ಜಲ ಶಕ್ತಿ ಸಚಿವಾಲಯ
ಯಶೋಗಾಥೆ: ಸ್ವಚ್ಛ ಭಾರತ ಅಭಿಯಾನ
ಉಡುಪಿ ಎಂ.ಆರ್.ಎಫ್ ನ 41 ಗ್ರಾಮ ಪಂಚಾಯತ್ ಗಳಲ್ಲಿ ಸುರಕ್ಷಿತ ಘನತ್ಯಾಜ್ಯ ನಿರ್ವಹಣಾ ಸೇವೆ
Posted On:
02 FEB 2022 4:32PM by PIB Bengaluru
ನಿಟ್ಟೆ ಗ್ರಾಮ ಪಂಚಾಯತ್ [ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ, ಕರ್ನಾಟಕ] ನ ಸಮಗ್ರ ಘನತ್ಯಾಜ್ಯ ನಿರ್ವಹಣಾ [ಎಂ.ಆರ್.ಎಫ್] ಕೇಂದ್ರ 2021 ರ ಆಗಸ್ಟ್ 1 ರಿಂದ ಕಾರ್ಯಾರಂಭ ಮಾಡಿದೆ. ಈ ಕೇಂದ್ರದಿಂದ ಕಾರ್ಕಳ, ಉಡುಪಿ, ಕಾಪು ಮತ್ತು ಹೆಬ್ರಿಯ ಬ್ಲಾಕ್ ಗಳ 41 ಗ್ರಾಮ ಪಂಚಾಯತ್ [ಜಿಪಿ] ಗಳಲ್ಲಿ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಸೇವೆ ಒದಗಿಸಲಾಗುತ್ತಿದೆ.
ಉಡುಪಿ ಜಿಲ್ಲಾ ಪಂಚಾಯತ್ ನಿಂದ ಈ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾಹಸ್ ಜಿರೋ ವೆಸ್ಟ್ ಪ್ರೈವೆಟ್ ಲಿಮಿಟೆಡ್ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡಿದರೆ, ಸೌಲಭ್ಯದ ಕಾರ್ಯಾಚರಣೆಯನ್ನು ಮಂಗಳೂರಿನ ಮಂಗಳಾ ರಿಸೋರ್ಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.
ಯೋಜನೆಯ ಉದ್ದೇಶಗಳು:
· ಸೀಮಿತ ಮಾನವ ಸಂಪನ್ಮೂಲ ಬಳಸಿಕೊಂಡು ಕೇಂದ್ರೀಕೃತ ತ್ಯಾಜ್ಯ ನಿರ್ವಹಣಾ ಸೇವೆಗಳನ್ನು ಒದಗಿಸುವುದು
· ತ್ಯಾಜ್ಯದಿಂದ ಗರಿಷ್ಠ ಸಂಪನ್ಮೂಲಗಳನ್ನು ಪಡೆಯಲು ಮತ್ತು ಪರಿಸರ ರಕ್ಷಿಸುವ ಸಂದರ್ಭದಲ್ಲಿ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ತಡೆಗಟ್ಟುವುದು
· ಸರಳವಾದ ಯಂತ್ರಗಳನ್ನು ಬಳಸಿ ಮಾನವ ಸಂಪನ್ಮೂಲದ ದಕ್ಷತೆ ಹೆಚ್ಚಿಸುವುದು
·ಬಹುಪದರದ ಪ್ಲಾಸ್ಟಿಕ್ ಗಳಂತಹ ಮರು ಬಳಕೆ ಮಾಡಲಾಗದ ತ್ಯಾಜ್ಯವನ್ನು ಸೀಮೆಂಟ್ ಕಾರ್ಖಾನೆಗಳಿಗೆ ವಿಲೇವಾರಿ ಮಾಡುವುದು
· ಅಧಿಕೃತ ಮರುಬಳಕೆ ಕೇಂದ್ರಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವುದು
· ಸಮರ್ಥ ಸೌಲಭ್ಯಗಳನ್ನು ಒದಗಿಸುವ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ಉತ್ತೇಜಿಸುವುದು
· ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಕುರಿತು ದಾಖಲೆಗಳನ್ನು ನಿರ್ವಹಣೆ ಮಾಡುವುದು
ಪ್ರಕ್ರಿಯೆ: ಯೋಜನಾ ಪ್ರದೇಶದಲ್ಲಿ ಮನೆ ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣಾ ಕೇಂದ್ರ [ಎಸ್.ಡಬ್ಲ್ಯೂ.ಎಂ] ಕ್ಕೆ ತಂದು ತೂಕ ಮಾಡಲಾಗುತ್ತದೆ ಮತ್ತು ಪ್ರತಿವಾರ ಎಂ.ಆರ್.ಎಫ್ ಕೇಂದ್ರಗಳಿಗೆ ರವಾನಿಸುವ ಮುನ್ನ ತ್ಯಾಜ್ಯವನ್ನು ಪ್ಯಾಕ್ ಮಾಡಲಾಗುತ್ತದೆ. ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ಮತ್ತೆ ಎಂ.ಆರ್.ಎಫ್ ಕೇಂದ್ರದಲ್ಲಿ ತೂಕ ಮಾಡಲಾಗುತ್ತದೆ ಮತ್ತು ವಿವಿಧ ಸಂಗ್ರಹಣಾ ವಿಭಾಗಗಳಿಗೆ ಕಳುಹಿಸಲಾಗುತ್ತದೆ. ಬಳಿಕ ತ್ಯಾಜ್ಯವನ್ನು ಸಾಗಣೆದಾರರ ಸಹಕಾರದಿಂದ 25 ರಿಂದ 30 ವಿಭಾಗಗಳಿಗೆ ವಿಂಗಡಿಸಿ ಸಾಗಣೆ ಮಾಡಲಾಗುತ್ತದೆ. ಬಳಿಕ ಬೇಲಿಂಗ್ ಯಂತ್ರದ ಮೂಲಕ ಸಂಗ್ರಹ ಮಾಡಿದ ತ್ಯಾಜ್ಯವನ್ನು ಬೇಲ್ ಮಾಡಲಾಗುತ್ತದೆ. ಸಂಸ್ಕರಿಸಿದ ತ್ಯಾಜ್ಯವನ್ನು ಅಧಿಕೃತ ಸಂಸ್ಕರಣಾ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಮರುಬಳಕೆ ಮಾಡಲಾದ ತ್ಯಾಜ್ಯವನ್ನು ಸಹ ಸಂಸ್ಕರಣೆ ಉದ್ದೇಶಕ್ಕಾಗಿ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತದೆ.
ಘಟಕದ ಸಾಮರ್ಥ್ಯ: ಸಮಗ್ರ ಘನತ್ಯಾಜ್ಯ ನಿರ್ವಹಣಾ [ಎಂ.ಆರ್.ಎಫ್] ಕೇಂದ್ರದಲ್ಲಿ ಪ್ರತಿದಿನ 10 ಟನ್ ಗಳಷ್ಟು ತ್ಯಾಜ್ಯ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಲಾಗಿದೆ. ಕಚೇರಿ, ಭದ್ರತಾ ಕೊಠಡಿ ಮತ್ತು ಶೌಚಾಲಯ ಸೌಲಭ್ಯದ ಜತೆಗೆ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ಬೇಲಿಂಗ್ ಘಟಕಗಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಈ ಕೇಂದ್ರ ಒಳಗೊಂಡಿದೆ. ಇತರೆ ಸೌಕರ್ಯಗಳಾದ ಸಾಗಣೆ ಪಟ್ಟಿ, ಬೇಲಿಂಗ್ ಯಂತ್ರ, ಅಗ್ನಿ ಸುರಕ್ಷತಾ ಸೌಲಭ್ಯ, ಜನರೇಟರ್, ಸಿಸಿಟಿವಿ, 70 ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ಮತ್ತು 7 ಟನ್ ಸಾಮರ್ಥ್ಯದ ಟ್ರಕ್ ಸಹ ಸೇರಿವೆ.
ಸೇವಾ ಶುಲ್ಕ: ನಿಟ್ಟೆ ಗ್ರಾಮ ಪಂಚಾಯತ್ ನಲ್ಲಿ ಎಂ.ಆರ್.ಎಫ್ ಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪಂಚಾಯತ್ ನಿಂದ ಮಾಸಿಕ ಸೇವಾ ಶುಲ್ಕ ಪಾವತಿ ಮಾಡಲಾಗುತ್ತಿದೆ. ಈ ಖಾತೆಗೆ ಅಧ್ಯಕ್ಷರು ಅಥವಾ ಸದಸ್ಯ ಕಾರ್ಯದರ್ಶಿ ಅವರು ಸಹಿ ಹಾಕುವ ಅಧಿಕಾರ ಹೊಂದಿದ್ದಾರೆ. ಇನ್ ವಾಯ್ಸ್ ಅನ್ನು ಜಂಟಿ ಸಮಿತಿಗೆ ಸಲ್ಲಿಸಬೇಕಾಗಿದೆ ಮತ್ತು ಪ್ರತಿ ತಿಂಗಳ 5 ರಂದು ಬಹುಹಂತದ ಗ್ರಾಮ ಪಂಚಾಯತ್ ಗಳಿಗೆ ಎಂ.ಆರ್.ಎಫ್ ಕೇಂದ್ರವನ್ನು ಮುನ್ನಡೆಸುವವರು ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಸರಕುಪಟ್ಟಿ ಸ್ವೀಕರಿಸಿದ 7 ದಿನಗಳ ಒಳಗಾಗಿ ಈ ಜಂಟಿ ಸಮಿತಿಯ ಬ್ಯಾಂಕ್ ಖಾತೆಗೆ ಗ್ರಾಮ ಪಂಚಾಯತ್ ಗಳು ಸೇವಾ ಶುಲ್ಕವನ್ನು ಜಮಾ ಮಾಡಬೇಕಾಗುತ್ತದೆ.
ಗ್ರಾಮ ಪಂಚಾಯತ್ ಗಳ ಪಾತ್ರ:
· ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರ ತ್ಯಾಜ್ಯ ಉತ್ಪಾದಕರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಸಂಗ್ರಹಣೆಯ ಕಾರ್ಯವಿಧಾನದ ಬಗ್ಗೆ ತಿಳಿಸುವುದು
· ದ್ರವ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆಗಳಲ್ಲಿಯೇ ಮಾಡಬೇಕಾಗುತ್ತದೆ
· ತಮ್ಮ ವ್ಯಾಪ್ತಿಯೊಳಗೆ ಸಂಗ್ರಹಿಸಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಒಣಘಟಕಗಳಲ್ಲಿ ಸಂಗ್ರಹಿಸಿ, ಒಣ ತ್ಯಾಜ್ಯ ವಾಸನೆ ಇಲ್ಲದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಎಂ.ಆರ್.ಎಫ್ ವಾಹನಕ್ಕೆ ತಲುಪಸಬೇಕಾಗುತ್ತದೆ
· ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಚೀಲಗಳಲ್ಲಿ ಪ್ಯಾಕ್ ಮಾಡಬೇಕು
· ತ್ಯಾಜ್ಯ ಸುರಿಯುವುದನ್ನು ತಪ್ಪಿಸಲು ತ್ಯಾಜ್ಯ ಸಾಗಿಸುವ ವಾಹನ ಲಭ್ಯವಿರಬೇಕು
· ಗ್ರಾಮ ಪಂಚಾಯತ್ ನಿಂದ ಎಂ.ಆರ್.ಎಫ್ ಗಾಗಿ ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹಿಸಲು ಬಯಸಿದರೆ ಎರಡು ದಿನಗಳ ಮುಂಚಿತವಾಗಿ ಎಂ.ಆರ್.ಎಫ್ ಆಪರೇಟರ್ ಗೆ ಮಾಹಿತಿ ನೀಡಬೇಕು
· ಎಂ.ಆರ್.ಎಫ್ ಆಪರೇಟರ್ ಗೆ ಸೇವಾ ಶುಲ್ಕದ ಸಕಾಲಿಕ ಪಾವತಿ, ನಿರೀಕ್ಷೆಗಿಂತ ಕಡಿಮೆ ತ್ಯಾಜ್ಯ ಸಂಗ್ರಹವಾದರೆ ಸೇವಾ ಶುಲ್ಕದ ಶೇ 50 ರಷ್ಟು ಪಾವತಿ ಮಾಡಬೇಕಾಗುತ್ತದೆ.
ಧನ ಸಹಾಯ: ಸ್ವಚ್ಛ ಭಾರತ ಅಭಿಯಾನ [ಗ್ರಾಮೀಣ]ದಡಿ ಈ ಯೋಜನೆಗೆ 250 ಲಕ್ಷ ರೂಪಾಯಿ ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 8.32 ಲಕ್ಷ ರೂಪಾಯಿ, 15 ನೇ ಹಣಕಾಸು ಯೋಜನೆಯಡಿ 28.35 ಲಕ್ಷ ರೂಪಾಯಿ, ಗ್ರಾಮ ವಿಕಾಸ್ ನಿಧಿಯಿಂದ 10 ಲಕ್ಷ ರೂಪಾಯಿ, ನಿಟ್ಟೆ ಪಂಚಾಯತ್ ನ ಸ್ವಯಂ ನಿಧಿಯಿಂದ 23 ಲಕ್ಷ ರೂಪಾಯಿ ಒದಗಿಸಲಾಗಿದೆ.
ಫಲಿತಾಂಶ ಮತ್ತು ಪರಿಣಾಮ:
· ಎಂ.ಆರ್.ಎಫ್ ಸ್ಥಾಪಿಸಿದ ನಂತರ ಸಂಗ್ರಹಿಸಲಾದ ತ್ಯಾಜ್ಯದ ಪ್ರಮಾಣ 1 ರಿಂದ 2 ಟನ್ ಗಳಿಂದ 4 ರಿಂದ 5 ಟನ್ ಗಳಿಗೆ ಏರಿಕೆಯಾಗಿದೆ.
· ತ್ಯಾಜ್ಯವನ್ನು ಎಸೆಯುವುದು ಮತ್ತು ಸಾರ್ವಜನಿಕವಾಗಿ ಕಸ ಬಿಸಾಡುವುದು ವ್ಯಾಪಕ ಪ್ರಮಾಣದಲ್ಲಿ ಕಡಿಮೆಯಾಗಿದೆ
· ಎಂ.ಆರ್.ಎಫ್ ಕಾರ್ಯಾಚರಣೆ ಪ್ರಾರಂಭವಾದ ನಂತರ ಆದಾಯ ತಟಸ್ಥವಾಗಿದೆ.
· ವಿವಿಧ ವರ್ಗದ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಹೆಚ್ಚಾಗಿದೆ
· ಎಂ.ಆರ್.ಎಫ್ ಕೇಂದ್ರ ಅಧಿಕೃತ ಮರು ಬಳಕೆದಾರರಿಗೆ ಹೆಚ್ಚಿನ ದರದಲ್ಲಿ ತ್ಯಾಜ್ಯ ಮಾರಾಟ ಮಾಡುತ್ತಿದೆ.
· ಬೇಲಿಂಗ್ ವ್ಯವಸ್ಥೆಯು ಬೇಲಿಂಗ್ ಮಾಡಲು ಮತ್ತು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲು ಅನುಮತಿ ನೀಡುತ್ತದೆ
· ಮರು ಬಳಕೆ ಮಾಡಲಾಗದ ತ್ಯಾಜ್ಯವನ್ನು ಸಿಮೆಂಟ್ ಕಂಪೆನಿಗಳಿಗೆ ರವಾನಿಸಲಾಗುತ್ತದೆ
ಯೋಜನಾ ಪ್ರಮಾಣದಲ್ಲಿ ಏರಿಕೆ: ಬಡಗಬೆಟ್ಟು, ಕೆದುರು, ತ್ರಾಸಿ ಮತ್ತು ಹೆಬ್ರಿ ಈ ನಾಲ್ಕು ಕಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ಉಳಿದ 144 ಗ್ರಾಮ ಪಂಚಾಯತ್ ಗಳಿಗೆ ನರವಾಗಲಿದೆ.
****
(Release ID: 1794890)
Visitor Counter : 298