ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav g20-india-2023

ತಪ್ಪು ಮಾಹಿತಿ ಪ್ರಸಾರ ಮಾಡುವ ಪಾಕಿಸ್ತಾನ ಸಂಘಟಿತ ಕಾರ್ಯಾಚರಣೆಯನ್ನು ತಡೆದ ಭಾರತ


ಪಾಕಿಸ್ತಾನ ಪ್ರಾಯೋಜಿತ ನಕಲಿ ಸುದ್ದಿಜಾಲವನ್ನು ನಿರ್ಬಂಧಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಭಾರತ ವಿರೋಧಿ ಸುದ್ದಿ ಪ್ರಚಾರಕ್ಕಾಗಿ 20 ಯೂಟ್ಯೂಬ್ ಚಾನೆಲ್‌ಗಳು, 2 ವೆಬ್ ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ

Posted On: 21 DEC 2021 2:45PM by PIB Bengaluru

ಗುಪ್ತಚರ ಸಂಸ್ಥೆಗಳು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಡುವಿನ ನಿಕಟ ಹಾಗೂ ಸಂಘಟಿತ ಪ್ರಯತ್ನದಲ್ಲಿ, ಸಚಿವಾಲಯವು ಸೋಮವಾರ 20 ಯೂಟ್ಯೂಬ್‌ ಚಾನೆಲ್‌ಗಳನ್ನು ಮತ್ತು ಅಂತರ್ಜಾಲದಲ್ಲಿ ಭಾರತ ವಿರೋಧಿ ಪ್ರಚಾರ ಮಾಡುತ್ತಿದ್ದ ಹಾಗೂ ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿದ್ದ 2 ವೆಬ್‌ ತಾಣಗಳನ್ನು ನಿರ್ಬಂಧಿಸಲು ಆದೇಶಿಸಿದೆ. ಸಚಿವಾಲಯವು ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದು, ಪೈಕಿ ಒಂದು ಆದೇಶವು 20 ಯೂಟ್ಯೂಬ್ ಚಾನೆಲ್‌ಗಳನ್ನು ಕುರಿತಾಗಿ ಯೂಟ್ಯೂಬ್ ಸಂಸ್ಥೆಗೆ, ಮತ್ತೊಂದು 2 ಸುದ್ದಿ ವೆಬ್‌ಸೈಟ್ ಗಳ ಕುರಿತಾಗಿ ದೂರಸಂಪರ್ಕ ಇಲಾಖೆಗೆ ಮಾಡಿದ ಆದೇಶವಾಗಿದೆ. ಸುದ್ದಿ ಚಾನೆಲ್‌ಗಳು / ಪೋರ್ಟಲ್ ಗಳನ್ನು ನಿರ್ಬಂಧಿಸಲು ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಯನ್ನು ಆದೇಶದಲ್ಲಿ ಮನವಿ ಮಾಡಲಾಗಿದೆ.

ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದು,  ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುವ ಹಾಗೂ ಸಂಘಟಿತ ತಪ್ಪು ಮಾಹಿತಿ ಪ್ರಸಾರ ಮಾಡುವ ಜಾಲದ ಭಾಗವಾಗಿವೆ. ಕಾಶ್ಮೀರ, ಭಾರತೀಯ ಸೇನೆ, ಭಾರತದ ಅಲ್ಪಸಂಖ್ಯಾತ ಸಮುದಾಯಗಳು, ರಾಮ ಮಂದಿರ, ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳ ಬಗ್ಗೆ ಒಡಕು ಉಂಟು ಮಾಡುವ ಸುದ್ದಿಗಳನ್ನು ಸಂಘಟಿತ ರೀತಿಯಲ್ಲಿ ಪೋಸ್ಟ್ ಮಾಡಲು ಚಾನೆಲ್ ಗಳನ್ನು ಬಳಸಲಾಗುತ್ತಿತ್ತು.

ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ ಅಭಿಯಾನದ ಕಾರ್ಯವಿಧಾನದಲ್ಲಿ  ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ʻನಯಾ ಪಾಕಿಸ್ತಾನ್ ಗ್ರೂಪ್ʼ (ಎನ್‌ಪಿಜಿ) ಪ್ರಮುಖ ಭಾಗವಾಗಿದು, ಇದು ಹಲವು ಯೂಟ್ಯೂಬ್ ಚಾನೆಲ್‌ಗಳ ಜಾಲವನ್ನು ʻಎನ್‌ಪಿಜಿʼಗೆ ಸಂಬಂಧಿಸಿಲ್ಲದ ಇತರ ಕೆಲವು ವೈಯಕ್ತಿಕ ಯೂಟ್ಯೂಬ್ ಚಾನೆಲ್‌ಗಳೂ ಕಾರ್ಯವಿಧಾನದ ಭಾಗವಾಗಿವೆ. ಚಾನೆಲ್‌ಗಳು ಒಟ್ಟು 35 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ಇವುಗಳ ವೀಡಿಯೊಗಳು 55 ಕೋಟಿ ವೀಕ್ಷಣೆಗಳನ್ನು ಹೊಂದಿವೆ. ʻನಯಾ ಪಾಕಿಸ್ತಾನ್ ಗ್ರೂಪ್ʼ (ಎನ್‌ಪಿಜಿ) ಕೆಲವು ಯೂಟ್ಯೂಬ್ ಚಾನೆಲ್‌ಗಳನ್ನು ಪಾಕಿಸ್ತಾನದ ಸುದ್ದಿ ವಾಹಿನಿಗಳ ನಿರೂಪಕರು ನಿರ್ವಹಿಸುತ್ತಿದ್ದರು.

ಯೂಟ್ಯೂಬ್ ಚಾನೆಲ್‌ಗಳು ರೈತರ ಪ್ರತಿಭಟನೆ, ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದ ಪ್ರತಿಭಟನೆಗಳಂತಹ ವಿಷಯಗಳ ಬಗ್ಗೆ ಸುದ್ದಿಯನ್ನು ಪೋಸ್ಟ್ ಮಾಡಿದ್ದವು ಮತ್ತು ಭಾರತ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಪ್ರಚೋದಿಸಲು ಪ್ರಯತ್ನಿಸಿದ್ದವು. ಐದು ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ದುರ್ಬಲಗೊಳಿಸುವಂತಹ ಸುದ್ದಿಯನ್ನೂ ಪೋಸ್ಟ್ ಮಾಡಲು ಯೂಟ್ಯೂಬ್ ಚಾನೆಲ್‌ಗಳನ್ನು ಬಳಸುವ ಕಳವಳ ಮೂಡಿತ್ತು.

ಹಿನ್ನೆಲೆಯಲ್ಲಿ ಸಚಿವಾಲಯವು ಭಾರತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸುರಕ್ಷಿತಗೊಳಿಸಲು ಕಾರ್ಯಪ್ರವೃತ್ತವಾಗಿದೆ. ʻಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021ʼ ನಿಯಮ 16 ಅಡಿಯಲ್ಲಿ ತುರ್ತು ಅಧಿಕಾರಗಳನ್ನು ಬಳಸಿ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.   ಚಾನೆಲ್‌ಗಳಲ್ಲಿ ಪ್ರಸಾರವಾದ ಹೆಚ್ಚಿನ ಸುದ್ದಿಗಳು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮವಿಷಯಗಳಿಗೆ ಸಂಬಂಧಿಸಿವೆ ಮತ್ತು ವಾಸ್ತವಾಂಶಗಳಿಗೆ ದೂರವಾಗಿವೆ. ಜೊತೆಗೆ ಮುಖ್ಯವಾಗಿ ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ ಜಾಲದ ಭಾಗವಾಗಿ (ನಯಾ ಪಾಕಿಸ್ತಾನ ಗ್ರೂಪ್‌ನಂತೆ) ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಇವುಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು. ಹೀಗಾಗಿ ತುರ್ತು ಸಂದರ್ಭದಲ್ಲಿ ಇಂತಹ ಸುದ್ದಿ ಅಥವಾ ಮಾಹಿತಿಯನ್ನು ನಿರ್ಬಂಧಿಸಲು ಅವಕಾಶ ನೀಡುವ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಅನುಬಂಧ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಿರ್ಬಂಧ ಆದೇಶಕ್ಕೆ ಒಳಪಟ್ಟ ಯೂಟ್ಯೂಬ್ ಚಾನೆಲ್‌ಗಳು ಪೋಸ್ಟ್ ಮಾಡಿದ ಸುದ್ದಿ ಅಥವಾ ಮಾಹಿತಿ ಹಾಗೂ ಮಾಧ್ಯಮ ಅಂಕಿ-ಅಂಶಗಳು

 

ಯೂಟ್ಯೂಬ್ ಚಾನೆಲ್ ಹೆಸರು

 

ಚಾನೆಲ್ ಪೋಸ್ಟ್ ಮಾಡಿದ ನಕಲಿ ಸುದ್ದಿಯ ಉದಾಹರಣೆಗಳು

 

ಮಾಧ್ಯಮ ಅಂಕಿಅಂಶಗಳು

 

 

 

 

 

 

 

ದಿ ಪಂಚ್‌ ಲೈನ್‌

 1. ಕಾಶ್ಮೀರದ ತರಬೇತಿ ಕೇಂದ್ರದಲ್ಲಿ  ಕಾಶ್ಮೀರ್‌ ಮುಜಾಹದಿನ್ ಸಂಘಟನೆಯು 20 ಭಾರತೀಯ ಸೇನಾ ಜನರಲ್‌ಗಳನ್ನು ಗುರಿಯಾಗಿಸಿಕೊಂಡು ಅವರನ್ನು ತಟಸ್ಥಗೊಳಿಸಿದೆ.
 2. ಇಮ್ರಾನ್ ಖಾನ್ ಜಿಂದಾಬಾದ್!! ಭಾರತೀಯ ಸೇನೆಯ ವಿರುದ್ಧ ಕಾಶ್ಮೀರಿ ಜನತೆಗೆ ಪ್ರಮುಖ ಗೆಲುವಿನ ಹಿನ್ನೆಲೆಯಲ್ಲಿ ಕಾಶ್ಮೀರದ ಕೇಕೆ|| ಮೋದಿ
 3. ಶ್ರೀನಗರದಲ್ಲಿ 200 ಭಾರತೀಯ ಸೇನಾ ಸಿಬ್ಬಂದಿಯೀಂದ ಇಸ್ಲಾಂ ಧರ್ಮ ಸ್ವೀಕಾರ|| ಭಾರತೀಯ ಸೇನೆ ಮತ್ತು ಸರ್ಕಾರಕ್ಕೆ ದೊಡ್ಡ ಸುದ್ದಿ
 4. ಕಾಶ್ಮೀರ ಯಾವುದೇ ಜನರನ್ನು ಕೆಲಸದಿಂದ ತೆಗೆದುಹಾಕಲು ಭಾರತೀಯ ಸೇನೆ ನಿರಾಕರಿಸಿರುವುದರಿಂದ ನರೇಂದ್ರ ಮೋದಿಗೆ ದೊಡ್ಡ ಹಿನ್ನಡೆ || ಕಾಶ್ಮೀರ
 5. ಭಾರತೀಯ ಸೇನೆಯ 14 ಕಿ.ಮೀ ಉದ್ದದ ಸುರಂಗಕ್ಕೆ ಗುರಿಯಿಟ್ಟ ʻಕಾಶ್ಮೀರ್‌ ಮುಜಾಹದಿನ್ʼ || 60 ಅಧಿಕಾರಿಗಳ ಹತ್ಯೆ || ಮೋದಿ
 6. ತೀವ್ರಗೊಂಡ ಭಾರತ ಬಹಿಷ್ಕರಿಸಿ ಅಭಿಯಾನ!! ಮುಸ್ಲಿಂಮರನ್ನು ಬೆಂಬಲಿಸಲು ಐತಿಹಾಸಿಕ ನಿರ್ಧಾರ ಕೈಗೊಂಡ 57 ಇಸ್ಲಾಮಿಕ್ ದೇಶಗಳು
 7. ರಾಮಮಂದಿರ ಸ್ಥಳದಲ್ಲಿ ಮಸೀದಿ ಪುನರ್ ನಿರ್ಮಾಣ ತಯ್ಯಬ್ ಎರ್ಡೋಗನ್ ಘೋಷಣೆ || ಸಂಕಷ್ಟದಲ್ಲಿ ಯೋಗಿ, ಮೋದಿ

 

 

 

 

 

ಚಂದಾದಾರರು: 1,16,000

ವೀಕ್ಷಣೆಗಳು: 2,01,31,840

 

 

ಇಂಟರ್ ನ್ಯಾಷನಲ್ ವೆಬ್ ನ್ಯೂಸ್‌

 1. ಖಲಿಸ್ತಾನ್ ಜನಾಭಿಪ್ರಾಯ ಯುಕೆ 2021 |#khalistan #khalistanreferendum#khalistanreferendum2021 #khalistanuk
 2. ಖಲಿಸ್ತಾನ್ ಜನಾಭಿಪ್ರಾಯ ಗೀತೆ 2021| #khalistansong2021 #khalistanreferendum #khalistansong#khalistan
 3. ವಲಯದಲ್ಲಿ ಭಾರತವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ

 

ಚಂದಾದಾರರು: 1,14,000

ವೀಕ್ಷಣೆಗಳು: 1,50,46,007

 

 

ಖಾಲ್ಸಾ ಟಿ.ವಿ.

1. ಮಾನನಷ್ಟ ಮೊಕದ್ದಮೆಯಲ್ಲಿ ಮೊದಲ ಗೆಲುವು ಸಾಧಿಸಿದ ಸಿಖ್‌ ಫಾರ್ ಜಸ್ಟಿಸ್‌ಗೆ (ಎಸ್‌ಎಫ್‌ಜೆ) ਨੂੰਕੈਨੇਡਾਵਿੱਚਵਿਲੀਿੱਡੀਸਫ਼ਲਤਾ

2.November1984SikhGenocide,1984ਵਿੱਚਵਸਿੱਖਕੌਿਦਾਹੋਇਆਕਤਲੇਆਿਤੇਗੁਰਦਾਵਰਆਂਨੂੰਢਾਇਆਵਗਆਸੀ|#Sikh

 

ಚಂದಾದಾರರು: 698

ವೀಕ್ಷಣೆಗಳು: 27,419

 

 

 

ದಿ ನೆಕೆಡ್‌ ಟ್ರೂಥ್‌

 1. ವಾಡಿ ಪ್ರತಿರೋಧಕ್ಕೆ ಕೈ ಜೋಡಿಸಿದ ಮತ್ತು ಮುಜಾಹಿದಿನ್ ಸಂಘಟನೆಯ ಬೇಡಿಕೆಗಳನ್ನು ಒಪ್ಪಿದ ಭಾರತೀಯ ಸೇನಾ ತುಕಡಿ | ಪ್ರಧಾನಿ ಮೋದಿಗೆ ಆಘಾತ
 2. ವಿಮೋಚನೆಯ ವಿಚಾರದಲ್ಲಿ ಕಾಶ್ಮೀರ ಪ್ರತಿರೋಧಕ್ಕೆ ಸಹಾಯ ಮಾಡುವುದಾಗಿ ಯುದ್ಧ ಟ್ಯಾಂಕ್‌ಗಳ ಸಮೇತ 47 ಭಾರತೀಯ ಜನರಲ್ ತಂಡದ ಘೋಷಣೆ | ಪ್ರಧಾನಿ ಮೋದಿ
 3. ಬಾಬ್ರಿ ಮಸೀದಿ ಬಗ್ಗೆ ಐದು ದೇಶಗಳ ಮೈತ್ರಿಕೂಟದಿಂದ ಅದ್ಭುತ ನಿರ್ಧಾರ
 4. ಕಾಶ್ಮೀರದಲ್ಲಿ ಭಾರತೀಯ ಸೇನೆ ಸೋನೆಗೆ ಸೋಲು|  

 

ಚಂದಾದಾರರು: 4,61,000

ವೀಕ್ಷಣೆಗಳು: 8,89,71,816

 

 

ಅಮಿತ್ ಶಾ ಭೇಟಿ ನಂತರ ಪ್ರಧಾನಿ ಮೋದಿಗೆ ಹೊಸ ನಿರ್ದೇಶನ

 1. ಕಾಶ್ಮೀರದಿಂದ ಕಾಲ್ತೆಗೆದ ಭಾರತೀಯ ಸೇನೆ | ಕಾಶ್ಮೀರ ಸಮಸ್ಯೆ| ಪಾಕಿಸ್ತಾನ ವರ್ಸಸ್ ಇಂಡಿಯಾ | نکبھاگسےکشمیرفوجبھارتی
 2. 7 ದಿನಗಳಲ್ಲಿ ಮೋದಿ ಯನ್ನು ಹಿಡಿಯಲು ಹೊಸ ಆದೇಶ ಹೊರಡಿಸಿದ ಇಂಟರ್‌ಪೋಲ್, ಪ್ರಮುಖ ಬೆಳವಣಿಗೆ

 

 

1. ಭಾರತೀಯ ಸೇನೆಯ ಮೇಲೆ 3 ದೊಡ್ಡ ದಾಳಿಗಳನ್ನು ದೃಢಪಡಿಸಿದ ಭಾರತೀಯ ಮೂಲಗಳು

 

 

ಅಸ್ಸಾಂನಿಂದ ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ದಾಳಿ | ಪ್ರಧಾನಿ ಮೋದಿ

 

 

2. ಕಣಿವೆ ಸ್ಥಳೀಯ ಹೋರಾಟಗಾರರಿಂದ ಭಾರತೀಯ ಯೋಧರ ಒತ್ತೆ|

 

 

ಭಾರತಕ್ಕೆ ಭಾರಿ ಆಘಾತ; ಪ್ರಧಾನಿ ಮೋದಿ, ಅಮಿತ್ ಶಾಗೆ ವಿಶಿಷ್ಟ ರೀತಿಯಲ್ಲಿ ಆಘಾತ

 

 

3. ಸಿಖ್ಖರ ಬೆಂಬಲದೊಂದಿಗೆ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯಕ್ಕೆ ಮೊಳಗಿದ ಘೋಷಣೆಗಳು

ಚಂದಾದಾರರು:

ನ್ಯೂಸ್24

ಪ್ರಧಾನಿ ಮೋದಿ ವಿರುದ್ಧ ಸಿಧು ಯೋಜನೆ

4. ಶ್ರೀನಗರದಲ್ಲಿ 200 ಭಾರತೀಯ ಸೇನಾ ಸಿಬ್ಬಂದಿ ಇಸ್ಲಾಂ ಧರ್ಮಕ್ಕೆ ಮತಾಂತರ |

NA

ವೀಕ್ಷಣೆಗಳು:

 

ಭಾರತೀಯ ಸೇನೆ ಮತ್ತು ಸರ್ಕಾರ | ಮೋದಿಗೆ ದೊಡ್ಡ ಸುದ್ದಿ

2,36,781

 

5. ಶ್ರೀನಗರದಲ್ಲಿ ಹುತಾತ್ಮನ ಮನೆಗೆ ಟರ್ಕಿ ರಾಯಭಾರಿ ಭೇಟಿ |

 

 

ಭಾರತೀಯ ಸೇನೆ, ಪ್ರಧಾನಿ ಮೋದಿ ಮತ್ತು ಸರ್ಕಾರಕ್ಕೆ ದೊಡ್ಡ ಸವಾಲು

 

 

6. ಕಾಶ್ಮೀರದಲ್ಲಿ ಇಸ್ರೇಲಿ ಕಮಾಂಡೋಗಳು |