ಹಣಕಾಸು ಸಚಿವಾಲಯ
azadi ka amrit mahotsav

ಸುಂಕ ಸಮೀಕರಣ 2020 ರ ಮೇಲೆ ಒಂದು ಪರಿವರ್ತನೆಯ ವಿಧಾನಕ್ಕೆ ಭಾರತ ಮತ್ತು ಅಮೆರಿಕ ಒಪ್ಪಿಗೆ

Posted On: 24 NOV 2021 6:01PM by PIB Bengaluru

2021ರ ಅಕ್ಟೋಬರ್ 8ರಂದು, ಆರ್ಥಿಕತೆಯ ಡಿಜಿಟಲೀಕರಣದಿಂದ ಉದ್ಭವಿಸುವ ತೆರಿಗೆಯ ಸವಾಲುಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಓಇಸಿಡಿ/ಜಿ20 ಸಮಗ್ರ ಚೌಕಟ್ಟಿನ (ಆಸ್ಟ್ರಿಯಾ, ಫ್ರಾನ್ಸ್, ಇಟಲಿ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ) 134 ಇತರ ಸದಸ್ಯರನ್ನು ಒಳಗೊಂಡಂತೆ ಎರಡು-ಸ್ತಂಭದ ಪರಿಹಾರದ ಹೇಳಿಕೆಯ ಮೇಲೆ ಒಪ್ಪಂದಕ್ಕೆ ಬಂದಿವೆ. 

2021ರ ಅಕ್ಟೋಬರ್ 21ರಂದು, ಅಮೆರಿಕ ಮತ್ತು ಆಸ್ಟ್ರಿಯಾ, ಫ್ರಾನ್ಸ್, ಇಟಲಿ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್ಡಮ್ ಸ್ತಂಭ 1ನ್ನು ಕಾರ್ಯಗತಗೊಳಿಸುವಾಗ ಅಸ್ತಿತ್ವದಲ್ಲಿರುವ ಏಕಪಕ್ಷೀಯ ಕ್ರಮಗಳಿಗೆ ಪರಿವರ್ತನಾತ್ಮಕ ವಿಧಾನಗಳ ಕುರಿತು ಒಪ್ಪಂದಕ್ಕೆ ಬಂದವು. ಈ ಒಪ್ಪಂದವು ಆ ದಿನಾಂಕದಂದು ("ಅಕ್ಟೋಬರ್ 21 ಜಂಟಿ ಹೇಳಿಕೆ") ಆ ಆರು ದೇಶಗಳ ಜಂಟಿ ಹೇಳಿಕೆಯಲ್ಲಿ ಪ್ರತಿಫಲಿಸುತ್ತದೆ.

ಭಾರತ ಮತ್ತು ಸಂಯುಕ್ತ ಅಮೆರಿಕ ಸಂಸ್ಥಾನ ಅಕ್ಟೋಬರ್ 21 ರ ಜಂಟಿ ಹೇಳಿಕೆಯ ಅಡಿಯಲ್ಲಿ ಅನ್ವಯಿಸುವ ಅದೇ ನಿಯಮಗಳು ಅಮೆರಿಕ ಮತ್ತು ಭಾರತದ ನಡುವೆ ಇ-ವಾಣಿಜ್ಯ ಸೇವೆಗಳ ಪೂರೈಕೆ ಮತ್ತು ಅಮೆರಿಕದ ವ್ಯಾಪಾರ ಕ್ರಮದ ಮೇಲೆ ಭಾರತದ ಶುಲ್ಕಕ್ಕೆ ಸಂಬಂಧಿಸಿದಂತೆ ಶೇ.2 ಸಮೀಕರಣದ ಸುಂಕದ ಶುಲ್ಕ ಅನ್ವಯಿಸುತ್ತವೆ ಎಂದು ಒಪ್ಪಿಕೊಂಡಿವೆ. ಆದಾಗ್ಯೂ, ಅನ್ವಯವಾಗುವ ಮಧ್ಯಂತರ ಅವಧಿಯು 1ನೇ ಏಪ್ರಿಲ್ 2022 ರಿಂದ ಸ್ತಂಭ ಒಂದರ ಅನುಷ್ಠಾನದವರೆಗೆ ಅಥವಾ 31ನೇ ಮಾರ್ಚ್ 2024 ರವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಅನ್ವಯಿಸುತ್ತದೆ.

ಆಯಾ ಬದ್ಧತೆಗಳ ಬಗ್ಗೆ ಸಾಮಾನ್ಯ ತಿಳಿವಳಿಕೆ ಇರುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಅಮೆರಿಕ ನಿಕಟ ಸಂಪರ್ಕದಲ್ಲಿ ಇರುತ್ತವೆ ಮತ್ತು ರಚನಾತ್ಮಕ ಮಾತುಕತೆಯ ಮೂಲಕ ಈ ವಿಷಯದ ಕುರಿತು ಯಾವುದೇ ಹೆಚ್ಚಿನ ಅಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ.

ಒಪ್ಪಂದದ ಅಂತಿಮ ನಿಯಮಗಳನ್ನು 1 ಫೆಬ್ರವರಿ 2022 ರೊಳಗೆ ಅಂತಿಮಗೊಳಿಸಲಾಗುತ್ತದೆ.

***


(Release ID: 1774788) Visitor Counter : 246


Read this release in: English , Urdu , Hindi , Telugu