ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತದಾದ್ಯಂತದ 17 ವಿಜ್ಞಾನಿಗಳಿಗೆ ʻಸ್ವರ್ಣಜಯಂತಿ ಫೆಲೋಶಿಪ್ʼ ಪ್ರದಾನ


Posted On: 08 NOV 2021 5:02PM by PIB Bengaluru

ಭಾರತದಾದ್ಯಂತದ ವಿಜ್ಞಾನ ಸಂಸ್ಥೆಗಳ 17 ವಿಜ್ಞಾನಿಗಳಿಗೆ ಅವರ ನವೀನ ಸಂಶೋಧನಾ ಆಲೋಚನೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವಲ್ಲಿ ಅವರು ಹೊಂದಿರುವ ಸಾಮರ್ಥ್ಯವನ್ನು ಗುರುತಿಸಿ ʻಸ್ವರ್ಣಜಯಂತಿ ಫೆಲೋಶಿಪ್‌ʼ ಪ್ರದಾನ ಮಾಡಲಾಯಿತು.

ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳಿಗೆ ಸಂಶೋಧನಾ ಯೋಜನೆಯಲ್ಲಿ ಅನುಮೋದಿಸಲಾದ ವೆಚ್ಚಗಳ ವಿಷಯದಲ್ಲಿ ಸ್ವಾತಂತ್ರ್ಯವಾಗಿ ಮತ್ತು ನಮ್ಯತೆಯೊಂದಿಗೆ ಅನಿರ್ಬಂಧಿತ ಸಂಶೋಧನೆಯನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ಸಾಧನೆಯ ಇತಿಹಾಸ ಹೊಂದಿರುವ ಹಾಗೂ ಕಠಿಣ ಮೂರು ಹಂತಗಳ ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮುಂಚೂಣಿ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಯನ್ನು ಮುಂದುವರಿಸಲಿದ್ದಾರೆ.

ಭಾರತದ ಐವತ್ತನೇ ಸ್ವಾತಂತ್ರ್ಯ ವರ್ಷದ ನೆನಪಿಗಾಗಿ ಭಾರತ ಸರ್ಕಾರವು ʻಸ್ವರ್ಣಜಯಂತಿ ಫೆಲೋಶಿಪ್ʼ ಯೋಜನೆಯನ್ನು ಸ್ಥಾಪಿಸಿತು. ಈ ಯೋಜನೆಯಡಿ ಪ್ರಶಸ್ತಿ ವಿಜೇತರಿಗೆ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐದು ವರ್ಷಗಳವರೆಗೆ ತಿಂಗಳಿಗೆ ರೂ. 25,000/- ಫೆಲೋಶಿಪ್ ಸೇರಿದಂತೆ ಸಂಶೋಧನೆ ನಿರ್ವಹಿಸಲು ಎಲ್ಲಾ ಅಗತ್ಯಗಳಿಗೆ ಬೆಂಬಲದೊಂದಿಗೆ ಅನುಕೂಲ ಕಲ್ಪಿಸುತ್ತದೆ. ಇದಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರಶಸ್ತಿ ವಿಜೇತರಿಗೆ 5 ವರ್ಷಗಳ ವರೆಗೆ 5 ಲಕ್ಷ ರೂಪಾಯಿಗಳ ಸಂಶೋಧನಾ ಅನುದಾನವನ್ನು ನೀಡುವ ಮೂಲಕ ಬೆಂಬಲಿಸುತ್ತದೆ. ಅವರು ತಮ್ಮ ಮಾತೃ ಸಂಸ್ಥೆಯಿಂದ ಪಡೆಯುವ ಸಂಬಳದ ಜೊತೆಗೆ ಫೆಲೋಶಿಪ್ ಒದಗಿಸಲಾಗುತ್ತದೆ. ಫೆಲೋಶಿಪ್ ಜೊತೆಗೆ, ಉಪಕರಣಗಳು, ಕಂಪ್ಯೂಟೇಶನಲ್ ಸೌಲಭ್ಯಗಳು, ಬಳಕೆವಸ್ತುಗಳು, ತುರ್ತು ಅಗತ್ಯಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣ ಮತ್ತು ಇತರ ವಿಶೇಷ ಅವಶ್ಯಕತೆಗಳಿಗೆ ಅರ್ಹತೆಯ ಆಧಾರದ ಮೇಲೆ ಅನುದಾನವನ್ನು ನೀಡಲಾಗುವುದು.

ವಿಜ್ಞಾನಿಗಳ ಸಂಕ್ಷಿಪ್ತ ಪ್ರೊಫೈಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

***



(Release ID: 1770110) Visitor Counter : 209