ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ವರ್ಷಾಂತ್ಯದ ಕಾರ್ಯಕ್ರಮಗಳ ಪರಾಮರ್ಶೆ: ಯುವಜನ ವ್ಯವಹಾರಗಳ ಇಲಾಖೆ


ಯುವ ಸ್ವಯಂಸೇವಕರು ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ: 2.22 ಲಕ್ಷ

1.27 ಕೋಟಿ ಯುವ ಸ್ವಯಂ-ಸೇವಕರಿಂದ ನಾನಾ ಚಟುವಟಿಕೆಗಳ ಆಯೋಜನೆ

ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಗೆ ಯುವ ಸ್ವಯಂ-ಸೇವಕರು ದೇಶಾದ್ಯಂತ ಒಟ್ಟು 6.37 ಲಕ್ಷ ಕಿಲೋ ಮೀಟರ್ ಸೈಕಲ್ ರ‍್ಯಾಲಿ ಮತ್ತು ಪಾದಯಾತ್ರೆ ನಡೆಸಿದ್ದಾರೆ.

ರಾಷ್ಟ್ರೀಯ ಪೋಷಣ್ ಮಾ-2021 ಅಡಿ ಸುಮಾರು 8.3 ಲಕ್ಷ ಸ್ವಯಂ-ಸೇವಕರು ಪೌಷ್ಟಿಕಾಂಶ ಜಾಗೃತಿ ಆಂದೋಲನದಲ್ಲಿ ಭಾಗಿ

ತಿಂಗಳುಪೂರ್ತಿ ನಡೆದ ಸ್ವಚ್ಛ ಭಾರತ ಅಭಿಯಾನದಲ್ಲಿ 56.62 ಲಕ್ಷ ಯುವಕರಿಂದ 1.07 ಕೋಟಿ ಕಿಲೋ ತ್ಯಾಜ್ಯ ಸಂಗ್ರಹ

ಏಕ್ ಭಾರತ್ ಶ್ರೇಷ್ಠ್ ಭಾರತ್ ಕಾರ್ಯಕ್ರಮಕ್ಕೆ ದೇಶಾದ್ಯಂತ 4 ಸಾವಿರಕ್ಕಿಂತ ಹೆಚ್ಚಿನ ವೆಬಿನಾರ್ ಗಳ ಆಯೋಜನೆ

3 ದಿನಗಳ ಕಾಲ ನಡೆದ ಗಂಗಾ ಉತ್ಸವದಲ್ಲಿ ಯುವ ಸ್ವಯಂ-ಸೇವಕರಿಂದ  ದೀಪೋತ್ಸವ, ವಸ್ತು ಪ್ರದರ್ಶನಗಳು, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಶಾಲ್ ಯಾತ್ರೆ ಸೇರಿದಂತೆ ನಾನಾ ಚಟುವಟಿಕೆಗಳ ಯಶಸ್ವಿ ಅನುಷ್ಠಾನ

Posted On: 28 DEC 2021 1:06PM by PIB Bengaluru

ಯುವಜನ ವ್ಯವಹಾರಗಳ ಇಲಾಖೆ 2021ರಲ್ಲಿ ಅನುಷ್ಠಾನಕ್ಕೆ ತಂದಿರುವ ಪ್ರಮುಖ ಕಾರ್ಯಕ್ರಮಗಳು ಇಂತಿವೆ.

ವರ್ಚುವಲ್ ವಿಧಾನದಲ್ಲಿ ನಡೆದ ಏಕ್ ಭಾರತ್ ಶ್ರೇಷ್ಠ್ ಭಾರತ್ ಕಾರ್ಯಕ್ರಮ(ಇಬಿಎಸ್ ಬಿ)ಗಳ ವೆಬಿನಾರ್.

ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾರತದ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ನಮ್ಮ ದೇಶದ ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಆಚರಣೆ, ಏಕ್ ಭಾರತ್ ಶ್ರೇಷ್ಠ್ ಭಾರತ ಸ್ಫೂರ್ತಿಯ ಉತ್ತೇಜನ, ರಾಜ್ಯಗಳ ನಡುವೆ ಪರಸ್ಪರ ತಿಳಿವಳಿಕೆ, ಅರ್ಥ ಮಾಡಿಕೊಳ್ಳುವಿಕೆ ಮತ್ತು ದೀರ್ಘಕಾಲೀನ ತೊಡಗಿಸಿಕೊಳ್ಳುವಿಕೆಯನ್ನು ಸ್ಥಾಪಿಸುವುದು, ಸಂಸ್ಕೃತಿ, ಸಂಪ್ರದಾಯ, ವೈವಿಧ್ಯಮಯ ಆಚರಣೆ, ಭಾಷೆಯ ವಿನಿಮಯದೊಂದಿಗೆ ಉತ್ತಮ ತಿಳಿವಳಿಕೆ ಮೂಡಿಸುವುದು ಮತ್ತು ರಾಜ್ಯಗಳ ನಡುವೆ ಸಂಬಂಧ ಬೆಸೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಪ್ರಸಕ್ತ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾದ ಹಿನ್ನೆಲೆಯ್ಲಲಿ ಇದರ ನಿಯಂತ್ರಣಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೆಹರು ಯುವ ಕೇಂದ್ರ ಸಂಘಟನೆ (ಎನ್ ವೈಕೆಎಸ್)  ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಕೋವಿಡ್-19 ನಿಯತ್ರಣ ಕಾರ್ಯಕ್ರಮದ ಆದ್ಯತೆ ಮತ್ತು ಮಹತ್ವವನ್ನು ಪರಿಗಣಿಸಿ, 2 ರಾಜ್ಯಗಳ ನಡುವೆ ವರ್ಚುವಲ್ ವಿಧಾನದಲ್ಲಿ ಏಕ್ ಭಾರತ್ ಶ್ರೇಷ್ಠ್ ಭಾರತ ಕಾರ್ಯಕ್ರಮ ಆಯೋಜಿಸಿ, ಪವರ್ ಪಾಯಿಂಟ್ ಪ್ರೆಸೆಂಟೇಷನ್ (ಪ್ರಸ್ತುತಿ-ಪಿಪಿಟಿ) ನಡೆಸಲಾಗಿದೆ. ನೆಹರು ಯುವ ಕೇಂದ್ರ ಸಂಘಟನೆಗಳ ಒಟ್ಟು 4,885 ಯುವಕರು ಭಾಗವಹಿಸಿ, 2 ರಾಜ್ಯಗಳ ಭಾಷಾ ಕಲಿಕೆಯ 7  ರಾಷ್ಟ್ರೀಯ ವೆಬಿನಾರ್ ಗಳನ್ನು ಯಶಸ್ವಿಯಾಗಿ ಆಯೋಜಿಸಿದರು. ತರುವಾಯ, ಪಿಪಿಟಿಗಳನ್ನು ಅಧಿಕಾರಿಗಳು, ಯುವ ಸ್ವಯಂಸೇವಕರು, ಕುಟುಂಬಗಳ ಸದಸ್ಯರು ಮತ್ತು ಇತರರಲ್ಲಿ ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದ ವೆಬಿನಾರ್ ಗಳ ಮೂಲಕ ಹಂಚಿಕೊಳ್ಳಲಾಯಿತು ಮತ್ತು ಚರ್ಚಿಸಲಾಯಿತು. ಕಾರ್ಯಕ್ರಮಗಳ ವಿವರ ಕೆಳಕಂಡಂತಿದೆ.

ಮಟ್ಟ

ವೆಬಿನಾರ್ ಗಳ ಸಂಖ್ಯೆ

No. of participants

ರಾಷ್ಟ್ರೀಯ ಮಟ್ಟ

7

4,885

ರಾಜ್ಯ ಮಟ್ಟ

179

24,624

ಜಿಲ್ಲಾ ಮಟ್ಟ

1,588

94,085

ಬ್ಲಾಕ್‌ ಮಟ್ಟ

2,668

99,100

ಒಟ್ಟು

4,442

2,22,694

1,45,900 ಎನ್ಎಸ್ಎಸ್ ಸ್ವಯಂಸೇವಕರು ಮತ್ತು ಕಾರ್ಯಕ್ರಮ ಅಧಿಕಾರಿಗಳು ಜೋಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ 45 ರಾಷ್ಟ್ರೀಯ ಮಟ್ಟದ ಹಾಗೂ 1,143 ಘಟಕಗಳ ಮಟ್ಟದಲ್ಲಿ ಏಕ್ ಭಾರತ್ ಶ್ರೇಷ್ಠ್ ಭಾರತ್ ವೆಬಿನಾರ್ ಗಳನ್ನು ಆಯೋಜಿಸಿದ್ದರು.

https://static.pib.gov.in/WriteReadData/userfiles/image/image001QAAI.jpg https://static.pib.gov.in/WriteReadData/userfiles/image/image002AMVR.jpg

ರಾಷ್ಟ್ರೀಯ ಯುವ ಸಂಸತ್ ಉತ್ಸವ

ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚರ್ಚೆ ಮತ್ತು ಸಮಾಲೋಚನೆ ಮೂಲಕ ಯುವಜನರ ಧ್ವನಿಯನ್ನು ಆಲಿಸುವುದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಯುವಕರನ್ನು ಪ್ರೋತ್ಸಾಹಿಸುವುದು ಮತ್ತು ತೊಡಗಿಸಿಕೊಳ್ಳುವುದು, ಸಾಮಾನ್ಯ ಜನರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು, ಅವರ ಅಭಿಪ್ರಾಯಗಳನ್ನು ರೂಪಿಸುವುದು ಮತ್ತು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು, ನವ ಭಾರತದ ಬಗೆಗಿರುವ ಯುವ ಸಮುದಾಯ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ದಾಖಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

150 ಜಿಲ್ಲಾ ಕೇಂದ್ರಗಳಲ್ಲಿ ವರ್ಚುವಲ್ ವಿಧಾನದಲ್ಲಿ ಜಿಲ್ಲಾ ಯುವ ಸಂಸತ್ತುಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 698 ಜಿಲ್ಲೆಗಳಿಂದ ಒಟ್ಟು 2,34,428 ಯುವಕರು ಭಾಗವಹಿಸಿದ್ದರು.

ರಾಷ್ಟ್ರ ಮಟ್ಟದ ಮೂವರು ಅತ್ಯುತ್ತಮ ಭಾಷಣಕಾರರಿಗೆ ಕ್ರಮವಾಗಿ 2 ಲಕ್ಷ ರೂ., 1.50 ಲಕ್ಷ ರೂ. ಹಾಗೂ 1 ಲಕ್ಷ ರೂ. ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರತಿಯೊಬ್ಬ ಸ್ಪರ್ಧಿಗೆ ಭಾಗವಹಿಸಿದ್ದಕ್ಕೆ  ಪ್ರಮಾಣಪತ್ರ ವಿತರಿಸಲಾಯಿತು. ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಬಹುಮಾನ ಮತ್ತು ಅರ್ಹತಾ ಪ್ರಮಾಣಪತ್ರ ನೀಡಿದರು.

2021 ಜನವರಿ 12 ರಂದು ನಡೆದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಇಂದಿನ ನಿಮ್ಮ ಸಂವಾದ ಮತ್ತು ಚರ್ಚೆಗಳು ಬಹಳ ಮುಖ್ಯ ಎಂದರು. ನೀವು ಮಾತನಾಡುವುದನ್ನು ನಾನು ಕೇಳುತ್ತಿದ್ದಾಗ, ನನಗೊಂದು ಆಲೋಚನೆ ಮೂಡಿತು. ನಾನು ನಿಮ್ಮ ಪ್ರಸ್ತುತಿ ಅಥವಾ ಭಾಷಣಗಳನ್ನು ನನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲು ನಿರ್ಧರಿಸಿದೆ.  ಆದರೆ ನೀವು ಮೂವರು ಮಾತ್ರ ವಿಜೇತರಿದ್ದೀರಿ. ನಿಮ್ಮೆಲ್ಲರ ಭಾಷಣ ರೆಕಾರ್ಡ್ ಮಾಡಿದ ವಿಷಯಗಳು ಲಭ್ಯವಿದ್ದರೆ, ನಾನು ಎಲ್ಲರ ಭಾಷಣಗಳನ್ನು ಟ್ವೀಟ್ ಮಾಡುತ್ತೇನೆ. 2ನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ವಿಜೇತರು ಮತ್ತು ಅಂತಿಮ ಆಯ್ಕೆದಾರರನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಎಂದು ಪ್ರಧಾನಿ ಹೇಳಿದರು. ಮಾನ್ಯ ಪ್ರಧಾನ ಮಂತ್ರಿಯವರ ಭಾಷಣವನ್ನು ನೆಹರು ಯುವಕ ಕೇಂದ್ರ ಸಂಘಟನೆಯ 27,53,626 ಅಧಿಕಾರಿಗಳು ವೀಕ್ಷಿಸಿದ್ದಾರೆ, ಯುವ ಸಂಸತ್ ಉತ್ಸವದ 2 ದಿನಗಳ ಕಾರ್ಯಗಳನ್ನು ಲೋಕಸಭೆ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಎನ್ಐಸಿ ವೆಬ್‌ಕಾಸ್ಟ್ ನಲ್ಲೂ ಪ್ರಸಾರವಾಗಿದೆ.

https://static.pib.gov.in/WriteReadData/userfiles/image/image0032JY1.jpg https://static.pib.gov.in/WriteReadData/userfiles/image/image004O8L4.jpg

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ

ನೆಹರು ಯುವ ಕೇಂದ್ರ ಸಂಘಟನೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮನ್ವಯದಲ್ಲಿ 2021  ಜನವರಿ 18ರಿಂದ ಫೆಬ್ರವರಿ 17ರ ವರೆಗೆ ದೇಶಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಿಸಿತು.

ಒಂದು ತಿಂಗಳುಪೂರ್ತಿ ನಡೆದ ಈ ಅಭಿಯಾನದ ಉದ್ದೇಶವು ನಿರ್ದಿಷ್ಟವಾಗಿ ಯುವಕರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವುದು, ರಸ್ತೆಗಳ ಸುರಕ್ಷತಾ ಕ್ರಮಗಳ ಸುಧಾರಣೆ ಮತ್ತು ಅನುಸರಣೆ, ರಸ್ತೆ ಸುರಕ್ಷತೆಯಲ್ಲಿ ಕೊಡುಗೆ ನೀಡಲು ಎಲ್ಲಾ ಪಾಲುದಾರರಿಗೆ ಅವಕಾಶ ಒದಗಿಸುವುದಾಗಿದೆ..

ಯುವ ಸ್ವಯಂ-ಸೇವಕರು, ಯುವ ಕ್ಲಬ್‌ಗಳ ಸದಸ್ಯರು ಮತ್ತು ಇತರ ಮಧ್ಯಸ್ಥಗಾರರ ಬೆಂಬಲದೊಂದಿಗೆ ನೆಹರು ಯುವ ಕೇಂದ್ರ ಸಂಘಟನೆಯು ಒಟ್ಟು 6,619 ಚಟುವಟಿಕೆಗಳನ್ನು ಕೈಗೊಂಡಿದೆ. ಅಂದರೆ ವಾಕಥಾನ್, ಪ್ರತಿಜ್ಞಾ ವಿಧಿ ಸ್ವೀಕಾರ, ಮಹಿಳಾ ದ್ವಿಚಕ್ರ ವಾಹನಗಳ ರಾಲಿಯಲ್ಲಿ 13.22 ಲಕ್ಷ ಯುವಕರು ಮತ್ತು ಸಾಮಾನ್ಯ ಜನರು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/image005T8XD.jpg

https://static.pib.gov.in/WriteReadData/userfiles/image/image00680CM.jpg https://static.pib.gov.in/WriteReadData/userfiles/image/image0079C8C.jpg

ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ – 12 ಮಾರ್ಚ್ 2021

ದೇಶ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವವನ್ನು ಜನೋತ್ಸವವಾಗಿ ಆಚರಿಸಲಾಗುತ್ತಿದೆ. ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯ ಸ್ಫೂರ್ತಿ ತುಂಬಲು ನೆಹರು ಯುವ ಕೇಂದ್ರ ಸಂಘಟನೆಯು ಕೆಳಕಂಡ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

  • ಸ್ವಾತಂತ್ರ್ಯ ನಡಿಗೆ: ಅವರು ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದ್ ನ ಸಬರಮತಿ ಆಶ್ರಮದಲ್ಲಿ ಸ್ವಾತಂತ್ರ್ಯ ನಡಿಗೆ ಅಥವಾ ಪಾದಯಾತ್ರೆಗೆ ಚಾಲನೆ ನೀಡಿದರು. ಜತೆಗೆ ಆಜಾದಿ ಕಾ ಅಮೃತ ಮಹೋತ್ಸವದ ನಾನಾ ಚಟುವಟಿಕೆಗಳಪೂರ್ವಭಾವಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
  • ಸ್ವಾತಂತ್ರ್ಯ ನಡಿಗೆಯ ಸುಮಾರು 81 ತಂಡಗಳ ಪೈಕಿ 15 ಕಾಯಂ ತಂಡಗಳು ನೆಹರು ಯುವ ಕೇಂದ್ರ ಸಂಘಟನೆಗಳ ಯುವ ಸ್ವಯಂಸೇವಕರಾಗಿದ್ದಾರೆ. ಕರ್ಟನ್ ರೈಸಿಂಗ್ ಕಾರ್ಯಕ್ರಮಗಳಲ್ಲಿ 100 ಯುವ ಸ್ವಯಂಸೇವಕರು ಪಾಲ್ಗೊಂಡಿದ್ದರು.
  • ಖುತುಬ್ ಮಿನಾರ್ ನಿಂದ ಪಾದಯಾತ್ರೆ: ಸಬರಮತಿ ಆಶ್ರಮದಿಂದ ಆಯೋಜಿತವಾಗಿದ್ದ ಸ್ವಾತಂತ್ರ್ಯ ನಡಿಗೆಯಂತೆ, ನೆಹರು ಯುವ ಕೇಂದ್ರ ಸಂಘಟನೆಯ ಖುತುಬ್ ಮಿನಾರ್ ನಿಂದಲೂ ಪಾದಯಾತ್ರೆ ಆಯೋಜಿಸಿತ್ತು. ಈ ಸ್ವಾತಂತ್ರ್ಯ ನಡಿಗೆಯಲ್ಲಿ ಸುಮಾರು 500 ಯುವ ಸ್ವಯಂ-ಸೇವಕರು ಪಾಲ್ಗೊಂಡಿದ್ದರು. ಪಾದಯಾತ್ರೆಗೆ ಯವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ನೆಹರು ಯುವ ಕೇಂದ್ರ ಸಂಘಟನೆಯ ಮಹಾನಿರ್ದೇಶಕರು ಚಾಲನೆ ನೀಡಿದ್ದರು.
  • ಖಿಲಾ ರಾಯ್ ಪಿಥೊರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ದೆಹಲಿಯ ಖಿಲಾ ರಾಯ್ ಪಿಥೊರಾದಲ್ಲಿ ಪಾದಯಾತ್ರೆ ಅಂತ್ಯವಾದಾಗ, ಅಲ್ಲಿ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯು ಈ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
  • 623 ಜಿಲ್ಲಾ ನೆಹರು ಕೇಂದ್ರ ಸಂಘಟನೆಗಳಲ್ಲಿ ನಾನಾ ಚಟುವಟಿಕೆಗಳು: 623  ಜಿಲ್ಲಾ ನೆಹರು ಯುವ ಕೇಂದ್ರಗಳಲ್ಲಿ ನಾನಾ ಕಾರ್ಯಕ್ರಮ ಚಟವಟಿಕೆಗಳನ್ನು ನಡೆಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಮಾಲಾರ್ಪಣೆ, ರಾಷ್ಟ್ರಗೀತೆ ಗಾಯನ, ಛಾಯಾಚಿತ್ರ ಪ್ರದರ್ಶನ, ವಿಷಯ ತಜ್ಞರಿಂದ ಉಪನ್ಯಾಸ, ಯುವ ಸಂಸತ್ತು, ಪ್ರಬಂಧ ಸ್ಪರ್ಧೆ, ಘೋಷವಾಕ್ಯ ರಚನೆ, ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ 14.27 ಲಕ್ಷ ಯುವಕರು ಭಾಗವಹಿಸಿದ್ದರು. ಅಲ್ಲದೆ, ಜಿಲ್ಲಾ ನೆಹರು ಯುವ ಕೇಂದ್ರಗಳಲ್ಲಿ ಸೈಕಲ್ ರ‍್ಯಾಲಿಗಳು ಪಾದಯಾತ್ರೆಗಳನ್ನು ಆಯೋಜಿಸಲಾಗಿತ್ತು. ಸೈಕಲ್ ರ‍್ಯಾಲಿಗಳು ಮತ್ತು ಸ್ವಾತಂತ್ರ್ಯ ನಡಿಗೆಯ 2,134 ಚಟುವಟಿಕೆಗಳ ಮೂಲಕ 1.59 ಲಕ್ಷ ಯುವಕರು ಒಟ್ಟು 6.37 ಲಕ್ಷ ಕಿಲೋಮೀಟರ್‌ ಕ್ರಮಿಸಿದ್ದಾರೆ.

https://www.nyks.nic.in/photo-gallery/AazadiKaAmrut/1/DSC_2745.jpg https://www.nyks.nic.in/photo-gallery/AazadiKaAmrut/1/IMG_1371%20(2).JPG

ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಎನ್ ವೈಕೆಎಸ್ ತಲ್ಲೀನ

ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನಕ್ಕೆ ನೆಹರು ಯುವ ಕೇಂದ್ರ ಸಂಘಟನೆಯ ಸ್ವಯಂ-ಸೇವಕರನ್ನು ಸೇರಿಸಿಕೊಳ್ಳುವಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ, ಎನ್ ವೈಕೆಎಸ್ ಸ್ವಯಂ-ಸೇವಕರು ಲಸಿಕೆ ಅಭಿಯಾನದ ಯಶಸ್ಸಿಗೆ ಶ್ರಮಿಸಿದ್ದಾರೆ. ಜಿಲ್ಲಾ ನೆಹರು ಯುವ ಕೇಂದ್ರಗಳ ಮೂಲಕ ರಾಷ್ಟ್ರೀಯ ಯುವ ಸ್ವಯಂಸೇವಕರು ಮತ್ತು ಯೂತ್ ಕ್ಲಬ್ ಸದಸ್ಯರ  ನೆರವಿನೊಂದಿಗೆ ಕೋವಿಡ್ ಲಸಿಕಾ ಆಂದೋಲನವನ್ನು ಯಶಸ್ವಿಗೊಳಿಸಲಾಗಿದೆ.

ಲಸಿಕೆ ಪ್ರಯೋಜನದ ಬಗ್ಗೆ ಸರಿಯಾದ(ನಿಖರ) ಮಾಹಿತಿ ನೀಡುವುದು, ಲಸಿಕೆ ಸುರಕ್ಷತೆಯ ಬಗ್ಗೆ ವಿಶ್ವಾಸ ಮೂಡಿಸುವುದು, ದೇಶಾದ್ಯಂತ ಸಾರ್ವತ್ರಿಕ ಲಸಿಕೆ ಸ್ವೀಕಾರಾರ್ಹತೆಯ ಮೇಲೆ ಸೂಕ್ತ ನಡವಳಿಕೆ ಮತ್ತು ಪರಿಸರ ನಿರ್ಮಿಸಲು ಜನರನ್ನು ಉತ್ತೇಜಿಸುವುದು ಪ್ರಮುಖ ಚಟುವಟಿಕೆಗಳಾಗಿವೆ.

ಕಾರ್ಯಕ್ರಮದ ಅಂಗವಾಗಿ, 1.27 ಕೋಟಿ ಯುವ ಸ್ವಯಂಸೇವಕರು, ಯೂತ್ ಕ್ಲಬ್‌ಗಳ ಸದಸ್ಯರು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ 2.22 ಲಕ್ಷ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

https://static.pib.gov.in/WriteReadData/userfiles/image/image010S34I.jpg https://static.pib.gov.in/WriteReadData/userfiles/image/image011TZ4T.jpg

ಟೀಕಾ ಉತ್ಸವ್

ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತು ಅದರಿಂದ ಉಂಟಾದ ಸಾವಿನ ಸಂಖ್ಯೆ ತೀವ್ರ ಏರಿಕೆ ಕಂಡ ಹಿನ್ನೆಲೆಯಲ್ಲಿ, ನೆಹರು ಯುವ ಕೇಂದ್ರ ಸಂಘಟನೆಯು 2021 ಏಪ್ರಿಲ್ 11ರಿಂದ (ಜ್ಯೋತಿರಾವ್ ಫುಲೆ ಜನ್ಮದಿನ) 2021  ಏಪ್ರಿಲ್ 14ರ ವರೆಗೆ( ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ) ಗಂಟಲು ದ್ರವ ಪರೀಕ್ಷೆ ಮತ್ತು ಲಸಿಕೆ ನೀಡಿಕೆಯ ಸಮಗ್ರ ಕಾರ್ಯಕ್ರಮ ಟೀಕಾ ಉತ್ಸವ ಆಯೋಜಿಸಿತ್ತು. 

ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುವುದು, ಗಂಟಲು ದ್ರವ ಪರೀಕ್ಷೆಗಾಗಿ ಸಮುದಾಯ ಸಜ್ಜುಗೊಳಿಸುವುದು, ಲಸಿಕೆ ಪಡೆಯುವಂತೆ ಜನರನ್ನು ಪ್ರೋತ್ಸಾಹಿಸುವುದು, ಲಸಿಕೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ  ವಿಶ್ವಾಸ ಮೂಡಿಸುವುದು, ಜನರಲ್ಲಿರುವ ಭಯ ದೂರ ಮಾಡುವುದು, ಕೋವಿಡ್ ಸೂಕ್ತವಾದ ನಡವಳಿಕೆಗಳ ಅನುಸರಣೆಗೆ ಜನರನ್ನು ಪ್ರೇರೇಪಿಸುವುದು ಸೇರಿದಂತೆ ನೆಹರು ಯುವ ಕೇಂದ್ರ ಸಂಘಟನೆಯು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತು.

ಕಾರ್ಯಕ್ರಮದ ಭಾಗವಾಗಿ ನೆಹರು ಯುವ ಕೇಂದ್ರ ಸಂಘಟನೆಯು 47,638 ಚಟುವಟಿಕೆಗಳನ್ನು ನಡೆಸಿತು. ಇದರ ಮೂಲಕ ಒಟ್ಟು 10.29 ಲಕ್ಷ ಜನರನ್ನು ತಲುಪಿದೆ.

https://static.pib.gov.in/WriteReadData/userfiles/image/image013P64C.jpg

ಕೋವಿಡ್-19 2ನೇ ಅಲೆ ಕಾಣಿಸಿಕೊಂಡಾಗ ನೆಹರು ಯುವ ಕೇಂದ್ರ ಸಂಘಟನೆ ಮತ್ತು ಎನ್ಎಸ್ಎಸ್ ದೇಶಕ್ಕೆ ಸಲ್ಲಿಸಿದ ಉಪಕ್ರಮಗಳು ಮತ್ತು ಸೇವೆಗಳು: ಭಾರತದಾದ್ಯಂತ ನಡೆಸಿದ ನಿಯಂತ್ರಣ, ನಿರ್ವಹಣೆ ಮತ್ತು ಪರಿಹಾರ ಚಟುವಟಿಕೆಗಳು

ಯುವ ವ್ಯವಹಾರಗಳ ಇಲಾಖೆಯು ನೆಹರು ಯುವ ಕೇಂದ್ರ ಸಂಘಟನೆ ಮತ್ತು ಎನ್ಎಸ್ಎಸ್ ಮೂಲಕ, ಲಸಿಕೆ ನೀಡಿಕೆ ಅಭಿಯಾನ ಮತ್ತು ನೋಂದಣಿ ಕುರಿತು ಜಾಗೃತಿ, ಸಾಮಾಜಿಕ ವಾಟ್ಸ್ ಆಪ್ ಗುಂಪುಗಳ ರಚನೆ, ಆರೋಗ್ಯ ಸೇತು ಅಪ್ಲಿಕೇಶನ್ - ಡೌನ್‌ಲೋಡ್ ಮಾಡುವುದು, ಬಳಸುವುದು ಮತ್ತು ಉಲ್ಲೇಖಿಸುವುದು, ಸಾಮಾಜಿಕ ಅಂತರ, ಕೈ ಸ್ವಚ್ಛಗೊಳಿಸುವುದು, ಕೋವಿಡ್ ಮಾರ್ಗಸೂಚಿಗಳನ್ನು ಜನಪ್ರಿಯಗೊಳಿಸುವುದು ಮತ್ತು ಪ್ರೇರೇಪಿಸುವಂತಹ ಪ್ರಮುಖ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಮನೆಗಳಲ್ಲೇ ಜನರು ಮುಖಗವಸು ತಯಾರಿಸುವುದು, ಯುವ ಸ್ವಯಂಸೇವಕರ ನೆಲೆ ವಿಸ್ತರಿಸುವುದು ಮತ್ತು ದೇಶಾದ್ಯಂತ ಸ್ವಯಂಸೇವಕರ ನೋಂದಣಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ.

https://static.pib.gov.in/WriteReadData/userfiles/image/image014TU8I.jpg https://static.pib.gov.in/WriteReadData/userfiles/image/image015I3RX.jpg

ಯುವ ವಾರಿಯರ್ ಗಳ ಅಭಿಯಾನಕ್ಕೆ ಯುನಿಸೆಫ್ ಬೆಂಬಲ

ಯುನಿಸೆಫ್ ಬೆಂಬಲದಿಂದ 5,679 ವರ್ಚುಯಲ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತರಬೇತಿ ಅವಧಿಯಲ್ಲಿ ನೋಂದಣಿ ಪ್ರಕ್ರಿಯೆ ಮತ್ತು ಯುವ ವಾರಿಯರ್ ಆಗಿ ಕಾರ್ಯ ನಿರ್ವಹಿಸಲು ಪ್ರತಿಜ್ಞೆ ಸ್ವೀಕಾರ, ಕೋವಿಡ್-19 ಹರಡುವುದನ್ನು ತಡೆಯಲು ಕೋವಿಡ್ ಸೂಕ್ತ ನಡವಳಿಕೆ ಕಾರ್ಯಕ್ರಮಗಳು (ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ನೈರ್ಮಲ್ಯೀಕರಣ ಮತ್ತು ನಿಯಮಿತವಾದಿ ಕೈ ಸ್ವಚ್ಛಗೊಳಿಸವುದು), ಕೋವಿಡ್-19 ಸೋಂಕು ತೊಡೆದುಹಾಕಲು ಜನರನ್ನು ಪ್ರೋತ್ಸಾಹಿಸುವುದು ಇತ್ಯಾದಿ ಕಾರ್ಯಕ್ರಮ ಒಳಗೊಂಡಿದೆ. ಈ ತರಬೇತಿ ಕಾರ್ಯಕ್ರಮಗಳ ಮೂಲಕ, ದೇಶಾದ್ಯಂತ 3,09,850 ನೆಹರು ಯುವ ಕೇಂದ್ರ ಅಧಿಕಾರಿಗಳು, ಕೋವಿಡ್ ವಾರಿಯರ್ಸ್, ಯೂತ್ ಕ್ಲಬ್‌ಗಳ ಸದಸ್ಯರು, ಗಂಗಾದೂತರು, ವಿಪತ್ತು ಸ್ಪಂದನಾ ತಂಡದ ಸದಸ್ಯರು ಮತ್ತು ಇತರ ಮಧ್ಯಸ್ಥಗಾರರಿಗೆ ತರಬೇತಿ ನೀಡಲಾಗಿದೆ. 2,88,827 ಯುವಕರು ಮತ್ತು ಇತರರು ಯುವ ವಾರಿಯರ್ ಎಂದು ನೋಂದಾಯಿಸಿಕೊಂಡಿದ್ದಾರೆ. 2,52,604 ಯುವಕರು ಯುವ ವಾರಿಯರ್ ಆಗಿ ಕಾರ್ಯ ನಿರ್ವಹಿಸಲು ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.

ಇತರೆ ಮಹತ್ವದ ಸಾಧನೆಗಳು

  • ರಾಜ್ಯ ಮತ್ತು ಜಿಲ್ಲೆಯ ನೆಹರು ಯುವ ಕೇಂದ್ರ ಸಂಘಟನೆಗಳ ನೋಡಲ್ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಕೋವಿಡ್ ವಾರಿಯರ್ ಪೋರ್ಟಲ್‌ನಲ್ಲಿ ನವೀಕರಿಸಲಾಗಿದೆ.
  • ಸುಮಾರು 82,381 ಯುವ ಸ್ವಯಂಸೇವಕರು ಐಗಾಟ್ (iGOT) ಪೋರ್ಟಲ್‌ನಲ್ಲಿ ತರಬೇತಿ ಪಡೆದಿದ್ದಾರೆ.
  • ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರ ಸಂಘಟನೆಯ ಸ್ವಯಂಸೇವಕರು ಮನೆಯಲ್ಲಿಯೇ ಮುಖಗವಸು ತಯಾರಿಕೆ ಉತ್ತೇಜಿಸಿದ್ದಾರೆ. ಅಗತ್ಯ ಇರುವವರಿಗೆ ಮುಖಗವಸು ಸಿದ್ಧಪಡಿಸುವುದು ಮತ್ತು ವಿತರಿಸುವುದು, ಅವುಗಳ ಬಳಕೆ ಕುರಿತು ಜನರನ್ನು ಸಂವೇದನಾಶೀಲಗೊಳಿಸುವ ಕೆಲಸ ಮಾಡಿದ್ದಾರೆ.
  • ಕೋವಿಡ್-19 ವಿರುದ್ಧ ರಕ್ಷಣೆ ಪಡೆಯುವಂತೆ ಮತ್ತು ಕುಟುಂಬಗಳಲ್ಲಿನ ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ದೇಶಾದ್ಯಂತ 1,91,265 ಕುಟುಂಬಗಳನ್ನು ಸಂವೇದನಾಶೀಲಗೊಳಿಸಲಾಗಿದೆ.
  •  ಕೋವಿಡ್-19 ಸೋಂಕಿತ ವ್ಯಕ್ತಿಗಳಿರುವ ಕುಟುಂಬಗಳಿಗೆ ಬೆಂಬಲ ಒದಗಿಸುವಂತೆ 89,265 ಜನರು ಸಂವೇದನಾಶೀಲಗೊಳಿಸಲಾಗಿದೆ.
  • ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್‌ ಆಡಳಿತಗಳು ವಿವಿಧ ಸ್ಥಳಗಳಲ್ಲಿ ಜನಸಂದಣಿ ನಿಭಾಯಿಸಲು ನೆಹರು ಯುವ ಕೇಂದ್ರ ಸಂಘಟನೆಯ 27,116  ಸ್ವಯಂಸೇವಕರು ಮತ್ತು ಅಧಿಕಾರಿಗಳನ್ನು ಬಳಸಿಕೊಂಡಿವೆ. ಅಲ್ಲದೆ, ಸಾರ್ವಜನಿಕ ಪ್ರಕಟಣೆಗಳು, ಜಿಲ್ಲಾಡಳಿತ, ಪೊಲೀಸರು ಸ್ಥಾಪಿಸಿರುವ ಕಂಟ್ರೋಲ್ ರೂಂಗಳಲ್ಲಿ ಕೆಲಸ ಮಾಡುವುದು ಮತ್ತಿತರ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಗಿದೆ.
  • 1,27,078 ಎನ್‌ಎಸ್‌ಎಸ್ ಸ್ವಯಂಸೇವಕರು ಆಸ್ಪತ್ರೆಗಳು, ಬ್ಯಾಂಕ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅಗತ್ಯವಿರುವವರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವುದು ಮತ್ತು ವೃದ್ಧರಿಗೆ ಸಹಾಯ ಮಾಡುವುದು ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಸುರಕ್ಷತಾ ಸಲಹೆಗಳು ಸೇರಿದಂತೆ ಕರೋನಾ ವೈರಸ್‌ನ ವಿವಿಧ ಅಂಶಗಳ ಕುರಿತು ಅವರು 1.47 ಕೋಟಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ.

· ದೇಶಾದ್ಯಂತ ಎನ್ಎಸ್ಎಸ್ ಸ್ವಯಂಸೇವಕರಿಂದ ಪ್ರೇರಿತರಾಗಿ 52.90 ಲಕ್ಷ ಜನರು ಆರೋಗ್ಯಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಮುಖಗವಸು ವಿತರಣೆಗಾಗಿ ಸ್ವಯಂಸೇವಕರು 2.34 ಕೋಟಿ ಜನರನ್ನು ತಲುಪಿದ್ದಾರೆ.

· ಕೋವಿಡ್-19 ಜನಾಂದೋಲನಕ್ಕೆ ಸಂಬಂಧಿಸಿದಂತೆ, ಎನ್ಎಸ್ಎಸ್  ಘಟಕಗಳು ದೇಶದಲ್ಲಿ 2.64 ಕೋಟಿ ಜನರನ್ನು ತಲುಪಿವೆ.

https://static.pib.gov.in/WriteReadData/userfiles/image/image016ZT6E.jpg https://static.pib.gov.in/WriteReadData/userfiles/image/image0177PN5.jpg

7ನೇ ಅಂತಾರಾಷ್ಟ್ರೀಯ ಯೋಗ ದಿನ 21 ಜೂನ್ 2021

2021ರ ಧ್ಯೇಯವಾಕ್ಯ: ಕ್ಷೇಮಕ್ಕಾಗಿ ಯೋಗ

ಕೋವಿಡ್-19 ಸಾಂಕ್ರಾಮಿಕ ಸೋಂಕು ವ್ಯಾಪಕವಾಗುವ ಪರಿಸ್ಥಿತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ, ನೆಹರು ಯುವ ಕೇಂದ್ರ ಸಂಘಟನೆ ಮತ್ತು ಎನ್ಎಸ್ಎಸ್ ವರ್ಚುವಲ್ ವಿಧಾನದಲ್ಲಿ 7ನೇ ಅಂತರಾಷ್ಟ್ರೀಯ ಯೋಗ ದಿನ  ನಡೆಸಿತು. ಸಂಘಟನೆಯು 623 ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಮೂಲಕ ಯೋಗ ಚಟುವಟಿಕೆಗಳನ್ನು ಆಯೋಜಿಸಿತ್ತು. ಇದರಲ್ಲಿ 4.30 ಕೋಟಿ ಜನರು 2.33 ಲಕ್ಷ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. 2.23 ಲಕ್ಷ ಗ್ರಾಮಗಳ 75.94 ಲಕ್ಷ ಕುಟುಂಬಗಳನ್ನು ಈ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಲಾಗಿತ್ತು. ಕಾಶ್ಮೀರ ಕಣಿವೆ, ಲೇಹ್, ಅಂಡಮಾನ್ ನಿಕೋಬಾರ್, ಈಶಾನ್ಯ ರಾಜ್ಯಗಳು ಮತ್ತು ನಕ್ಸಲ್ ಪೀಡಿತ ಪ್ರದೇಶಗಳಿಂದ ಜನರನ್ನು ಪ್ರೇರೇಪಿಸಲು ಮತ್ತು ಸಂಪರ್ಕಿಸಲು ನೆಹರು ಯುವ ಕೇಂದ್ರ ಸಂಘಟನೆಗೆ ಸಾಧ್ಯವಾಯಿತು. ಯೋಗ ಪ್ರದರ್ಶನ ಮತ್ತು ಆನ್‌ಲೈನ್ ಸ್ಪರ್ಧೆಗಳು, ವೆಬಿನಾರ್‌ಗಳು ಮತ್ತು ಯೋಗ ವಿಷಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದೇಶಾದ್ಯಂತ 17,50,927 ಎನ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/image018OHFD.jpg https://static.pib.gov.in/WriteReadData/userfiles/image/image019SE15.jpg

# ಚಿಯರ್4ಇಂಡಿಯಾ ಓಟ ಟೋಕಿಯೊ 2020

ಟೋಕಿಯೊ ಒಲಿಂಪಿಕ್ 2020ರಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಪ್ರೇರೇಪಿಸಲು, ಹುರಿದುಂಬಿಸಲು ಮತ್ತು ಒಗ್ಗಟ್ಟು ಪ್ರದರ್ಶಿಸಲು ನೆಹರು ಯುವ ಕೇಂದ್ರ ಸಂಘಟನೆ  ಚಿಯರ್4ಇಂಡಿಯಾ ಓಟ ಟೋಕಿಯೊ 2020 ಕಾರ್ಯಕ್ರಮ ಆಯೋಜಿಸಿತ್ತು.

ಮೇಲಿನ ಕಾರ್ಯಕ್ರಮದ ಭಾಗವಾಗಿ, ನೆಹರು ಯುವ ಕೇಂದ್ರ ಸಂಘಟನೆ  20 ರಾಜ್ಯಗಳ ಮಟ್ಟದ ಚಟುವಟಿಕೆಗಳನ್ನು ಆಯೋಜಿಸಿತ್ತು. ಇದರಲ್ಲಿ ತಜ್ಞರಿಂದ ಚರ್ಚೆ, ಹಸಿರು ನಿಶಾನೆ, ಬ್ಯಾನರ್‌ಗಳ ಪ್ರದರ್ಶನ ಮತ್ತು ಇತರ ಪ್ರಚಾರ ಸಾಮಗ್ರಿಗಳು ಮತ್ತು ನಂತರ ದೇಶಾದ್ಯಂತ ರಾಜ್ಯ ರಾಜಧಾನಿಗಳಲ್ಲಿ 5-7 ಕಿಮೀ ಓಟ ಇತ್ಯಾದಿ ಕಾರ್ಯಕ್ರಮಗಳಲ್ಲಿ ನೆಹರು ಯುವ ಕೇಂದ್ರ ಸಂಘಟನೆಯ ಅಧಿಕಾರಿಗಳು, ಸ್ವಯಂಸೇವಕರು ಸೇರಿದಂತೆ ಒಟ್ಟು 11,190 ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇದಲ್ಲದೆ, ಪೂರಕ ವಾತಾವರಣ ಸೃಷ್ಟಿಸಲು, ಸಂದೇಶ ವರ್ಧನೆ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ ಟ್ವಿಟರ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಚಿಯರ್4ಇಂಡಿಯಾ ಟೋಕಿಯೊ ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ 1,58,286 ಇಂಪ್ರೆಷನ್ ಮತ್ತು 12,499 ಲೈಕ್‌ಗಳೊಂದಿಗೆ ಪ್ರಚಾರ ಮಾಡಲಾಗಿದೆ.

https://static.pib.gov.in/WriteReadData/userfiles/image/image020HJKW.jpg https://static.pib.gov.in/WriteReadData/userfiles/image/image021USHI.jpg

2021 ಆಗಸ್ಟ್ 1ರಿಂದ 15ನೇ ತಾರೀಖಿನವರೆಗೆ ಸ್ವಚ್ಛತಾ ಪಖ್ವಾಡ ಆಚರಣೆ - ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೇಶಾದ್ಯಂತ ಅನುಷ್ಠಾನ  ಸುಗಮಗೊಳಿಸುವುದು, ಸ್ಥಳೀಯ ಸಂಪನ್ಮೂಲ ಕ್ರೋಡೀಕರಿಸುವ ಮೂಲಕ ಸ್ವಚ್ಛತೆ ಮತ್ತು ನೈರ್ಮಲ್ಯ ಅಭಿಯಾನ ಕೈಗೊಳ್ಳಲು ಯುವಜನರನ್ನು ಪ್ರೇರೇಪಿಸುವುದು, 14.71 ಲಕ್ಷ ಯುವಕರು ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕಾರ,  ಉಪನ್ಯಾಸಗಳು ಮತ್ತು ಸೆಮಿನಾರ್‌ಗಳು, ಚರ್ಚಾ ಮತ್ತು ಘೋಷಣೆ ಸ್ಪರ್ಧೆಗಳು, ಸ್ವಚ್ಛತಾ ಅಭಿಯಾನಗಳು, ಮನೆ ಬಾಗಿಲಿಗೆ ಅಭಿಯಾನಗಳು, ಸೇರಿದಂತೆ ನೆಹರು ಯುವ ಕೇಂದ್ರ ಸಂಘಟನೆಯು ದೇಶಾದ್ಯಂತ ಆಯೋಜಿಸಿದ್ದ ಸ್ವಚ್ಛತಾ ಓಟ ಮತ್ತು ರ‍್ಯಾಲಿ ಯಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿತ್ತು.

ಶೈಕ್ಷಣಿಕ ಸಂಸ್ಥೆಗಳ ಆವರಣ, ಸಮೀಪದ ಸುತ್ತಮುತ್ತಲ ಪ್ರದೇಶಗಳು,  ದತ್ತು ಪಡೆದ ಗ್ರಾಮಗಳು, ಕೊಳಚೆ ಪ್ರದೇಶಗಳು, ಉದ್ಯಾನಗಳು, ಆಸ್ಪತ್ರೆ ಇತ್ಯಾದಿಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಎನ್‌ಎಸ್‌ಎಸ್ ಆಯೋಜಿಸುವ ಮೂಲಕ ಸ್ವಚ್ಛತಾ ಪಖ್ವಾಡವನ್ನು ಆಚರಿಸಿತು. ಇದರಲ್ಲಿ 11,311 ಸಂಸ್ಥೆಗಳ ಒಟ್ಟು 9,36,656 ಸ್ವಯಂಸೇವಕರು ಭಾಗವಹಿಸಿದ್ದರು.

 https://static.pib.gov.in/WriteReadData/userfiles/image/image0226U3O.jpg https://static.pib.gov.in/WriteReadData/userfiles/image/image023JS0L.jpg

ಆಜಾದಿ ಕಾ ಅಮೃತ ಮಹೋತ್ಸವ ಭಆಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0(2021 ಆಗಸ್ಟ್ 13ರಿಂದ 2021 ಅಕ್ಟೋಬರ್ 2)

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ನೆಹರು ಯುವ ಕೇಂದ್ರ ಸಂಘಟನೆಯು ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ಅನ್ನು ನಡೆಸಿತು, ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ದೇಹದಾರ್ಢ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಜನರು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ. ದೇಶಾದ್ಯಂತ 744 ಜಿಲ್ಲೆಗಳ 64,699 ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇಲ್ಲಿ ಕೈಗೊಳ್ಳಲಾದ ಪ್ರಮುಖ ಚಟುವಟಿಕೆಗಳೆಂದರೆ ಪ್ರತಿಜ್ಞಾವಿಧಿ ಸ್ವೀಕಾರ ಇತ್ಯಾದಿ. 57.25 ಲಕ್ಷ ಯುವಕರು ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ 77,582 ಓಟಗಳನ್ನು ಆಯೋಜಿಸಲಾಗಿತ್ತು. ಈ ಮೂಲಕ ಒಟ್ಟು 4.24 ಕೋಟಿ ಕಿ.ಮೀ. ದೂರವನ್ನು ಕ್ರಮಿಸಲಾಗಿದೆ.

ಎನ್ಎಸ್ಎಸ್ ಸಹ 9 ರಾಷ್ಟ್ರೀಯ ಮಟ್ಟದ ಫಿಟ್ ಇಂಡಿಯಾ ಫ್ರೀಡಂ ರನ್ ಚಟುವಟಿಕೆಗಳನ್ನು 2021 ಆಗಸ್ಟ್ 13ರಿಂದ ಅಕ್ಟೋಬರ್ 2ರ ವರೆಗೆ ಆಯೋಜಿಸಿತ್ತು. ದೇಶಾದ್ಯಂತ 29,304 ಸಂಸ್ಥೆಗಳ ಎನ್ಎಸ್ಎಸ್ ಸ್ವಯಂಸೇವಕರು ಸೇರಿದಂತೆ ಒಟ್ಟು 32,47,430 ಮಂದಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

https://static.pib.gov.in/WriteReadData/userfiles/image/image024M1PD.jpg https://static.pib.gov.in/WriteReadData/userfiles/image/image025Q4QX.jpg

ಸ್ವಚ್ಛ ಭಾರತ ಕಾರ್ಯಕ್ರಮ (2021 ಅಕ್ಟೋಬರ್ 1ರಿಂದ ಅಕ್ಟೋಬರ್ 31)

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, ನೆಹರು ಯುವ ಕೇಂದ್ರ ಸಂಘಟನೆಯು ಯುವಜನ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದಲ್ಲಿ, 2021  ಅಕ್ಟೋಬರ್‌ 1ರಿಂದ ಅಕ್ಟೋಬರ್ 31ರ ವರೆಗೆ “ಸ್ವಚ್ಛ ಭಾರತ” ಕಾರ್ಯಕ್ರಮದ ಚಟುವಟಿಕೆಗಳನ್ನು ಕೈಗೊಂಡಿದೆ. ಈ ಕಾರ್ಯಕ್ರಮವು ಜನರಲ್ಲಿ ಜಾಗೃತಿ ಮೂಡಿಸುವುದು, ಜನರನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ ಮತ್ತು ಸ್ವಚ್ಛ ಭಾರತ ಉಪಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆ ಖಾತ್ರಿಪಡಿಸುವ ಕೆಲಸ ಮಾಡಿದೆ.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಪ್ರಯಾಗರಾಜ್‌ನಿಂದ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐತಿಹಾಸಿಕ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳು, ಸಮುದಾಯ ಕೇಂದ್ರಗಳು, ಯೂತ್ ಕ್ಲಬ್, ಮಹಿಳಾ ಮಂಡಲ ಕಟ್ಟಡಗಳು, ಶಾಲಾ ಕಟ್ಟಡಗಳು, ಪಂಚಾಯತ್‌ಗಳ ನಿರ್ವಹಣೆ ಮತ್ತು ಸೌಂದರ್ಯೀಕರಣದ ಜತೆಗೆ 2021 ಅಕ್ಟೋಬರ್ 1ರಿಂದ ಅಕ್ಟೋಬರ್ 31ರ ವರೆಗೆ ದೇಶಾದ್ಯಂತ ತ್ಯಾಜ್ಯವನ್ನು ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಚಟುವಟಿಕೆಗಳನ್ನು ಆಯೋಜಿಸುವುದು ಗುರಿಯಾಗಿತ್ತು. ಸ್ವಯಂಪ್ರೇರಿತ ಕಾರ್ಯ ಶಿಬಿರಗಳ ಮೂಲಕ ಕಟ್ಟಡಗಳು, ಸಾಂಪ್ರದಾಯಿಕ ಜಲಮೂಲಗಳ ಸ್ವಚ್ಛತೆ ಮತ್ತು ನಿರ್ವಹಣೆ. ಜನಭಾಗಿದಾರಿ ಜನಾಂದೋಲನದ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು 3.31 ಲಕ್ಷ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದು, 4 ಲಕ್ಷ ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗಿದೆ. ನೆಹರು ಯುವ ಕೇಂದ್ರ ಸಂಘಟನೆಯಿಂದ 1.07 ಕೋಟಿ ಕಿಲೋ ಗ್ರಾಂ  ತ್ಯಾಜ್ಯ ಸಂಗ್ರಹಿಸಲಾಗಿದೆ; ಯುವ ಕ್ಲಬ್ ಸದಸ್ಯರು, ಸ್ವಯಂಸೇವಕರು ಮತ್ತು ಸಮಾಜದ ಇತರ ವಿಭಾಗಗಳಲ್ಲಿ 1.05 ಕೋಟಿ ಕೆಜಿ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲಾಗಿದೆ. 50 ಸಾವಿರ ಸ್ಮಾರಕಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ, 25 ಸಾವಿರ ಸಾಂಪ್ರದಾಯಿಕ ನೀರಿನ ಮೂಲವನ್ನು ನವೀಕರಿಸಿ, ನಿರ್ವಹಿಸಲಾಗಿದೆ. 83 ಸಾವಿರಕ್ಕೂ ಹೆಚ್ಚು ಶಾಲೆಗಳು, ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಲಾಗಿದೆ. ಈ ಕಾರ್ಯದಲ್ಲಿ ಒಟ್ಟು 56.62 ಲಕ್ಷ ಯುವಜನರು ಭಾಗವಹಿಸಿದ್ದರು. ಈ ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಅಭಿಯಾನದಲ್ಲಿ ಒಟ್ಟು 21,98,012 ಎನ್‌ಎಸ್‌ಎಸ್ ಸ್ವಯಂಸೇವಕರು 14,10,750 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿದ್ದಾರೆ.

https://static.pib.gov.in/WriteReadData/userfiles/image/image026GU50.jpg https://static.pib.gov.in/WriteReadData/userfiles/image/image027XQYV.jpg

ಜಲಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲ ಮಿಷನ್‌ ಸಹಯೋಗ;  ಮಳೆ ನೀರು ಹಿಡಿಯಿರಿ ಯೋಜನೆ

ಯುವ ನಾಯಕರು, ಸ್ವಯಂಸೇವಕರು, ಕುಟುಂಬಗಳು ಮತ್ತು ಗ್ರಾಮ ಸಮುದಾಯಗಳಿಗೆ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಬಗ್ಗೆ ಜನರಿಗೆ ಶಿಕ್ಷಣ ನೀಡುವುದು, ಯುವಜನರನ್ನು ಸಬಲೀಕರಣಗೊಳಿಸುವುದು, ವಿವಿಧ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ಮತ್ತು ಶಿಕ್ಷಣ ನೀಡುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಪ್ರಮುಖ ಚಟುವಟಿಕೆಗಳು ನೆಹರು ಯುವ ಕೇಂದ್ರ ಸಂಘಟನೆಯ ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸುವುದು, ರಾಷ್ಟ್ರೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳ ಆಯೋಜನೆ, ನೀರಿನ ಸಂರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕಾರ, ಯುವ ನಾಯಕರು ಮತ್ತು ಸ್ವಯಂಸೇವಕರ ಭಾಗವಹಿಸುವಿಕೆ, ದೃಷ್ಟಿಕೋನ ಮತ್ತು ಪ್ರೇರಣೆ, ಜಲ ಸಂರಕ್ಷಣೆ ಜಾಗೃತಿ ಮತ್ತು ಶಿಕ್ಷಣ, ಉತ್ತಮ ಪರಿಸರ ನಿರ್ಮಾಣಕ್ಕಾಗಿ ಸಮುದಾಯವನ್ನು ಸಜ್ಜುಗೊಳಿಸುವುದು, ನೀರಿನ ಸಂರಕ್ಷಣೆ ಮಾತುಕತೆ ಮತ್ತು ಸಂವಾದ, ಜ್ಞಾನ ಸ್ಪರ್ಧೆ ಮತ್ತು ಸ್ವಯಂಪ್ರೇರಿತ ಆಧಾರದ ಮೇಲೆ ಸಮುದಾಯ ಕಾರ್ಯ ಶಿಬಿರಗಳನ್ನು ಆಯೋಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮೊದಲ ಹಂತದ ಮಳೆ ಹಿಡಿಯಿರಿ ಯೋಜನೆ (2021 ಜನವರಿ-ಮಾರ್ಚ್)

ಕ್ಯಾಚ್ ದಿ ರೈನ್ ಪ್ರಾಜೆಕ್ಟ್‌ನ ಮೊದಲ ಹಂತದಲ್ಲಿ 16.31 ಲಕ್ಷ ಗೊತ್ತುಪಡಿಸಿದ ಚಟುವಟಿಕೆಗಳ ಮೂಲಕ ನೆಹರು ಯುವ ಕೇಂದ್ರ ಸಂಘಟನೆ(ಎನ್‌ವೈಕೆಎಸ್) ಒಟ್ಟು 2.27 ಕೋಟಿ ನಾಗರಿಕರನ್ನು ತಲುಪಿದೆ.

ನೆಹರು ಯುವ ಕೇಂದ್ರ ಸಂಘಟನೆಯು 2021 ಏಪ್ರಿಲ್ 14ರಂದು ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕ್ಯಾಚ್ ದಿ ರೈನ್ ಯೋಜನೆಯಡಿ ಜಲ ಸಂರಕ್ಷಣೆ ಕುರಿತು ಶ್ರಮದಾನ - ಸಮುದಾಯ ಕಾರ್ಯ ಶಿಬಿರ ನಡೆಸಿತು, ಇದರಲ್ಲಿ 1,88,813 ಜನರು 1589 ಚಟುವಟಿಕೆಗಳಿಂದ ಪ್ರಯೋಜನ ಪಡೆದಿದ್ದಾರೆ.

https://static.pib.gov.in/WriteReadData/userfiles/image/image028X0RP.jpg https://static.pib.gov.in/WriteReadData/userfiles/image/image0297SY6.jpg

 ಕ್ಯಾಚ್ ದಿ ರೈನ್ ಪ್ರಾಜೆಕ್ಟ್‌ನ 2ನೇ ಹಂತ (2021 ಅಕ್ಟೋಬರ್-2022 ಜನವರಿ)

ಕ್ಯಾಚ್ ದಿ ರೈನ್ ಪ್ರಾಜೆಕ್ಟ್‌ನ ಎರಡನೇ ಹಂತದ ಅಡಿಯಲ್ಲಿ 2.97 ಲಕ್ಷ ಗೊತ್ತುಪಡಿಸಿದ ಚಟುವಟಿಕೆಗಳ ಮೂಲಕ ನೆಹರು ಯುವ ಕೇಂದ್ರ ಸಂಘಟನೆ ಮೂಲಕ ಒಟ್ಟು 32.46 ಲಕ್ಷ ನಾಗರಿಕರು ತೊಡಗಿಸಿಕೊಂಡಿದ್ದರು.

https://static.pib.gov.in/WriteReadData/userfiles/image/image030U696.jpg https://static.pib.gov.in/WriteReadData/userfiles/image/image031VHQ6.jpg

2021 ನವೆಂಬರ್ 26ರಂದು ಸಂವಿಧಾನ ದಿನಾಚರಣೆ (ಸಂವಿಧಾನ ದಿವಸ್) ಇಂದಿನ ಪೀಳಿಗೆಗೆ ಸಂವಿಧಆನದ ಮೂಲಭೂತ ಕರ್ತವ್ಯಗಳನ್ನು ತಿಳಿಸುವುದು,  ಜವಾಬ್ದಾರಿಯುತ ನಾಗರಿಕರ ಗುಣಗಳನ್ನು ಅನುಕರಣೆ ಮತ್ತು ಭಾರತದ ಸಂವಿಧಾನದ ಮಹತ್ವ ಹರಡಲು ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆ ಮತ್ತು ದೃಢೀಕರಣದ ಕ್ರಮಗಳು ಮತ್ತು ಇವು ನಮ್ಮ ದೇಶದ ಅಭಿವೃದ್ಧಿಗೆ ಹೇಗೆ ಸಹಾಯಕವಾಗಿವೆ ಎಂಬುದನ್ನು ತಿಳಿಸುವುದೇ ಇದರ ಉದ್ದೇಶವಾಗಿದೆ.  ನೆಹರು ಯುವ ಕೇಂದ್ರ ಸಂಘಟನೆ 2021 ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಿತು. ಒಟ್ಟು 8.85 ಲಕ್ಷ ಅಧಿಕಾರಿಗಳು, ಯುವ ಸ್ವಯಂಸೇವಕರು ಮತ್ತು ಇತರ ಸಂಬಂಧಿತ ಪಾಲುದಾರರು ಗೌರವಾನ್ವಿತ ರಾಷ್ಟ್ರಪತಿ ಅವರೊಂದಿಗೆ ಭಾರತೀಯ ಸಂವಿಧಾನದ ಮುನ್ನೋಟಗಳನ್ನು ಓದಿದರು. ಸಂವಿಧಾನ ಕುರಿತ ರಸಪ್ರಶ್ನೆ, ಆಡಳಿತದಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಮೂಲಭೂತ ಕರ್ತವ್ಯಗಳ ಪ್ರತಿಜ್ಞಾವಿಧಿ ಸ್ವೀಕಾರ, ಜಾಗೃತಿ ಮಾತುಕತೆಗಳು, ಮೂಲಭೂತ ಕರ್ತವ್ಯಗಳ ಕುರಿತು ಸಾರ್ವಜನಿಕ ಸಂದೇಶದ ಪ್ರಸಾರ, ವೆಬಿನಾರ್, ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು.

https://static.pib.gov.in/WriteReadData/userfiles/image/image0322TD6.jpg https://static.pib.gov.in/WriteReadData/userfiles/image/image033WRLL.jpg

ನಮಾಮಿ ಗಂಗೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ

ಈ ಯೋಜನೆಯಡಿಯಲ್ಲಿ ಯೋಜಿತ ಚಟುವಟಿಕೆಗಳನ್ನು ಕೈಗೊಳ್ಳಲು, ಬೆಂಬಲ, ಮಾರ್ಗದರ್ಶನ, ಪಾರದರ್ಶಕತೆಗಾಗಿ ಯೋಜನೆಯ ವಿವಿಧ ಹಂತಗಳಲ್ಲಿ ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸಲು, ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರ ಬೆಂಬಲವನ್ನು ಸಂವೇದನಾಶೀಲಗೊಳಿಸಲು ಮತ್ತು ಸಜ್ಜುಗೊಳಿಸಲು ತರಬೇತಿ ಪಡೆದ ಮತ್ತು ಹೆಚ್ಚು ಪ್ರೇರಿತ ಸ್ಥಳೀಯ ಯುವಕರ ಗುಂಪನ್ನು ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಗಂಗಾ ನದಿಯ ಮಾಲಿನ್ಯ ತಡೆಗಟ್ಟುವುದು ಮತ್ತು ಅದರ ಸಂರಕ್ಷಣೆಗಾಗಿ ಕ್ರಮಗಳು, ಕಲುಷಿತ ಗಂಗೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು, ನೀರು ಸಂಗ್ರಹಣೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಮಾಹಿತಿ ನೀಡವುದು, ಶುದ್ಧ ಗಂಗೆ ಸಂರಕ್ಷಣೆ ಇತ್ಯಾದಿ ಕಾರ್ಯಕ್ರಮಗಳು ಒಳಗೊಂಡಿವೆ.

2021 ಜನವರಿಯಿಂದ 2021 ನವೆಂಬರ್ ವರೆಗೆ, ಜಿಲ್ಲೆಯ ಯೋಜನಾ ಅಧಿಕಾರಿ, ಗಂಗಾದೂತರು, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನ ನೆಹರು ಯುವ ಕೇಂದ್ರ ಸಂಘಟನೆಗಳ  ಸ್ಪಿಯರ್‌ಹೆಡ್ ತಂಡದ ಸದಸ್ಯರು ಯೋಜನೆಯಡಿ ವಿವಿಧ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಈ ಚಟುವಟಿಕೆಗಳು ಕೆಳಗಿನಂತಿವೆ;

· 13,778  ಯುವಕರು ಭಾಗವಹಿಸಿ 32,437 ಸಸಿಗಳನ್ನು ನೆಡಲಾಯಿತು.

· 47,295 ಯುವಕರು ಭಾಗವಹಿಸಿ 9,364 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು.

· 83,851 ಯುವಕರು ಭಾಗವಹಿಸಿ 5208 ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಲಾಗಿದೆ.

· 11,007 ಯುವಕರು ಭಾಗವಹಿಸಿ ಮನೆಯಿಂದ ಮನೆಗೆ 731 ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.

ಈ ಅವಧಿಯಲ್ಲಿ ಕೈಗೊಳ್ಳಲಾದ ಇತರ ವಿಶೇಷ ಚಟುವಟಿಕೆಗಳು

ನೆಹರು ಯುವ ಕೇಂದ್ರ ಸಂಘಟನೆಯು 2021 ಮಾರ್ಚ್ 16 ರಿಂದ 31ರ ವರೆಗೆ ಗಂಗಾ ಸ್ವಚ್ಛತಾ ಪಖ್ವಾಡ ಆಯೋಜಿಸಿತ್ತು. ಇದರಲ್ಲಿ ಒಟ್ಟು 777 ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. 13,491 ಯುವಕರು ಇದರಲ್ಲಿ ಭಾಗವಹಿಸಿದ್ದರು. ನೆಹರು ಯುವ ಕೇಂದ್ರ ಸಂಘಟನೆಯು ಗಂಗಾ ಕ್ವೆಸ್ಟ್ ನೋಂದಣಿಯಲ್ಲಿ ಭಾಗವಹಿಸಿತ್ತು. ಒಟ್ಟು 1,10,336 ಯುವಕರು ನೋಂದಾಯಿಸಿಕೊಂಡಿದ್ದರು. ನೆಹರು ಯುವ ಕೇಂದ್ರ ಸಂಘಟನೆ 2021 ಜೂನ್ 5ರಂದು ಪರಿಸರ ದಿನ ಆಚರಿಸಿತು. ಅಂದುಒಟ್ಟು 4,548 ಸಸಿಗಳನ್ನು ನೆಡಲಾಯಿತು(2994 ಸ್ಥಳೀಯ ಜಾತಿಗಳು ಮತ್ತು 1576 ಔಷಧೀಯ). 2021 ಜೂನ್ 20ರಂದು ಗಂಗಾ ದಸರಾ ಆಯೋಜಿಸಲಾಗಿತ್ತು. ಇದರಲ್ಲಿ ಗಂಗಾ ಆರತಿ, ಪಾದಯಾತ್ರೆ, ಗಂಗಾ ನದಿ  ಸ್ವಚ್ಚತೆ ಮತ್ತು ಸಂರಕ್ಷಣೆಯ ಜಾಗೃತಿ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಯಿತು. 3 ದಿನಗಳ ಕಾಲ (2021 ನವೆಂಬರ್ 1ರಿಂದ 3ರ ವರೆಗೆ) ಗಂಗಾ ಉತ್ಸವ ಆಯೋಜಿಸಲಾಗಿತ್ತು. ಗಂಗಾ ದೀಪೋತ್ಸವದಲ್ಲಿ 46,555 ದೀಪಗಳನ್ನು ಬೆಳಗಲಾಯಿತು. 42 ಗಂಗಾ ಪ್ರದರ್ಶನ, 42 ಚಿತ್ರಕಲೆ ಸ್ಪರ್ಧೆ, 389 ಸಾಂಸ್ಕೃತಿಕ ಚಟುವಟಿಕೆಗಳು, 17 ರಕ್ತದಾನ ಮತ್ತು 42 ಮಾಶಾಲ್ ಭಾಗಿದಾರಿಕೆ ಯಾತ್ರೆಗಳನ್ನು ಆಯೋಜಿಸಲಾಗಿತ್ತು. ದೆ. 60 ಸಾವಿರ 71 ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

https://static.pib.gov.in/WriteReadData/userfiles/image/image0345H88.jpg https://static.pib.gov.in/WriteReadData/userfiles/image/image035HIHN.jpg

ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ

(ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ)

ನೆಹರು ಯುವ ಕೇಂದ್ರ ಸಂಘಟನೆ ಮತ್ತು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಐಇಪಿಎಫ್ಎ)ವು ಜಂಟಿಯಾಗಿ ಹೂಡಿಕೆದಾರರ ಶಿಕ್ಷಣ ತರಬೇತಿ ನೀಡಲು ಸಹಭಾಗಿತ್ವದ ಯೋಜನೆ ಪ್ರಾರಂಭಿಸಿವೆ. ನೆಹರು ಯುವ ಕೇಂದ್ರ ಸಂಘಟನೆಯ ಕ್ಷೇತ್ರ  ಪದಾಧಿಕಾರಿಗಳು ಮತ್ತು ಯೂತ್ ಕ್ಲಬ್‌ಗಳ ಸದಸ್ಯರಿಗೆ ಹೂಡಿಕೆದಾರರ ಶಿಕ್ಷಣ, ಜಾಗೃತಿ ಮತ್ತು ರಕ್ಷಣೆ, ಸಮುದಾಯ ಜಾಗೃತಿ ಕುರಿತು ತರಬೇತಿ ನೀಡುವುದು ಇದರ ಉದ್ದೇಶವಾಗಿದೆ.

 ಹೂಡಿಕೆದಾರರ ಜಾಗೃತಿ ಮತ್ತು ಶಿಕ್ಷಣದ ಕುರಿತು 2 ದಿನಗಳ ಪ್ರಾದೇಶಿಕ ಮಟ್ಟದ ತರಬೇತಿ  ಕಾರ್ಯಕ್ರಮವನ್ನು 2021 ಡಿಸೆಂಬರ್ 9 ಮತ್ತು 10ರಂದು ಚಂಡೀಗಢದಲ್ಲಿ ನಡೆಸಲಾಯಿತು. ಇದರಲ್ಲಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ 23 ರಾಜ್ಯ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಜಿಲ್ಲಾ ಯುವ ಅಧಿಕಾರಿಗಳು ಭಾಗವಹಿಸಿದ್ದರು.

https://static.pib.gov.in/WriteReadData/userfiles/image/image0367100.jpg https://static.pib.gov.in/WriteReadData/userfiles/image/image0378JTG.jpg

ವೆಬಿನಾರ್‌ಗಳ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಾಗಾರಗಳು.

ಸಾಮಾನ್ಯವಾಗಿ ಯುವಕರಿಗೆ ಮತ್ತು ವಿಶೇಷವಾಗಿ ಗ್ರಾಮೀಣ ಯುವಜನರಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಅವರು ಪ್ರಾರಂಭಿಸಬಹುದಾದ ಸಂಭಾವ್ಯ ಚಟುವಟಿಕೆಗಳ ಬಗ್ಗೆ ಯುವ ಕ್ಲಬ್‌ಗಳನ್ನು ಎಚ್ಚರಿಸುವುದು ಈ ವೆಬಿನಾರ್‌ಗಳ ಉದ್ದೇಶವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಕೆಲಸ ಮಾಡುವ ಯುವ ಕ್ಲಬ್‌ಗಳ ಜಾಲವು ಬಡವರಿಗೆ ಮತ್ತು ಗ್ರಾಮೀಣ ಜನತೆಗೆ ರಕ್ಷಣಾತ್ಮಕ ಪದರವಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ನೆಹರು ಯುವ ಕೇಂದ್ರ ಸಂಘಟನೆ ವೆಬಿನಾರ್ ಗಳ ಮೂಲಕ 4 ಮಾನವ ಹಕ್ಕುಗಳ ಜಾಗೃತಿ ಕಾರ್ಯಾಗಾರಗಳನ್ನು ನಡೆಸಿವೆ. 2021 ಫೆಬ್ರವರಿ 11, 12 ಮತ್ತು  16 ಹಾಗೂ ಅಕ್ಟೋಬರ್ 28ರಂದು ನಡೆದ ವೆಬಿನಾರ್ ಕಾರ್ಯಾಗಾರಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ ಅಸ್ಸಾಂ, ಮೇಘಾಲಯ, ಮಣಿಪುರ, ಸಿಕ್ಕಿಂ, ಮಹಾರಾಷ್ಟ್ರ, ಗೋವಾ, ಛತ್ತೀಸ್‌ಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ನೆಹರು ಯುವ ಕೇಂದ್ರ ಸಂಘಟನೆ ಅಧಿಕಾರಿಗಳು, ರಾಷ್ಟ್ರೀಯ ಯುವ ಸ್ವಯಂಸೇವಕರು ಮತ್ತು ಯುವ ಸ್ವಯಂಸೇವಕರು ಸೇರಿ ಒಟ್ಟು 4,872 ಮಂದಿ ಭಾಗವಹಿಸಿದ್ದರು.

ರಾಷ್ಟ್ರೀಯ ಪೋಷಣ್ ಮಾ-2021:

ಎನ್ಎಸ್ಎಸ್ ಘಟಕಗಳು ಪೋಷಣ್ ಮಾಹ್ ಅನ್ನು 2021 ಸೆಪ್ಟೆಂಬರ್ 1 ರಿಂದ 30ರ ವರೆಗೆ ಆಯೋಜಿಸಿದ್ದವು. ಒಟ್ಟು 8,28,721 ಸ್ವಯಂಸೇವಕರು ಪೌಷ್ಟಿಕಾಂಶ ಜಾಗೃತಿ ಅಭಿಯಾನ, ಆಹಾರ ಪದಾರ್ಥಗಳ ಸೇವನೆ ಕುರಿತ ಉಪನ್ಯಾಸ ನೀಡಿದರು..

ಗಾಂಧಿ ಜಯಂತಿ, 2021 ಆಚರಣೆ

ಮಹಾತ್ಮ ಗಾಂಧಿ ಅವರ 152ನೇ ಜನ್ಮದಿನ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಎನ್‌ಎಸ್‌ಎಸ್ ಸೂಕ್ತ ರೀತಿಯಲ್ಲಿ ಆಚರಿಸಿತು. ಈ ಸಂದರ್ಭದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ, ವೆಬಿನಾರ್‌ಗಳು, ಉಪನ್ಯಾಸಗಳು, ಆನ್‌ಲೈನ್ ಪ್ರಬಂಧ ಬರವಣಿಗೆ ಮತ್ತು ಚಿತ್ರಕಲೆ, ಪೋಸ್ಟರ್, ರಸಪ್ರಶ್ನೆ ಮತ್ತು ಗಾಂಧಿ ತತ್ವಶಾಸ್ತ್ರದ ವಿವಿಧ ಸ್ಪರ್ಧೆಗಳನ್ನು ದೇಶಾದ್ಯಂತ ಆಯೋಜಿಸಲಾಗಿತ್ತು.  ದೇಶಾದ್ಯಂತ 11,29,892 ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.

ಎನ್ಎಸ್ಎಸ್ ಗಣರಾಜ್ಯೋತ್ಸವ ಪರೇಡ್ ಶಿಬಿರ 2021

ಪ್ರತಿ ವರ್ಷ ನವದೆಹಲಿಯ ರಾಜ್‌ಪಥದಲ್ಲಿ ನಡೆಯುವ  ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್ಎಸ್ಎಸ್ ತುಕಡಿ ಭಾಗವಹಿಸುತ್ತದೆ. ಇದಕ್ಕಾಗಿ ಸ್ವಯಂಸೇವಕರನ್ನು ಸಿದ್ಧಪಡಿಸುವ ಸಲುವಾಗಿ, ಜನವರಿ ತಿಂಗಳಲ್ಲಿ ನವದೆಹಲಿಯಲ್ಲಿ 1 ತಿಂಗಳ ಅವಧಿಯ ಗಣರಾಜ್ಯೋತ್ಸವ ಪರೇಡ್ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲಿ 200 (100 ಹುಡುಗರು ಮತ್ತು 100 ಹುಡುಗಿಯರು) ಎನ್ಎಸ್ಎಸ್ ಸ್ವಯಂಸೇವಕರು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಕೇಂದ್ರ ಆಯ್ಕೆ ಸಮಿತಿಯಿಂದ ದೇಶದ 5 ವಲಯದ ಪೂರ್ವ ಗಣರಾಜ್ಯ ದಿನದ ಪರೇಡ್ ಶಿಬಿರಗಳಿಂದ ಆಯ್ಕೆ ಮಾಡಲಾಗಿದೆ. ಎನ್ಎಸ್ಎಸ್ ಗಣರಾಜ್ಯೋತ್ಸವ ಪರೇಡ್ ಶಿಬಿರಗಳನ್ನು 2021 ಜನವರಿಯಲ್ಲಿ ಇಂಟರ್ ನ್ಯಾಷನಲ್ ಯೂತ್ ಹಾಸ್ಟೆಲ್ ಮತ್ತು ವಿಶ್ವ ಯುವಕ ಕೇಂದ್ರ, ಚಾಂಕ್ಯಪುರಿ, ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದ ಸಂದರ್ಭದಲ್ಲಿ ಎನ್ಎಸ್ಎಸ್ ಸ್ವಯಂಸೇವಕರಿಗೆ ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನ ವಾರ್ಷಿಕೋತ್ಸವ ಮತ್ತು ಪರಾಕ್ರಮ್ ದಿವಸ್, 2021

2021 ಜನವರಿ 23ರಂದು ಎನ್ಎಸ್ಎಸ್ ಘಟಕಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ ಆಚರಿಸಿದವು. ಇದನ್ನು “ಪರಾಕ್ರಮ್ ದಿವಸವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಕೆ, ರಾಲಿಗಳು, ಸೈಕ್ಲಾಥಾನ್, ವೆಬಿನಾರ್ ಗಳು,  ಉಪನ್ಯಾಸಗಳು, ಆನ್‌ಲೈನ್ ಪ್ರಬಂಧ ಬರವಣಿಗೆ, ಪೋಸ್ಟರ್ ಸ್ಪರ್ಧೆಗಳು, ರಸಪ್ರಶ್ನೆ,  ತತ್ವಶಾಸ್ತ್ರ ಮತ್ತು ಸಿದ್ಧಾಂತ, ರಕ್ತದಾನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸಲಾಗಿತ್ತು. ದೇಶಾದ್ಯಂತ 10,52,497 ಎನ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.

***



(Release ID: 1786480) Visitor Counter : 332