ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

2022-27ನೇ ಸಾಲಿಗಾಗಿ ವಯಸ್ಕರ ಶಿಕ್ಷಣದ ಹೊಸ ಯೋಜನೆಯಾದ 'ನವ ಭಾರತ ಸಾಕ್ಷರತಾ ಕಾರ್ಯಕ್ರಮ'ಕ್ಕೆ ಸರ್ಕಾರ ಅನುಮೋದನೆ


"ವಯಸ್ಕರ ಶಿಕ್ಷಣ" ಪದವನ್ನು "ಸರ್ವರಿಗೂ ಶಿಕ್ಷಣ" ಎಂದು ಬದಲಾಯಿಸಲಾಗುವುದು

Posted On: 16 FEB 2022 5:57PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು 2021-22ರ ಬಜೆಟ್ ಘೋಷಣೆಗಳೊಂದಿಗೆ ಹೊಂದಿಸುವ ಸಲುವಾಗಿ ವಯಸ್ಕರ ಶಿಕ್ಷಣದ ಎಲ್ಲಾ ಅಂಶಗಳನ್ನು ಒಳಗೊಳ್ಳಲು 2022-2027ನೇ ಸಾಲಿನ ಹಣಕಾಸು ವರ್ಷಗಳ ಅವಧಿಗೆ "ನವ ಭಾರತ ಸಾಕ್ಷರತಾ ಕಾರ್ಯಕ್ರಮ (“New India Literacy Programme) ಎಂಬ ಹೊಸ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ವಯಸ್ಕರ ಶಿಕ್ಷಣ ಮತ್ತು ಜೀವನ ಪರ್ಯಂತ ಕಲಿಕೆಗೆ ಶಿಫಾರಸುಗಳನ್ನು ಒಳಗೊಂಡಿದೆ.

ಕೇಂದ್ರ ಬಜೆಟ್ 2021-22, ಸಂಪನ್ಮೂಲಗಳ ಹೆಚ್ಚಿನ ಲಭ್ಯತೆಯನ್ನು ಸಕ್ರಿಯಗೊಳಿಸಲು ಘೋಷಣೆ ಮಾಡಲಾಗಿತ್ತು, ವಯಸ್ಕರ ಶಿಕ್ಷಣದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಆನ್ ಲೈನ್ ಮಾಡ್ಯೂಲ್ ಗಳನ್ನು ಪರಿಚಯಿಸಲಾಗುವುದು.

ಈ ಯೋಜನೆಯ ಉದ್ದೇಶಗಳು ಕೇವಲ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ನೀಡುವುದಷ್ಟೇ ಅಲ್ಲದೆ, 21ನೇ ಶತಮಾನದ ನಾಗರಿಕನಿಗೆ ಅಗತ್ಯವಾದ ನಿರ್ಣಾಯಕ ಜೀವನ ಕೌಶಲ್ಯಗಳು (ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ) ಇತರ ಘಟಕಗಳನ್ನೂ ಒಳಗೊಳ್ಳುವುದಾಗಿರುತ್ತದೆ; ವೃತ್ತಿಪರ ಕೌಶಲ್ಯ ಅಭಿವೃದ್ಧಿ (ಸ್ಥಳೀಯ ಉದ್ಯೋಗವನ್ನು ಪಡೆಯುವ ಉದ್ದೇಶದೊಂದಿಗೆ); ಮೂಲಭೂತ ಶಿಕ್ಷಣ (ಪೂರ್ವಸಿದ್ಧತಾ, ಮಧ್ಯಮ ಮತ್ತು ಮಾಧ್ಯಮಿಕ ಹಂತದ ಸಮಾನತೆ ಸೇರಿದಂತೆ); ಮತ್ತು ಶಿಕ್ಷಣದ ಮುಂದುವರಿಕೆ (ಕಲೆ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ, ಕ್ರೀಡೆ ಮತ್ತು ಮನೋರಂಜನೆಯಲ್ಲಿ ಸಮಗ್ರ ವಯಸ್ಕರ ಶಿಕ್ಷಣ ಕೋರ್ಸ್ ಗಳಲ್ಲಿ ತೊಡಗಿಸಿಕೊಳ್ಳುವುದು, ಜೊತೆಗೆ ಸ್ಥಳೀಯವಾಗಿ ಕಲಿಯುವವರಿಗೆ ಆಸಕ್ತಿ ಅಥವಾ ಬಳಕೆಯ ಇತರ ವಿಷಯಗಳು, ಉದಾಹರಣೆಗೆ ನಿರ್ಣಾಯಕ ಜೀವನ ಕೌಶಲ್ಯಗಳ ಬಗ್ಗೆ ಹೆಚ್ಚು ಸುಧಾರಿತ ವಿಷಯಗಳು ಸೇರಿದಂತೆ).

ಈ ಯೋಜನೆಯನ್ನು ಆನ್ ಲೈನ್ ವಿಧಾನದ ಮೂಲಕ ಸ್ವಯಂಸೇವಾ ವಿಧಾನದ ಮೂಲಕ ಜಾರಿಗೆ ತರಲಾಗುವುದು. ಸ್ವಯಂಸೇವಕರ ತರಬೇತಿ, ಪ್ರೇರಣಾತ್ಮಕ ದೃಷ್ಟಿಕೋನ, ಪರಸ್ಪರ ಮುಖಾಮುಖಿ ವಿಧಾನದ ಮೂಲಕ ಕಾರ್ಯಾಗಾರಗಳನ್ನು ಆಯೋಜಿಸಬಹುದು. ಟಿವಿ, ರೇಡಿಯೋ, ಸೆಲ್ ಫೋನ್ ಆಧಾರಿತ ಉಚಿತ/ ಮುಕ್ತ-ಮೂಲ ಅಪ್ಲಿಕೇಷನ್ ಗಳು / ಪೋರ್ಟಲ್ ಗಳು ಮುಂತಾದ ಸುಲಭವಾಗಿ ಪ್ರವೇಶಿಸಬಹುದಾದ ಡಿಜಿಟಲ್ ವಿಧಾನಗಳ ಮೂಲಕ ನೋಂದಾಯಿತ ಸ್ವಯಂಸೇವಕರಿಗೆ ಸುಲಭ ಪ್ರವೇಶಕ್ಕಾಗಿ ಎಲ್ಲಾ ವಸ್ತುವಿಷಯ ಮತ್ತು ಸಂಪನ್ಮೂಲಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುವುದು.

ಈ ಯೋಜನೆಯು ದೇಶದ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಾಕ್ಷರರಲ್ಲದವರನ್ನು ವ್ಯಾಪ್ತಿಗೆ ಒಳಪಡಿಸುತ್ತದೆ. ರಾಷ್ಟ್ರೀಯ ಮಾಹಿತಿ ಕೇಂದ್ರ, ಎನ್.ಸಿಇಆರ್.ಟಿ ಮತ್ತು ಎನ್.ಐಒಎಸ್ ಸಹಯೋಗದೊಂದಿಗೆ "ಆನ್ ಲೈನ್ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ವ್ಯವಸ್ಥೆ (ಒಟಿಎಲ್ಎಎಸ್)" ಬಳಕೆಯ ಮೂಲಕ ವರ್ಷಕ್ಕೆ 1.00 ಕೋಟಿಯಂತೆ 2022-27 ರ ಹಣಕಾಸು ವರ್ಷದಲ್ಲಿ 5 (ಐದು) ಕೋಟಿ ಕಲಿಯುವವರಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆ ಕಲಿಸುವ ಗುರಿಹೊಂದಿದ್ದು, ಇದರಲ್ಲಿ ಕಲಿಯಲಿಚ್ಛಿಸುವವರು ತಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬಹುದು.

"ನವ ಭಾರತ ಸಾಕ್ಷರತಾ ಕಾರ್ಯಕ್ರಮ"ದ ಒಟ್ಟು ಅಂದಾಜು ವೆಚ್ಚ 1037.90 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು ರೂ.700 ಕೋಟಿ ಮತ್ತು 2022-27ರ ಹಣಕಾಸು ವರ್ಷಕ್ಕೆ ಕ್ರಮವಾಗಿ 337.90 ಕೋಟಿ ರೂ. ರಾಜ್ಯ ಪಾಲೂ ಸೇರಿರುತ್ತದೆ.

ಯೋಜನೆಯ ಪ್ರಮುಖಾಂಶಗಳು

1. ಯೋಜನೆಯ ಅನುಷ್ಠಾನಕ್ಕಾಗಿ ಶಾಲೆ ಘಟಕವಾಗಿರುತ್ತದೆ.

2. ಫಲಾನುಭವಿಗಳು ಮತ್ತು ಸ್ವಯಂಸೇವಾ ಶಿಕ್ಷಕರ (ವಿಟಿಗಳು) ಸಮೀಕ್ಷೆ ನಡೆಸಲು ಶಾಲೆಗಳನ್ನು ಬಳಸಬೇಕು.

3. ವಿವಿಧ ವಯಸ್ಸಿನ ಸಹವರ್ತಿಗಳಿಗೆ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ನವೀನ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಮ್ಯತೆಯನ್ನು ಒದಗಿಸಲಾಗುವುದು.

4. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಸಾಕ್ಷರರಲ್ಲದವರಿಗೆ ವಿಮರ್ಶಾತ್ಮಕ ಜೀವನ ಕೌಶಲ್ಯಗಳ ಮೂಲಕ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ಕಲಿಸಲಾಗುವುದು.

5. ಯೋಜನೆಯ ವ್ಯಾಪಕ ಪ್ರಸಾರಕ್ಕಾಗಿ ವಯಸ್ಕರ ಶಿಕ್ಷಣವನ್ನು ನೀಡಲು ತಂತ್ರಜ್ಞಾನದ ಬಳಕೆ

6. ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕ (ಪಿಜಿಐ) ಯುಡಿಎಸ್ಇ ಪೋರ್ಟಲ್ ಮೂಲಕ ಭೌತಿಕ ಮತ್ತು ಆರ್ಥಿಕ ಪ್ರಗತಿ ಎರಡನ್ನೂ ಅಳೆಯುವ ಮೂಲಕ ಯೋಜನೆ ಮತ್ತು ಸಾಧನೆಗಳನ್ನು ವಾರ್ಷಿಕ ಆಧಾರದ ಮೇಲೆ ಅನುಷ್ಠಾನಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.

7. ಐಸಿಟಿ ಬೆಂಬಲದ ಹೋಸ್ಟಿಂಗ್ ಮೂಲಕ, ಸ್ವಯಂಸೇವಕರ ಬೆಂಬಲವನ್ನು ಒದಗಿಸುವ ಮೂಲಕ, ಕಲಿಯುವವರಿಗೆ ಸೌಲಭ್ಯ ಕೇಂದ್ರಗಳನ್ನು ತೆರೆಯುವ ಮೂಲಕ ಮತ್ತು ಸೆಲ್ ಫೋನ್ ಇತ್ಯಾದಿಗಳ ರೂಪದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕಲಿಯುವವರಿಗೆ ಐಟಿ ಪ್ರವೇಶವನ್ನು ಒದಗಿಸಲು ಸಿಎಸ್ಆರ್ /ಲೋಕೋಪಕಾರಿ ಬೆಂಬಲವನ್ನು ಪಡೆಯಬಹುದು.

8. ಸಾಕ್ಷರತೆಯಲ್ಲಿ ಆದ್ಯತೆ ಮತ್ತು ಗರಿಷ್ಠಮಟ್ಟ- ಮೊದಲಿಗೆ 15-35 ವಯಸ್ಸಿನ ಸಹವರ್ತಿಗಳಿಗೆ, ನಂತರ 35 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಗರಿಷ್ಠ ಮಟ್ಟ ತಲುಪಿಸಲಾಗುವುದು. ವಯಸ್ಕರ ಶಿಕ್ಷಣದಿಂದ ಗಣನೀಯವಾಗಿ ಮತ್ತು ತಕ್ಷಣವೇ ಪ್ರಯೋಜನ ಪಡೆಯುವವರಲ್ಲಿ ಬಾಲಕಿಯರು ಮತ್ತು ಮಹಿಳೆಯರು, ಎಸ್ಸಿ/ಎಸ್ಟಿ/ಒಬಿಸಿ/ಅಲ್ಪಸಂಖ್ಯಾತರು, ವಿಶೇಷ ಅಗತ್ಯ ಇರುವ ವ್ಯಕ್ತಿಗಳು (ದಿವ್ಯಾಂಗ ಜನರು), ವಂಚಿತರು/ ಅಲೆಮಾರಿಗಳು/ ನಿರ್ಮಾಣ ಕಾರ್ಮಿಕರು/ ಕಾರ್ಮಿಕರು/ಇತ್ಯಾದಿ ವರ್ಗಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳ/ಪ್ರದೇಶದ ದೃಷ್ಟಿಯಿಂದ, ನೀತಿ ಆಯೋಗದ ಎಲ್ಲಾ ಮಹತ್ವಾಕಾಂಕ್ಷೆಯ ಜಿಲ್ಲೆಗಳು, ರಾಷ್ಟ್ರೀಯ/ರಾಜ್ಯ ಸರಾಸರಿಗಿಂತ ಕಡಿಮೆ ಸಾಕ್ಷರತೆ ಪ್ರಮಾಣವನ್ನು ಹೊಂದಿರುವ ಜಿಲ್ಲೆಗಳು, 2011 ರ ಜನಗಣತಿಯ ಪ್ರಕಾರ ಮಹಿಳಾ ಸಾಕ್ಷರತೆಯ ಪ್ರಮಾಣ ಶೇ. 60ಕ್ಕಿಂತ ಕಡಿಮೆ ಹೊಂದಿರುವ ಜಿಲ್ಲೆಗಳು, ಬೃಹತ್ ಪ್ರಮಾಣದಲ್ಲಿ ಎಸ್ಸಿ/ಎಸ್ಟಿ/ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಗಳು/ ವಿಭಾಗಗಳು, ಶೈಕ್ಷಣಿಕವಾಗಿ ಹಿಂದುಳಿದ ವಿಭಾಗಗಳು, ಎಡಪಂಥೀಯ ಉಗ್ರವಾದಿಂದ ಪೀಡಿತವಾದ ಜಿಲ್ಲೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು.

9. ಎನ್ಐಎಲ್ಪಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಒಗ್ಗೂಡುವಿಕೆ: ಎಂಇಐಟಿವೈ: ಡಿಜಿಟಲ್ ಸಾಕ್ಷರತೆ, ಡಿಎಫ್ಎಸ್ / ಎಂಒಎಫ್: ಹಣಕಾಸು ಸಾಕ್ಷರತೆ, ಎಂಒಎಸ್.ಡಿಇ: ಕೌಶಲ್ಯ, ಡಿಒಜೆ/ ಎಂಒಎಲ್.ಜೆ: ಕಾನೂನು ಸಾಕ್ಷರತೆ, ಎಂಒಡಿ: ಎನ್.ಸಿಸಿ ಸ್ವಯಂಸೇವಕ ಮತ್ತು ಮಾಜಿ ಸೈನಿಕರು, ಎಂಒವೈಎಎಸ್: ಎನ್.ವೈಕೆಎಸ್, ಎನ್ಎಸ್ಎಸ್, ಎಂಒಆರ್.ಡಿ: ಎನ್ಆರ್.ಎಲ್ಎಂ ಮತ್ತು ಡಿಡಿಯು-ಜಿಕೆವೈ, ಎಂಒಸಿ: ಸಹಕಾರ ಸಂಘಗಳ ಪಾಲ್ಗೊಳ್ಳುವಿಕೆ, ಎಂ.ಒ.ಎಚ್.ಎಫ್.ಡಬ್ಲ್ಯೂ : ಆರೋಗ್ಯ ಮತ್ತು ನೈರ್ಮಲ್ಯ ಸಾಕ್ಷರತೆ, ಎನ್.ಡಿಎಂಎ/ಎಂಎಚ್ಎ: ವಿಪತ್ತು ನಿರ್ವಹಣೆ, ಎಂಒಎಂಎ: ಅಲ್ಪಸಂಖ್ಯಾತರಲ್ಲಿ ಅನುಷ್ಠಾನಗೊಳಿಸಲು, ಡಿಒಎಚ್ಇ: ಮುಂದುವರಿದ ಶಿಕ್ಷಣ, ಸಂಸ್ಕೃತಿ ಸಚಿವಾಲಯ: ಗ್ರಂಥಾಲಯಗಳು, ಸಾಂಸ್ಕೃತಿಕ ಸಾಕ್ಷರತೆ, ಎಂಒಪಿಆರ್: ಪಂಚಾಯತ್ ಬೆಂಬಲಕ್ಕಾಗಿ, ಗ್ರಾಮೀಣ ಗ್ರಂಥಾಲಯಗಳು, ಎಂಡಬ್ಲ್ಯುಸಿಡಿ: ಅಂಗನವಾಡಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆ, ಮತ್ತು ಎಂಒಟಿಎ: ಬುಡಕಟ್ಟು ಪ್ರದೇಶಗಳಲ್ಲಿ ಅನುಷ್ಠಾನ ಇತ್ಯಾದಿ.

10. ಜನಾಂದೋಲನವಾಗಿ ಎನ್ಐಎಲ್.ಪಿ:

• ಯುಡಿಐಎಸ್ಇ ಅಡಿಯಲ್ಲಿ ನೋಂದಾಯಿಸಲಾದ ಸುಮಾರು 7 ಲಕ್ಷ ಶಾಲೆಗಳ ಮೂರು ಕೋಟಿ ವಿದ್ಯಾರ್ಥಿಗಳು/ಮಕ್ಕಳು ಮತ್ತು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಮಾರು 50 ಲಕ್ಷ ಶಿಕ್ಷಕರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ.

• ಶಿಕ್ಷಕರ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಅಂದಾಜು 2೦ ಲಕ್ಷ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ.

• ಪಿಆರ್.ಐಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಅಂದಾಜು 50 ಲಕ್ಷ ಎನ್ ವೈಎಸ್ ಕೆ, ಎನ್.ಎಸ್.ಎಸ್ ಮತ್ತು ಎನ್.ಸಿಸಿ ಸ್ವಯಂಸೇವಕರಿಂದ ಬೆಂಬಲವನ್ನು ಪಡೆಯಲಾಗುವುದು.

• ಸ್ವಯಂಸೇವಕರ ಮೂಲಕ ಮತ್ತು ವಿದ್ಯಾಂಜಲಿ ಪೋರ್ಟಲ್ ಮೂಲಕ ಸಮುದಾಯ, ಲೋಕೋಪಕಾರಿ /ಸಿಎಸ್ಆರ್ ಸಂಸ್ಥೆಗಳ ಪಾಲ್ಗೊಳ್ಳುವಿಕೆಯೂ ಇರುತ್ತದೆ.

• ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಿವಿಧ ವೇದಿಕೆಗಳ ಮೂಲಕ ವೈಯಕ್ತಿಕ/ ಕುಟುಂಬ/ ಗ್ರಾಮ/ ಜಿಲ್ಲಾ ಯಶೋಗಾಥೆಗಳನ್ನು ಉತ್ತೇಜಿಸುತ್ತವೆ.

• ಇದು ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್, ವಾಟ್ಸಪ್, ಯೂಟ್ಯೂಬ್, ಟಿವಿ ಚಾನೆಲ್ ಗಳು, ರೇಡಿಯೋ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ವಿಧ್ಯುನ್ಮಾನ, ಮುದ್ರಣ, ಜಾನಪದ ಮತ್ತು ಅಂತರ-ವೈಯಕ್ತಿಕ ವೇದಿಕೆಗಳು ಸೇರಿದಂತೆ ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತವೆ.

11. ಮೊಬೈಲ್ ಆಪ್, ಆನ್ ಲೈನ್ ಸರ್ವೇ ಮಾಡ್ಯೂಲ್, ಭೌತಿಕ ಮತ್ತು ಹಣಕಾಸು ಮಾಡ್ಯೂಲ್ ಗಳು ಮತ್ತು ನಿಗಾ ಚೌಕಟ್ಟು ಇತ್ಯಾದಿಗಳನ್ನು ಹೊಂದಿರುವ ಒಟ್ಟು ದತ್ತಾಂಶ ಪಡೆಯುವಿಕೆಗಾಗಿ ಎನ್.ಐಸಿಯಿಂದ ಕೇಂದ್ರೀಕೃತ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುವುದು.

12. ಕಾರ್ಯಾತ್ಮಕ ಸಾಕ್ಷರತೆಗಾಗಿ ನಿಜ ಜೀವನದ ಕಲಿಕೆಗಳು ಮತ್ತು ಕೌಶಲ್ಯಗಳನ್ನು ಪಡೆಯಲು ವೈಜ್ಞಾನಿಕ ಸ್ವರೂಪವನ್ನು ಬಳಸಿಕೊಂಡು ಸಾಕ್ಷರತೆಯ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಒಟಿಎಲ್ಎಎಸ್ ಮೂಲಕ ಬೇಡಿಕೆಯ ಮೌಲ್ಯಮಾಪನವನ್ನು ಮಾಡಲಾಗುತ್ತದೆ ಮತ್ತು ಎನ್ಐಒಎಸ್ ಮತ್ತು ಎನ್ಎಲ್ಎಂಎ ಜಂಟಿಯಾಗಿ ಇ-ಸಹಿ ಮಾಡಿದ ಇ-ಪ್ರಮಾಣಪತ್ರವನ್ನು ಕಲಿಯುವವರಿಗೆ ನೀಡಲಾಗುತ್ತದೆ.

13. ಪ್ರತಿ ರಾಜ್ಯ/ ಕೇಂದ್ರಾಡಳಿತ ಪ್ರದೇಶ ಮತ್ತು ಫಲಶ್ರುತಿ-ಔಟ್ ಪುಟ್ ನಿಗಾ ಚೌಕಟ್ಟು (ಓಓಎಂಎಫ್) ನಿಂದ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ 500-1000 ಕಲಿಕಾ ಫಲಿತಾಂಶಗಳ ಮಾದರಿಗಳಿಂದ ಕಲಿಕೆಯ ಫಲಿತಾಂಶಗಳ ವಾರ್ಷಿಕ ಸಾಧನೆ ಸಮೀಕ್ಷೆ ಮಾಡಲಾಗುವುದು.

ಈಗ ದೇಶದಲ್ಲಿ ವಯಸ್ಕರ ಶಿಕ್ಷಣ 'ಸರ್ವರಿಗೂ ಶಿಕ್ಷಣ'ವಾಗಿದೆ: ಪ್ರಗತಿಪರ ಹೆಜ್ಜೆಯಾಗಿ, ಇನ್ನು ಮುಂದೆ "ವಯಸ್ಕರ ಶಿಕ್ಷಣ" ಎಂಬ ಪದಕ್ಕೆ ಬದಲಾಗಿ "ಸರ್ವರಿಗೂ ಶಿಕ್ಷಣ" ಎಂಬ ಪದವನ್ನು ಸಚಿವಾಲಯ ಬಳಸಲಿದೆ, ವಯಸ್ಕರ ಶಿಕ್ಷಣ ಎಂಬ ಪರಿಭಾಷೆಯು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸಾಕ್ಷರರಲ್ಲದವರನ್ನು ಸೂಕ್ತವಾಗಿ ಇದರಲ್ಲಿ ಸೇರಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

2011ರ ಜನಗಣತಿಯ ಪ್ರಕಾರ, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ದೇಶದ ಸಾಕ್ಷರರಲ್ಲದವರ ಸಂಪೂರ್ಣ ಸಂಖ್ಯೆ 25.76 ಕೋಟಿ (ಪುರುಷ 9.08 ಕೋಟಿ, ಮಹಿಳೆಯರು 16.68 ಕೋಟಿ). 2009-10 ರಿಂದ 2017-18 ರ ಅವಧಿಯಲ್ಲಿ ಜಾರಿಗೆ ತರಲಾದ ಸಾಕ್ಷರ ಭಾರತ ಕಾರ್ಯಕ್ರಮದ ಅಡಿಯಲ್ಲಿ ಸಾಕ್ಷರರು ಎಂದು ಪ್ರಮಾಣೀಕರಿಸಲಾದ ವ್ಯಕ್ತಿಗಳ ಪ್ರಗತಿಯನ್ನು ಪರಿಗಣಿಸಿ, ಪ್ರಸ್ತುತ ಭಾರತದಲ್ಲಿ ಸುಮಾರು 18.12 ಕೋಟಿ ವಯಸ್ಕರು ಇನ್ನೂ ಸಾಕ್ಷರರಲ್ಲ ಎಂದು ಅಂದಾಜಿಸಲಾಗಿದೆ.

***



(Release ID: 1798871) Visitor Counter : 908


Read this release in: Tamil , English , Urdu , Hindi , Telugu