ಪ್ರಧಾನ ಮಂತ್ರಿಯವರ ಕಛೇರಿ

ಜನಜಾತೀಯ ಗೌರವ ದಿವಸದ ಸಂದರ್ಭದಲ್ಲಿ ನವೆಂಬರ್ 15ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಜನಜಾತೀಯ ಗೌರವ ದಿವಸದಂದು ಜನಜಾತೀಯ ಸಮುದಾಯದ ಕಲ್ಯಾಣಕ್ಕಾಗಿ ಹಲವು ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಮಧ್ಯಪ್ರದೇಶದಲ್ಲಿ ‘ನಿಮ್ಮ ಗ್ರಾಮಕ್ಕೆ ಪಡಿತರ’ಕ್ಕೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಮಧ್ಯಪ್ರದೇಶದಲ್ಲಿ ಸಿಕಲ್ ಕೋಶ ಅಭಿಯಾನಕ್ಕೂ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ದೇಶದಾದ್ಯಂತದ ರಾಜ್ಯಗಳಲ್ಲಿ 50 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

Posted On: 14 NOV 2021 4:14PM by PIB Bengaluru

ಅಮರ್ ಸಾಹೀಬ್ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯನ್ನು ಭಾರತ ಸರ್ಕಾರ ಜನಜಾತೀಯ ದಿವಸವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಧ್ಯಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಭೋಪಾಲ್ ನ ಜಂಬೂರಿ ಮೈದಾನದಲ್ಲಿ ನಡೆಯಲಿರುವ ಜನ ಜಾತೀಯ ಗೌರವ ದಿವಸ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಜನ ಜಾತೀಯ ಸಮುದಾಯದ ಕಲ್ಯಾಣಕ್ಕಾಗಿ ಹಲವು ಉಪಕ್ರಮಗಳಿಗೂ ಚಾಲನೆ ನೀಡಲಿದ್ದಾರೆ. 

ಜನ ಜಾತೀಯ ಗೌರವ ದಿವಸ ಮಹಾಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರು ನಿಮ್ಮ ಗ್ರಾಮಕ್ಕೆ ಪಡಿತರ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಉದ್ಘಾಟಿಸಲಿದ್ದಾರೆ. ಪ್ರತಿ ತಿಂಗಳು ಜನಜಾತೀಯ ಸಮುದಾಯಗಳಿಗೆ ಅವರ ಗ್ರಾಮದಲ್ಲಿಯೇ ಸಾರ್ವಜನಿಕ ವಿತರಣೆಯ ಪಡಿತರದ ಕೋಟಾವನ್ನು ವಿತರಿಸುವುದು ಈ ಯೋಜನೆಯ ಉದ್ದೇಶವಾಗಿದೆ, ಹೀಗಾಗಿ ಅವರು, ತಮ್ಮ ತಿಂಗಳ ಪಡಿತರ ಪಡೆಯಲು ನ್ಯಾಯ ಬೆಲೆ ಅಂಗಡಿಗೆ ಹೋಗುವ ಅಗತ್ಯ ಇರುವುದಿಲ್ಲ. 

ಮಹಾಸಮ್ಮೇಳನದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಸಿಕಲ್ ಸೆಲ್ (ಹಿಮೋಗ್ಲೋಬಿನೋಪತಿ) ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಆ ಮೂಲಕ ಪ್ರಧಾನ ಮಂತ್ರಿಗಳು ಫಲಾನುಭವಿಗಳಿಗೆ ಜೆನೆಟಿಕ್ ಕೌನ್ಸೆಲಿಂಗ್ ಕಾರ್ಡ್‌ ಗಳನ್ನು ಹಸ್ತಾಂತರಿಸಲಿದ್ದಾರೆ. ಸಿಕೆಲ್ ಕೋಶ ರಕ್ತಹೀನತೆ, ಥಲಸ್ಸೆಮಿಯಾ ಮತ್ತು ಇತರ ಹಿಮೋಗ್ಲೋಬಿನೋಪತಿಗಳಿಂದ ಬಳಲುತ್ತಿರುವ ರೋಗಿಗಳನ್ನು ಪರೀಕ್ಷಿಸಲು ಮತ್ತು ನಿರ್ವಹಿಸಲು ಮತ್ತು ಈ ರೋಗಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಅಭಿಯಾನವನ್ನು ರೂಪಿಸಲಾಗಿದೆ, ಇದರ ಪ್ರಭಾವವು ಮಧ್ಯಪ್ರದೇಶದ ಜನಜಾತೀಯ ಸಮುದಾಯದ ಮೇಲೆ ಹೆಚ್ಚು ಗಾಢವಾಗಿದೆ.

ಪ್ರಧಾನಮಂತ್ರಿಯವರು ಆಂಧ್ರಪ್ರದೇಶ, ಛತ್ತೀಸಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತ್ರಿಪುರಾ ಮತ್ತು ದಾದರ್ ಹಾಗೂ ನಗರ್ ಹವೇಲಿ ಮತ್ತು ಡಿಯೂ ಹಾಗೂ ಡಮನ್ಗಳು ಸೇರಿದಂತೆ ದೇಶಾದ್ಯಂತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ಏಕಲವ್ಯ ಮಾದರಿ ವಸತಿ ಶಾಲೆಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಜನಜಾತೀಯ ಸ್ವ-ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಧ್ಯಪ್ರದೇಶದ ಜನಜಾತೀಯ ಸಮುದಾಯದ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟದ ವೀರರ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ಅವರು ಹೊಸದಾಗಿ ನೇಮಕಗೊಂಡ ಅದರಲ್ಲೂ ದುರ್ಬಲ ಬುಡಕಟ್ಟು ಗುಂಪುಗಳ ಶಿಕ್ಷಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.

ಈ ಕಾರ್ಯಕ್ರಮದ ವೇಳೆ, ರಾಜ್ಯಪಾಲರು, ಮಧ್ಯಪ್ರದೇಶದ ಮುಖ್ಯಮಂತ್ರಿಗಳು, ಡಾ. ವೀರೇಂದ್ರ ಕುಮಾರ್, ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧ್ಯಾ, ಕೇಂದ್ರ ಸಹಾಯಕ ಸಚಿವರುಗಳಾದ ಪ್ರಹ್ಲಾದ ಎಸ್ ಪಟೇಲ್, ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ ಮತ್ತು ಡಾ. ಎಲ್. ಮುರುಗನ್ ಅವರೂ ಉಪಸ್ಥಿತರಿರುತ್ತಾರೆ.

ಈ ಭೇಟಿಯ ವೇಳೆ, ಪ್ರಧಾನಮಂತ್ರಿಯವರು, ಮರು ಅಭಿವೃದ್ಧಿ ಮಾಡಲಾಗಿರುವ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಲಿದ್ದು, ಮಧ್ಯಪ್ರದೇಶದ ರೈಲ್ವೆಯ ಬಹು ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

***



(Release ID: 1771752) Visitor Counter : 217