ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಉನ್ನತ ಶಿಕ್ಷಣ ಸಂಸ್ಥೆಗಳು ಭಾರತೀಯ ನಾವೀನ್ಯತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ರೂಪಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ - ಶ್ರೀ ರಾಜ್‌ ಕುಮಾರ್ ರಂಜನ್ ಸಿಂಗ್


'ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯ ನಿರ್ಮಾಣ' ಕುರಿತು ಇ- ಗೋಷ್ಠಿ ಉದ್ಘಾಟಿಸಿದ ಶ್ರೀ ರಾಜ್‌ ಕುಮಾರ್ ರಂಜನ್ ಸಿಂಗ್

ಉದ್ಯಮಶೀಲತೆಯನ್ನು ಆಚರಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಒಂದು ವೇದಿಕೆಯ ಅಡಿಯಲ್ಲಿ ದೇಶದ ಪ್ರಮುಖ ನವೋದ್ಯಮಗಳು, ಉದ್ಯಮಿಗಳು, ಹೂಡಿಕೆದಾರರು, ಇನ್‌ ಕ್ಯುಬೇಟರ್‌ ಗಳು, ಧನಸಹಾಯ ಕಾಯಗಳು, ಬ್ಯಾಂಕ್‌ ಗಳು, ನೀತಿ ನಿರೂಪಕರು ಮೊದಲಾದವರನ್ನು ಒಟ್ಟುಗೂಡಿಸುವ ಇ-ಗೋಷ್ಠಿ

Posted On: 11 JAN 2022 5:34PM by PIB Bengaluru

ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತೀಯ ನಾವೀನ್ಯತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ರೂಪಕಶಕ್ತಿಯಾಗಿ ಸೇವೆ ಸಲ್ಲಿಸುವ ಅಗಾಧವಾದ ಸಾಮರ್ಥ್ಯವನ್ನು ಹೊಂದಿವೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವರಾದ ಶ್ರೀ ರಾಜ್‌ ಕುಮಾರ್ ರಂಜನ್ ಸಿಂಗ್ ತಿಳಿಸಿದ್ದಾರೆ. ಶಿಕ್ಷಣ ಸಚಿವಾಲಯ, ಡಿಪಿಐಐಟಿ,  ಎ.ಐ.ಸಿ.ಟಿ.ಇ ಮತ್ತು ಮತ್ತು ಎಂ.ಓ.ಇ.ಯ ನಾವೀನ್ಯತೆಯ ಕೋಶ ಆಯೋಜಿಸಿದ್ದ 'ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆಯ ಪರಿಸರ ವ್ಯವಸ್ಥೆಯ ನಿರ್ಮಾಣ' ಕುರಿತ ಇ- ಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಶ್ರೀ ರಾಜ್‌ ಕುಮಾರ್ ರಂಜನ್ ಸಿಂಗ್ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ ಕುರಿತ ಚಲನಚಿತ್ರಕ್ಕೂ ಚಾಲನೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ ಎಂದು ಸಚಿವರು, ನಮ್ಮ ನಾವೀನ್ಯಕಾರರು ಮತ್ತು ಉದ್ಯಮಿಗಳ ಬೆಂಬಲದ ಪರಿಸರ ವ್ಯವಸ್ಥೆ ಮತ್ತು ಸಮರ್ಪಣೆ ಹಾಗೂ ಪ್ರಯತ್ನಗಳಿಂದ ಇದನ್ನು ಸಾಧಿಸಬಹುದು ಎಂದರು. ನಾಳಿನ ಭಾರತವು ನಮ್ಮ ಸಂಪ್ರದಾಯದ ಅತ್ಯುತ್ತಮವಾದ ಆಧುನಿಕ ಜಾಗತಿಕ ದೃಷ್ಟಿಕೋನದೊಂದಿಗೆ ವಿಲೀನಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ನಮ್ಮ ದೇಶವು ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನೂ ಹೊಂದಿದೆ ಎಂದು ಶ್ರೀ ಸಿಂಗ್ ಹೇಳಿದರು. ನಾವು ಜ್ಞಾನ ಆಧಾರಿತ ಆರ್ಥಿಕ ರಾಷ್ಟ್ರವಾಗಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆಯ ಮನೋಭಾವ ಮತ್ತು ಉದ್ಯಮಶೀಲತೆ ಇಲ್ಲದೆ ಇದು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು. ಭಾರತದಲ್ಲಿನ ಶಿಕ್ಷಣ ಸಂಸ್ಥೆಗಳು ತಮ್ಮ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಮತ್ತು ವಾಣಿಜ್ಯೀಕರಣ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಕಾರಣವಾಗುವ ಉತ್ತಮ ಗುಣಮಟ್ಟದ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ವಾತಾವರಣವನ್ನು ಸೃಷ್ಟಿಸಬೇಕೆಂದು ಸಚಿವರು ಆಗ್ರಹಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಶಿಕ್ಷಣ ಸಚಿವಾಲಯವು ಗುರುತಿಸಿರುವ 75 ನವೋದ್ಯಮಗಳನ್ನು ಶ್ರೀ ರಾಜ್‌ ಕುಮಾರ್ ರಂಜನ್ ಸಿಂಗ್ ಅಭಿನಂದಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಈ 75 ನವೋದ್ಯಮಗಳು ನಾವೀನ್ಯಪೂರ್ಣ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ದೊಡ್ಡ ಸಾಮರ್ಥ್ಯವನ್ನು ಹೊಂದಿವೆ. ನವೋದ್ಯಮಗಳು 10 ಲಕ್ಷ ರೂ.ಗಳವರೆಗಿನ ಆರ್ಥಿಕ ಬೆಂಬಲವನ್ನೂ ಪಡೆದಿವೆ. ಜೊತೆಗೆ ಪಾಲುದಾರಿಕೆ ಏಜೆನ್ಸಿಗಳ ಸಹಯೋಗದೊಂದಿಗೆ ಮಾರ್ಗದರ್ಶನ ಮತ್ತು ಇನ್ ಕ್ಯುಬೇಷನ್ ಬೆಂಬಲವನ್ನೂ ಸಹ ಒದಗಿಸಲಾಗುತ್ತಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀ ಕೆ. ಸಂಜಯ್ ಮೂರ್ತಿ ಮಾತನಾಡಿ, ಭಾರತದಲ್ಲಿ ಪ್ರಸ್ತುತ ನಾವು 2500 ನಾವೀನ್ಯತೆಯ ಕೋಶಗಳನ್ನು ಹೊಂದಿದ್ದೇವೆ ಮತ್ತು ಭವಿಷ್ಯದಲ್ಲಿ ಹೆಚ್ಚುವರಿಯಾಗಿ 5000 ಕೋಶಗಳನ್ನು ಸೇರ್ಪಡೆ ಮಾಡಲಾಗುವುದು. ರಾಯಭಾರಿ ಕಾರ್ಯಕ್ರಮದಡಿ 50,000 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಇದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆ ತರಲಿದೆ ಎಂದು ಅವರು ಮಾಹಿತಿ ನೀಡಿದರು. ಇದು ನಾವೀನ್ಯತೆಯ ಸಂಸ್ಕೃತಿಯಾಗಿದೆ ಮತ್ತು ಈ ರೀತಿಯ ಘಟನೆಗಳು ಯುವಕರನ್ನು ಮುಂದೆ ಬರಲು ಮತ್ತು ಹೊಸ ಆಲೋಚನೆಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಪ್ರೇರೇಪಿಸುತ್ತವೆ ಎಂದು ಅವರು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀಮತಿ. ಅನಿತಾ ಕರ್ವಾಲ್ ಅವರು, ಭಾರತದ ಯುವ ಮನಸ್ಸುಗಳು ಹೇಗೆ ಸಮಸ್ಯೆ-ಪರಿಹರಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನಹರಿಸುತ್ತಿವೆ ಎಂಬ ಬಗ್ಗೆ ಮಾತನಾಡಿದರು. ಸಮಾನ ಶಿಕ್ಷಣದ ದೃಷ್ಟಿಯ ನೂತನ ಶಿಕ್ಷಣ ನೀತಿ 2020ರ ಯಶಸ್ಸನ್ನು ಸೂಚಿಸುವ ಇಂತಹ ರಾಷ್ಟ್ರ ಮತ್ತು ಚಾರಿತ್ಯ ನಿರ್ಮಾಣದ ಕಾರ್ಯಕ್ರಮಗಳಲ್ಲಿ ಯುವತಿಯರ ಭಾರೀ ಭಾಗವಹಿಸುವಿಕೆಯನ್ನು ಅವರು ಶ್ಲಾಘಿಸಿದರು.

ಶ್ರೀಮತಿ ಕರ್ವಾಲ್ ಅವರು ಚಿಕ್ಕ ಮಕ್ಕಳಲ್ಲಿ ಹೊಸತನದ ಮೌಲ್ಯ ಮತ್ತು ಅಪಾಯವನ್ನು ತೆಗೆದುಕೊಳ್ಳುವ ಕೌಶಲ್ಯವನ್ನು ಎತ್ತಿ ತೋರಿಸಿದರು. ಅಂತಹ ಉಪಕ್ರಮಗಳ ಪ್ರಾಮುಖ್ಯತೆಯನ್ನು ತಿಳಿಸಿದ ಅವರು, ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ತಾರ್ಕಿಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಅಭಿವೃದ್ಧಿಪಡಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ.ಅನಿಲ್ ಡಿ ಸಹಸ್ರಬುದ್ಧೆ ಮಾತನಾಡಿ, ಇ- ಗೋಷ್ಠಿ, ಹೂಡಿಕೆ, ಮಾರ್ಗದರ್ಶನ ಮುಂತಾದ ನಾವೀನ್ಯತೆ ವ್ಯವಸ್ಥೆಯನ್ನು ನಿರ್ಮಿಸುವುದನ್ನು ಒತ್ತಿ ಹೇಳುತ್ತದೆ ಮತ್ತು ಈ ಗೋಷ್ಠಿ ನಮ್ಮ ಶಿಕ್ಷಣ ಸಂಸ್ಥೆಗಳನ್ನು ತಮ್ಮ ಕ್ಯಾಂಪಸ್‌ ಗಳಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸುವಂತೆ ಪ್ರೋತ್ಸಾಹಿಸುತ್ತದೆ ಎಂದರು. ಈ ನಾವೀನ್ಯತೆಯ ಉತ್ಸವ ಮತ್ತು ಸಂಸ್ಕೃತಿಯ ಹಬ್ಬವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತಿಪಾದಿಸುವ, ಆತ್ಮನಿರ್ಭರ ಭಾರತ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನು ರೂಪಿಸಲು ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಕಾರ್ಯದರ್ಶಿ ಶ್ರೀ ಅನುರಾಗ್ ಜೈನ್, ಶಿಕ್ಷಣ ಸಚಿವಾಲಯದ ನಾವೀನ್ಯತೆ ಕೋಶದ, ಮುಖ್ಯ ನಾವೀನ್ಯತೆ ಅಧಿಕಾರಿ ಡಾ. ಅಭಯ್ ಜೇರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

***

MJPS/AK


(Release ID: 1789181) Visitor Counter : 178


Read this release in: English , Urdu , Hindi , Tamil , Telugu