ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

ʻಕೋ-ವಿನ್ʼ ತಾಜಾ ಮಾಹಿತಿ


ʻಕೋ-ವಿನ್ʼ ಪೋರ್ಟಲ್‌ನಲ್ಲಿ ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿ ಆರು ಸದಸ್ಯರ ನೋಂದಣಿಗೆ ಅವಕಾಶ

Posted On: 21 JAN 2022 6:45PM by PIB Bengaluru

ಫಲಾನುಭವಿಗಳ ಅನುಕೂಲಕ್ಕಾಗಿ ʻಕೋ-ವಿನ್ʼಗೆ ವಿವಿಧ ಉಪಯುಕ್ತ ವೈಶಿಷ್ಟ್ಯಗಳ ಪರಿಷ್ಕರಣೆ ಮುಂದುವರಿದಿದ್ದು, ಇದರ ಭಾಗವಾಗಿ ʻಕೋವಿನ್ʼ ಸ್ವಯಂ ನೋಂದಣಿ ಪೋರ್ಟಲ್‌ನಲ್ಲಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಎ) ʻಕೋ-ವಿನ್ʼನಲ್ಲಿ ನೋಂದಣಿ - ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಪ್ರಸ್ತುತ ಇರುವ 4 ಸದಸ್ಯರ ಮಿತಿಯ ಬದಲಿಗೆ ಈಗ 6 ಸದಸ್ಯರನ್ನು ʻಕೋ-ವಿನ್ʼನಲ್ಲಿ ನೋಂದಾಯಿಸಬಹುದು.

ಬಿ) ಲಸಿಕೆ ಸ್ಥಿತಿ ಬದಲಾವಣೆಗೆ ಅವಕಾಶ - ʻಕೋ-ವಿನ್ʼ ಖಾತೆಯಲ್ಲಿ ʻಸಮಸ್ಯೆಯನ್ನು ತಿಳಿಸಿʼ (ರೈಸ್‌ ಎನ್‌ ಇಶ್ಯು) ವಿಭಾಗದ ಅಡಿಯಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದರ ಮೂಲಕ ಫಲಾನುಭವಿಯು ತನ್ನ ಪ್ರಸ್ತುತ ಲಸಿಕೆ ಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಪೂರ್ಣ ಲಸಿಕೆ ಪಡೆದ ಸ್ಥಿತಿಯಿಂದ ಭಾಗಶಃ ಲಸಿಕೆ ಪಡೆದ ಸ್ಥಿತಿಗೆ ಅಥವಾ ಲಸಿಕೆ ಪಡೆಯದ ಸ್ಥಿತಿಗೆ ಬದಲಾಯಿಸಬಹುದು. ಇದೇ ವೇಳೆ, ಭಾಗಶಃ ಲಸಿಕೆ ಪಡೆದ ಸ್ಥಿತಿಯಿಂದ ಲಸಿಕೆ ಪಡೆಯದ ಸ್ಥಿತಿಗೆ ಬದಲಾಯಿಸಬಹುದು. ಅಪರೂಪದ ಸಂದರ್ಭಗಳಲ್ಲಿ, ಲಸಿಕೆದಾರರು ಫಲಾನುಭವಿಗಳ ಲಸಿಕೆ ದತ್ತಾಂಶವನ್ನು ನಮೂದಿಸುವಾಗ ಆದ ಅಜಾಗರೂಕತೆ ಅಥವಾ ದೋಷಗಳಿಂದಾಗಿ ಲಸಿಕೆ ಪ್ರಮಾಣಪತ್ರಗಳು ಸೃಷ್ಟಿಯಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಲಸಿಕೆಯ ಸ್ಥಿತಿಯನ್ನು ಫಲಾನುಭವಿಗಳು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ʻಸಮಸ್ಯೆನ್ನು ತಿಳಿಸಿʼ(ರೈಸ್‌ ಎನ್‌ ಇಶ್ಯು) ವೈಶಿಷ್ಟ್ಯದ ಮೂಲಕ ಆನ್‌ಲೈನ್ ವಿನಂತಿಯನ್ನು ಸಲ್ಲಿಸಿದ ನಂತರ 3-7 ದಿನಗಳಲ್ಲಿ ಈ ಬದಲಾವಣೆ ಚಾಲ್ತಿಗೆ ಬರಲಿದೆ. ದತ್ತಾಂಶದಲ್ಲಿ ಹೊಸ ಲಸಿಕೆ ಸ್ಥಿತಿಯನ್ನು ಯಶಸ್ವಿಯಾಗಿ ನವೀಕರಿಸಿದ ನಂತರ ಅಂತಹ ಫಲಾನುಭವಿಗಳು ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಮಾಣಿತ ಮಾರ್ಗಸೂಚಿಗಳ ಪ್ರಕಾರ ಹತ್ತಿರದ ಲಸಿಕೆ ಕೇಂದ್ರದಲ್ಲಿ ತಮ್ಮ ಲಸಿಕೆ ಡೋಸ್ ಅನ್ನು ಪಡೆಯಬಹುದು.

***(Release ID: 1791661) Visitor Counter : 208