ಕ್ರಮ ಸಂಖ್ಯೆ
|
ಪ್ರಶ್ನೆ
|
ಉತ್ತರ
|
1
|
ಆರ್.ಆರ್.ಬಿ ಎಂದರೇನು, ಅದರ ಪಾತ್ರವೇನು, ಕಾರ್ಯವೈಖರಿಯೇನು?
|
ರೈಲ್ವೆ ರಿಕ್ರುಟ್‌ಮೆಂಟ್ ಬೋರ್ಡ್, ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತದೆ. ಸಿ ದರ್ಜೆಯ ಹುದ್ದೆಗಳ ನೇಮಕಾತಿಗಾಗಿ ಈ ಮಂಡಳಿ ಶ್ರಮಿಸುತ್ತದೆ.
ದೇಶದಲ್ಲಿ 21 ಆರ್.ಆರ್.ಬಿಗಳಿವೆ.
ಪ್ರತಿ ರೈಲ್ವೆ ನೇಮಕಾತಿ ಮಂಡಳಿಗೂ ಒಬ್ಬರು ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಹಾಗೂ ಅಗತ್ಯ ಇರುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
|
2
|
ಈ ಮೊದಲು ಆರ್‌ಆರ್‌ಬಿಯಿಂದ ನೇಮಕಾತಿಯಾದ ವಿವರ
|
2018ರಿಂದ 2,83,747 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು.. ಅದರಲ್ಲಿ 1.32 ಲಕ್ಷಗಳಷ್ಟು ಹುದ್ದೆಗಳ ನೇಮಕಾತಿ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಕೋವಿಡ್ ಪಿಡುಗಿನ ಸಂದರ್ಭದಲ್ಲಿಯೂ ಆರ್.ಆರ್.ಆರ್ ಕೇಂದ್ರಗಳು ನಾಲ್ಕು ಕೋಟಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಮೂರು ಮೂರುವರೆ ವರ್ಷಗಳಲ್ಲಿ ಇಷ್ಟು ಜನ ಅಭ್ಯರ್ಥಿಗಳನ್ನು ನಿಷ್ಕರ್ಷೆಗೆ ಒಳಪಡಿಸಿರುವುದು ಅತ್ಯಗತ್ಯವಾಗಿದೆ.
|
3.
|
ಈ ನೇಮಕಾತಿಯನ್ನು ಎರಡು ಹಂತ ಕಂಪ್ಯೂಟರ್ ಆಧಾರಿತ ಟೆಸ್ಟ್ ಮೂಲಕ ಹಮ್ಮಿಕೊಳ್ಳಲಾಗುತ್ತದೆಯೆ?
|
ಲಭ್ಯ ಇರುವ ಹುದ್ದೆಗಳಿಗೆ ಹೋಲಿಸಿದರೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಕೆಲವು ಹುದ್ದೆಗಳಿಗಂತೂ ಕೋಟಿಗೂ ಮೀರಿ ಜನರು ಅರ್ಜಿಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಆಧಾರಿತ ಟೆಸ್ಟ್ ಸೂಕ್ತವೆನಿಸುತ್ತದೆ. ಮೊದಲ ಹಂತದಲ್ಲಿ ಒಂದಷ್ಟು ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅವರೆಲ್ಲ ಎರಡನೆಯ ಹಂತದ ಪರೀಕ್ಷೆಗೆ ಅರ್ಹರಾಗುತ್ತಾರೆ. ಎರಡನೆಯ ಸುತ್ತಿನ ಪರೀಕ್ಷೆಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಉಳಿಯುತ್ತಾರೆ. ಹೀಗೆ ಉಳಿದ ಅಭ್ಯರ್ಥಿಗಳ ಅಂಕ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ.
|
4.
|
ಯಾವ ಮಾನದಂಡದ ಮೇಲೆ ಅಭ್ಯರ್ಥಿಗಳನ್ನು ಎರಡನೆಯ ಸುತ್ತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?
|
ರೈಲ್ವೆ ರಿಕ್ರುಟ್‌ಮೆಂಟ್ ಬೋರ್ಡ್ ಅಂಕಿಗಳ ಪ್ರಕಾರ, ಹುದ್ದೆ ಲಭ್ಯ ಇರುವ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚಿನ ಅಭ್ಯರ್ಥಿಗಳನ್ನು ಎರಡನೆಯ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು 2015ರ ಅಧಿಸೂಚನೆ ಹೇಳುತ್ತದೆ. ತಾಂತ್ರಿಕವಲ್ಲದ, ಜನಪ್ರಿಯ ಹುದ್ದೆಗಳಿಗೆ ಈ ಕಂಪ್ಯೂಟರ್ ಆಧಾರಿತ ಟೆಸ್ಟ್ ಅನ್ನು ಬಳಸಲಾಗುತ್ತಿದೆ.
ಮೊದಲ ಹಂತದ ಕಂಪ್ಯುಟರ್ ಆಧಾರಿತ ಟೆಸ್ಟ್ ಆದ ಮೇಲೆ, ಎರಡನೆಯ ಹಂತದ ಆಯ್ಕೆಯಲ್ಲಿ ಮತ್ತು ಹುದ್ದೆಯ ನೇಮಕಾತಿಗೆ ಸೂಕ್ತ ಅಭ್ಯರ್ಥಿ ದೊರೆಯುವಂತೆ, ಕರೆ ನೀಡಿದ ಹುದ್ದೆಗಳು ಭರ್ತಿಯಾಗಿ, ಕಾರ್ಯಗಳು ಸುಸೂತ್ರವಾಗಿ ಸಾಗುವಷ್ಟು, ಅಗತ್ಯದ ಶಿಫ್ಟ್‌ಗಳಲ್ಲಿ ಬೇಕಿರುವಷ್ಟು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಇದೇ ಕ್ರಮವನ್ನು ಸೆಂಟ್ರಲೈಸ್ಡ್ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ವ್ಯವಸ್ಥೆಯಲ್ಲಿಯೂ ಮಾಡಲಾಗುತ್ತಿತ್ತು. 2010ರಲ್ಲಿ ಪದವೀಧರ ಅಭ್ಯರ್ಥಿಗಳಿಗೆ ಇದೇ ಕ್ರಮವನ್ನು ಅನುಸರಿಸಲಾಗಿತ್ತು. 2010/4 ರ ಅಧಿಸೂಚನೆಯಲ್ಲಿ 10+2 ವಿದ್ಯಾರ್ಹತೆಯ ಅಭ್ಯರ್ಥಿಗಳಿಗೂ ಇದೇ ನಿಯಮವನ್ನು ಲಾಗೂಗೊಳಿಸಲಾಯಿತು.
|
5.
|
ಎನ್ ಟಿಪಿಸಿ ಪರೀಕ್ಷೆಗಳಿಗೆ ಅದೆಷ್ಟು ಜನ ಅಭ್ಯರ್ಥಿಗಳು ಎರಡನೆಯ ಸುತ್ತಿಗೆ ಆಯ್ಕೆಯಾಗುತ್ತಾರೆ?
|
ಸಿಇಎನ್ 01/2019ರ ವೇಳೆಗೆ ಪದವೀಧರ ವಿದ್ಯಾರ್ಥಿಗಳಿಗೆ ಹಾಗೂ 10+2 ಅಭ್ಯರ್ಥಿಗಳಿಗೆ ಸಾಮಾನ್ಯವಾದ ಒಂದೇ ಕಂಪ್ಯುಟರ್ ಆಧಾರಿತ ಟೆಸ್ಟ್ ಅಳವಡಿಸಲಾಗಿತ್ತು. ಆಗ ಅಗತ್ಯ ಇರುವ ಹುದ್ದೆಗಿಂತ 20ರಷ್ಟು, ಅಂದರೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಹಂತದ, ಈ ಸುತ್ತಿನಲ್ಲಿ ಆಯ್ಕೆಯಾಗಿ, ಎರಡನೆಯ ಸುತ್ತಿನಲ್ಲಿ ಪರೀಕ್ಷೆ ಬರೆಯಲು ಸಾಕಷ್ಟು ವಿದ್ಯರ್ಥಿಗಳಿಗೆ ಅವಕಾಶ ನೀಡುವುದು ಈ ಮೊದಲ ಹಂತದಲ್ಲಿ ಪಾಸಾಗುವ ಮೂಲಕ ಮಾಡಲಾಗುತ್ತದೆ.
|
6.
|
ಏಳು ಲಕ್ಷ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಏಳು ಲಕ್ಷದವರೆಗಿನ ಕ್ರಮಸಂಖ್ಯೆ ಇರುವವರಿಗೆ ಅಲ್ಲ
|
ಎರಡನೆಯ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್‌ಗೆ ಏಳು ಲಕ್ಷ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಎರಡನೆಯ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್‌ನಲ್ಲಿ ಐದು ಹಂತದ ಪರೀಕ್ಷೆಗಳಿರುತ್ತವೆ. ಪ್ರತಿ ಹಂತದ ನಂತರವೂ ಒಬ್ಬೊಬ್ಬ ಅಭ್ಯರ್ಥಿ ಅರ್ಹರಾಗುತ್ತ ಹೋಗುತ್ತಾರೆ. ಇಂಥ ಹಲವು ಹಂತಗಳಲ್ಲಿ ಏಳು ಲಕ್ಷದವರೆಗಿನ ಅಭ್ಯರ್ಥಿಗಳು ಹೆಚ್ಚು ಸಲ ಆಯ್ಕೆಯಾಗಿರುತ್ತಾರೆ.
|
7.
|
ಆರ್.ಆರ್.ಬಿಯು ಲಭ್ಯ ಇರುವ ಪ್ರತಿ ಹುದ್ದೆಗೆ ಕೇವಲ 4–5ರಷ್ಟು ಪಟ್ಟು ಅಭ್ಯರ್ಥಿಗಳನ್ನು ಕರೆಯುತ್ತದೆ
|
ನೇಮಕಾತಿಯ ಅಧಿನಿಯಮದ ಪ್ರಕಾರ 13ನೆಯ ಪ್ಯಾರಾದಲ್ಲಿ ಪ್ರತಿ ಹುದ್ದೆಗೆ 1:20ರಂತೆ ಆಯ್ಕೆ ಮಾಡಬೇಕು ಎಂದಿದೆ. 7,05,446 ಕ್ರಮಸಂಖ್ಯೆಗಳು, 35281 ಹುದ್ದೆಗಳಿಗೆ ಎರಡನೆಯ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆಯಾಗಿದೆ. ಇದು ಒಂದು ಹುದ್ದೆಗೆ 20 ಅಭ್ಯರ್ಥಿಗಳಿಗೆ ಅವಕಾಶ ನೀಡಿದಂತಾಗಿದೆ.
|
8.
|
ಹತ್ತು ಅಭ್ಯರ್ಥಿಗಳು ಮೊದಲು ಒಂದು ಹುದ್ದೆಗಾಗಿ ಸ್ಪರ್ಧಿಸುತ್ತಿದ್ದರು. ಇದೀಗ ಒಬ್ಬ ಅಭ್ಯರ್ಥಿ ಹತ್ತು ಹುದ್ದೆಗಳಿಗೆ ಸ್ಪರ್ಧಿಸುವಂತಾಗಿದೆ.
|
35,281 ಹುದ್ದೆಗಳಿಗೆ ಅಂತಿಮವಾಗಿ ಅಭ್ಯರ್ಥಿಗಳು ಶ್ರೇಣಿಯ ಆಧಾರಿತವಾಗಿ ಆಯ್ಕೆಯಾಗಿರುತ್ತಾರೆ. ಒಬ್ಬ ವ್ಯಕ್ತಿ, ಒಂದೇ ಹುದ್ದೆಗೆ ಆಯ್ಕೆಯಾಗುತ್ತಾನೆ. ಅಭ್ಯರ್ಥಿ ಪಡೆದಿರುವ ಅಂಕ ಹಾಗೂ ಆದ್ಯತೆಯನ್ನು ಆಧರಿಸಿ ನೇಮಕಾತಿ ಮಾಡುವುದರಿಂದ ಯಾವ ಹುದ್ದೆಯೂ ಖಾಲಿ ಉಳಿಯುವುದಿಲ್ಲ.
|
9.
|
ಪದವೀಧರ ವಿದ್ಯಾರ್ಥಿಗಳು, ಪದವೀಧರ ಅರ್ಹತೆ ಇರುವ ವಿಭಾಗದಲ್ಲಿಯೂ, 10+2 ಅರ್ಹತೆ ಇರುವ ವಿಭಾಗದಲ್ಲಿಯೂ ಅರ್ಜಿ ಸಲ್ಲಿಸುವುದರಿಂದ, ಪದವೀಧರ ಅಭ್ಯರ್ಥಿಗಳು ಎರಡೂ ಕಡೆ ಅವಕಾಶ ಪಡೆದಂತೆ ಆಗುತ್ತಿದೆ. ಮೊದಲು ಪದವೀಧರರಿಗೆ ಬೇರೆ, ಉಳಿದವರಿಗೆ ಬೇರೆ ನೋಟಿಫಿಕೇಶನ್ ಆಗುತ್ತಿತ್ತು. ಪ್ರತಿಯೊಬ್ಬರು ಎರಡು ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ
|
ಸಮಯ ಉಳಿಸಲೆಂದೇ ಪದವೀಧರ ಅಭ್ಯರ್ಥಿ ಹಾಗೂ 10+2 ಅಭ್ಯರ್ಥಿಗಳನ್ನು ಒಗ್ಗೂಡಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸಮಯದ ಜೊತೆಗೆ, ಶಕ್ತಿ ಹಾಗೂ ಪ್ರಯತ್ನಗಳು ವ್ಯಯವಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಯಿತು. ಕೋವಿಡ್‌ನಂತಹ ಈ ದುರಿತ ಕಾಲದಲ್ಲಿ ಎರಡೆರಡು ಸಲ ನೇಮಕಾತಿ ಪ್ರಕ್ರಿಯೆ ನಡೆಸುವುದು ಕಷ್ಟಕರವಾಗಿದೆ. ಮೊದಲ ಸುತ್ತಿನ ಕಂಪ್ಯುಟರ್ ಆಧಾರಿತ ಟೆಸ್ಟ್ ಅನ್ನು 10+2 ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಇರಿಸಲಾಗಿದೆ. ಹಾಗಾಗಿ ಮೊದಲ ಹಂತವನ್ನು ಪಾಸು ಮಾಡುವಲ್ಲಿ ಯಾವ ಕಷ್ಟವೂ ಆಗುವುದಿಲ್ಲ. ಎರಡನೆಯ ಹಂತದಲ್ಲಿ ಪ್ರತಿ ಹಂತವೂ ಬೇರೆ ಬೇರೆ ಸ್ವರೂಪದಲ್ಲಿರುತ್ತವೆ. ದೇಶದಾದ್ಯಂತ ಇದೇ ವಿನ್ಯಾಸದಲ್ಲಿ ಎರಡನೆಯ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್ ಆಯೋಜಿಸಲಾಗುತ್ತದೆ.
|
10.
|
ಎನ್‌ಟಿಪಿಸಿ ಫಲಿತಾಂಶದ ವಿರುದ್ಧ, ಪ್ರತಿಭಟಿಸುವಂತದ್ದು, ರೇಲ್ವೆ ಇಲಾಖೆ ಮಾಡಿರುವುದಾದರೂ ಏನು?
|
ಆರ್.ಆರ್.ಬಿಯು ಎರಡನೆಯ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್ ಅನ್ನು ಮತ್ತು ಎನ್‌ಟಿಪಿಸಿಗೆ ಸಂಬಂಧಿಸಿದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್ ಅನ್ನು ಮುಂದೂಡಿದೆ.
ಎನ್‌ಟಿಪಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಎತ್ತಿರುವ ಕೆಲವು ಆಕ್ಷೇಪಗಳನ್ನು ಗಮನಿಸಲು ಹಿರಿಯ ಅಧಿಕಾರಿಗಳಿರುವ ವಿಚಕ್ಷಣಾ ತಂಡವನ್ನು ನೇಮಿಸಲಾಗಿದೆ. ಮೊದಲ ಹಂತದ ಕಂಪ್ಯೂಟರ್ ಆಧಾರಿತ ಟೆಸ್ಟ್‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತು ಆಕ್ಷೇಪದ ಕುರಿತು ಅಧ್ಯಯನ ನಡೆಸಲು ಈ ಅಧ್ಯಯನ ತಂಡವನ್ನು ನೇಮಿಸಲಾಗಿದೆ. ಈಗಾಗಲೇ ಮುಂದಿನ ಹಂತಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅರ್ಹತಾ ಪಟ್ಟಿಗೆ ಯಾವುದೇ ಧಕ್ಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೆಯ ಹಂತದ ಸಿಬಿಟಿಗೆ ತೊಂದರೆಯಾಗದಂತೆ ಈ ಕ್ರಮಕೈಗೊಳ್ಳಲಾಗಿದೆ. ,
|
11.
|
ಈ ಸಮಿತಿಗೆ ಅಭ್ಯರ್ಥಿಗಳು ತಮ್ಮ ಅಹವಾಲು ಸಲ್ಲಿಸುವುದು ಹೇಗೆ?
?
|
ಅಭ್ಯರ್ಥಿಗಳು ತಮ್ಮ ಆಕ್ಷೇಪಗಳೇನಾದರೂ ಇದ್ದಲ್ಲಿ, ಅವರ ದೂರು, ಅಹವಾಲುಗಳನ್ನು ಈ ಕೆಳಗೆ ನೀಡಿರುವ ಇ.ಮೇಲ್ ವಿಳಾಸಕ್ಕೆ ಮೇಲ್ ಮಾಡಬಹುದಾಗಿದೆ. rrbcommittee@railnet.gov.in
ಆರ್.ಆರ್.ಬಿಗಳ ಎಲ್ಲ ಅಧ್ಯಕ್ಷರೂ ಅಭ್ಯರ್ಥಿಗಳ ಎಲ್ಲ ಬಗೆಯ ದೂರು ದುಮ್ಮಾನಗಳನ್ನು ಸ್ವೀಕರಿಸಲು ತಿಳಿಸಲಾಗಿದೆ. ಹಲವಾರು ವಲಯವಾರು ವಿಂಗಡಿಸಿರುವ ವಿಭಾಗಗಳಲ್ಲಿ ದೂರು ಸ್ವೀಕರಿಸುವ ಶಿಬಿರಗಳನ್ನು ಏರ್ಪಡಿಸಲಾಗಿದೆ. ಅಭ್ಯರ್ಥಿಗಳು ಈ ಕೇಂದ್ರಗಳಲ್ಲಿ ತಮ್ಮ ಆಕ್ಷೇಪಗಳನ್ನು ಸಲ್ಲಿಸಬಹುದಾಗಿದೆ.
|
12.
|
ಈ ಸಮಿತಿಗೆ ದೂರು ಸಲ್ಲಿಸುವ ಕೊನೆಯ ದಿನ ಯಾವುದು?
|
16.2.22ರವರೆಗೆ ಅಂದರೆ ಫೆಬ್ರುವರಿ 16ರವರೆಗೂ ದೂರು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶವಿದೆ.
|
13.
|
ಈ ದೂರುಗಳಿಗೆ ಪರಿಹಾರ ಒದಗಿಸಲು ಸಮಿತಿಗೆ ಕಾಲದ ಗಡುವು ನೀಡಲಾಗಿದೆಯೇ?
|
ಈ ಎಲ್ಲ ಆಕ್ಷೇಪ ಹಾಗೂ ದೂರುಗಳನ್ನು ಗಮನಿಸಿದ ನಂತರ ಸಮಿತಿಯು ಮಾರ್ಚ್ 4 2022ರ ಹೊತ್ತಿಗೆ ತಾನು ಗಮನಿಸಿರುವ ಅಂಶಗಳ ಕುರಿತು ವರದಿ ಸಲ್ಲಿಸುವುದು.
|
14.
|
ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರಲು ಕಾರಣವೇನು?
|
ಮಾರ್ಚ್ 2020ರಿಂದ ಕೋವಿಡ್ ಪಿಡುಗಿನ ಕಾಲ ಆರಂಭವಾಗಿರುವುದು, ನೇಮಕಾತಿ ಪ್ರಕ್ರಿಯೆ ಮುಂದೂಡುವಂತಾಗಿದೆ. ವಿಳಂಬಕ್ಕೆ ಕಾರಣವಾಗಿದೆ. ಕೋವಿಡ್ 19 ಹರಡುವಿಕೆ ತಡೆಯಲು ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯ ನಿಷೇಧಗಳನ್ನು ಹೇರಲಾಗಿದೆ. ಪರಸ್ಪರ ಅಂತರವನ್ನು ಕಾಯಲೆಂದು ರಚಿಸಿರುವ ನಿಯಮಾವಳಿಗಳಿಂದ ಕಂಪ್ಯೂಟರ್ ಆಧಾರಿತ ಟೆಸ್ಟ್‌ಗಳಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಸಂಖ್ಯೆಯ ಮೇಲೆಯೂ ಪರಿಣಾಮ ಬೀರಿದೆ. ಸಿಇಎನ್‌ಗಾಗಿ ಮೊದಲ ಹಂತದ ಪರೀಕ್ಷೆಗಳನ್ನು 133 ಶಿಫ್ಟ್‌ಗಳಲ್ಲಿ 1/2019ರಿಂದ ಆಯೋಜಿಸಲಾಗಿತ್ತು. ಸದ್ಯ ಹಾಗೆ ಶಿಫ್ಟ್‌ಗಳಲ್ಲಿ ಆಯೋಜಿಸಲು ಆಗುತ್ತಿಲ್ಲ.
|