ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

2025ರ ವೇಳೆಗೆ ಕ್ಷಯ ರೋಗವನ್ನು ನಿರ್ಮೂಲನೆ: ಕಾರ್ಯತಂತ್ರಗಳ ಚಿಂತನಮಂಥನ - ಡಾ. ಭಾರತಿ ಪ್ರವೀಣ ಪವಾರ್

ಕೋವಿಡ್-19 ಸಾಂಕ್ರಾಮಿಕದಿಂದ ನಿಂದ ಉಂಟಾದ ಹಿನ್ನಡೆಗಳನ್ನು ಸರಿದೂಗಿಸಲು ಹಾಗೂ ಅದರಾಚೆಗೆ ಸಾಗಲು ನಾವು ಹೊಸ ವೇಗದಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ: ಡಾ. ಭಾರತಿ ಪ್ರವೀಣ ಪವಾರ್

"ವಿವಿಧ ಮಧ್ಯಸ್ಥಗಾರರ ಪಾಲ್ಗೊಳ್ಳುವಿಕೆಯ ಮೂಲಕ ಕ್ಷಯ ಆರೈಕೆಯನ್ನು ವಿಸ್ತರಿಸಿ, ಆ ಮೂಲಕ ಕ್ಷಯ ರೋಗದ ಹೊಸ ಪ್ರಕರಣಗಳನ್ನು ಮುಂಚಿತವಾಗಿ ಪತ್ತೆ ಮಾಡುವುದು ಮತ್ತು ತಡೆಗಟ್ಟುವುದು ನಮ್ಮ ಗುರಿಯಾಗಿದೆ"

Posted On: 10 NOV 2021 1:28PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಡಾ. ಭಾರತಿ ಪ್ರವೀಣ್‌ ಪವಾರ್ ಅವರು ʻ2025 ವೇಳೆಗೆ ಕ್ಷಯ ರೋಗ ನಿರ್ಮೂಲನೆ ಕಾರ್ಯತಂತ್ರಗಳುʼ ಕುರಿತ ಚಿಂತನಾಮಂಥನದ ಅಧ್ಯಕ್ಷತೆಯನ್ನು ಇಂದು ವಹಿಸಿದರು.

ʻಎಸ್‌ಡಿಜಿʼ ಗುರಿಗಿಂತಲೂ ಐದು ವರ್ಷ ಮುಂಚಿತವಾಗಿ, ಅಂದರೆ 2025 ವೇಳೆಗೆ ಭಾರತದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯನ್ನು ಪುನರುಚ್ಚರಿಸಿದ ಡಾ. ಪವಾರ್, "ದೇಶದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಇನ್ನು ಕೇವಲ 37 ತಿಂಗಳ ಗಡುವು ಬಾಕಿ ಇದೆ. ಕೋವಿಡ್-19 ಸಾಂಕ್ರಾಮಿಕದಿಂದ ನಿಟ್ಟಿನಲ್ಲಿ ಉಂಟಾಗಿರುವ ಹಿನ್ನಡೆಯನ್ನು ಸರಿದೂಗಿಸಲು ಮತ್ತು ಅದರಾಚೆಗೆ ಸಾಗಲು ನಾವು ಹೊಸ ವೇಗದಲ್ಲಿ ಕೆಲಸ ಮಾಡಬೇಕಿದೆ ಮತ್ತು ನವೀನ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ,” ಎಂದರು.

 

ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಸಚಿವರು, "ಕೋವಿಡ್‌ ಸಾಂಕ್ರಾಮಿಕ ರೋಗದ ಹೊರತಾಗಿಯೂ, ನಾವು ಉಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕ್ಷಯ ರೋಗಿಗಳಿಗೆ ಆರ್ಥಿಕ ಮತ್ತು ಪೌಷ್ಠಿಕಾಂಶದ ನೆರವು ಅಬಾಧಿತವಾಗಿ ಮುಂದುವರಿಯಿತು. ʻರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮʼ ಅಡಿ ಮಾಡಿದ ಪ್ರಯತ್ನಗಳು ಸಕಾಲಕ್ಕೆ ರೋಗನಿರ್ಣಯ, ಚಿಕಿತ್ಸೆಯ ಅನುಸರಣೆ ಮತ್ತು ಫಲಿತಾಂಶಗಳಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಯಿತು. ಸರಿಯಾದ ರೋಗನಿರ್ಣಯ ಮತ್ತು ತ್ವರಿತ ಚಿಕಿತ್ಸೆಯು ಕ್ಷಯ ನಿರ್ಮೂಲನೆಗೆ ಪ್ರಮುಖವಾಗಿರುವುದರಿಂದ, ಕಾರ್ಯಕ್ರಮವು ದೇಶಾದ್ಯಂತ ಸಾರ್ವತ್ರಿಕ ಕ್ಷಯ ಆರೈಕೆ ವ್ಯಾಪ್ತಿಯನ್ನು ಹೆಚ್ಚಿಸುವ ಹಾಗೂ ರೋಗ ತಡೆ ಸೇವೆಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ʻಕ್ಷಯ ರೋಗ ನಿರ್ಮೂಲನೆಗೆ ರಾಷ್ಟ್ರೀಯ ಕಾರ್ಯತಂತ್ರ ಯೋಜನೆʼಯಲ್ಲಿ "ರೋಗತಡೆಎಂಬ ಆಧಾರಸ್ತಂಭದ ಅಡಿಯಲ್ಲಿ ಟಿಬಿ ತಡೆಗಟ್ಟುವ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಟಿಬಿ ತಡೆ ಚಿಕಿತ್ಸೆಯ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಅದನ್ನು ವಿಕೇಂದ್ರೀಕರಿಸುವ ಮೂಲಕ ರೋಗಿಗಳಿಗೆ ಮತ್ತಷ್ಟು ಹತ್ತಿರವಾಗಿಸುವುದು ಮುಖ್ಯವಾಗಿದೆಇದರಿಂದ ಕ್ಷಯ ಸೋಂಕಿನಿಂದ ಪ್ರಸರಣ ಸರಪಳಿಯನ್ನು ತಡೆಯುವುದಷ್ಟೇ ಅಲ್ಲದೆ ಸೋಂಕಿತರು ಪೂರ್ಣ ಪ್ರಮಾಣದ ಕ್ಷಯ ರೋಗಕ್ಕೆ ತುತ್ತಾಗದಂತೆ ತಡೆಯಲು ಸಾಧ್ಯವಾಗಲಿದೆ,” ಎಂದರು.

ಕ್ಷಯ ರೋಗ ನಿರ್ಮೂಲನೆಗಾಗಿ ಕೇಂದ್ರ ಸರಕಾರದ ಪ್ರಯತ್ನಗಳನ್ನು ಎತ್ತಿ ಹೇಳಿದ ಅವರು, "ಕ್ಷಯ ರೋಗವನ್ನು ಈಗ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಅತ್ಯಗತ್ಯ ಭಾಗವನ್ನಾಗಿ ಮಾಡಲಾಗಿದೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಲಾಗಿದೆ. ಪ್ರಕರಣಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಮತ್ತು ಸಮುದಾಯ ಮುಂತಾದ ವಿವಿಧ ಮಧ್ಯಸ್ಥಗಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಮೂಲಕ ಕ್ಷಯ ಆರೈಕೆಯನ್ನು ವಿಸ್ತರಿಸುವುದು, ಮೂಲಕ  ಕ್ಷಯ ರೋಗದ ಹೊಸ ಪ್ರಕರಣಗಳನ್ನು ತಡೆಯುವುದು ನಮ್ಮ ಗುರಿಯಾಗಿದೆ. ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ʻಕ್ಷಯರೋಗ ಮುಕ್ತ ಭಾರತʼ ಅಭಿಯಾನವನ್ನು ಪ್ರಾರಂಭಿಸಲಾಗಿದೆ,” ಎಂದರು. ಹೊಸ ಕ್ಷಯ ಪ್ರತಿರೋಧಕ ಔಷಧಗಳು, ಹೊಸ ನಿಯಮಗಳು ಮತ್ತು ಕಾರ್ಯಕ್ರಮಗಳ ಆರಂಭವನ್ನು ಪ್ರಸ್ತಾಪಿಸಿದ ಡಾ. ಭಾರತಿ ಪ್ರವೀಣ ಪವಾರ್ ಅವರು ಕ್ಷಯ ರೋಗವನ್ನು ಎದುರಿಸುವಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಶ್ಲಾಘಿಸಿದರು.

ರೋಗ ಪತ್ತೆ ಮತ್ತು  ಚಿಕಿತ್ಸೆಯ ಅನುಸರಣೆಯನ್ನು ಸುಧಾರಿಸುವುದು, ಇತರ ಸಾಮಾಜಿಕ ಕಲ್ಯಾಣ ಯೋಜನೆಗಳೊಂದಿಗೆ ಒಗ್ಗೂಡಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು, ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆಯನ್ನು ಬಳಸಿಕೊಳ್ಳುವುದು ಮತ್ತು ಸುಧಾರಿಸುವುದು, ಅಂತಿಮವಾಗಿ ದೇಶದಲ್ಲಿ ಕ್ಷಯ ನಿರ್ಮೂಲನೆಯನ್ನು ತ್ವರಿತಗೊಳಿಸಲು ನಮ್ಮ ಆರೋಗ್ಯ ವ್ಯವಸ್ಥೆಯೊಳಗೆ ʻಎನ್‌ಟಿಇಪಿʼ ಏಕೀಕರಣ ಸೇರಿದಂತೆ 5 ಆಧಾರ ಸ್ತಂಭಗಳ ಮೇಲೆ ಸಭೆಯಲ್ಲಿ ಗಮನ ಕೇಂದ್ರೀಕರಿಸಲಾಯಿತು.

ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಮತ್ತು ಎನ್‌ಟಿಪಿಸಿ ಮಹಾನಿರ್ದೇಶಕರಾದ ಶ್ರೀಮತಿ ಆರತಿ ಅಹುಜಾ, ಡಿಡಿಜಿ ಟಿಬಿ ಸಿಟಿಡಿ ಡಾ. ಸುದರ್ಶನ ಮಂಡಲ್, ಸಿಟಿಡಿ(ಟಿಬಿ) ಜಂಟಿ ನಿರ್ದೇಶಕ ಡಾ. ನಿಶಾಂತ್ ಕುಮಾರ್, ಸಿಟಿಡಿ (ಟಿಬಿ) ಜಂಟಿ ನಿರ್ದೇಶಕ ಡಾ. ಸಂಜಯ್ ಕೆ ಮಾಟೂ, ಸಿಟಿಡಿ (ಟಿಬಿ) ಜಂಟಿ ನಿರ್ದೇಶಕ ಡಾ. ರಘುರಾಮ್ ರಾವ್ಹೆಚ್ಚುವರಿ ಡಿಡಿಜಿ (ಟಿಬಿ) ಡಾ. ಅಲೋಕ್ ಮಾಥುರ್, ಪ್ರಸಿದ್ಧ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

***(Release ID: 1770565) Visitor Counter : 854