ಹಣಕಾಸು ಸಚಿವಾಲಯ
ನಿರ್ದಿಷ್ಟ ಸಾಲದ ಖಾತೆಗಳ ಸಾಲಗಾರರಿಗೆ ಆರು ತಿಂಗಳ ಕಾಲ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿಸುವ ಯೋಜನೆಗೆ ಸಂಪುಟದ ಅನುಮೋದನೆ
Posted On:
19 JAN 2022 3:37PM by PIB Bengaluru
ನಿರ್ದಿಷ್ಟ ಸಾಲದ ಖಾತೆಗಳಲ್ಲಿ ಸಾಲಪಡೆದವರಿಗೆ ಆರು ತಿಂಗಳ ಕಾಲ (1.3.2020 ರಿಂದ 31.8.2020) ರವರೆಗೆ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಯೋಜನೆಯ ಅಡಿಯಲ್ಲಿ ಪರಿಹಾರ ಪಾವತಿಸುವ ಕುರಿತ ಸಾಲ ನೀಡುವ ಸಂಸ್ಥೆಗಳು (ಎಲ್,ಐ.ಗಳು) ಸಲ್ಲಿಸಿದ ಉಳಿಕೆ ಕ್ಲೇಮ್ ಗಳಿಗೆ ಸಂಬಂಧಿಸಿದಂತೆ 973.74 ಕೋಟಿ ರೂ. ಪರಿಹಾರದ ಮೊತ್ತಕ್ಕೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತನ್ನ ಅನುಮೋದನೆ ನೀಡಿದೆ.
ಪ್ರಯೋಜನಗಳು:
ಸಾಲಪಡೆದವರು ಆರು ತಿಂಗಳುಗಳ ಕಾಲ ಸಾಲದ ಕಂತು ಪಾವತಿಯಿಂದ ವಿನಾಯಿತಿ ನೀಡಿದ್ದ (ಮೊರಟೋರಿಯಂ) ಅವಧಿಯಲ್ಲಿ ಅದರ ಪ್ರಯೋಜನ ಪಡೆದಿರಲಿ ಅಥವಾ ಇಲ್ಲದಿರಲಿ, ಒಟ್ಟಾರೆ ಸಂಕಷ್ಟದಲ್ಲಿರುವ/ದುರ್ಬಲ ವರ್ಗದ ಸಾಲಗಾರರಿಗೆ ಮೊರಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಮಾಡುವ ಮೂಲಕ, ಸಣ್ಣ ಸಾಲಗಾರರಿಗೆ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉಂಟಾದ ಒತ್ತಡವನ್ನು ತಡೆದುಕೊಳ್ಳಲು ಮತ್ತು ತಮ್ಮ ಕಾಲ ಮೇಲೆ ತಾವು ಮರಳಿ ನಿಲ್ಲಲು ಯೋಜನೆಯು ಸಹಾಯ ಮಾಡುತ್ತದೆ.
ಸಂಪುಟದ ಅನುಮೋದನೆಯೊಂದಿಗೆ ಯೋಜನೆಗೆ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಈಗಾಗಲೇ ನೀಡಲಾಗಿದೆ. ಉಲ್ಲೇಖಿತ ಮೊತ್ತ 973.74 ಕೋಟಿ ರೂ.ಗಳನ್ನು ಈ ಕಾರ್ಯಾಚರಣೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿತರಿಸಲಾಗುವುದು.
ಕ್ರ.ಸಂ.
|
ಎಸ್.ಬಿ.ಐ. ಮೂಲಕ ಕ್ಲೇಮ್ ಸಲ್ಲಿಸಿದ ದಿನಾಂಕ
|
ಸಾಲ ನೀಡುವ ಸಂಸ್ಥೆಗಳ ಸಂಖ್ಯೆ
|
ಫಲಾನುಭವಿಗಳ ಸಂಖ್ಯೆ
|
ಸ್ವೀಕರಿಸಲಾದ ಕ್ಲೇಮ್ ಮೊತ್ತ
|
ವಿತರಿಸಲಾದ ಮೊತ್ತ
|
ಬಾಕಿ ಇರುವ ವಿತರಿಸಬೇಕಾದ ಮೊತ್ತ
|
1
|
23.3.2021
|
1,019
|
1406,63,979
|
4,626.93
|
4,626.93
|
-
|
2
|
23.7.2021 & 22.9.2021
|
492
|
499,02,138
|
1,316.49
|
873.07
|
443.42
|
3
|
30.11.2021
|
379
|
400,00,000
|
216.32
|
0
|
216.32
|
4
|
Resubmitted by SBI
|
101
|
83,63,963
|
314.00
|
-
|
314.00
|
ಒಟ್ಟು
|
|
1,612
|
2389,30,080
|
6,473.74
|
5,500.00
|
973.74
|
ಹಿನ್ನೆಲೆ:
ಅಕ್ಟೋಬರ್, 2020 ರಲ್ಲಿ ಸಂಪುಟವು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, "ನಿರ್ದಿಷ್ಟ ಸಾಲದ ಖಾತೆಗಳಲ್ಲಿ (1.3.2020 ರಿಂದ 31.8.2020) ಸಾಲಪಡೆದವರಿಗೆ ಆರು ತಿಂಗಳ ಕಾಲ ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಪರಿಹಾರ ಪಾವತಿ ಮಾಡುವ ಯೋಜನೆ"ಗೆ 5,500 ಕೋಟಿ ರೂ. ಅನುಮೋದಿಸಿತ್ತು. ಕೆಳಗಿನ ಪ್ರವರ್ಗದ ಸಾಲಗಾರರು ಯೋಜನೆಯಡಿಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿದ್ದರು:
i. 2 ಕೋಟಿ ರೂ.ವರೆಗಿನ ಎಂ.ಎಸ್.ಎಂ.ಇ. ಸಾಲಗಳು
ii. 2 ಕೋಟಿ ರೂ.ವರೆಗಿನ ಶೈಕ್ಷಣಿಕ ಸಾಲಗಳು
iii. 2 ಕೋಟಿ ರೂ.ವರೆಗಿನ ಗೃಹ ಸಾಲಗಳು
iv. 2 ಕೋಟಿ ರೂ.ವರೆಗಿನ ಗ್ರಾಹಕ ಬಳಕೆ ವಸ್ತು ಸಾಲಗಳು.
v. 2 ಕೋಟಿ ರೂ.ವರೆಗಿನ ಕ್ರೆಡಿಟ್ ಕಾರ್ಡ್ ಬಾಕಿಗಳು
vi. 2 ಕೋಟಿ ರೂ.ವರೆಗಿನ ವಾಹನ ಸಾಲಗಳು
vii. 2 ಕೋಟಿ ರೂ.ವರೆಗಿನ ವೃತ್ತಿಪರರ ವೈಯಕ್ತಿಕ ಸಾಲಗಳು
viii. 2 ಕೋಟಿ ರೂ.ವರೆಗಿನ ಬಳಕೆ (ಕಂನ್ಸೆಂಷನ್) ಸಾಲಗಳು.
2020-2021ರ ಹಣಕಾಸು ವರ್ಷದ ಆಯವ್ಯಯದಲ್ಲಿ ಯೋಜನೆಗಾಗಿ 5,500 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಸಂಪುಟ ಅನುಮೋದಿಸಿದ ಸಂಪೂರ್ಣ ಮೊತ್ತ 5,500 ಕೋಟಿ ರೂ.ಗಳನ್ನು ಯೋಜನೆಯಡಿಯಲ್ಲಿ ನೋಡಲ್ ಸಂಸ್ಥೆಯಾದ ಎಸ್.ಬಿ.ಐ.ಗೆ ಸಾಲ ನೀಡುವ ಸಂಸ್ಥೆಗಳಿಗೆ ಮರುಪಾವತಿಗಾಗಿ ವಿತರಿಸಲಾಗಿತ್ತು.
5,500 ಕೋಟಿ ರೂ.ಗಳ ಅಂದಾಜು ಮೊತ್ತವನ್ನು ಮೇಲೆ ತಿಳಿಸಿದ ಪ್ರವರ್ಗದ ಸಾಲಗಳಿಗೆ ಎಸ್.ಬಿ.ಐ ಮತ್ತು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳ ಪಾಲನ್ನು ಕ್ರೋಡೀಕರಿಸುವ ಮಾಡುವ ಮೂಲಕ ಮಾಡಲಾಗಿತ್ತು. ಸಾಲ ನೀಡುವ ಸಂಸ್ಥೆಗಳು ವೈಯಕ್ತಿಕವಾಗಿ ತಮ್ಮ ಲೆಕ್ಕ ಪರಿಶೋಧನಾ ಪೂರ್ವ ಖಾತೆ-ವಾರು ಕ್ಲೇಮ್ ಗಳನ್ನು ಸಲ್ಲಿಸಿದ ನಂತರ ನಿಜವಾದ ಮೊತ್ತವು ತಿಳಿಯುತ್ತದೆ ಎಂದು ಸಂಪುಟಕ್ಕೆ ತಿಳಿಸಲಾಗಿತ್ತು.
ಈಗ, ಸಾಲ ನೀಡುವ ಸಂಸ್ಥೆಗಳಿಂದ ಅಂದಾಜು 6,473.74 ಕೋಟಿ ರೂ.ಗಳ ಕ್ರೋಡೀಕೃತ ಕ್ಲೇಮ್ ಗಳನ್ನು ತಾನು ಸ್ವೀಕರಿಸಿರುವುದಾಗಿ ಎಸ್.ಬಿ.ಐ ಮಾಹಿತಿ ನೀಡಿದೆ. ಈಗಾಗಲೇ 5,500 ಕೋಟಿ ರೂ.ಗಳನ್ನು ಎಸ್.ಬಿ.ಐ.ಗೆ ವಿತರಿಸಲಾಗಿದೆ, ಈಗ ಬಾಕಿ ಮೊತ್ತ 973.74 ಕೋಟಿ ರೂ.ಗಳಿಗೆ ಸಂಪುಟದ ಅನುಮೋದನೆಯನ್ನು ಕೋರಲಾಗಿತ್ತು.
***
(Release ID: 1791034)