ಸಾಧ್ಯವಿಲ್ಲ ಮತ್ತು ಭಾರತವು ಇದಕ್ಕೆ ಹೊರತಾಗಿಲ್ಲ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಮತ್ತೊಂದೆಡೆ, ಭಾರತ ಸರ್ಕಾರವು ನವೋದ್ಯಮ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಮತ್ತು ನವೀನ ಆಲೋಚನೆಗಳ ಪೀಳಿಗೆಗೆ ವೇದಿಕೆಯನ್ನು ಒದಗಿಸುತ್ತದೆ ಮತ್ತು ನವೋದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಮತ್ತು ಬೆಂಬಲಿಸಲು ಇನ್ಕ್ಯುಬೇಟರ್ ಅನ್ನು ಒದಗಿಸುತ್ತದೆ. ಯುವ ಭಾರತೀಯರು ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಅದು ಲಭ್ಯಗೊಳಿಸಿರುವ ವಿವಿಧ ಕೌಶಲ್ಯ-ನಿರ್ಮಾಣ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿದೆ ಎಂದು ಅವರು ಹೇಳಿದರು.

"ಇಂಡಿಯಾ ಫಸ್ಟ್ – ಭಾರತ ಮೊದಲು" ಪರಿಕಲ್ಪನೆಯ ಮೇಲೆ ತಿಳಿಸಿದ ಡಾ ಜಿತೇಂದ್ರ ಸಿಂಗ್, ಕಳೆದ ಕೆಲವು ವರ್ಷಗಳಲ್ಲಿ, ಸಂದರ್ಭಕ್ಕೆ ತಕ್ಕಂತೆ ಭಾರತವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸುವ ದೇಶ ಎಂದು ಸಾಬೀತುಪಡಿಸಿದೆ. ಭಾರತೀಯ ಕೈಗಾರಿಕೆಗಳು ಎದುರಿಸುತ್ತಿರುವ ಡಿಜಿಟಲ್, ಡೇಟಾ (ದತ್ತಾಂಶ) ಮತ್ತು ತಂತ್ರಜ್ಞಾನದ ಅಡೆತಡೆಗಳನ್ನು ಗಮನಿಸಿದ ಅವರು, ನಮ್ಮ ದೇಶವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಅವಕಾಶಗಳನ್ನು ತೆರೆಯಲು ನವೀನ ತಂತ್ರಜ್ಞಾನ ಮಾದರಿಗಳನ್ನು ಸಶಕ್ತಗೊಳಿಸುತ್ತಿದೆ ಎಂದು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು ಈ ಸಂದರ್ಭದಲ್ಲಿ ಯಶಸ್ವಿ ಸ್ಟಾರ್ಟ್ಅಪ್ಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

***


(Release ID: 1799588) Visitor Counter : 208