ಗೃಹ ವ್ಯವಹಾರಗಳ ಸಚಿವಾಲಯ

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸಹಕಾರ ಕುರಿತಂತೆ ಭಾರತ ಮತ್ತು ತುರ್ಕಮೆನಿಸ್ತಾನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 06 JAN 2022 4:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ತುರ್ಕಮೆನಿಸ್ತಾನ್ ನಡುವಿನ ತಿಳಿವಳಿಕೆ ಒಪ್ಪಂದ (ಎಂ..ಯು)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ತಿಳಿವಳಿಕೆ ಒಪ್ಪಂದವು ಒಂದು ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ, ಮೂಲಕ ಭಾರತ ಮತ್ತು ತುರ್ಕಮೆನಿಸ್ತಾನ್ ಎರಡೂ ಪರಸ್ಪರ ವಿಪತ್ತು ನಿರ್ವಹಣಾ ಕಾರ್ಯವಿಧಾನಗಳಿಂದ ಪ್ರಯೋಜನ ಪಡೆಯುತ್ತವೆ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸನ್ನದ್ಧತೆ, ಪ್ರತಿಕ್ರಿಯೆ ಮತ್ತು ಸಾಮರ್ಥ್ಯ ವರ್ಧನೆ ಕ್ಷೇತ್ರಗಳನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ.

ತಿಳಿವಳಿಕೆ ಒಪ್ಪಂದವು ಕೆಳಗಿನ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಆಧಾರದ ಮೇಲೆ ಸಹಕಾರವನ್ನು ಒದಗಿಸುತ್ತವೆ:

 1. ತುರ್ತು ಪರಿಸ್ಥಿತಿಗಳ ಮುನ್ಸೂಚನೆ ಮತ್ತು ಮೇಲ್ವಿಚಾರಣೆ ಹಾಗೂ ಅವುಗಳ ಪರಿಣಾಮಗಳ ಮೌಲ್ಯಮಾಪನ
 2. ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಸೂಕ್ತ ಸಂಸ್ಥೆಗಳ ನಡುವೆ ಸಕ್ಷಮ ಪ್ರಾಧಿಕಾರಗಳ ಮೂಲಕ ಸಂವಾದ
 3. ಜಂಟಿ ಯೋಜನೆ, ಸಂಶೋಧನಾ ಯೋಜನೆಗಳ ಅಭಿವೃದ್ಧಿ ಮತ್ತು ಅನುಷ್ಠಾನ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಕಟಣೆಗಳು ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಂಶೋಧನಾ ಕಾರ್ಯಗಳ ಫಲಿತಾಂಶಗಳ ವಿನಿಮಯ
 4. ತಿಳಿವಳಿಕೆ ಒಪ್ಪಂದದ ವ್ಯಾಪ್ತಿಯಲ್ಲಿ ಪರಸ್ಪರ ಸಮ್ಮತಿಸಿದಂತೆ ಮಾಹಿತಿ, ನಿಯತಕಾಲಿಕಗಳು ಅಥವಾ ಇತರ ಯಾವುದೇ ಪ್ರಕಟಣೆಗಳು, ವೀಡಿಯೊ ಮತ್ತು ಫೋಟೋ ಸಾಮಗ್ರಿಗಳು ಮತ್ತು ತಂತ್ರಜ್ಞಾನಗಳ ವಿನಿಮಯ
 5. ಜಂಟಿ ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕಸರತ್ತುಗಳು ಮತ್ತು ತರಬೇತಿಗಳ ಸಂಯೋಜನೆ;
 6. ವಿಪತ್ತು ನಿರ್ವಹಣೆಯಲ್ಲಿ ತಜ್ಞರು ಮತ್ತು ತಜ್ಞತೆಯ ಅನುಭವಗಳ ವಿನಿಮಯ
 7. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಮೊದಲ ಪ್ರತಿಕ್ರಿಯೆದಾರರ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ; ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಗೆ ಅನುಕೂಲವಾಗುವಂತೆ ತರಬೇತಿದಾರರು ಮತ್ತು ತಜ್ಞರ ವಿನಿಮಯ
 8. ಪರಸ್ಪರರು ಸಮ್ಮತಿಸಿದಂತೆ, ತಾಂತ್ರಿಕ ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಒದಗಿಸಲು, ವಿಪತ್ತು ನಿರ್ವಹಣೆಯಲ್ಲಿ ಪಕ್ಷಗಳ ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ವರ್ಧನೆಗೆ ನೆರವು ಒದಗಿಸುವುದು;
 9. ಪರಸ್ಪರ ಸಮ್ಮತಿಯಂತೆ, ತುರ್ತು ಸ್ಪಂದನೆಯಲ್ಲಿ ನೆರವು ಒದಗಿಸುವುದು
 10. ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಗಳ ಸೃಷ್ಟಿಗೆ ಜ್ಞಾನ ಮತ್ತು ಪರಿಣತಿಯ ಪರಸ್ಪರ ನೆರವಿನ ವಿನಿಮಯ
 11. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಮಾನದಂಡಗಳಿಗೆ ಅನುಗುಣವಾಗಿ ಪರಸ್ಪರ ಸಮ್ಮತಿಸಿದಂತೆ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳನ್ನು ನಿರೂಪಿಸುವುದು;
 12. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಇತರ ಯಾವುದೇ ಚಟುವಟಿಕೆಗಳನ್ನು ಪಕ್ಷಕಾರರ ಸಕ್ಷಮ ಪ್ರಾಧಿಕಾರಗಳು ಪರಸ್ಪರ ಸಮ್ಮತಿಸಬಹುದು;

ಪ್ರಸ್ತುತ, ಭಾರತವು   ಸ್ವಿಟ್ಜರ್ಲ್ಯಾಂಡ್, ರಷ್ಯಾ, ಸಾರ್ಕ್, ಜರ್ಮನಿ, ಜಪಾನ್, ತಜಕಿಸ್ತಾನ್, ಮಂಗೋಲಿಯಾ, ಬಾಂಗ್ಲಾದೇಶ ಮತ್ತು ಇಟಲಿಯೊಂದಿಗೆ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ದ್ವಿಪಕ್ಷೀಯ/ಬಹುಪಕ್ಷೀಯ/ಎಂ..ಯು./ ಉದ್ದೇಶದ ಜಂಟಿ ಘೋಷಣೆ/ ಸಹಕಾರ ಒಪ್ಪಂದಗಳಿಗೆ ಅಂಕಿತ ಹಾಕಿದೆ.

***(Release ID: 1788075) Visitor Counter : 201