ಕಲ್ಲಿದ್ದಲು ಸಚಿವಾಲಯ

ವಿದ್ಯುತೇತರ ವಲಯಕ್ಕೆ ಕೋಲ್ ಇಂಡಿಯಾ ಲಿಮಿಟೆಡ್ ಸಾಕಷ್ಟು ದಾಸ್ತಾನು ಹೊಂದಿದೆ; ಪ್ರಸ್ತುತ ದಿನಕ್ಕೆ 3.4 ಲಕ್ಷ ಟನ್ ಕಲ್ಲಿದ್ದಲು ಪೂರೈಸುತ್ತಿದೆ


ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಸಾಗಿದೆ

Posted On: 12 FEB 2022 12:58PM by PIB Bengaluru

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಪ್ರಸ್ತುತ ದಿನಕ್ಕೆ ಸುಮಾರು 3.4 ಲಕ್ಷ ಟನ್ ಕಲ್ಲಿದ್ದಲನ್ನು ವಿದ್ಯುತೇತರ ವಲಯಕ್ಕೆ (ಎನ್‌.ಪಿ.ಎಸ್) ಪೂರೈಸುತ್ತಿದ್ದು, ಇದು ಈ ವಲಯಕ್ಕೆ ಕಂಪನಿಯ ಸರಾಸರಿ ಪೂರೈಕೆಯಾಗಿದೆ. 37 ದಶಲಕ್ಷ ಟನ್‌ ಗಳಿಗಿಂತ ಹೆಚ್ಚು (ಎಂ.ಟಿ.ಗಳು) ಕಲ್ಲಿದ್ದಲನ್ನು ತನ್ನ ಪಿಟ್‌ ಹೆಡ್‌ ಗಳಲ್ಲಿ ಹೊಂದಿರುವ ಸಿಐಎಲ್ ಈ ವಲಯಕ್ಕೆ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನೂ ಹೊಂದಿದೆ. ಸಿಐಎಲ್ 22ರ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ಎನ್.ಪಿ.ಎಸ್.ಗೆ 101.7 ದಶಲಕ್ಷ ಟನ್‌ ಪೂರೈಸಿದ್ದು, ಹಣಕಾಸು ವರ್ಷ 20ರ ಸಾಂಕ್ರಾಮಿಕ ಮುಕ್ತ ಕಾಲದ ಇದೇ ಅವಧಿಯಲ್ಲಿ ಪೂರೈಸಿದ್ದ 94 ದಶಲಕ್ಷ ಟನ್ ಗೆ ಹೋಲಿಸಿದರೆ,  ಶೇ.8.2ರಷ್ಟು ಹೆಚ್ಚಾಗಿದೆ. ಹಣಕಾಸು ವರ್ಷ 19ರ ಇದೇ ಅವಧಿಗೆ ಹೋಲಿಸಬಹುದಾದರೆ, ಸಿಐಎಲ್ ತನ್ನ ಆರಂಭಿಕ ಕಾಲದಿಂದಲೂ ಒಟ್ಟಾರೆ ಅತಿ ಹೆಚ್ಚು ದಾಖಲೆಯ ಕಲ್ಲಿದ್ದಲು ಪೂರೈಕೆ ಮಾಡಿದೆ, ಎನ್.ಪಿ.ಎಸ್. ವಲಯಕ್ಕೆ ಮಾಡಿರುವ  ಪೂರೈಕೆಯು 91.5 ದಶಳಕ್ಷ ಟನ್ ಗಳಿಗಿಂತ ಹೆಚ್ಚಾಗಿದ್ದು, ಇದು ಶೇ.11ರಷ್ಟು ವೃದ್ಧಿಸಿದೆ.

ಎನ್‌.ಪಿ.ಎಸ್ ಗ್ರಾಹಕರಿಗೆ ಪೂರೈಕೆಯಲ್ಲಿನ ವೃದ್ಧಿಯು ಈ ಅವಧಿಯಲ್ಲಿ ವಿದ್ಯುತ್ ವಲಯಕ್ಕೆ ಮಾಡಿರುವ ಪೂರೈಕೆಗಿಂತ ಹೆಚ್ಚಿನ ದರದಲ್ಲಿದೆ. ಏಪ್ರಿಲ್ 20ರಿಂದ ಜನವರಿ 21ರ ಅವಧಿಯಲ್ಲಿ ಎನ್.ಪಿ.ಎಸ್. ವಲಯಕ್ಕೆ ಮಾಡಿರುವ ಪೂರೈಕೆ 105 ದಶಲಕ್ಷ ಟನ್ ಆಗಿದ್ದು, ಇದು ಹಣಕಾಸು ವರ್ಷ 22ರ ಇದೇ ಅವಧಿಗೆ ಹೋಲಿಸಿದರೆ  ಇದೇ ಅವಧಿಗೆ ಹೋಲಿಸಿದರೆ 3 ದಶಲಕ್ಷ ಟನ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಕೋವಿಡ್ ಸಂಕಷ್ಟದ ವರ್ಷದಲ್ಲಿ ಹೆಚ್ಚಿನ ಪೂರೈಕೆಗೆ ಕಾರಣಗಳು ಹಲವಾರು.
ಹಣಕಾಸು ವರ್ಷ 21ರ ಪ್ರಮುಖ ಭಾಗಕ್ಕೆ ಕಲ್ಲಿದ್ದಲು ಒಳಬರುವಿಕೆ ಕೋವಿಡ್‌ ನಿಂದ ಉಂಟಾದ ಬೇಡಿಕೆಯ ಅಡಚಣೆಗೆ ಸಾಕ್ಷಿಯಾಗಿದೆ, ಎನ್.ಪಿ.ಎಸ್. ವಿಭಾಗಕ್ಕೆ ಪೂರೈಕೆಯನ್ನು ಸಿಐಎಲ್ ಹೆಚ್ಚಿಸಿದೆ. ಹಣಕಾಸು ವರ್ಷ 2021ರ ಮೊದಲಾರ್ಧದಲ್ಲಿ ಸಿಐಎಲ್ ನ ಇ-ಹರಾಜು ಮಾರಾಟವನ್ನು ಅಧಿಸೂಚಿತ ಬೆಲೆಗೆ ಸೀಮಿತಗೊಳಿಸಿದ್ದರಿಂದ ಎನ್.ಪಿ.ಎಸ್. ಗ್ರಾಹಕರು ಹೆಚ್ಚಿನ ಪ್ರಮಾಣದ ಕಲ್ಲಿದ್ದಲ ಎತ್ತುವಳಿಯ ಆಯ್ಕೆಯನ್ನು ಮಾಡಿದರು. ಆದರೆ ಹಣಕಾಸು ವರ್ಷ 22ರಲ್ಲಿ ಅಸಾಧಾರಣವಾಗಿ ಹೆಚ್ಚಿದ ಅಂತಾರಾಷ್ಟ್ರೀಯ ಕಲ್ಲಿದ್ದಲು ಬೆಲೆಗಳು ಅಗತ್ಯವಾದ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಅಡ್ಡಿಯಾಯಿತು ಮತ್ತು ಅಂತಿಮವಾಗಿ ಕಲ್ಲಿದ್ದಲಿನ ಕೊರತೆಯನ್ನು ಉಂಟುಮಾಡಿತು. ವಿದ್ಯುತೇತರ ವಲಯಕ್ಕೆ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲು ಸಿಐ.ಎಲ್. ಸಾಕಷ್ಟು ಕಾಪು ದಾಸ್ತಾನನ್ನು ಹೊಂದಿದೆ.
ಹಣಕಾಸು ವರ್ಷ 22 ವಿದ್ಯುತ್ ಉತ್ಪಾದನೆಯಲ್ಲಿ ಅಭೂತಪೂರ್ವ ಏರಿಕೆಗೆ ಸಾಕ್ಷಿಯಾಗಿದೆ, ವೃದ್ಧಿ ದರವು ಒಂದು ದಶಕದಲ್ಲೇ ಅತ್ಯಧಿಕವಾಗಿದೆ, ಇದು ರಾಷ್ಟ್ರೀಯ ಆದ್ಯತೆಯ ಮೇಲೆ ವಿದ್ಯುತ್ ವಲಯದ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸುವ ಅಗತ್ಯವನ್ನು ಹೊಂದಿದೆ. ದೃಢವಾದ ಆರ್ಥಿಕ ಚೇತರಿಕೆಯ ಬೆನ್ನೇರಿ, ಆರ್ಥಿಕ ವರ್ಷದ ಜನವರಿ 22 ರವರೆಗೆ ಒಟ್ಟು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ.11.2 ರಷ್ಟು ವೃದ್ಧಿಯಾಗಿದೆ. ಆದರೆ ಈ ಅವಧಿಯಲ್ಲಿ ದೇಶೀಯ ಕಲ್ಲಿದ್ದಲು ಆಧಾರಿತ ಉತ್ಪಾದನೆಯು ಶೇ.17 ರಷ್ಟು ಹೆಚ್ಚಾಗಿದೆ. ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆಯ ಬಹುಭಾಗವನ್ನು ಸಿಐಎಲ್ ಆದ್ಯತೆಯ ಮೇಲೆ ಪೂರೈಸಿದೆ.
2021-22 ರ ಏಪ್ರಿಲ್-ಜನವರಿ ಅವಧಿಯಲ್ಲಿ 14ರಷ್ಟು ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆಯು ಶೇಕಡಾ 48 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾದ ಉತ್ಪಾದನೆಯ ಕಂದಕವನ್ನು ತುಂಬಲು, ದೇಶೀಯ ಕಲ್ಲಿದ್ದಲು ಆಧಾರಿತ ಜನರೇಟರ್ ಗಳಿಗೆ ದೇಶೀಯ ಕಲ್ಲಿದ್ದಲು ಪೂರೈಕೆಯ ಹೆಚ್ಚಳದ ಅಗತ್ಯಬಿತ್ತು. ಸಿಐಎಲ್ ಸುಮಾರು 20 ಮೆಟ್ರಿಕ್ ಟನ್ ಹೆಚ್ಚುವರಿ ಬೇಡಿಕೆಯನ್ನು ಪೂರೈಸಿತು. ಮತ್ತೊಂದು ರೀತಿ ಹೇಳುವುದಾದರೆ, ಅಷ್ಟು ಪ್ರಮಾಣದ ಆಮದು ಕಡಿತವಾಯಿತು.
ವಿದ್ಯುತ್ ವಲಯಕ್ಕೆ ಕಲ್ಲಿದ್ದಲಿನ ಆದ್ಯತೆಯ ಹೊರತಾಗಿಯೂ ಮತ್ತು ಇತರ ಸವಾಲುಗಳನ್ನು ಎದುರಿಸುತ್ತಿರುವುದರ ಹೊರತಾಗಿಯೂ, ಹಣಕಾಸು ವರ್ಷ 22ರ ಜನವರಿವರೆಗೆ 101.7 ಎಂ.ಟಿ ಗಳ ಪೈಕಿ ಸಿಐಎಲ್ ಕಳೆದ ವರ್ಷದ ಇದೇ ಅವಧಿಯಲ್ಲಿ ಎನ್.ಪಿ.ಎಸ್. ಗ್ರಾಹಕರಿಗೆ ಶೇ.97ರಷ್ಟು ಪೂರೈಸಿದೆ.


******



(Release ID: 1798027) Visitor Counter : 146