ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವರ್ಷಾಂತ್ಯದ ಪುನರಾವಲೋಕನ- 2021

ಪ್ರಸಕ್ತ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ (Q1)ಜಿಡಿಪಿ ಬೆಳವಣಿಗೆಯು ಶೇ.20.1 ಮತ್ತು ಎರಡನೇ ತ್ರೈಮಾಸಿಕದಲ್ಲಿ (Q2) ಶೇ.8.4ಕ್ಕೆ ಪುನಶ್ಚೇತನಗೊಂಡಿದ್ದು, ಕೋವಿಡ್‌ನಿಂದ ಚೇತರಿಕೆಯ ಸಂಕೇತವನ್ನು ಆರ್ಥಿಕತೆಯು ಸೂಚಿಸಲಾರಂಭಿಸಿದೆ

ಇ-ವೇ ಬಿಲ್‌ಗಳು, ರೈಲು ಸರಕು ಸಾಗಣೆ, ಬಂದರು ಸಂಚಾರ, ಜಿಎಸ್ಟಿ ಸಂಗ್ರಹಗಳು ಮತ್ತು ವಿದ್ಯುತ್ ಬಳಕೆಯಂತಹ ಹಲವಾರು ಸೂಚ್ಯಂಕಗಳು “ವಿ” ಆಕಾರದ ಚೇತರಿಕೆಯನ್ನು ಪ್ರದರ್ಶಿಸಿವೆ

ಐಐಪಿ ಮತ್ತು ಐಸಿಐ ಪ್ರವೃತ್ತಿಗಳಲ್ಲಿ ಸೂಚಿಸಿದಂತೆಯೇ ಕೈಗಾರಿಕಾ ಉತ್ಪಾದನೆಯು ಪುನಶ್ಚೇತನ ಕಂಡಿದೆ

2020ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ -17.3% ಸಂಕುಚಿತಗೊಂಡಿದ್ದ ʼಐಐಪಿʼ, 2021ರ ಇದೇ ಅವಧಿಯಲ್ಲಿ 20%ರಷ್ಟು ಏರಿಕೆ ಕಂಡಿದೆ; ಕಳೆದ ವರ್ಷ ಈ ಅವಧಿಯಲ್ಲಿ ಗಣನೀಯ ಕುಸಿತ ಕಂಡಿದ್ದ ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ವಲಯಗಳು ಈ ಬಾರಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ

ಭಾರತವನ್ನು 'ಆತ್ಮನಿರ್ಭರ್' ಮಾಡಲು ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ʻಪಿಎಲ್ಐʼ (ಉತ್ಪಾದನೆ ಆಧರಿತ ಸಹಾಯಧನ) ಯೋಜನೆ ಜಾರಿಗೊಳಿಸಲಾಗಿದೆ

ಪ್ರಮುಖ 14 ವಲಯಗಳಿಗೆ 1.97 ಲಕ್ಷ ಕೋಟಿ ರೂ.ಗಳ (26 ಬಿಲಿಯನ್ ಅಮೆರಿಕನ್ ಡಾಲರ್) ವೆಚ್ಚದಲ್ಲಿ ಪಿಎಲ್ಐ ಯೋಜನೆಗಳನ್ನು ಜಾರಿಗೊಳಿಸಲಾಗಿದೆ

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯನ್ನು ಮತ್ತಷ್ಟು ಉದಾರೀಕರಿಸಲಾಗಿದೆ – ಎಫ್‌ಡಿಐ ಮಿತಿಯನ

Posted On: 29 DEC 2021 6:50PM by PIB Bengaluru
 1. ಪೀಠಿಕೆ
 • 2020ನೇ ಸಾಲಿನ ವರ್ಷವು ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ತೀವ್ರ ಪ್ರಕ್ಷುಬ್ಧತೆಗೆ ಸಾಕ್ಷಿಯಾಯಿತು. ಇದು ಆರ್ಥಿಕ ಬೆಳವಣಿಗೆಗೆ ಅತಿದೊಡ್ಡ ಅಪಾಯವಾಗಿ ಹೊರಹೊಮ್ಮಿತು. ಭಾರತೀಯ ಆರ್ಥಿಕತೆಯು 2020-21ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.24.4 ಮತ್ತು ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.3ರಷ್ಟು ತೀವ್ರ ಮಟ್ಟದ ಸಂಕೋಚನಕ್ಕೆ ಸಾಕ್ಷಿಯಾಯಿತು. 
 • ಕೋವಿಡ್ ಸಾಂಕ್ರಾಮಿಕ ಸಂಬಂಧಿತ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಲು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 29.87 ಲಕ್ಷ ಕೋಟಿ ರೂ.ಗಳ ʻಆತ್ಮನಿರ್ಭರ್ʼ ಪ್ಯಾಕೇಜ್ ಘೋಷಣೆ ಸೇರಿದಂತೆ ಹಲವು ಸರಣಿ ಕ್ರಮಗಳನ್ನು ಸರಕಾರ ಕೈಗೊಂಡಿತು. ಆರ್ಥಿಕತೆ ಮತ್ತು ಜೀವನೋಪಾಯವನ್ನು ಬೆಂಬಲಿಸಲು ಉದ್ದೇಶಿತ ಮಧ್ಯಸ್ಥಿಕೆಗಳನ್ನು ಮಾಡಲಾಯಿತು. ಇದಲ್ಲದೆ, ರಚನಾತ್ಮಕ ಸುಧಾರಣೆಗಳ ವೇಗವನ್ನು ತ್ವರಿತಗೊಳಿಸಲಾಯಿತು.
 • ʻಆತ್ಮನಿರ್ಭರ್‌ʼ ಪ್ಯಾಕೇಜ್ ಅಡಿಯಲ್ಲಿ ಕೈಗೊಳ್ಳಲಾದ ಪ್ರಮುಖ ಸುಧಾರಣೆಗಳಲ್ಲಿ ʻಎಂಎಸ್‌ಎಂಇʼ ಸಾಲಗಳಿಗೆ ಸಾಲ ಖಾತರಿ, ವಲಯವಾರು ರಚನಾತ್ಮಕ ಸುಧಾರಣೆಗಳು, ʻಸಿಪಿಎಸ್ಇʼಗಳ ವ್ಯೂಹಾತ್ಮಕ ಬಂಡವಾಳ ಹಿಂತೆಗೆತ ನೀತಿ, ಸಾರ್ವಜನಿಕ ಸಂಗ್ರಹಣೆಯಲ್ಲಿ ಸುಧಾರಣೆಗಳು, ಹೂಡಿಕೆಗೆ ಅನುಕೂಲವಾಗುವಂತೆ ಉನ್ನತಾಧಿಕಾರದ ಕಾರ್ಯದರ್ಶಿಗಳ ತಂಡ ರಚನೆ ಮತ್ತು ಯೋಜನಾ ಅಭಿವೃದ್ಧಿ ಘಟಕಗಳ ಗಳ ಸ್ಥಾಪನೆ, ಅನುಸರಣಾ ಹೊರೆ ಇಳಿಕೆ ಮತ್ತು ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ- ಇವುಗಳು ಸೇರಿವೆ.
 • ಸರಕಾರ ಕೈಗೆತ್ತಿಕೊಂಡ ರಚನಾತ್ಮಕ ಸುಧಾರಣೆಗಳ ಜೊತೆಗೆ ಈ ಎಲ್ಲಾ ಕ್ರಮಗಳು, ಆರ್ಥಿಕತೆಯ ಆರಂಭಿಕ ಪುನರುಜ್ಜೀವನಕ್ಕೆ ಸಹಾಯ ಮಾಡಿದವು. ಕೊರೊನಾ ಸಾಂಕ್ರಾಮಿಕಕ್ಕೆ ಮೊದಲು ʻಎನ್-95ʼ ಮಾಸ್ಕ್‌, ʻಪಿಪಿಇʼ ಕಿಟ್‌ಗಳು, ವೆಂಟಿಲೇಟರ್‌ಗಳು ಇತ್ಯಾದಿಗಳನ್ನು ಭಾರತ ಉತ್ಪಾದಿಸುತ್ತಲೇ ಇರಲಿಲ್ಲ. ಸಾಂಕ್ರಾಮಿಕದ ಆರಂಭದ ಸಮಯದಲ್ಲಿ ಆಗಷ್ಟೇ ಉತ್ಪಾದನೆಯನ್ನು ಪ್ರಾರಂಭಿಸಿದ ಭಾರತ ಇಂದು ಈ ವಿಚಾರದಲ್ಲಿ ಕೇವಲ ಸ್ವಾವಲಂಬಿಯಾಗಿರುವುದು ಮಾತ್ರವಲ್ಲದೆ, ವಿಶ್ವ ಮಾರುಕಟ್ಟೆಗಳ ಬೇಡಿಕೆಗಳನ್ನೂ ಪೂರೈಸಲು ಪ್ರಾರಂಭಿಸಿದೆ. ಕೋವಿಡ್ ಸಾಂಕ್ರಾಮಿಕರೋಗದ ವಿರುದ್ಧದ ಹೋರಾಟದಲ್ಲಿ ಸರಕಾರವು 2021ರ ಜನವರಿಯಲ್ಲಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ʻಕೊವಾಕ್ಸಿನ್ʼ ಲಸಿಕೆ ನೀಡಿಕೆಯನ್ನು ಆರಂಭಿಸಿತು. ಇದುವರೆಗೂ ಭಾರತದಲ್ಲಿ ಈಗಾಗಲೇ 143 ಕೋಟಿಗೂ ಹೆಚ್ಚು ಕೋವಿಡ್ ಡೋಸ್‌ಗಳನ್ನು ನೀಡಲಾಗಿದೆ. ಇದು ಜನರ ಜೀವವನ್ನು ಉಳಿಸಿರುವುದು ಮಾತ್ರವಲ್ಲದೆ, ಆರ್ಥಿಕತೆಯ ಶೀಘ್ರ ಚೇತರಿಕೆಯ ವೇಗವನ್ನು ಹೆಚ್ಚಿಸಿದೆ.
 • 2021-22ರ ಸಾಲಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ(Q1) ಜಿಡಿಪಿ ಬೆಳವಣಿಗೆಯು ಶೇ. 20.1ಕ್ಕೆ ಮತ್ತು ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ (Q2) ಶೇ. 8.4ಕ್ಕೆ ಮರುಕಳಿಸುವುದರೊಂದಿಗೆ ಆರ್ಥಿಕತೆಯು ಚೇತರಿಕೆಯ ಚಿಹ್ನೆಯನ್ನು ತೋರಿಸಲು ಪ್ರಾರಂಭಿಸಿತು. ಇ-ವೇ ಬಿಲ್ ಗಳು, ರೈಲು ಸರಕು ಸಾಗಣೆ, ಬಂದರು ಸಂಚಾರ, ಜಿಎಸ್‌ಟಿ ಸಂಗ್ರಹಗಳು ಮತ್ತು ವಿದ್ಯುತ್ ಬಳಕೆಯಂತಹ ಹಲವಾರು ಅಧಿಕ ಆವರ್ತನ ಸೂಚ್ಯಂಕಗಳು ಆರ್ಥಿಕತೆಯಲ್ಲಿ “ವಿ” ಆಕಾರದ ಚೇತರಿಕೆಯನ್ನು ಪ್ರದರ್ಶಿಸಿವೆ.

II. ಕೈಗಾರಿಕಾ ಸಾಧನೆ

 • 2020-21ರ ಅವಧಿಯಲ್ಲಿ ಕೈಗಾರಿಕಾ ವಲಯದ ಕಾರ್ಯಕ್ಷಮತೆ ಗಣನೀಯವಾಗಿ, ಅಂದರೆ -8.4%ರಷ್ಟು ಕುಸಿಯಿತು. ಮುಖ್ಯವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಕೋವಿಡ್-19 ಸಾಂಕ್ರಾಮಿಕದಿಂದ ಆಗಬಹುದಾದ ಪರಿಣಾಮವನ್ನು ಮಿತಿಗೊಳಿಸಲು ಸರಕಾರವು ಮಾರ್ಚ್ 2020ರಿಂದ ರಾಷ್ಟ್ರವ್ಯಾಪಿ ಕೈಗಾರಿಕೆಗಳನ್ನು ಮುಚ್ಚಿದ್ದರಿಂದ ಇದರ ಮೇಲೆ ಗಂಭೀರ ಪರಿಣಾಮ ಉಂಟಾಯಿತು. ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳು ಕ್ರಮವಾಗಿ -7.8% ಮತ್ತು -9.6% ರಷ್ಟು ಕುಸಿಯುವ ಮೂಲಕ ಭಾರಿ ಪರಿಣಾಮ ಎದುರಿಸಿದವು.  ಇದೇ ವೇಳೆ, ವಿದ್ಯುತ್ ಉತ್ಪಾದನಾ ವಲಯವು -0.5% ನಷ್ಟು ಕುಸಿತಕ್ಕೆ ಸಾಕ್ಷಿಯಾಯಿತು.
 • 2020ರ ಏಪ್ರಿಲ್-ಅಕ್ಟೋಬರ್ ಅವಧಿಯ  ʻಸಮಗ್ರ ಕೈಗಾರಿಕಾ ಉತ್ಪಾದನಾ ಸೂಚ್ಯಂಕʼವು ಶೇಕಡಾ 17.3 ರಷ್ಟು ಕುಸಿಯಿತು. ಆದಾಗ್ಯೂ, ಲಸಿಕೀಕರಣ ಮತ್ತು ಭಾರತೀಯ ಉದ್ಯಮದ ರಚನಾತ್ಮಕ ಸುಧಾರಣೆಗಳು ಹಾಗೂ ಸ್ಥಿತಿಸ್ಥಾಪಕತ್ವ ಹೆಚ್ಚಳ ಸೇರಿದಂತೆ ಸರಕಾರ ಕೈಗೊಂಡ ವಿವಿಧ ಕ್ರಮಗಳು ಆರ್ಥಿಕತೆಯ ಶೀಘ್ರ ಪುನಶ್ಚೇತನಕ್ಕೆ ಸಹಾಯ ಮಾಡಿದವು. ಈ ಕ್ರಮಗಳು 2021ರ ಇದೇ ಅವಧಿಯಲ್ಲಿ (ಏಪ್ರಿಲ್‌-ಅಕ್ಟೋಬರ್‌) ಐಐಪಿಯಲ್ಲಿ ಶೇಕಡಾ 20.0ರಷ್ಟು ಏರಿಕೆಗೆ ಕಾರಣವಾಯಿತು. ಅದೇ ರೀತಿ, ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ವಲಯವು ಇದೇ ಅವಧಿಯಲ್ಲಿ ಕ್ರಮವಾಗಿ 20.4%, 21.2% ಮತ್ತು 11.4% ಬೆಳವಣಿಗೆಗೆ ಸಾಕ್ಷಿಯಾದವು.
 1. ಪ್ರಮುಖ ಎಂಟು ಕೈಗಾರಿಕಾ ಬೆಳವಣಿಗೆಯ ಪ್ರವೃತ್ತಿಗಳು
 • ಪ್ರಮುಖ ಎಂಟು ಕೈಗಾರಿಕೆಗಳ ಸೂಚ್ಯಂಕವು(ಐಸಿಐ), ಎಂಟು ಪ್ರಮುಖ ಕೈಗಾರಿಕೆಗಳ ಅಂದರೆ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ. ʻಐಸಿಐʼನಲ್ಲಿ ಸೇರಿಸಲಾದ ಕೈಗಾರಿಕೆಗಳು ʻಕೈಗಾರಿಕಾ ಉತ್ಪಾದನಾ ಸೂಚ್ಯಂಕʼದಲ್ಲಿ (ಐಐಪಿ) 40.27% ಮೌಲ್ಯವನ್ನು ಒಳಗೊಂಡಿವೆ.

 

 • 2020-21ರ ಅವಧಿಯಲ್ಲಿ ʻಐಸಿಐʼ ಬೆಳವಣಿಗೆ ದರವು ಕಳೆದ 3 ವರ್ಷಗಳಲ್ಲಿ ಅಂದರೆ 2017-18ರಿಂದ 2019-20ರ ಅವಧಿಯಲ್ಲಿದ್ದ ಸರಾಸರಿ ಶೇ.3.0ರ ಬೆಳವಣಿಗೆ ದರಕ್ಕೆ ಹೋಲಿಸಿದರೆ ಶೇ.6.4ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್‌- ಅಕ್ಟೋಬರ್, 2021-22) ಈ ಬೆಳವಣಿಗೆಯು ಸದೃಢವಾಗಿದ್ದು, ಶೇ.15.1ರಷ್ಟು ಬೆಳವಣಿಗೆಯ ದರ ದಾಖಲಾಗಿದೆ. ಎಂಟು ಮೂಲ ವಲಯಗಳ ಪೈಕಿ ಆರು ವಲಯಗಳು ಎರಡಂಕಿ ಬೆಳವಣಿಗೆಯನ್ನು ದಾಖಲಿಸಿವೆ. ಇವುಗಳಲ್ಲಿ ಸಿಮೆಂಟ್ ಮತ್ತು ಉಕ್ಕು ವಲಯಗಳು ಕ್ರಮವಾಗಿ 33.6% ಮತ್ತು 28.6% ಬೆಳವಣಿಗೆ ದರಗಳೊಂದಿಗೆ ಮುಂಚೂಣಿಯಲ್ಲಿವೆ. ಆದರೆ, ಕಚ್ಚಾತೈಲ ಮತ್ತು ರಸಗೊಬ್ಬರ ವಲಯದ ಬೆಳವಣಿಗೆಯು ಇದೇ ಅವಧಿಯಲ್ಲಿ ಅಂದರೆ (ಏಪ್ರಿಲ್‌-ಅಕ್ಟೋಬರ್, 2021-22) ಸ್ತಬ್ಧವಾಗಿದೆ. ಈ ಅಂಕಿ-ಅಂಶಗಳು ಪ್ರಮುಖ ಕೈಗಾರಿಕೆಗಳ ಪುನಶ್ಚೇತನವನ್ನು ತೋರಿಸುತ್ತವೆ.

 

IV. ʻಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆʼಯು (ಡಿಪಿಐಐಟಿ) 'ವಿಶ್ವಕ್ಕಾಗಿ ಮೇಕ್‌ ಇನ್‌ ಇಂಡಿಯಾʼ ಆಶಯದೊಂದಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಕ್ರಮಗಳು ಈ ಕೆಳಗಿನಂತಿವೆ:

1. ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ (ಪಿಎಲ್‌ಐ):

 • 'ಆತ್ಮನಿರ್ಭರ್' ಸಾಧನೆಗಾಗಿ ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯ ಹಾಗೂ ರಫ್ತುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, 14 ಪ್ರಮುಖ ಉತ್ಪಾದನಾ ವಲಯಗಳಿಗಾಗಿ ʻಉತ್ಪಾದನೆ ಆಧರಿತ ಸಹಾಯಧನʼ (ಪಿಎಲ್ಐ) ಯೋಜನೆಗಳನ್ನು ನೀಡಲು 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 1.97 ಲಕ್ಷ ಕೋಟಿ ರೂ.ಗಳ (26 ಶತಕೋಟಿ ಅಮೆರಿಕನ್ ಡಾಲರ್) ಅನುದಾನ ಘೋಷಿಸಲಾಗಿದೆ, 2021-22ನೇ ಸಾಲಿನ ಹಣಕಾಸು ವರ್ಷದಿಂದ ಇದು ಅನ್ವಯವಾಗಿದೆ. ಅಂತಹ 14 ವಲಯಗಳೆಂದರೆ: (1) ವಾಹನ ಮತ್ತು ವಾಹನ ಬಿಡಿ ಭಾಗಗಳು, (2) ಔಷಧ (3) ಸ್ಪೆಷಾಲಿಟಿ ಉಕ್ಕು, (4) ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, (5) ಎಲೆಕ್ಟ್ರಾನಿಕ್/ತಂತ್ರಜ್ಞಾನ ಉತ್ಪನ್ನಗಳು, (6) ವೈಟ್ ಗೂಡ್ಸ್ (ಎಸಿಗಳು ಮತ್ತು ಎಲ್‌ಇಡಿ ದೀಪಗಳು), (7) ಆಹಾರ ಉತ್ಪನ್ನಗಳು, (8) ಜವಳಿ ಉತ್ಪನ್ನಗಳು: ಎಂಎಂಎಫ್ ವಿಭಾಗ ಮತ್ತು ತಾಂತ್ರಿಕ ಜವಳಿ, (9) ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳು, ಮತ್ತು (10) ಸುಧಾರಿತ ರಸಾಯನಶಾಸ್ತ್ರ ಕೋಶದ (ಎಸಿಸಿ) ಬ್ಯಾಟರಿ
  (11) ವೈದ್ಯಕೀಯ ಸಾಧನಗಳು (12) ಮೊಬೈಲ್ ಫೋನ್‌ಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆ (13) ಔಷಧ ತಯಾರಿಕೆಯ ನಿರ್ಣಾಯ ಕಚ್ಚಾವಸ್ತುಗಳು (ಕೆಎಸ್‌ಎಂ/ಎಪಿಐ); ಮತ್ತು (14) ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳು.
 • ಈಗಾಗಲೇ ಎಲ್ಲಾ ಪಿಎಲ್ಐ ಯೋಜನೆಗಳ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಮತ್ತು ಹೆಚ್ಚಿನ ಯೋಜನೆಗಳ ಅಡಿಯಲ್ಲಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗಿದೆ.
 • ಪಿಎಲ್ಐ ಯೋಜನೆಗಳಿಗೆ ಒಟ್ಟಾರೆ ಸಮನ್ವಯವನ್ನು ʻಡಿಪಿಐಐಟಿʼ ಮಾಡುತ್ತಿದೆ. ಈ ಇಲಾಖೆಯು ʻವೈಟ್‌ ಗೂಡ್ಸ್‌ʼಗೆ (ಏರ್ ಕಂಡೀಷನರ್‌ಗಳು ಮತ್ತು ಎಲ್‌ಇಡಿ ದೀಪಗಳು) ಸಂಬಂಧಿಸಿದಂತೆ ʻಪಿಎಲ್ಐʼ ಯೋಜನೆಯ ನೋಡಲ್ ಇಲಾಖೆಯಾಗಿದೆ. 6238 ಕೋಟಿ ರೂ. ವೆಚ್ಚದ ಪಿಐಎಲ್‌ ಯೋಜನೆ ಇದಾಗಿದೆ. ಈ ಯೋಜನೆಯ ಮಾರ್ಗಸೂಚಿಗಳನ್ನು 2021ರ ಜೂನ್ 4ರಂದು ಪ್ರಕಟಿಸಲಾಗಿದೆ. 4,614 ಕೋಟಿ ರೂ.ಗಳ ಬದ್ಧತೆಯ ಹೂಡಿಕೆ ಹೊಂದಿರುವ 42 ಅರ್ಜಿದಾರರನ್ನು ಈ ಪಿಎಲ್ ಐ ಯೋಜನೆಯಡಿ ತಾತ್ಕಾಲಿಕವಾಗಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ಆಯ್ದ ಅರ್ಜಿದಾರರಲ್ಲಿ ರೂ. 3,898 ಕೋಟಿ ರೂ. ಬದ್ಧತಾ ಹೂಡಿಕೆ ಹೊಂದಿರುವ 26 ಏರ್ ಕಂಡೀಷನರ್ ಉತ್ಪಾದಕ ಸಂಸ್ಥೆಗಳು ಮತ್ತು 716 ಕೋಟಿ ರೂ. ಬದ್ಧತಾ ಹೂಡಿಕೆ ಹೊಂದಿರುವ 16 ಎಲ್‌ಇಡಿ ದೀಪ ಉತ್ಪಾದಕ ಸಂಸ್ಥೆಗಳು ಸೇರಿವೆ.

2. ʻಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ (ಎನ್‌ಎಂಪಿ)

 • ಪ್ರಧಾನಮಂತ್ರಿಯವರು 2021ರ ಅಕ್ಟೋಬರ್ 13ರಂದು ಮೂಲಸೌಕರ್ಯ ಅಭಿವೃದ್ಧಿಗಾಗಿ ʻಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼಗೆ ಚಾಲನೆ ನೀಡಿದರು. ʻಗತಿ ಶಕ್ತಿʼಯು ಒಂದು ಡಿಜಿಟಲ್ ವೇದಿಕೆಯಾಗಿದೆ. ಇದು ರೈಲ್ವೆ, ರಸ್ತೆ ಮಾರ್ಗಗಳು ಸೇರಿದಂತೆ 16 ಸಚಿವಾಲಯಗಳನ್ನು ಸಮಗ್ರ ಯೋಜನೆ ಹಾಗೂ ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನ ಉದ್ದೇಶಕ್ಕಾಗಿ ಒಟ್ಟುಗೂಡಿಸುತ್ತದೆ.
 • ಪ್ರಮುಖ ಮೂಲಸೌಕರ್ಯ ಯೋಜನೆಗಳ ಪಾಲುದಾರರಿಗಾಗಿ ಸಮಗ್ರ ಯೋಜನೆಯನ್ನು ಸಾಂಸ್ಥಿಕಗೊಳಿಸುವ ಮೂಲಕ ಹಿಂದಿನ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಪ್ರಧಾನಿ ಗತಿ ಶಕ್ತಿ ಯೋಜನೆಯು ಹೊಂದಿದೆ. ಇಲ್ಲಿ ಯೋಜನೆ ಮತ್ತು ವಿನ್ಯಾಸಗಳನ್ನು ಪ್ರತ್ಯೇಕವಾಗಿ ರೂಪಿಸುವ ಬದಲು, ಅವುಗಳನ್ನು ಸಾಮಾನ್ಯ ದೃಷ್ಟಿಕೋನದೊಂದಿಗೆ ವಿನ್ಯಾಸಗೊಳಿಸಿ, ಕಾರ್ಯಗತಗೊಳಿಸಲಾಗುತ್ತದೆ. ಇದು ʻಭಾರತ ಮಾಲಾʼ, ʻಸಾಗರ ಮಾಲಾʼ, ಒಳನಾಡಿನ ಜಲಮಾರ್ಗಗಳು, ಬಂದರುಗಳು, ಉಡಾನ್ ಮುಂತಾದ ವಿವಿಧ ಸಚಿವಾಲಯಗಳು ಹಾಗೂ ರಾಜ್ಯ ಸರಕಾರಗಳ ಮೂಲಸೌಕರ್ಯ ಯೋಜನೆಗಳನ್ನು ಒಳಗೊಂಡಿರುತ್ತದೆ. ಸಂಪರ್ಕ ಸುಧಾರಿಸಲು ಮತ್ತು ಭಾರತೀಯ ವ್ಯವಹಾರಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಜವಳಿ ಕ್ಲಸ್ಟರ್‌ಗಳು, ಔಷಧೀಯ ಕ್ಲಸ್ಟರ್‌ಗಳು, ರಕ್ಷಣಾ ಕಾರಿಡಾರ್‌ಗಳು, ಎಲೆಕ್ಟ್ರಾನಿಕ್ ಪಾರ್ಕ್‌ಗಳು, ಕೈಗಾರಿಕಾ ಕಾರಿಡಾರ್‌ಗಳು, ಮೀನುಗಾರಿಕೆ ಕ್ಲಸ್ಟರ್‌ಗಳು, ಕೃಷಿ ವಲಯಗಳಂತಹ ಆರ್ಥಿಕ ವಲಯಗಳನ್ನು ಇದಕ್ಕೆ ಸೇರಿಸಲಾಗಿದೆ. ʻಭಾಸ್ಕರಾಚಾರ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ಸ್ ಆಂಡ್‌ ಜಿಯೋಇನ್ಫರ್ಮ್ಯಾಟಿಕ್ಸ್ʼ(BiSAG-N) ಅಭಿವೃದ್ಧಿಪಡಿಸಿದ, ಇಸ್ರೋ ಉಪಗ್ರಹ ಚಿತ್ರಣದ ನೆರವಿನಿಂದ ಕಾರ್ಯನಿರ್ವಹಿಸುವ ಭೂನಕ್ಷೆ ಸಂಬಂಧಿತ ಯೋಜನಾ ಸಾಧನಗಳು ಸೇರಿದಂತೆ ವಿವಿಧ ತಂತ್ರಜ್ಞಾನವನ್ನು ಇದು ವ್ಯಾಪಕವಾಗಿ ಬಳಸಿಕೊಳ್ಳುತ್ತದೆ.

3. ʻಸ್ಟಾರ್ಟ್ ಅಪ್ ಇಂಡಿಯಾʼ ಕಾರ್ಯಕ್ರಮ:

ಪ್ರಧಾನಮಂತ್ರಿಯವರು 2016ರ ಜನವರಿ 16ರಂದು ಭಾರತ ಸರಕಾರದ ಪ್ರಮುಖ ಉಪಕ್ರಮವಾಗಿ ʻಸ್ಟಾರ್ಟ್‌ ಅಪ್‌ ಇಂಡಿಯಾʼ ಪ್ರಾರಂಭಿಸಿದರು. ಭಾರತದ ನವೋದ್ಯಮ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿ, ಆ ಮೂಲಕ ನಮ್ಮ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವುದು,  ಉದ್ಯಮಶೀಲತೆಯನ್ನು ಬೆಂಬಲಿಸುವುದು ಹಾಗೂ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಉಪಕ್ರಮದ ಫಲವಾಗಿ ಭಾರತವು ಇಂದು 60,000ಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳೊಂದಿಗೆ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ  ಮಾರ್ಪಟ್ಟಿದೆ. ಉದ್ಯೋಗಶೀಲತೆಗೆ ಪೂರಕವಾಗಿರುವುದಲ್ಲದೆ, ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸಿದೆ. 1ನೇ ಶ್ರೇಣಿಯ ನಗರಗಳನ್ನು ಮೀರಿ ಉದ್ಯಮಶೀಲತೆಯನ್ನು ಪೋಷಿಸುವಲ್ಲಿ ʻಸ್ಟಾರ್ಟ್‌ ಅಪ್‌ ಇಂಡಿಯಾʼ ಮಹತ್ವದ ಪಾತ್ರ ವಹಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳ ಮೂಲಕ ಸಾಧಿಸಲಾದ ಪ್ರಾದೇಶಿಕ ಬೆಳವಣಿಗೆಯು ನಮ್ಮ ಆರ್ಥಿಕ ಗುರಿಗಳತ್ತ ನಾಗಾಲೋಟಕ್ಕೆ ನೆರವಾಗುವ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ಮಾನ್ಯತೆ ಪಡೆದ ನವೋದ್ಯಮಗಳಲ್ಲಿ 55% ನವೋದ್ಯಮಗಳು 1ನೇ ಶ್ರೇಣಿಯ ನಗರಗಳ್ಲಿದ್ದರೆ, 45% ನವೋದ್ಯಮಗಳು ಕ್ರಮವಾಗಿ 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿವೆ. 45% ನವೋದ್ಯಮಗಳನ್ನು ಮಹಿಳಾ ಉದ್ಯಮಿಗಳು ಪ್ರತಿನಿಧಿಸುತ್ತಾರೆ. ನವೋದ್ಯಮಗಳ ಬೇರುಗಳು ದೇಶದಲ್ಲಿ ಆಳವಾಗಿ ಬೆಳೆದಿರುವುದನ್ನು ಇದು ಸೂಚಿಸುತ್ತದೆ.

ಮಾನ್ಯತೆ ಪಡೆದ ನವೋದ್ಯಮಗಳು 2ನೇ ಮತ್ತು 3ನೇ ಶ್ರೇಣಿಯ ನಗರಗಳಿಗೆ ಆಳವಾಗಿ ಪ್ರವೇಶಿಸಿವೆ. ಪ್ರಸ್ತುತ ದೇಶಾದ್ಯಂತ ಒಟ್ಟು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 633 ಜಿಲ್ಲೆಗಳಲ್ಲಿ ನವೋದ್ಯಮಗಳು ವ್ಯಾಪಿಸಿದ್ದು, ಈ ಎಲ್ಲಾ ರಾಜ್ಯಗಳಲ್ಲೂ ನವೋದ್ಯಮ ನೀತಿಗಳು ಜಾರಿಯಲ್ಲಿವೆ. ʻಡಿಪಿಐಐಟಿʼ ಮಾನ್ಯತೆ ಪಡೆದ ನವೋದ್ಯಮಗಳು 2021ರಲ್ಲಿ ಸುಮಾರು 2ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ವರದಿಯಾಗಿದೆ. ಇದು ನಾಲ್ಕು ವರ್ಷಗಳಲ್ಲೇ ಅತ್ಯಧಿಕವಾಗಿದೆ. ಒಟ್ಟಾರೆಯಾಗಿ, ʻಸ್ಟಾರ್ಟ್‌ಅಪ್ ಇಂಡಿಯಾʼ ಉಪಕ್ರಮವನ್ನು ಪ್ರಾರಂಭಿಸಿದ ನಂತರ 6.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.

ನವೋದ್ಯಮಗಳ ನಿಧಿ (ಎಫ್‌ಎಫ್‌ಎಸ್) ಅಡಿಯಲ್ಲಿ, 80 ಪರ್ಯಾಯ ಹೂಡಿಕೆ ನಿಧಿಗಳಿಗೆ (ಎಐಎಫ್) 6,495 ಕೋಟಿ ರೂ.ಗಳನ್ನು ನೀಡಲಾಗಿದೆ ಮತ್ತು ಬೆಂಬಲಿತ ʻಎಐಎಫ್ʼಗಳ ಮೂಲಕ 540 ನವೋದ್ಯಮಗಳಲ್ಲಿ 8,085 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ʻಸ್ಟಾರ್ಟ್ ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ʼಗಾಗಿ (ಎಸ್ಐಎಸ್ಎಫ್ಎಸ್) 58 ಇನ್ಕ್ಯುಬೇಟರ್‌ಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಯೋಜನೆಯಡಿ 232.75 ಕೋಟಿ ರೂ.ಗಳನ್ನು ಅನುದಾನವಾಗಿ ಅನುಮೋದಿಸಲಾಗಿದೆ.

4. ಹೂಡಿಕೆ ಉತ್ತೇಜನ

 1. ಹೂಡಿಕೆ ಅನುಮೋದನೆ ಘಟಕ:

2020-21ರ ಆಯ-ವ್ಯಯ ಮಂಡಿಸುವಾಗ, ಕೇಂದ್ರ ಹಣಕಾಸು ಸಚಿವರು ಹೂಡಿಕೆ ಅನುಮೋದನೆ ಘಟಕವನ್ನು (ಐಸಿಸಿ) ಸ್ಥಾಪಿಸುವ ಯೋಜನೆಗಳನ್ನು ಘೋಷಿಸಿದರು. ಇದು ಹೂಡಿಕೆ ಪೂರ್ವ ಸಲಹೆ ಸೇರಿದಂತೆ ಹೂಡಿಕೆದಾರರಿಗೆ "ಆರಂಭದಿಂದ ಅಂತಿಮ ಹಂತದವರೆಗೆ" ಸೌಲಭ್ಯ ಮತ್ತು ಬೆಂಬಲವನ್ನು ಒದಗಿಸುತ್ತದೆ. ಭೂ ಬ್ಯಾಂಕುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅನುಮತಿಗಳನ್ನು ಸುಗಮಗೊಳಿಸುತ್ತದೆ. ಈ ಘಟಕವನ್ನು ಆನ್‌ಲೈನ್ ಡಿಜಿಟಲ್ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಲು ಪ್ರಸ್ತಾಪಿಸಲಾಗಿದೆ.

ತದನಂತರ, ʻಇನ್ವೆಸ್ಟ್ ಇಂಡಿಯಾʼ ಜೊತೆ ಸಹಯೋಗದೊಂದಿಗೆ ʻರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆʼ (ಎನ್‌ಎಸ್‌ಡಬ್ಲ್ಯೂಎಸ್) ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ʻಡಿಪಿಐಐಟಿʼಯು ಪ್ರಾರಂಭಿಸಿತು. ಒಂದೇ ಸ್ಥಳದಲ್ಲಿ ದೇಶದ ಎಲ್ಲಾ ನಿಯಂತ್ರಕ ಅನುಮೋದನೆಗಳು ಮತ್ತು ಸೇವೆಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸುವ ʻಎನ್‌ಎಸ್‌ಡಬ್ಲ್ಯೂಎಸ್ʼಗೆ [www.nsws.gov.in],  ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು 2021ರ ಸೆಪ್ಟೆಂಬರ್‌ 22ರಂದು ಚಾಲನೆ ನೀಡಿದರು.

ಈ ರಾಷ್ಟ್ರೀಯ ಪೋರ್ಟಲ್ ಭಾರತ ಮತ್ತು ರಾಜ್ಯ ಸರಕಾರಗಳ ವಿವಿಧ ಸಚಿವಾಲಯಗಳು/ ಇಲಾಖೆಗಳ ಪ್ರಸ್ತುತ ಅನುಮತಿ ವ್ಯವಸ್ಥೆಗಳಿಗೆ ಯಾವುದೇ  ಅಡ್ಡಿಯಾಗದಂತೆ ಅವುಗಳನ್ನು ಸಂಯೋಜಿಸುತ್ತದೆ. ಮೊದಲ ಹಂತದಲ್ಲಿ 18 ಸಚಿವಾಲಯಗಳು/ ಇಲಾಖೆಗಳು ಮತ್ತು 10 ರಾಜ್ಯಗಳ ಏಕ ಗವಾಕ್ಷಿ ಅನುಮೋದನೆ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ 32 ಕೇಂದ್ರ ಇಲಾಖೆಗಳು ಮತ್ತು 14 ರಾಜ್ಯಗಳ ಸಂಪೂರ್ಣ ಸೇರ್ಪಡೆ ಆಗಲಿದೆ. ಉಳಿದ ಎಲ್ಲಾ ರಾಜ್ಯಗಳನ್ನು ಹಂತ ಹಂತವಾಗಿ ಇದರಲ್ಲಿ ಸೇರಿಸಲಾಗುವುದು.

 1. ಸುಗಮ ವ್ಯಾಪಾರ:

ʻಡಿಪಿಐಐಟಿʼಯು ಮೂರು ಪ್ರಮುಖ ಉಪಕ್ರಮಗಳ ಮೂಲಕ ದೇಶದಲ್ಲಿ ಸುಗಮ ವ್ಯಾಪಾರವನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನದಲ್ಲಿ ಇಲಾಖೆಯು ಮುಖ್ಯವಾಗಿ ವಿಶ್ವ ಬ್ಯಾಂಕ್‌ನ ಸುಗಮ ವ್ಯಾಪಾರ, ರಾಜ್ಯ ಮತ್ತು ಜಿಲ್ಲಾ ಸುಧಾರಣಾ ಕ್ರಿಯಾ ಯೋಜನೆ ಮತ್ತು ವ್ಯವಹಾರಗಳ ಮೇಲಿನ ನಿಯಂತ್ರಣ ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ವಿಧಾನದ ಮೇಲೆ ಗಮನ ಕೇಂದ್ರೀಕರಿಸಿದೆ. ಇದರ ಪರಿಣಾಮವಾಗಿ, ವಿಶ್ವ ಬ್ಯಾಂಕಿನ ʻಇಓಡಿಬಿ ವರದಿʼಯ ಪ್ರಕಾರ 2014ರಲ್ಲಿ 142 ಇದ್ದ ಭಾರತದ ಶ್ರೇಯಾಂಕವು 2020ರಲ್ಲಿ 63ಕ್ಕೆ ಸುಧಾರಿಸಿದೆ.

ಕೇಂದ್ರ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಅನುಸರಣೆಗಳ ಬೃಹತ್‌ ದತ್ತಾಂಶವನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ, ʻಡಿಪಿಐಐಟಿʼ 2021ರ ಜನವರಿ 1ರಂದು ನಿಯಂತ್ರಣ ಅನುಸರಣಾ ಪೋರ್ಟಲ್ (https://eodbrcp.dpiit.gov.in/) ಅನ್ನು ಆರಂಭಿಸಿದೆ. ನಿಯಂತ್ರಕ ಅನುಸರಣಾ ಪೋರ್ಟಲ್‌ನಲ್ಲಿ ಸಲ್ಲಿಸಲಾದ ದತ್ತಾಂಶದ ಆಧಾರದ ಮೇಲೆ,  ಕೇಂದ್ರ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಒಟ್ಟು 25,000 ಕ್ಕೂ ಹೆಚ್ಚು ಅನುಸರಣೆಗಳು ಕಡಿಮೆ ಆಗಿವೆ.

ʻಪಿಇಎಸ್‌ಒʼ ಬಾಯ್ಲರ್, ʻಐಪಿಆರ್ʼ, ʻಎನ್‌ಐಡಿಎಸ್ʼ, ಕೈಗಾರಿಕಾ ಪರವಾನಗಿಗೆ ಸಂಬಂಧಿಸಿದ ಕಡಿತಗಳಿಗಾಗಿ 194 ಅನುಸರಣೆಗಳನ್ನುʻಡಿಪಿಐಐಟಿʼ ಗುರುತಿಸಿತ್ತು. ಇವುಗಳ ಪೈಕಿ 134 ಅನುಸರಣೆಗಳನ್ನು 'ಕಡಿಮೆ ಮಾಡಲಾಗಿದೆ', 31 ಅನುಸರಣೆಗಳು 'ಪರಿಶೀಲನೆಯಲ್ಲಿವೆ' ಮತ್ತು 29 ಅನುಸರಣೆಗಳನ್ನು ಯಥಾವತ್‌ 'ಉಳಿಸಿಕೊಳ್ಳಲಾಗಿದೆ'. ಕಡಿಮೆಯಾದ ಅನುಸರಣೆಯ ವಿಧಗಳೆಂದರೆ: (1) ಪ್ರಮಾಣಪತ್ರ, ಪರವಾನಗಿ ಮತ್ತು ಅನುಮತಿ (2) ಫೈಲಿಂಗ್‌ಗಳು (3) ತಪಾಸಣೆ, ಪರೀಕ್ಷೆ ಮತ್ತು ಲೆಕ್ಕಪರಿಶೋಧನೆಗಳು (4) ರಿಜಿಸ್ಟರ್‌ಗಳು ಮತ್ತು ದಾಖಲೆಗಳು, (5) ಪ್ರದರ್ಶನ ಅವಶ್ಯಕತೆಗಳು, (6) ಆಧಿಕ್ಯ (7) ನಿರಪರಾಧೀಕರಣ(8) ತಂತ್ರಜ್ಞಾನ ಮತ್ತು (9) ಇತರೆ.

 1. ಯೋಜನಾ ಅಭಿವೃದ್ಧಿ ಘಟಕಗಳು:

ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ಸಮನ್ವಯದಲ್ಲಿ ಹೂಡಿಕೆಯನ್ನು ತ್ವರಿತಗೊಳಿಸಲು ಮತ್ತು ಆ ಮೂಲಕ ಭಾರತದಲ್ಲಿ ಹೂಡಿಕೆ ಮಾಡುವ ಯೋಜನೆಗಳ ಸಾಲನ್ನು ಹೆಚ್ಚಿಸಲು 29 ಸಚಿವಾಲಯಗಳು/ಇಲಾಖೆಗಳಲ್ಲಿ ಯೋಜನಾ ಅಭಿವೃದ್ಧಿ ಘಟಕಗಳನ್ನು (ಪಿಡಿಸಿ) ಸ್ಥಾಪಿಸಲಾಗಿದೆ. ದೇಶೀಯ ಹೂಡಿಕೆ ಮತ್ತು ವಿದೇಶಿ ನೇರ ಬಂಡವಾಳ ಒಳಹರಿವನ್ನು ಹೆಚ್ಚಿಸುವುದು ಸಹ ಇಂತಹ ಘಟಕಗಳ ಸ್ಥಾಪನೆಯ ಮತ್ತೊಂದು ಉದ್ದೇಶವಾಗಿದೆ.

 1. ಭಾರತ ಕೈಗಾರಿಕಾ ಭೂ ಬ್ಯಾಂಕ್ (ಐಐಎಲ್ ಬಿ):

ʻಐಐಎಲ್‌ಬಿʼ  ಎಂಬುದು ಜಿಐಎಸ್ ಆಧಾರಿತ ಪೋರ್ಟಲ್ ಆಗಿದ್ದು, ಎಲ್ಲಾ ಕೈಗಾರಿಕಾ ಮೂಲಸೌಕರ್ಯ ಸಂಬಂಧಿತ ಮಾಹಿತಿಗೆ ಏಕೀಕೃತ ಭಂಡಾರವಾಗಿ ಡಿಪಿಐಐಟಿಯು ಇದನ್ನು ಅಭಿವೃದ್ಧಿಪಡಿಸಿದೆ - ಸಂಪರ್ಕ, ಮೂಲಸೌಕರ್ಯ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಭೂಪ್ರದೇಶ, ಖಾಲಿ ಜಾಗಗಳ ಮಾಹಿತಿ; ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮಾಹಿತಿ ಮತ್ತು ಸಂಪರ್ಕ ವಿವರಗಳನ್ನು ಈ ಪೋರ್ಟಲ್‌ ಒದಗಿಸುತ್ತದೆ. ಪ್ರಸ್ತುತ, ʻಐಐಎಲ್‌ಬಿʼಯು 5.11 ಲಕ್ಷ ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾದ ಸುಮಾರು 4500 ಕೈಗಾರಿಕಾ ಉದ್ಯಾನವನಗಳನ್ನು ಹೊಂದಿದೆ. ದೂರದಿಂದ ಭೂಮಿಗಾಗಿ ಹುಡುಕುವ ಹೂಡಿಕೆದಾರರಿಗೆ ನಿರ್ಧಾರ ಕೈಗೊಳ್ಳಲು ಬೆಂಬಲ ವ್ಯವಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯನ್ನು ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದಾದರ್ ಮತ್ತು ನಗರ್‌ ಹವೇಲಿ, ಡಿಯು ಮತ್ತು ದಮನ್‌,   ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರಾಖಂಡ್, ಉತ್ತರ ಪ್ರದೇಶ ಮುಂತಾದ 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಉದ್ಯಮ ಆಧರಿತ ʻಜಿಐಎಸ್‌ʼ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ. ನೈಜ ಸಮಯದ ಆಧಾರದ ಮೇಲೆ 2113 ಜಿಐಎಸ್ ಸಕ್ರಿಯಗೊಳಿಸಿದ ಉದ್ಯಾನವನಗಳ ವಿವರಗಳನ್ನು ಈ ಪೋರ್ಟಲ್‌  ಹೊಂದಿದೆ. ಹೂಡಿಕೆದಾರರ ಸೌಕರ್ಯಕ್ಕಾಗಿ ʻಐಐಎಲ್‌ಬಿʼಯ ಮೊಬೈಲ್ ತಂತ್ರಾಂಶವು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಟೋರ್ ಗಳಲ್ಲಿ (ಲಾಗಿನ್ ಅಗತ್ಯವಿಲ್ಲ) ಸಹ ಲಭ್ಯವಿದೆ.

6. ವಿದೇಶಿ ನೇರ ಹೂಡಿಕೆ

 • ಭಾರತವನ್ನು ಆಕರ್ಷಕ ಹೂಡಿಕೆ ತಾಣವನ್ನಾಗಿ ಮಾಡಲು ಇತ್ತೀಚಿನ ದಿನಗಳಲ್ಲಿ ವಿವಿಧ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿ ನಿಬಂಧನೆಗಳನ್ನು ಹಂತಹಂತವಾಗಿ ಉದಾರೀಕರಣಗೊಳಿಸಲಾಗಿದೆ ಮತ್ತು ಸರಳೀಕರಿಸಲಾಗಿದೆ. ʻಎಫ್‌ಡಿಐʼ ನೀತಿ ಸುಧಾರಣೆಗಳ ಬಗ್ಗೆ ಸರಕಾರ ತೆಗೆದುಕೊಂಡ ಕ್ರಮಗಳು ದೇಶದಲ್ಲಿ ಎಫ್‌ಡಿಐ ಒಳಹರಿವು ಹೆಚ್ಚಾಗಲು ಕಾರಣವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೊಸ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಒಳಹರಿವು 2014-2015ರಲ್ಲಿ 45.15 ಶತಕೋಟಿ ಅಮೆರಿಕನ್ ಡಾಲರ್ ನಷ್ಟಿತ್ತು. ಅಂದಿನಿಂದ ಅದು ನಿರಂತರವಾಗಿ ಹೆಚ್ಚಾಗಿದೆ. ಎಫ್‌ಡಿಐ ಒಳಹರಿವು 2015-2016ರಲ್ಲಿ 55.56 ಶತಕೋಟಿ ಅಮೆರಿಕನ್ ಡಾಲರ್‌ಗೆ, 2016-2017ರಲ್ಲಿ 60.22 ಶತಕೋಟಿ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. 2017-2018ರಲ್ಲಿ 60.97 ಶತಕೋಟಿ ಅಮೆರಿಕನ್ ಡಾಲರ್, 2018-19ನೇ ವರ್ಷದಲ್ಲಿ 62.00 ಶತಕೋಟಿ ಅಮೆರಿಕನ್ ಡಾಲರ್, 2019-20ನೇ ಸಾಲಿನಲ್ಲಿ 74.39 ಶತಕೋಟಿ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. 2020-21ರ ಹಣಕಾಸು ವರ್ಷದಲ್ಲಿ ಭಾರತ 81.97 ಶತಕೋಟಿ ಅಮೆರಿಕನ್ ಡಾಲರ್ (ತಾತ್ಕಾಲಿಕ ಅಂಕಿ-ಅಂಶಗಳು) ವಾರ್ಷಿಕ ಎಫ್‌ಡಿಐ ಒಳಹರಿವನ್ನು ದಾಖಲಿಸಿದೆ. ಭಾರತದ ಎಫ್‌ಡಿಐ ಒಳಹರಿವಿನ ಈ ಏರಿಕೆ ಪ್ರವೃತ್ತಿಯು ಭಾರತವು ಜಾಗತಿಕ ಹೂಡಿಕೆದಾರರ ಆದ್ಯತೆಯ ಹೂಡಿಕೆ ತಾಣವಾಗಿ ಹೊಂದಿರುವ ಸ್ಥಾನಮಾನಕ್ಕೆ ನೀಡಿದ ಅನುಮೋದನೆ ಎನ್ನಬಹುದು.

2021ರ ಅವಧಿಯಲ್ಲಿ ಎಫ್‌ಡಿಐ ನೀತಿ ಸುಧಾರಣೆಗಳು:

 • ವಿಮಾ ವಲಯ: ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ವಿಮಾ ಕಂಪನಿಗಳಲ್ಲಿ ಅನುಮತಿಸಬಹುದಾದ ಎಫ್‌ಡಿಐ ಮಿತಿಯನ್ನು ಶೇ.49ರಿಂದ ಶೇ.74ಕ್ಕೆ ಹೆಚ್ಚಿಸಲು ಹಾಗೂ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ವಿದೇಶಿ ಮಾಲೀಕತ್ವ ಮತ್ತು ನಿಯಂತ್ರಣವನ್ನು ಅನುಮತಿಸಲು ಸರಕಾರ 14.06.2021ರಂದು ʻಪತ್ರಿಕಾ ಪ್ರಕಟಣೆʼಯನ್ನು 2(2021) ಬಿಡುಗಡೆ ಮಾಡಿದೆ. ಇದು ದೀರ್ಘಾವಧಿ ಬಂಡವಾಳ, ಜಾಗತಿಕ ತಂತ್ರಜ್ಞಾನ, ಪ್ರಕ್ರಿಯೆ ಮತ್ತು ಅಂತರರಾಷ್ಟ್ರೀಯ ಉತ್ತಮ ಕಾರ್ಯವಿಧಾನಗಳ ಹೆಚ್ಚಿನ ಪ್ರಮಾಣದಲ್ಲಿ  ಭಾರತಕ್ಕೆ ಹರಿದುಬರುವುದನ್ನು ಸುಗಮಗೊಳಿಸಿದೆ, ಆ ಮೂಲಕ ಭಾರತದ ವಿಮಾ ವಲಯದ ಬೆಳವಣಿಗೆಗೆ ಈ ಕ್ರಮವು ನೆರವಾಗಿದೆ.
 • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ತೊಡಗಿರುವ ಸಾರ್ವಜನಿಕ ವಲಯದ ಉದ್ಯಮಗಳಿಂದ (ಪಿಎಸ್‌ಯು) ವ್ಯೂಹಾತ್ಮಕ ಬಂಡವಾಳ ಹಿಂತೆಗೆತಕ್ಕೆ ಸರಕಾರ 'ತಾತ್ವಿಕ' ಅನುಮೋದನೆ ನೀಡಿದ ಸಂದರ್ಭದಲ್ಲಿ, ಸ್ವಯಂಚಾಲಿತ ಮಾರ್ಗದಲ್ಲಿ ಶೇ.100ರವರೆಗೆ ವಿದೇಶಿ ಹೂಡಿಕೆಗೆ ಅನುಮತಿ ನೀಡಲು ಸರಕಾರ ಅವಕಾಶ ಕಲ್ಪಿಸಿದೆ. ಈ ಸಂಬಂಧ ಆದೇಶವನ್ನು ದಿನಾಂಕ 29.07.2021ರ ಪತ್ರಿಕಾ ಪ್ರಕಟಣೆ 3(2021) ಮೂಲಕ ಹೊರಡಿಸಲಾಗಿದೆ.
 • ಟೆಲಿಕಾಂ ವಲಯ: ಟೆಲಿಕಾಂ ಸೇವಾ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಅಡಿಯಲ್ಲಿ 100% ವರೆಗೆ ವಿದೇಶಿ ಹೂಡಿಕೆಗೆ ಅನುಮತಿ ನೀಡಲು ದಿನಾಂಕ 06.10.2021ರ ಪತ್ರಿಕಾ ಪ್ರಕಟಣೆ 4(2021) ಮೂಲಕ ಅನುಮತಿ ನೀಡಲಾಗಿದೆ.

7. ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್): ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು, ಸೃಜನಶೀಲತೆಯನ್ನು ಅನಾವರಣಗೊಳಿಸಲು ಹಾಗೂ ಸ್ಥಳೀಯ ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ರೂಪಿಸಿದ ನಿಯಮಾವಳಿ ಇದಾಗಿದೆ.

 • ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು, ಸೃಜನಶೀಲತೆಯನ್ನು ಅನಾವರಣಗೊಳಿಸಲು ಮತ್ತು ಸ್ಥಳೀಯ ನವೋದ್ಯಮಿಗಳನ್ನು ತಮ್ಮದೇ ಆದ ಆಲೋಚನೆಗಳಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಲು ಪರಿಣಾಮಕಾರಿ ʻಐಪಿಆರ್ʼ ನಿಯಮಾವಳಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬೌದ್ಧಿಕ ಹಕ್ಕು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಡಿಪಿಐಐಟಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ 2021ರಲ್ಲಿ ಕೈಗೊಂಡ ಪ್ರಮುಖ ಉಪಕ್ರಮಗಳು ಮತ್ತು ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:
 • ವಿನ್ಯಾಸ (ತಿದ್ದುಪಡಿ) ನಿಯಮಗಳು, 2021: ಭಾರತದ ಗೆಜೆಟ್‌ನಲ್ಲಿ 25.01.2021ರಂದು ಇದರ ಅಧಿಸೂಚನೆ ಹೊರಡಿಸಲಾಗಿದೆ. ನವೋದ್ಯಮಗಳು ಮತ್ತು ಸಣ್ಣ ಘಟಕಗಳು ತಮ್ಮ ವಿನ್ಯಾಸಗಳಿಗೆ ರಕ್ಷಣೆಯನ್ನು ಪಡೆಯಲು ಮತ್ತು ವಿನ್ಯಾಸ ಫೈಲಿಂಗ್‌ಗಳನ್ನು ಉತ್ತೇಜಿಸಲು, ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ನಿಯಮಗಳ ಅಡಿಯಲ್ಲಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ.
 • ಕೃತಿಸ್ವಾಮ್ಯ (ತಿದ್ದುಪಡಿ) ನಿಯಮಗಳು, 2021: ಅಸ್ತಿತ್ವದಲ್ಲಿರುವ ನಿಯಮಗಳನ್ನು ಇತರ ಸಂಬಂಧಿತ ಶಾಸನಗಳಿಗೆ ಸಾಮ್ಯಗೊಳಿಸುವ ಉದ್ದೇಶದೊಂದಿಗೆ 30.03.2021 ರಂದು ಅಧಿಸೂಚನೆ ಮೂಲಕ ಇದನ್ನು ಜಾರಿಗೊಳಿಸಲಾಯಿತು. ಕೃತಿಸ್ವಾಮ್ಯ ಸಂಘಗಳು ವಾರ್ಷಿಕ ಪಾರದರ್ಶಕತೆ ವರದಿಯನ್ನು ಕಡ್ಡಾಯವಾಗಿ ಹೊರಡಿಸುವ ಹೊಸ ಪದ್ಧತಿಯನ್ನು ಈ ನಿಯಮ ಪರಿಚಯಿಸಿದೆ. ಈಗಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ, ವಿದ್ಯುನ್ಮಾನ ವಿಧಾನಗಳನ್ನು ಪ್ರಾಥಮಿಕ ಸಂವಹನ ವಿಧಾನವಾಗಿ ಅಳವಡಿಸಿಕೊಳ್ಳುವ ಮೂಲಕ ಮತ್ತು ಕೃತಿಸ್ವಾಮ್ಯ ಕಚೇರಿಯಲ್ಲಿ ಕೆಲಸ ಮಾಡುವ ಸುಗಮ ಹಾಗೂ ದೋಷರಹಿತ ಅನುಸರಣೆಯನ್ನು ಖಾತರಿಪಡಿಸುವ ಗುರಿಯನ್ನು ಇದು ಹೊಂದಿದೆ.
 • ಪೇಟೆಂಟ್ (ತಿದ್ದುಪಡಿ) ನಿಯಮಗಳು, 2021: 2021ರ ಸೆಪ್ಟೆಂಬರ್ 21ರಂದು ಜಾರಿಗೆ ಬಂದ ʻಪೇಟೆಂಟ್ (ತಿದ್ದುಪಡಿ) ನಿಯಮಗಳು-2021ʼರ ಮೂಲಕ ಶಿಕ್ಷಣ ಸಂಸ್ಥೆಗಳ ಪೇಟೆಂಟ್ ಶುಲ್ಕವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಲಾಗಿದೆ. ಈ ತಿದ್ದುಪಡಿಯು ʻಎಂಎಸ್‌ಎಂಇʼಗಳು ಮತ್ತು ನವೋದ್ಯಮಗಳಿಗೆ ಒದಗಿಸಿದಷ್ಟೇ ಪ್ರಮಾಣದ ಬೆಂಬಲವನ್ನು ಶಿಕ್ಷಣ ಸಂಸ್ಥೆಗಳಿಗೆ ಒದಗಿಸುತ್ತದೆ. ಜೊತೆಗೆ ಬೌದ್ಧಿಕ ಹಕ್ಕು ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಖಾತರಿಪಡಿಸುತ್ತದೆ.

ʻರಾಷ್ಟ್ರೀಯ ಐಪಿಆರ್ ನೀತಿʼಯನ್ನು ಅಳವಡಿಸಿಕೊಂಡಾಗಿನಿಂದ, ಭಾರತದಲ್ಲಿ ಐಪಿ ಫೈಲಿಂಗ್‌ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಭಾರತದಲ್ಲಿ ಪ್ರತಿಕೂಲ ಕೋವಿಡ್ ಪರಿಸ್ಥಿತಿಯ ಹೊರತಾಗಿಯೂ, ʻಐಪಿಎಸ್ʼಗಳ ಸಲ್ಲಿಕೆಯಲ್ಲಿ ಯಾವುದೇ ನಕಾರಾತ್ಮಕ ಪರಿಣಾಮ ಕಂಡುಬಂದಿಲ್ಲ. ಇದಲ್ಲದೆ, ʻಟ್ರೇಡ್ ಮಾರ್ಕ್ʼ ಮತ್ತು ʻಜಿಐʼ ಅರ್ಜಿ ಸಲ್ಲಿಕೆಯೂ ಸಹ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಹೆಚ್ಚಾಗಿದೆ.

8. ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ)

 • ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಭಾರತ ಸರಕಾರವು ಪರಿವರ್ತನಾತ್ಮಕ ಉಪಕ್ರಮವೊಂದನ್ನು ಜಾರಿಗೊಳಿಸಿದೆ. ಇದನ್ನೇ ʻಒಂದು ಜಿಲ್ಲೆ, ಒಂದು ಉತ್ಪನ್ನʼ(ಒಡಿಒಪಿ) ಉಪಕ್ರಮ ಎಂದು ಕರೆಯಲಾಗಿದೆ. ಭಾರತದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವಿಶಿಷ್ಟ ಉತ್ಪನ್ನದ ಉತ್ಪಾದನೆಯನ್ನು ಗುರುತಿಸಿ, ಅದನ್ನು ಬೆಳೆಯಲು ಉತ್ತೇಜನ ನೀಡುವುದು ಹಾಗೂ, ಆ ಬಳಿಕ ಅಂತಹ ಉತ್ಪನ್ನಕ್ಕೆ ಜಾಗತಿಕವಾಗಿ ಮಾರುಕಟ್ಟೆ ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಇದು ಜಿಲ್ಲೆಯ ನೈಜ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ, ಆರ್ಥಿಕ ಬೆಳವಣಿಗೆಗೆ ಇಂಧನವಾಗುತ್ತದೆ.  ಉದ್ಯೋಗ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಸೃಷ್ಟಿಸುತ್ತದೆ. ʻವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯʼ (ಡಿಜಿಎಫ್‌ಟಿ), ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ʻಡಿಪಿಐಐಟಿʼ ಇಲಾಖೆಯು ಅನುಷ್ಠಾನಗೊಳಿಸಿರುವ 'ರಫ್ತು ಕೇಂದ್ರಬಿಂದುವಾಗಿ ಜಿಲ್ಲೆಗಳುʼ ಉಪಕ್ರಮವನ್ನು ʻಒಡಿಒಪಿʼ ಉಪಕ್ರಮದೊಂದಿಗೆ ವಿಲೀನಗೊಳಿಸಲಾಗಿದೆ. ʻಡಿಜಿಎಫ್‌ಟಿʼ ಕೈಗೊಂಡಿರುವ ಕಾರ್ಯಗಳ ಸಮನ್ವಯದಲ್ಲಿ  ʻಡಿಪಿಐಐಟಿʼ ಇಲಾಖೆಯು ಪ್ರಮುಖ ಪಾಲುದಾರನಾಗಿದೆ.  ʻಒಡಿಒಪಿ ಉಪಕ್ರಮದ ಅಡಿಯಲ್ಲಿ ʻಇನ್ವೆಸ್ಟ್ ಇಂಡಿಯಾʼದೊಂದಿಗೆ ʻಡಿಪಿಐಐಟಿʼಯಿಂದ ಅನುವುಗೊಳಿಸಲಾಗುತ್ತಿರುವ ಪ್ರಮುಖ ಚಟುವಟಿಕೆಗಳೆಂದರೆ ಉತ್ಪಾದನೆ, ಮಾರ್ಕೆಟಿಂಗ್, ಬ್ರಾಂಡಿಂಗ್, ಆಂತರಿಕ ವ್ಯಾಪಾರ ಮತ್ತು ಇ-ಕಾಮರ್ಸ್.
   
 • ಪ್ರಸ್ತುತ ʻಒಡಿಒಪಿʼ ಉಪಕ್ರಮದ ವ್ಯಾಪ್ತಿ ವಿಸ್ತರಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 103 ಜಿಲ್ಲೆಗಳಿಂದ 106 ಉತ್ಪನ್ನಳು ಈ ಪಟ್ಟಿಯಲ್ಲಿದ್ದವು. ಎರಡನೇ ಹಂತದ ಪಟ್ಟಿಯು 739 ಜಿಲ್ಲೆಗಳ 739ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿದೆ. ʻಒಡಿಒಪಿʼ ಉಪಕ್ರಮದ ನೆರವಿನಿಂದ ರಫ್ತುಹೆಚ್ಚಳದಲ್ಲಿ ಗಣನೀಯ ಯಶಸ್ಸನ್ನು ಗಳಿಸಲು ಸಾಧ್ಯವಾಗಿದೆ.

11. ಸ್ವಚ್ಛತಾ ಅಭಿಯಾನ

 • ಈ ವಿಶೇಷ ಅಭಿಯಾನದ ವೇಳೆ, ಡಿಪಿಐಐಟಿ ಮತ್ತು ಅದರ ಅಧೀನ ಸಂಸ್ಥೆಗಳಲ್ಲಿ 49,686 ಕಡತಗಳನ್ನು ಪರಿಶೀಲಿಸಲಾಗಿದೆ. ಪರಿಶೀಲಿಸಲಾದ ಕಡತಗಳ ಪಟ್ಟಿಯಿಂದ  49,449 ಕಡತಗಳನ್ನು ತೆಗೆಯಲಾಘಿದೆ. ಕಡತಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಡಿಪಿಐಐಟಿ ಮತ್ತು ಅದರ ಅಧೀನ ಸಂಸ್ಥೆಗಳಲ್ಲಿ 2222 ಚದರ ಅಡಿಯಷ್ಟು ಪ್ರದೇಶವು ಖಾಲಿ ಯಾಗಿದೆ/ಮುಕ್ತವಾಗಿದೆ. ಅನಗತ್ಯ/ಹಳತಾದ ವಸ್ತುಗಳ ವಿಲೇವಾರಿಯಿಂದಾಗಿ, 3277 ಚದರ ಅಡಿ ಪ್ರದೇಶವು ಸದ್ಬಳಕೆಗೆ ಮುಕ್ತವಾಗಿದೆ. ಇದರಿಂದ ಕಚೇರಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ, 5,60,000 ರೂ.ಗಳ ಆದಾಯ ದೊರೆತಿದೆ.
 • ಎಲ್ಲಾ 31 ಸಾರ್ವಜನಿಕ ಕುಂದುಕೊರತೆಗಳು ಮತ್ತು 3 ಸಾರ್ವಜನಿಕ ಕುಂದುಕೊರತೆಗಳ ಮೇಲ್ಮನವಿಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಇಲಾಖೆ 100% ಗುರಿಯನ್ನು ಸಾಧಿಸಿದೆ. ಇದಲ್ಲದೆ, 84 ವಿಐಪಿ ಶಿಫಾರಸುಗಳ ಪೈಕಿ 29 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. "ಸುಗಮ ವ್ಯಾಪಾರ" ದೃಷ್ಟಿಯಿಂದ ಸರಳೀಕರಣಗೊಳಿಸಬಹುದಾದ 194 ನಿಯಮಗಳು/ನಿಯಂತ್ರಣಗಳನ್ನು ಇಲಾಖೆ ಗುರುತಿಸಿದ್ದು, ಇವುಗಳ ಪೈಕಿ 134 ನಿಯಮಗಳನ್ನು ಸರಳಗೊಳಿಸಲಾಗಿದೆ.
 • ಹಳೆಯ ಕಡತಗಳು/ದಾಖಲೆಗಳ ಡಿಜಿಟಲೀಕರಣ: ವಿಶೇಷ ಅಭಿಯಾನಕ್ಕೆ ಮುಂಚೆಯೇ, ಸಿಐಎಂ ನಿರ್ದೇಶನಗಳ ಪ್ರಕಾರ ಹಳೆಯ ಕಡತಗಳು/ ದಾಖಲೆಗಳನ್ನು  ಆದ್ಯತೆಯ ಆಧಾರದ ಮೇಲೆ ಡಿಜಿಟಲೀಕರಣಗೊಳಿಸಲಾಯಿತು. ಈ ಅವಧಿಯಲ್ಲಿ, 19,53,666 ಪುಟಗಳನ್ನು ಹೊಂದಿರುವ 12,387 ಕಡತಗಳ ಸ್ಕ್ಯಾನಿಂಗ್/ಡಿಜಿಟಲೈಸೇಶನ್ ಪೂರ್ಣಗೊಂಡಿದೆ ಮತ್ತು ಎಲ್ಲಾ ಸ್ಕ್ಯಾನ್ ಮಾಡಿದ ಕಡತಗಳನ್ನು ಭವಿಷ್ಯದ ಉಲ್ಲೇಖಕ್ಕಾಗಿ ಇ-ಕಚೇರಿಗೆ ವರ್ಗಾಯಿಸಲಾಗಿದೆ.
 • ಕ್ಯಾಬಿನೆಟ್ ಾರ್ಯದರ್ಶಿಗಳ ನಿರ್ದೇಶನ ಮತ್ತು ʻಡಿಎಆರ್‌ಪಿಜಿʼಯ ಸಲಹೆಯ ಮೇರೆಗೆ ಸರಕಾರದಲ್ಲಿ ದಕ್ಷತೆಯ ನಿರ್ಧಾರ ಕೈಗೊಳ್ಳುವುದನ್ನು ಹೆಚ್ಚಿಸುವುದು: ನಿರ್ಧಾರ ತೆಗೆದುಕೊಳ್ಳುವಲ್ಲಿ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸೂಕ್ತ ಪ್ರಾಧಿಕಾರದ ಅನುಮೋದನೆ ಮೇರೆಗೆ ಸಲ್ಲಿಕೆ ವಿಧಾನ ಮತ್ತು ವಿಲೇವಾರಿ ಹಂತವನ್ನು ʻಡಿಪಿಐಐಟಿʼ ಪರಿಷ್ಕರಿಸಿದೆ. ವಿಲೇವಾರಿಯನ್ನು 4 ಹಂತಗಳಷ್ಟು (ಗರಿಷ್ಠ) ಕಡಿತಗೊಳಿಸಲಾಗಿದೆ. ಇದರಿಂದ ಪ್ರಕರಣಗಳ ವಿಲೇವಾರಿಗೆ ವೇಗ ದೊರೆಯುವುದಲ್ಲದೆ, ನಿರ್ಧಾರ ಕೈಗೊಳ್ಳುವಿಕೆಯೂ ಸುಧಾರಿಸುತ್ತದೆ.
 • ʻಸಿಐಎಂʼನಿಂದ ಪರಾಮರ್ಶೆ: ಅಭಿಯಾನದ ಅವಧಿಯಲ್ಲಿ ವಿಶೇಷ ಅಭಿಯಾನವನ್ನು ʻಸಿಐಎಂʼ ನಿರಂತರವಾಗಿ ಪರಿಶೀಲಿಸಿದೆ. 31.10.2021 ರಂದು ವಿಶೇಷ ಅಭಿಯಾನ ಪೂರ್ಣಗೊಂಡ ನಂತರ, ʻಸಿಐಎಂʼ ವಾರಕ್ಕೊಮ್ಮೆ ಸ್ವಚ್ಛತಾ ಅಭಿಯಾನದ ಪ್ರಗತಿಯನ್ನು ಪರಿಶೀಲಿಸುತ್ತಿದೆ. ಆವರಣದ ಸ್ವಚ್ಛತೆಯನ್ನು ಪರಿಶೀಲಿಸಲು ಉದ್ಯೋಗ ಭವನಕ್ಕೆ ಸಿಐಎಂ ವತಿಯಿಂದ ಆಗಾಗ್ಗೆ ಭೇಟಿ ನೀಡಲಾಗುತ್ತಿದೆ.

12. 2021ರಲ್ಲಿ ಭಾರತ ʻಬ್ರಿಕ್ಸ್ʼ ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ʻಡಿಪಿಐಐಟಿʼ ಆಯೋಜಿಸಿದ್ದ ಕಾರ್ಯಕ್ರಮಗಳು:

 • 2021ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ 13ನೇ  ಬ್ರಿಕ್ಸ್ ಶೃಂಗಸಭೆ ನಡೆಯಿತು. 2012 ಮತ್ತು 2016ರ ನಂತರ ʻಬ್ರಿಕ್ಸ್ʼ ಶೃಂಗಸಭೆಯನ್ನು ಭಾರತ ಆಯೋಜಿಸಿರುವುದು ಇದು ಮೂರನೇ ಬಾರಿ. ಭಾರತದ ಅಧ್ಯಕ್ಷ ಸ್ಥಾನದ ವಿಷಯವೆಂದರೆ  'ಬ್ರಿಕ್ಸ್@15: ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್‌ನೊಳಗಿನ ಸಹಕಾರ'. ಭಾರತ ʻಬ್ರಿಕ್ಸ್ʼ ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿ,  ಉದ್ಯಮ ಸಂಬಂಧಿತ ವಿಷಯಗಳ ಬಗ್ಗೆ ʻಡಿಪಿಐಐಟಿʼ ವತಿಯಿಂದ 4 ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಅವುಗಳಲ್ಲಿ ಕೆಲವೆಂದರೆ - ಹೂಡಿಕೆ, ಕೈಗಾರಿಕೀಕರಣ, ನಾವಿನ್ಯತೆ, ಒಳಗೊಳ್ಳುವಿಕೆ ಮತ್ತು ಡಿಜಿಟಲೀಕರಣವನ್ನು ಉತ್ತೇಜಿಸಲು  ಕೈಗಾರಿಕಾ ಸಚಿವರ ಸಭೆ-PartNIR (Partnership on New Industrial Revolution) ಸಭೆ, 13ನೇ  ಎಚ್‌ಐಪಿಒ  (ಬೌದ್ಧಿಕ ಆಸ್ತಿ ಕಚೇರಿಗಳ ಮುಖ್ಯಸ್ಥರು) ಸಭೆ, ಮತ್ತು  ಬ್ರಿಕ್ಸ್‌ನ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಗಳ ನಡುವೆ ಸಂವಾದದ ದುಂಡು ಮೇಜಿನ ಸಮ್ಮೇಳನ.

13 ʻಆಜಾದಿ ಕಾ ಅಮೃತ್ ಮಹೋತ್ಸವʼ(ಎಕೆಎಎಂ) ಅಡಿಯಲ್ಲಿ ʻಡಿಪಿಐಐಟಿʼ ಆಯೋಜಿಸಿದ ಕಾರ್ಯಕ್ರಮಗಳು:

 • ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ 20.09.2021 ರಿಂದ 26.09.2021 ರವರೆಗಿನ ವಾರವನ್ನು ಹಂಚಿಕೆ ಮಾಡಲಾಯಿತು. ಅದರಂತೆ, 'ಉದ್ಯೋಗ ಸಪ್ತಾಹ'ದ ಸಮಯದಲ್ಲಿ ಅಂದರೆ 2021ರ ಸೆಪ್ಟೆಂಬರ್ 20ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಡಿಪಿಐಐಟಿ ನಡೆಸಿದೆ.  ಇದನ್ನು ವಿವಿಧ ವೇದಿಕೆಗಳು ವ್ಯಾಪಕವಾಗಿ ಪ್ರಕಟಿಸಿವೆ. ʻಡಿಪಿಐಐಟಿʼ ಆಯೋಜಿಸಿದ ಕೆಲವು ಕಾರ್ಯಕ್ರಮಗಳೆಂದರೆ:
 1. ಪೆಟ್ರೋಲಿಯಂ ಮತ್ತು ಸ್ಫೋಟಕಗಳ ವಲಯದಲ್ಲಿ ಕೈಗಾರಿಕಾ ಸುರಕ್ಷತೆಯನ್ನು ಖಾತರಿಪಡಿಸುವ ಕ್ರಮಗಳು ಮತ್ತು ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಸಕ್ರಿಯ ಪರಿಸರ ವ್ಯವಸ್ಥೆಯನ್ನು ರಚಿಸುವ ಬಗ್ಗೆ 2021ರ ಸೆಪ್ಟೆಂಬರ್‌ 21ರಂದು ʻಡಿಪಿಐಐಟಿʼಯ ಹೆಚ್ಚುವರಿ ಕಾರ್ಯದರ್ಶಿಯವರು ನಡೆಸಿದ ಪತ್ರಿಕಾ ಗೋಷ್ಠಿ.
   
 2. 2021ರ ಸೆಪ್ಟೆಂಬರ್ 22ರಂದು ಶ್ರೀ ಪೀಯೂಷ್‌ ಗೋಯಲ್‌ ಅವರಿಂದ ʻರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆʼಗೆ ಚಾಲನೆ. ಇದರಲ್ಲಿ ಹೂಡಿಕೆ ಪೂರ್ವ ಸಲಹೆ, ಭೂ-ಬ್ಯಾಂಕುಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅನುಮತಿಗಳನ್ನು ಒದಗಿಸುವುದು ಸೇರಿದಂತೆ ಆದಿಯಿಂದ ಅಂತ್ಯದವರೆಗೆವರೆಗೆ ಸೌಲಭ್ಯಗಳು, ಬೆಂಬಲ ಮತ್ತು ಪರಿಸರ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸ್ಪಂದನಶೀಲತೆಗಾಗಿ ಎಲ್ಲಾ ಮಾಹಿತಿಯನ್ನು ಒಂದೇ ಡ್ಯಾಶ್ ಬೋರ್ಡ್‌ನಲ್ಲಿ ಲಭ್ಯವಿರುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.
   
 3. ಉದ್ಯಮಶೀಲತೆಯನ್ನು ಪೋಷಿಸುವ ಉದ್ದೇಶದಿಂದ 21.09.2021 ರಿಂದ 26.09.2021ರ ಅವಧಿಯಲ್ಲಿ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಟಾರ್ಟ್‌ಅಪ್‌ ಕಾರ್ಯಕ್ರಮಗಳ ಆಯೋಜನೆ/ಭಾಗವಹಿಸುವಿಕೆ ಸಮನ್ವಯ, ಪ್ರಮುಖ ಉಪಕ್ರಮಗಳ ಆರಂಭ, ಸ್ಟಾರ್ಟ್ ಅಪ್ ಶೃಂಗಸಭೆಗಳ ಉದ್ಘಾಟನೆ ಮತ್ತು ಸ್ಟಾರ್ಟ್ ಅಪ್ ನೀತಿಗಳ ಆರಂಭ ಇತ್ಯಾದಿಗಳಲ್ಲಿ ಸಹಕಾರ.
 1. ಸಹಾಯಕ ಸಚಿವ ಶ್ರೀ ಸೋಮ್ ಪ್ರಕಾಶ್ ಅವರ ಸಮ್ಮುಖದಲ್ಲಿ 2021ರ ಸೆಪ್ಟೆಂಬರ್ 23ರಂದು ʻಈಶಾನ್ಯ ವ್ಯಾಪಾರ ದುಂಡುಮೇಜಿನ ಸಭೆʼ ಆಯೋಜಿಸಲಾಗಿತ್ತು. ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳು ಹಾಗೂ ಜಾರಿಗೆ ತರಲಾದ ಸುಧಾರಣೆಗಳ ಬಗ್ಗೆ ಸಮಾಲೋಚನೆಯು ಇದರ ಹಿಂದಿನ ಉದ್ದೇಶವಾಗಿತ್ತು.
 1.  2021ರ ಸೆಪ್ಟೆಂಬರ್ 28ರಂದು ಗೌರವಾನ್ವಿತ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್, ಸಹಾಯಕ ಸಚಿವರಾದ ಶ್ರೀ ಸೋಮ್ ಪ್ರಕಾಶ್ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಅವರ ಉಪಸ್ಥಿತಿಯಲ್ಲಿ ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ರಾಷ್ಟ್ರೀಯ ಕಾರ್ಯಾಗಾರ ನಡೆಸಲಾಯಿತು. ಕೇಂದ್ರ ಸಚಿವಾಲಯಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ 25,000ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಿವೆ.
 1. ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ಸಹಾಯಕ ಸಚಿವ ಶ್ರೀ ಸೋಮ್ ಪ್ರಕಾಶ್ ಅವರಿಂದ ಅಕ್ಟೋಬರ್‌ 5, 2021ರಂದು ʻಕೈಗಾರಿಕಾ ಪಾರ್ಕ್ ರೇಟಿಂಗ್ ವ್ಯವಸ್ಥೆಯ ವರದಿ 2.0ʼಗೆ ಚಾಲನೆ.
 1. 2021ರ ಅಕ್ಟೋಬರ್‌ 13ರಂದು ಬಹು ಮಾದರಿ ಸಂಪರ್ಕಕ್ಕಾಗಿ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರಿಂದ ʻಪ್ರಧಾನ ಮಂತ್ರಿ ಗತಿ ಶಕ್ತಿʼ ಯೋಜನೆಗೆ ಚಾಲನೆ.
 • 2021ರ ಡಿಸೆಂಬರ್ 20ರಿಂದ 25ರ ವರೆಗಿನ ಅವಧಿಯಲ್ಲಿ ಉತ್ತಮ ಆಡಳಿತ ಸಪ್ತಾಹ: "ಸುಗಮ ಜೀವನ" ಮತ್ತು "ಸುಗಮ ವ್ಯಾಪಾರ" ರಾಷ್ಟ್ರೀಯ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, "ಅನುಸರಣಾ ಹೊರೆಯನ್ನು ಕಡಿಮೆ ಮಾಡಲು ಸುಧಾರಣೆಗಳ ಮುಂದಿನ ಹಂತ" ಕುರಿತು 2021ರ ಡಿಸೆಂಬರ್‌ 22ರಂದು ರಾಷ್ಟ್ರೀಯ ಕಾರ್ಯಾಗಾರವನ್ನು ಡಿಪಿಐಐಟಿ  ಆಯೋಜಿಸಿತ್ತು. ಮಾನ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಕಾರ್ಯಾಗಾರವನ್ನು ದ್ದೇಶಿಸಿ ಮಾತನಾಡಿದರು.
 • ʻಡಿಪಿಐಐಟಿʼ ನಾವಿನ್ಯತೆ ಪರಿಸರ ವ್ಯವಸ್ಥೆ ಸಪ್ತಾಹ: (ಜನವರಿ 10-16, 2022):  ಈ ಉದ್ದೇಶಿತ ಕಾರ್ಯಕ್ರಮದಲ್ಲಿ ʻಡಿಪಿಐಐಟಿʼ ಯುನಿಕಾರ್ನ್‌ಗಳು ಮತ್ತು ನವೋದ್ಯಮಗಳ ಪ್ರಚಾರಕ್ಕಾಗಿ ಕೈಗೊಂಡ ಪ್ರಯತ್ನಗಳನ್ನು ಪ್ರದರ್ಶಿಸಲಿದೆ. ಶಿಕ್ಷಣ ಸಚಿವಾಲಯವು ಈ ಕಾರ್ಯಕ್ರಮದ ನೇತೃತ್ವ ವಹಿಸಿದೆ.

***(Release ID: 1786475) Visitor Counter : 120