ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ವಿಶ್ವ ಹಿಂದಿ ದಿವಸದ ಸಂದರ್ಭದಲ್ಲಿ ಯುನೆಸ್ಕೋದಿಂದ ಡಬ್ಲ್ಯು.ಎಚ್.ಸಿ. (ವಿಶ್ವ ಧರೋಹರ್ ಸಮಿತಿ) ಅಂತರ್ಜಾಲತಾಣದಲ್ಲಿ ಹಿಂದಿಯ ವಿವರಣೆ ನೀಡುವ ಐತಿಹಾಸಿಕ ನಿರ್ಧಾರ

Posted On: 11 JAN 2022 6:43PM by PIB Bengaluru

ವಿಶ್ವ ಹಿಂದಿ ದಿನದ ಸಂದರ್ಭದಲ್ಲಿ, ಯುನೆಸ್ಕೋದ ವಿಶ್ವ ಪರಂಪರೆಯ ಕೇಂದ್ರವು ಡಬ್ಲ್ಯು.ಎಚ್.ಸಿ. ಅಂತರ್ಜಾಲ ತಾಣದಲ್ಲಿ ಭಾರತದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ಹಿಂದಿ ಭಾಷೆಯಲ್ಲೂ ವಿವರಣೆಯನ್ನು ಪ್ರಕಟಿಸಲು ಒಪ್ಪಿಕೊಂಡಿದೆ ಎಂದು ಯುನೆಸ್ಕೋದಲ್ಲಿನ ಭಾರತದ ಶಾಶ್ವತ ನಿಯೋಗವು ನಿನ್ನೆ ಘೋಷಿಸಿದೆ.

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಟ್ವಿಟರ್ ಮೂಲಕ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪ್ರತಿಯೊಬ್ಬ ಭಾರತೀಯ ಮತ್ತು ಹಿಂದಿ ಪ್ರೇಮಿಗಳಿಗೆ ಹಿಂದಿ ಹೆಮ್ಮೆಯ ವಿಷಯವಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಭಾಷೆಗಳ ಜನಪ್ರಿಯತೆಯು ಸ್ವಾಗತಾರ್ಹ ಮತ್ತು ಪ್ರೋತ್ಸಾಹದಾಯಕವಾಗಿದೆ ಎಂದು ತಿಳಿಸಿದ್ದಾರೆ.

***

MJPS/ AK



(Release ID: 1789183) Visitor Counter : 158