ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಾಮನ್ ಹಾಗೂ ದಿಯುವಿನಲ್ಲಿ ವಿದ್ಯುತ್ ಪೂರೈಕೆ ಮತ್ತು ಸಗಟು ಪೂರೈಕೆ ವ್ಯವಹಾರದ ಖಾಸಗೀಕರಣಕ್ಕೆ ಸಂಪುಟ ಅನುಮೋದನೆ

Posted On: 24 NOV 2021 3:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇಂದು ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಾಮನ್ ಹಾಗೂ ದಿಯು (DNH&DD) ವಿನಲ್ಲಿ ವಿದ್ಯುತ್ ಪೂರೈಕೆ ಮತ್ತು ಸಗಟು ಪೂರೈಕೆ ವ್ಯವಹಾರದ ಖಾಸಗೀಕರಣಗೊಳಿಸಲು ಕಂಪನಿ (ವಿಶೇಷ ಉದ್ದೇಶದ ಕಂಪನಿ) ಸ್ಥಾಪನೆಗೆ ಅನುಮೋದನೆ ನೀಡಿದೆ. ಹೊಸದಾಗಿ ರಚಿಸಲಾಗುವ ಕಂಪನಿಯ ಷೇರುಗಳನ್ನು ಅತ್ಯಧಿಕ ಬಿಡ್ಡರ್ ಗೆ ಮಾರಾಟ ಮಾಡಲಾಗುವುದು ಮತ್ತು ನೌಕರರ ಹೊಣೆಗಾರಿಕೆಗಳನ್ನು ಪೂರೈಸಲು ಟ್ರಸ್ಟ್ ರಚಿಸಲಾಗುವುದು.

ಉದ್ದೇಶಿತ ಖಾಸಗೀಕರಣ ಪ್ರಕ್ರಿಯೆಯು  DNH&DD ಯುನ 1.45 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಉತ್ತಮ ಸೇವೆಗಳ ಅಪೇಕ್ಷಿತ ಫಲಿತಾಂಶಗಳನ್ನು ಈಡೇರಿಸುತ್ತದೆ, ಕಾರ್ಯಾಚರಣೆಯಲ್ಲಿ ಸುಧಾರಣೆಗಳಾಗುತ್ತವೆ ಮತ್ತು ವಿತರಣೆಯಲ್ಲಿ ದಕ್ಷತೆಯ ಕೆಲಸಗಳಾಗಿವೆ ಹಾಗೂ ದೇಶಾದ್ಯಂತ ಇತರೆ ಸೌಕರ್ಯಗಳ ಬಳಕೆಗೆ ಅನುಕರಣೆಯ ಮಾದರಿಯನ್ನು ಒದಗಿಸುತ್ತದೆ. ಇದು ಸ್ಪರ್ಧೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ವಿದ್ಯುತ್ ಉದ್ಯಮವನ್ನು ಬಲಪಡಿಸುತ್ತದೆ ಹಾಗೂ ಬಾಕಿ ವಸೂಲಿಗೆ ನೆರವಾಗುತ್ತದೆ.

2020ರ ಮೇ ತಿಂಗಳಲ್ಲಿ ಭಾರತ ಸರ್ಕಾರ, ಸಾಂಸ್ಥಿಕ ಸುಧಾರಣೆಗಳ ಮೂಲಕ ಭಾರತವನ್ನು ಸ್ವಾವಲಂಬಿಗೊಳಿಸಲು “ಆತ್ಮನಿರ್ಭರ ಭಾರತ ಅಭಿಯಾನ’ವನ್ನು ಘೋಷಣೆ ಮಾಡಿತ್ತು. ಅವುಗಳಲ್ಲಿ ಒಂದು ಪ್ರಮುಖ ಯೋಜನೆ ಎಂದರೆ ವಿದ್ಯುತ್ ವಿತರಣೆ ಖಾಸಗಿ ವಲಯದ ದಕ್ಷತೆಯನ್ನು ಹೆಚ್ಚಿಸಲು ವಿದ್ಯುತ್ ವಿತರಣಾ ಉಪಯುಕ್ತತೆಗಳ ಮೂಲಕ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮತ್ತು ಚಿಲ್ಲರೆ ಮಾರಾಟವನ್ನು ಸುಧಾರಿಸುವುದಾಗಿದೆ. 

ಒಂದೇ ಒಂದು ವಿತರಣಾ ಕಂಪನಿ ಅಂದರೆ DNH-DD ವಿದ್ಯುತ್ ವಿತರಣಾ ಕಂಪನಿ ನಿಯಮಿತವನ್ನು ಸ್ಥಾಪಿಸಲಾಗುವುದು, ಇದು ಸಂಪೂರ್ಣ ಸರ್ಕಾರಿ ಒಡೆತನದ ಕಂಪನಿಯಾಗಿರಲಿದೆ, ಹೊಸದಾಗಿ ರಚನೆಯಾದ ಕಂಪನಿಯ ಸಿಬ್ಬಂದಿಯ ಪ್ರಯೋಜನಗಳನ್ನು ನಿರ್ವಹಿಸಲು ಟ್ರಸ್ಟ್ ರಚಿಸಲಾಗುವುದು. ಹೊಸ ಕಂಪನಿಗೆ ಸ್ವತ್ತು, ಹೊಣೆಗಾರಿಕೆ ಮತ್ತು ಸಿಬ್ಬಂದಿಯ ವರ್ಗಾವಣೆಯನ್ನು ದಾದ್ರ ಮತ್ತು ನಗರ ಹವೇಲಿ ಹಾಗೂ ದಾಮನ್ ಮತ್ತು ದಿಯು ವಿದ್ಯುತ್ ( ಪುನರ್ ರಚನೆ ಮತ್ತು ಸುಧಾರಣೆಗಳು) ವರ್ಗಾವಣೆ ಯೋಜನೆ 2020ರಂತೆ ಮಾಡಲಾಗುವುದು. 

***(Release ID: 1774663) Visitor Counter : 53