ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಶ್ರೀ ನಿತಿನ್ ಗಡ್ಕರಿ ಅವರು 2022ರ ಜನವರಿ 17ರಂದು ದಕ್ಷಿಣ ವಲಯಕ್ಕಾಗಿ ಪಿಎಂ-ಗತಿ ಶಕ್ತಿಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ
Posted On:
15 JAN 2022 8:39PM by PIB Bengaluru
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಎಂಒಆರ್‌ಟಿಎಚ್) ತನ್ನ ಕ್ರಿಯಾ ಯೋಜನೆಗಳು ಮತ್ತು ಯೋಜನೆಗಳ ಕುರಿತು ಚರ್ಚಿಸಲು 2022ರ ಜನವರಿ 17ರಂದು ದಕ್ಷಿಣ ವಲಯಕ್ಕಾಗಿ ಪಿಎಂ-ಗತಿ ಶಕ್ತಿ ಕುರಿತು ಸಮಾವೇಶವನ್ನು ಆಯೋಜಿಸಲಿದೆ.
ವರ್ಚುವಲ್ ಮೂಲಕ ಆಯೋಜಿಸಲಾಗುವ ಈ ಕಾರ್ಯಕ್ರಮವನ್ನು ಕೇಂದ್ರ ಆರ್‌ಟಿಎಚ್ ಸಚಿವ ಶ್ರೀ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಡಾ. (ಶ್ರೀೕಮತಿ) ತಮಿಳಿಸೈ ಸೌಂದರರಾಜನ್, ಪುದುಚೇರಿ ಮುಖ್ಯಮಂತ್ರಿ ಶ್ರೀ ಎನ್. ರಂಗಸಾಮಿ, ಸಚಿವಾಲಯದ ರಾಜ್ಯ ಸಚಿವ (ಆರ್‌ಟಿಎಚ್ ಮತ್ತು ನಾಗರಿಕ ವಿಮಾನಯಾನ) ಜನರಲ್ (ಡಾ.) ವಿ.ಕೆ. ಸಿಂಗ್, ವಿವಿಧ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಸಚಿವರು, ಆರ್‌ಟಿಎಚ್‌ನ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮನೆ, ಡಿಪಿಐಐಟಿಯ ವಿಶೇಷ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಮತ್ತು ಭಾರತ ಮತ್ತು ರಾಜ್ಯ ಸರ್ಕಾರಗಳ ವಿವಿಧ ಮೂಲಸೌಕರ್ಯ ಸಚಿವಾಲಯಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳು, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಲಕ್ಷ ದ್ವೀಪ, ಮಹಾರಾಷ್ಟ್ರ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ಈ ಕಾರ್ಯಕ್ರಮದಲ್ಲಿಭಾಗವಹಿಸುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಾಗಿವೆ. ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳು ಮತ್ತು ಪಾಲುದಾರರನ್ನು ಒಳಗೊಂಡ ಕಾರ್ಯಕ್ರಮದ ವಿವಿಧ ಅಂಶಗಳ ಕುರಿತು ಪ್ಯಾನಲ್ ಚರ್ಚೆಗಳಿಗೆ ದಿನದ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಪ್ರಧಾನಮಂತ್ರಿ-ಗತಿ ಶಕ್ತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ರಾಜ್ಯಗಳು ನಿರ್ಣಾಯಕ ಪಾತ್ರವನ್ನು ಹೊಂದಿವೆ. ರಾಜ್ಯ ಸರ್ಕಾರಗಳ ಸಮನ್ವಯದಲ್ಲಿಎಲ್ಲಾ ಮೂಲಸೌಕರ್ಯ ಸಚಿವಾಲಯಗಳ ಯೋಜನೆಗಳ ಸರಿಯಾದ ಯೋಜನೆ, ನಿರ್ವಹಣೆ ಮತ್ತು ವೇಳಾಪಟ್ಟಿಯನ್ನು ಹೊಂದಲು ರಾಜ್ಯ ಮಟ್ಟದಲ್ಲಿ ಪಿಎಂ-ಗತಿ ಶಕ್ತಿ ಸಾಂಸ್ಥಿಕ ಚೌಕಟ್ಟನ್ನು ರಚಿಸುವುದರ ಜೊತೆಗೆ ರಾಜ್ಯ ಬೃಹದ್ಯೋಜನೆಗೆ ಮಾರ್ಗಸೂಚಿಯನ್ನು ಸಾಧಿಸುವ ಗುರಿಯನ್ನು ಸಮ್ಮೇಳನವು ಹೊಂದಿದೆ. ಪ್ರತಿಯಾಗಿ ಸಮರ್ಥ ಅನುಷ್ಠಾನ ಮತ್ತು ಕಾಲಮಿತಿಯ ಯೋಜನೆಯ ಪೂರ್ಣಗೊಳಿಸುವಿಕೆಗೆ ಕಾರಣವಾಗುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 13ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ - ರಾಷ್ಟ್ರೀಯ ಬೃಹದ್ಯೋಜನೆ (ಎನ್‌ಎಂಪಿ) ಯನ್ನು ಪ್ರಾರಂಭಿಸಿದರು. ತರುವಾಯ, 2021ರ ಅಕ್ಟೋಬರ್ 21 ರಂದು, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬಹು-ಮಾದರಿ ಸಂಪರ್ಕವನ್ನು ಒದಗಿಸುವುದಕ್ಕಾಗಿ ರೋಲಿಂಗ್, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಬೆಂಬಲ ಕಾರ್ಯವಿಧಾನಕ್ಕಾಗಿ ಸಾಂಸ್ಥಿಕ ಚೌಕಟ್ಟನ್ನು ಒಳಗೊಂಡಂತೆ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಬೃಹದ್ಯೋಜನೆಯನ್ನು ಅನುಮೋದಿಸಿತ್ತು.
ಸಚಿವಾಲಯಗಳ ಶಸಕ್ತ ಗುಂಪು (ಇಜಿಒಎಸ್), ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಮತ್ತು ಅಗತ್ಯವಿರುವ ತಾಂತ್ರಿಕ ಸಾಮರ್ಥ್ಯಗಳೊಂದಿಗೆ ತಾಂತ್ರಿಕ ನೆರವು ಘಟಕ (ಟಿಎಸ್‌ಯು) ಒಳಗೊಂಡಂತೆ ಸಾಂಸ್ಥಿಕ ಚೌಕಟ್ಟಿನ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪಿಎಂ-ಗತಿ ಶಕ್ತಿ ಎನ್‌ಎಂಪಿಯು ಬಹು-ಮಾದರಿ ಸಂಪರ್ಕ ಮತ್ತು ಕೊನೆಯ ಮೈಲಿ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಡಿಪಾಟ್ರ್ಮೆಂಟಲ್ ಸಿಲೋಸ್‌ಗಳನ್ನು ಮುರಿಯಲು ಮತ್ತು ಹೆಚ್ಚು ಸಮಗ್ರ ಮತ್ತು ಸಮಗ್ರ ಯೋಜನೆ ಹಾಗೂ ಯೋಜನೆಗಳ ಕಾರ್ಯಗತಗೊಳಿಸಲು ಉದ್ದೇಶಿಸಿದೆ.
ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗ್ರಾಹಕರು, ರೈತರು, ಯುವಕರು ಮತ್ತು ವ್ಯವಹಾರಗಳಲ್ಲಿ ತೊಡಗಿರುವವರಿಗೆ ಅಗಾಧವಾದ ಆರ್ಥಿಕ ಲಾಭವನ್ನು ನೀಡುತ್ತದೆ.
***
(Release ID: 1790288)
Visitor Counter : 188