ಕಲ್ಲಿದ್ದಲು ಸಚಿವಾಲಯ
2 ಮತ್ತು 3ನೇ ದಿನದ ಕಲ್ಲಿದ್ದಲು ಗಣಿ ವಾಣಿಜ್ಯ ಹರಾಜು - 3ನೇ ಭಾಗ
ಕಲ್ಲಿದ್ದಲು ಗಣಿ ನಿಕ್ಷೇಪಗಳ ಹರಾಜಿನ 13ನೇ ಭಾಗ (ವಿಶೇಷ ನಿಯಮಾವಳಿ) ಕಾಯ್ದೆ 2015
ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರಡಿ 3ನೇ ಭಾಗದ ಹರಾಜು
Posted On:
11 FEB 2022 12:14PM by PIB Bengaluru
ಕಲ್ಲಿದ್ದಲು ಸಚಿವಾಲಯವು ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ಗಣಿಗಳ ಹರಾಜನ್ನು ಸಿಎಂಎಸ್ ಪಿ ಕಾಯ್ದೆ 13 ನೇ ಕಂತಿನ ಅಡಿಯಲ್ಲಿ ಮತ್ತು ಎಂಎಂಡಿಆರ್ ಎ ಕಾಯ್ದೆಯ 3 ನೇ ಕಂತಿನಡಿ 2021ರ ಅಕ್ಟೋಬರ್ 12 ರಿಂದ ಪ್ರಾರಂಭಿಸಿದೆ. ಇ-ಹರಾಜಿನ 2 ನೇ ಮತ್ತು 3 ನೇ ದಿನದಂದು, ಒಟ್ಟು ಐದು ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ಇಡಲಾಗಿತ್ತು, ಅದರಲ್ಲಿ ಮೂರು ಕಲ್ಲಿದ್ದಲು ಗಣಿಗಳು ಸಿಎಂಎಸ್ ಪಿ ಕಲ್ಲಿದ್ದಲು ಗಣಿಗಳು ಮತ್ತು ಎರಡು ಎಂಎಂಡಿಆರ್ ಕಲ್ಲಿದ್ದಲು ಗಣಿಗಳಾಗಿವೆ. ಕಲ್ಲಿದ್ದಲು ಗಣಿಗಳ ವಿವರಗಳು ಕೆಳಕಂಡಂತಿವೆ:-
- ಎಲ್ಲಾ ಐದು ಕಲ್ಲಿದ್ದಲು ಗಣಿಗಳನ್ನು ಸಂಪೂರ್ಣವಾಗಿ ಪರಿಶೋಧಿಸಲಾಗಿದೆ.
- ಈ ಕಲ್ಲಿದ್ದಲು ಗಣಿಗಳ ಒಟ್ಟು ಭೂವೈಜ್ಞಾನಿಕ ನಿಕ್ಷೇಪಗಳು 528.051ಮಿಲಿಯನ್ ಟನ್.
- ಈ ಕಲ್ಲಿದ್ದಲು ಗಣಿಗಳಿಗೆ ಸಂಚಿತ ಪಿಆರ್ ಸಿ 16.07 ಎಂಪಿಟಿಎ.
2ನೇ ದಿನ ಮತ್ತು 3ನೇ ದಿನದ ಸಂಚಿತ ಫಲಿತಾಂಶ ಈ ಕೆಳಗಿನಂತಿದೆ.
ಕ್ರ. ಸಂ
|
ಗಣಿಯ ಹೆಸರು
|
ರಾಜ್ಯ
|
ಪಿಆರ್ ಸಿ (ಎಂಟಿಪಿಎ)
|
ಭೂವೈಜ್ಞಾನಿಕ ನಿಕ್ಷೇಪಗಳು (ಎಂಟಿ)
|
ಮಕ್ತಾಯದ ಬಿಡ್ ಸಲ್ಲಿಕೆ ಆಗಿರುವುದು
|
ಮೀಸಲು ದರ (%)
|
ಅಂತಿಮ ಆಫರ್ (%)
|
1
|
ಮೀನಾಕ್ಷಿ
|
ಒಡಿಶಾ
|
12.00
|
285.23
|
ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ /64856
|
4.00
|
10.25
|
2
|
ಗರಂಪಾನಿ
|
ಅಸ್ಸಾಂ
|
0.02
|
0.468
|
ಅಸ್ಸಾಂ ಖನಿಜ ಅಭಿವೃದ್ಧಿ ನಿಗಮ ನಿಯಮಿತ/265144
|
4.00
|
288.25
|
3
|
ಮರ್ಜಾ
|
ಮಹಾರಾಷ್ಟ್ರ
|
0.48
|
31.036
|
ಬಿಎಸ್ ಇಸ್ಪಾಯ್ ಲಿಮಿಟೆಡ್ /64979
|
4.00
|
18.25
|
4
|
ನಂಚಿಕ್ ನಂಪುಕ್
|
ಅರುಣಾಚಲ ಪ್ರದೇಶ
|
0.20
|
14.970
|
ಇ-ಹರಾಜು ಪ್ರಕ್ರಿಯೆ 11.02.2022 ರಂದು ಬೆಳಿಗ್ಗೆ 10ರಿಂದ ಪ್ರಗತಿಯಲ್ಲಿ
|
4.00
|
_
|
5
|
ಉತ್ಕಲ್ - ಸಿ
|
ಒಡಿಶಾ
|
3.37
|
196.347
|
ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ /64898
|
4.00
|
45.00
|
***
(Release ID: 1797602)