ಹಣಕಾಸು ಸಚಿವಾಲಯ
2021-22ರ ಸಾಲಿನ ಡಿಸೆಂಬರ್ ಅಂತ್ಯದ ವರೆಗೆ ಕೇಂದ್ರ ಸರ್ಕಾರದ ಮಾಸಿಕ ಲೆಕ್ಕಪತ್ರಗಳ ಪರಾಮರ್ಶೆ
प्रविष्टि तिथि:
31 JAN 2022 4:16PM by PIB Bengaluru
ಭಾರತ ಸರ್ಕಾರ 2021-22ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯದ ವರೆಗೆ ನಡೆಸಿರುವ ಮಾಸಿಕ ಲೆಕ್ಕಪತ್ರಗಳನ್ನು ಕ್ರೋಡೀಕರಿಸಿ, ವರದಿ ಪ್ರಕಟಿಸಿದೆ. ಅದರ ಪ್ರಮುಖಾಂಶಗಳನ್ನು ಕೆಳಗೆ ನೀಡಲಾಗಿದೆ:
ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 17,61,692 ಕೋಟಿ ರೂಪಾಯಿ(ಒಟ್ಟು ಸ್ವೀಕೃತಿಯಲ್ಲಿ ಬಜೆಟ್ ಅಂದಾಜಿಗೆ ಪೂರಕವಾಗಿ ಶೇ.89.1 ಆರ್ಥಿಕ ಸಂಪನ್ಮೂಲ ಸ್ವೀಕರಿಸಿದೆ. ಅದರಲ್ಲಿ 14,73,809 ಕೋಟಿ ರೂಪಾಯಿ ತೆರಿಗೆ ಆದಾಯ(ಕೇಂದ್ರಕ್ಕೆ ನಿವ್ವಳ ಆದಾಯ), 2,59,414 ಕೋಟಿ ರೂಪಾಯಿ ತೆರಿಗೆಯೇತರ ಆದಾಯ ಮತ್ತು 28,469 ಕೋಟಿ ರೂಪಾಯಿ ಸಾಲಯೇತರ ಬಂಡವಾಳ ಸ್ವೀಕೃತಿ ಸೇರಿದೆ. ಸಾಲ ಅಲ್ಲದ ಬಂಡವಾಳ ಸ್ವೀಕೃತಿಯಲ್ಲಿ 19,105 ಕೋಟಿ ರೂ. ಸಾಲ ವಸೂಲಾತಿ ಮೊತ್ತ ಮತ್ತು ಇತರೆ ಬಂಡವಾಳ ಸ್ವೀಕೃತಿಯಾಗಿ 9,364 ಕೋಟಿ ರೂಪಾಯಿ ಸೇರಿದೆ. 2021 ಡಿಸೆಂಬರ್ ವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರವು ತೆರಿಗೆ ಹಣ ಹಂಚಿಕೆ ರೂಪದಲ್ಲಿ 4,50,310 ಕೋಟಿ ರೂಪಾಯಿ ವರ್ಗಾವಣೆ ಮಾಡಿದೆ.
ಭಾರತ ಸರ್ಕಾರವು ಒಟ್ಟು 25,21,058 ಕೋಟಿ ರೂಪಾಯಿ ವೆಚ್ಚ ಮಾಡಿದೆ ಅಥವಾ ಭರಿಸಿದೆ(2021-22ನೇ ಸಾಲಿನ ಬಜೆಟ್ ಅಂದಾಜಿಗೆ ಪೂರಕವಾಗಿ 72.4%). ಅದರಲ್ಲಿ 21,29,414 ಕೋಟಿ ರೂ. ಕಂದಾಯ ಖಾತೆ ಮತ್ತು 3,91,644 ಕೋಟಿ ರೂ. ಬಂಡವಾಳ ಖಾತೆಗೆ ಸೇರಿದ್ದಾಗಿದೆ. ಒಟ್ಟು ಆದಾಯ ವೆಚ್ಚದ ಪೈಕಿ, 5,64,414 ಕೋಟಿ ರೂಪಾಯಿ ಬಡ್ಡಿ ಪಾವತಿ ಮಾಡಲು ಮತ್ತು 2,71,374 ಕೋಟಿ ರೂಪಾಯಿಯನ್ನು ಪ್ರಮುಖ ಸಬ್ಸಿಡಿ ಯೋಜನೆಗಳಿಗೆ ವಿನಿಯೋಗಿಸಲಾಗಿದೆ.
***
(रिलीज़ आईडी: 1794008)
आगंतुक पटल : 174