ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಧರ್ಚುಲಾ (ಭಾರತ) - ಧರ್ಚುಲಾ (ನೇಪಾಳ) ದಲ್ಲಿ ಮಹಾಕಾಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 06 JAN 2022 4:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಧರ್ಚುಲಾ  (ಭಾರತ)-  ಧರ್ಚುಲಾ  (ನೇಪಾಳ)ದಲ್ಲಿ ಮಹಾಕಾಳಿ  ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಭಾರತ ಮತ್ತು ನೇಪಾಳ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸುಧಾರಿಸುತ್ತದೆ.

ಹಿನ್ನೆಲೆ:

ನಿಕಟ ನೆರೆ ಹೊರೆಯವರಾಗಿ, ಭಾರತ ಮತ್ತು ನೇಪಾಳಗಳು ಮುಕ್ತ ಗಡಿ ಮತ್ತು ಆಳವಾಗಿ ಬೇರೂರಿರುವ ಜನರ ನಡುವಿನ ಸಂಬಂಧ ಮತ್ತು ಸಂಸ್ಕೃತಿಯ ಸಂಪರ್ಕಗಳಿಂದ ನಿರೂಪಿಸಲ್ಪಟ್ಟ ಸ್ನೇಹ ಮತ್ತು ಸಹಕಾರದ ವಿಶಿಷ್ಟ ಬಾಂಧವ್ಯ ಹಂಚಿಕೊಂಡಿವೆಭಾರತ ಮತ್ತು ನೇಪಾಳ ಎರಡೂ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಅಂದರೆ  ಸಾರ್ಕ್, ಬಿಮ್ ಸ್ಟೆಕ್ ಮತ್ತು ಜಾಗತಿಕ ವೇದಿಕೆಗಳಲ್ಲಿ ಒಟ್ಟಾಗಿ ಶ್ರಮಿಸುತ್ತಿವೆ.

***



(Release ID: 1788052) Visitor Counter : 131