ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಜ್ಞಾನವುಳ್ಳ ವ್ಯಕ್ತಿ ನ್ಯಾಯಯುತ ಸಮಾಜ ಮತ್ತು ಅದರಲ್ಲೂ ಪ್ರಗತಿಶೀಲ ಸಮಾಜದ ಅವಿಭಾಜ್ಯ ಅಂಗ - ಕೇಂದ್ರ ಶಿಕ್ಷಣ ಸಚಿವರು
ಇಂಡಿಯನ್ ಪಬ್ಲಿಕ್ ಸ್ಕೂಲ್ಸ್ ಕಾನ್ಫರೆನ್ಸ್ (ಐ.ಪಿ.ಎಸ್.ಸಿ) ಇದರ ಪ್ರಾಂಶುಪಾಲರ 82ನೇ ಸಮಾವೇಶವನ್ನು ಉದ್ದೇಶಿಸಿ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭಾಷಣ ಮಾಡಿದರು
Posted On:
10 JAN 2022 12:37PM by PIB Bengaluru
ಡೂನ್ ಸ್ಕೂಲ್ ಆಯೋಜಿಸಿದ್ದ ಇಂಡಿಯನ್ ಪಬ್ಲಿಕ್ ಸ್ಕೂಲ್ಸ್ ಕಾನ್ಫರೆನ್ಸ್ (ಐ.ಪಿ.ಎಸ್.ಸಿ) ಇದರ ಪ್ರಾಂಶುಪಾಲರ 82ನೇ ಸಮಾವೇಶವನ್ನು ಉದ್ದೇಶಿಸಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭಾಷಣ ಮಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ (2020) ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ವಿಶೇಷ ಒತ್ತು ನೀಡುವುದರೊಂದಿಗೆ ಸಮಾನ ಮತ್ತು ಅಂತರ್ಗತ ಶಿಕ್ಷಣದ ಮೇಲೆ ಕೇಂದ್ರೀಕರಿಸುತ್ತದೆ. ಅಂತರ್ಗತ ತರಗತಿಯು ಅಸಂಖ್ಯಾತ ಅನುಭವಗಳು ಮತ್ತು ದೃಷ್ಟಿಕೋನಗಳಿಂದ ಪ್ರತಿಯೊಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ ಮತ್ತು ಈ ದೇಶವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು. ನಮ್ಮ ಪ್ರಮುಖ ಶಾಲೆಗಳು ಎಷ್ಟು ಅಂತರ್ಗತವಾಗಿವೆ ಎಂಬುದನ್ನು ಗುರುತಿಸಿ ಕೊಳ್ಳುವಂತೆ ಮತ್ತು ದೇಶದ ಪ್ರತಿಯೊಂದು ಮಗುವೂ ಅತ್ಯುತ್ತಮ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇನ್ನೇನು ನಾವು ಮಾಡಬಹುದು ಎಂದು ಈ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಶಾಲೆಗಳನ್ನು ಸಚಿವರು ಈ ಸಂದರ್ಭದಲ್ಲಿ ಒತ್ತಾಯಿಸಿದರು
ಜ್ಞಾನವುಳ್ಳ ವ್ಯಕ್ತಿ ಉತ್ತಮ ಸಮಾಜ, ನ್ಯಾಯಯುತ ಸಮಾಜ ಮತ್ತು ಪ್ರಗತಿಶೀಲ ಸಮಾಜದ ನಿರ್ಮಾಣದ ಮೂಲಭೂತ ಅವಿಭಾಜ್ಯ ಅಂಗ ಎಂದು ಸಚಿವರು ಹೇಳಿದರು. ಆ ಜ್ಞಾನವು ಕಲಿಯುವ, ಅನ್ವಯಿಸುವ ಮತ್ತು ರವಾನಿಸುವ ಇಚ್ಛೆಯು ಮಾನವೀಯತೆಯನ್ನು ಸೃಷ್ಟಿಸಿದೆ, ಬೆಂಕಿಯನ್ನು ಅನ್ವೇಷಿಸುವುದರಿಂದ ಹಿಡಿದು, ಬೇಸಾಯ ಮಾಡುವವರೆಗೆ, ಆಕಾಶವನ್ನು ದಾಟಿ ನಕ್ಷತ್ರ ತಲುಪಲು, ನಕ್ಷತ್ರಗಳ ನಡುವೆ ತೇಲುವಂತೆ ಮಾಡಿದೆ. ನಮ್ಮ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕನ್ನು ನೀಡಲು, ಅವರ ಸಂಪೂರ್ಣ ಸಾಮರ್ಥ್ಯಕ್ಕೆ ಮಾರ್ಗದರ್ಶನ ನೀಡಲು ಮತ್ತು ಆ ಮೂಲಕ ನಮ್ಮ ದೇಶ ಮತ್ತು ಈ ಜಗತ್ತನ್ನು ಉತ್ತಮಗೊಳಿಸಲು ಅವಕಾಶ ಸೃಷ್ಟಿಸುವುದು ನಮ್ಮಲ್ಲಿ ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದೆ ಎಂದು ಸಚಿವರು ಹೇಳಿದರು.
ಕೇವಲ ಕೆಲವು ವಸತಿ ಶಾಲೆಗಳೊಂದಿಗೆ 1939 ರಲ್ಲಿ ಪ್ರಾರಂಭವಾದ ಐ.ಪಿ.ಎಸ್.ಸಿ. ಈಗ ಸೈನಿಕ ಶಾಲೆಗಳು ಮತ್ತು ಮಿಲಿಟರಿ ಶಾಲೆಗಳು ಸೇರಿದಂತೆ 81 ಶಾಲೆಗಳ ಬಲವನ್ನು ಹೊಂದಿದೆ. ನಾಳಿನ ಪೀಳಿಗೆಯ ಮೇಲೆ ಪ್ರಭಾವ ಬೀರುವ ಶಕ್ತಿಯ ದೃಷ್ಟಿಯಿಂದ ಭಾರತದ 80 ಕ್ಕೂ ಹೆಚ್ಚು ಪ್ರಮುಖ ಶಾಲೆಗಳ ಮುಖ್ಯೋಪಾಧ್ಯಾಯರು, ಮುಖ್ಯೋಪಾಧ್ಯಾಯಿನಿಯರು ಭಾಗವಹಿಸಿರುವ ಈ ವಾರ್ಷಿಕ ಸಭೆಯು ಬಹಳ ಮಹತ್ವದ ತೂಕವನ್ನು ಹೊಂದಿದೆ ಎಂಬ ವಿಷಯ ಅರಿತು ಸಚಿವರು ಸಂತನ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಹೊಸದನ್ನು, ಗುರುತಿಸಿ ಪ್ರತಿಬಿಂಬಿಸಲು ಏನನ್ನಾದರೂ ಕಲಿತಿದ್ದಾರೆ, ಆವಿಷ್ಕರಿಸಲು ಮತ್ತು ತಮ್ಮ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಏನನ್ನಾದರೂ ಕಲಿಯುವ ಮೂಲಕ ಹಾಗೂ ಸಮಾಜ ಮತ್ತು ರಾಷ್ಟ್ರದ ಅರಿತ ನಾಯಕರನ್ನು ತಯಾರಿಸುವ ಈ ಸಮ್ಮೇಳನ ನಿಜಕ್ಕೂ ಸಾರ್ಥಕವಾಗಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಅಭಿಪ್ರಾಯ ತಿಳಿಸಿದರು.
1939 ರಲ್ಲಿ ಪ್ರಾರಂಭವಾದಾಗಿನಿಂದ, ಐ.ಪಿ.ಎಸ್.ಸಿ.ಯು ಭಾರತದಲ್ಲಿನ ಸಾರ್ವಜನಿಕ ಶಾಲೆಗಳಿಗೆ ಸಂಪ್ರದಾಯಗಳನ್ನು ರೂಪಿಸುವಲ್ಲಿ ಮಾರ್ಗದರ್ಶನ ನೀಡುತ್ತಾ ಬಂದಿದೆ, ಹಾಗೂ ವಿದ್ಯಾರ್ಥಿಗಳ ಉತ್ತಮ ಗುಣಸ್ವಭಾವ ಮತ್ತು ವ್ಯಕ್ತಿತ್ವವನ್ನು ನಿರ್ಮಿಸುವ ಉತ್ತಮ ಶಿಕ್ಷಣವನ್ನು ಹುಟ್ಟುಹಾಕಿದೆ.
ಈ ಸಂದರ್ಭದಲ್ಲಿ ಐ.ಪಿ.ಎಸ್.ಸಿ. ಅಧ್ಯಕ್ಷರಾದ ಶ್ರೀಮತಿ ನಿಶಿ ಮಿಶ್ರಾ, ಡೂನ್ ಸ್ಕೂಲ್ ಮುಖ್ಯೋಪಾಧ್ಯಾಯ ಡಾ. ಜಗ್ ಪ್ರೀತ್ ಸಿಂಗ್ ಅವರು ಉಪಸ್ಥಿತರಿದ್ದರು.
***
(Release ID: 1788963)
Visitor Counter : 180