ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 16 ರಂದು ಟಿಇಆರ್ ಐನ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಿ

Posted On: 15 FEB 2022 11:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಫೆಬ್ರವರಿ 16 ರಂದು ಸಂಜೆ 6 ಗಂಟೆಗೆ ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ (TERI) ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ವೀಡಿಯೊ ಸಂದೇಶದ ಮೂಲಕ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯು ಟಿಇಆರ್ ಐ ನ ವಾರ್ಷಿಕ ಪ್ರಮುಖ ಕಾರ್ಯಕ್ರಮವಾಗಿದೆ. ಈ ವರ್ಷದ ಶೃಂಗಸಭೆಯ ಘೋಷ ವಾಕ್ಯ 'ಟುವರ್ಡ್ಸ್ ಎ ರಿಸೈಲೆಂಟ್ ಪ್ಲಾನೆಟ್: ಸುಸ್ಥಿರ ಮತ್ತು ಸಮಾನ ಭವಿಷ್ಯವನ್ನು ಖಾತರಿಪಡಿಸುವುದು'. ಎಂಬುದಾಗಿದೆ. ಶೃಂಗಸಭೆಯು ಹವಾಮಾನ ಬದಲಾವಣೆ, ಸುಸ್ಥಿರ ಉತ್ಪಾದನೆ, ಇಂಧನ ಪರಿವರ್ತನೆಗಳು, ಜಾಗತಿಕ ಸಾಮುದಾಯಿಕ ಮತ್ತು ಸಂಪನ್ಮೂಲ ಭದ್ರತೆ ಸೇರಿದಂತೆ ವ್ಯಾಪಕ ಶ್ರೇಣಿಯ ಸಮಸ್ಯೆಗಳನ್ನು ಚರ್ಚಿಸುತ್ತದೆ.

ಫೆಬ್ರವರಿ 16 ರಿಂದ ಪ್ರಾರಂಭವಾಗುವ ಮೂರು ದಿನಗಳ ಶೃಂಗಸಭೆಯಲ್ಲಿ ಡೊಮಿನಿಕನ್ ಗಣರಾಜ್ಯದ ಅಧ್ಯಕ್ಷ ಶ್ರೀ ಲೂಯಿಸ್ ಅಬಿನಾದರ್, ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ, ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಎಂಎಸ್ ಅಮಿನಾ ಜೆ ಮೊಹಮ್ಮದ್ ವಿವಿಧ ಅಂತರ ಸರ್ಕಾರಿ ಸಂಸ್ಥೆಗಳು, ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳ ಮಂತ್ರಿಗಳು ರಾಯಭಾರಿಗಳು ಮತ್ತು 120 ದೇಶಗಳ ಪ್ರತಿನಿಧಿಗಳು ಭಾಗವವಹಿಸಲಿದ್ದಾರೆ.

***(Release ID: 1798479) Visitor Counter : 208