ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ದೇಶಾದ್ಯಂತ ಖಾದ್ಯ ತೈಲ ಬೆಲೆ ಇಳಿಕೆ ಪ್ರವೃತ್ತಿ ಗೋಚರ
ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕ ಶೇ.2.5ರಿಂದ ಶೂನ್ಯಕ್ಕೆ ಇಳಿಸಿದ ಕೇಂದ್ರ ಸರ್ಕಾರ
ಖಾದ್ಯ ತೈಲ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬಿನ್ ಎಣ್ಣೆ ಮೇಲಿನ ಆಮದು ತೆರಿಗೆ ಏಕರೂಪಗೊಳಿಸಿದ ಕೇಂದ್ರ ಸರ್ಕಾರ
ಸಗಟು ಮಾರಾಟ ಬೆಲೆ ಪ್ರತಿ ಲೀಟರ್ ಗೆ 4ರಿಂದ 7 ರೂ. ಕಡಿತಗೊಳಿಸಿದ ಪ್ರಮುಖ ಖಾದ್ಯ ತೈಲ ಮಾರಾಟಗಾರರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಒಳಗೊಳ್ಳುವಿಕೆಯಿಂದಾಗಿ ಖಾದ್ಯ ತೈಲಗಳ ಬೆಲೆ ಇಳಿಕೆ
Posted On:
05 NOV 2021 4:17PM by PIB Bengaluru
ಕಳೆದ ಒಂದು ವರ್ಷದಿಂದ ಖಾದ್ಯ ತೈಲ ಬೆಲೆ ನಿರಂತರ ಏರುಮುಖಿಯಾಗಿದ್ದರಿಂದ ಅದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕವನ್ನು ಶೇ.2.5ರಿಂದ ಶೂನ್ಯಕ್ಕೆ ಇಳಿಕೆ ಮಾಡಿತು. ಈ ಎಣ್ಣೆಗಳ ಮೇಲಿನ ಕೃಷಿ ಸೆಸ್ ಕೂಡ ಕಚ್ಚಾ ತಾಳೆ ಎಣ್ಣೆ ಮೇಲೆ ಶೇ.20ರಿಂದ ಶೇ.7.5ಕ್ಕೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ಶೇ.5ರಷ್ಟು ಇಳಿಕೆ ಮಾಡಲಾಯಿತು.
ಈ ಮೇಲಿನ ಕಡಿತದ ಕ್ರಮಗಳಿಂದಾಗಿ, ಒಟ್ಟಾರೆ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕ ಶೇ.7.5 ಮತ್ತು ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆ ಶೇ.5ರಷ್ಟು ಇಳಿಕೆಯಾಯಿತು. ಆರ್ ಬಿಡಿ ಪ್ಲಾಮಾಲೀನ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕ ಸದ್ಯ ಶೇ.32.5 ಇದ್ದಿದ್ದು ಶೇ.17.5ಕ್ಕೆ ಇಳಿಕೆಯಾಯಿತು.
ಕಡಿತಕ್ಕೂ ಮುನ್ನ ಎಲ್ಲ ರೂಪದ ಕಚ್ಚಾ ಖಾದ್ಯ ತೈಲಗಳ ಮೇಲೆ ಕೃಷಿ ಮೂಲಸೌಕರ್ಯ ಸೆಸ್ ಶೇ.20ರಷ್ಟು ಇತ್ತು. ಕಡಿತದ ನಂತರ ಕಚ್ಚಾ ತಾಳೆ ಎಣ್ಣೆ ಬೆಲೆ ಮೇಲೆ ಶೇ.8.25, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ತಲಾ ಶೇ.5.5ರಷ್ಟಾಗಿದೆ.
ಖಾದ್ಯ ತೈಲಗಳ ಬೆಲೆ ನಿಯಂತ್ರಿಸಲು ಸರ್ಕಾರ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಏಕರೂಪಗೊಳಿಸಿತು, ಭವಿಷ್ಯದಲ್ಲಿ ಎನ್ ಸಿಡಿಇಎಕ್ಸ್ ಮೂಲಕ ಸಾಸಿವೆ ಎಣ್ಣೆಯ ಮಾರಾಟ ರದ್ದುಗೊಳಿಸಲಾಯಿತು ಮತ್ತು ದಾಸ್ತಾನು ಸಂಗ್ರಹಕ್ಕೆ ಮಿತಿ ವಿಧಿಸಲಾಯಿತು.
ಪ್ರಮುಖ ಖಾದ್ಯ ತೈಲ ಮಾರಾಟಗಾರರಾದ ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸಗಟು ಮಾರಾಟ ದರವನ್ನು ಪ್ರತಿ ಲೀಟರ್ ಗೆ 4 ರಿಂದ 7 ರೂ. ಕಡಿತಗೊಳಿಸಿವೆ. ಹಬ್ಬದ ಖುತುವಿನಲ್ಲಿ ಗ್ರಾಹಕರಿಗೆ ಪರಿಹಾರವನ್ನು ನೀಡುವ ಸಲುವಾಗಿ ಬೆಲೆಗಳನ್ನು ಇಳಿಕೆ ಮಾಡಲಾಗಿದೆ.
ಹೈದರಾಬಾದ್ ನ ಜೆಮಿನಿ ಇಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್, ಗೋಕುಲ್ ರಿಫಾಯಿಲ್ಸ್ ಅಂಡ್ ಸಾಲ್ವೆಂಟ್, ವಿಜಯ್ ಸೋಲ್ ವೆಕ್ಸ್, ಗೋಕುಲ್ ಅಗ್ರೋ ರಿಸೋಸರ್ಸ್ ಮತ್ತು ಎನ್ .ಕೆ ಪ್ರೊಟೀನ್ಸ್ ಸೇರಿ ಇತರೆ ಹಲವು ಪ್ರಮುಖ ಮಾರಾಟಗಾರರು ಖಾದ್ಯ ತೈಲಗಳ ಸಗಟು ಮಾರಾಟ ದರವನ್ನು ಇಳಿಕೆ ಮಾಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅಧಿಕವಾಗಿದ್ದರೂ ಸಹ, ರಾಜ್ಯ ಸರ್ಕಾರಗಳ ಜೊತೆಗೂಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಮಧ್ಯಪ್ರವೇಶ ಮತ್ತು ಸಕ್ರಿಯ ಕ್ರಮಗಳಿಂದಾಗಿ ಖ್ಯಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ.
ಖಾದ್ಯ ತೈಲಗಳ ಬೆಲೆ ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಹೆಚ್ಚಳವಾಗಿತ್ತು, ಆದರೆ ಅಕ್ಟೋಬರ್ ನಂತರ ಅದರಲ್ಲಿ ಇಳಿಕೆ ಪ್ರವೃತ್ತಿ ಕಂಡುಬರುತ್ತಿದೆ. ಸರ್ಕಾರ ದ್ವಿತೀಯ ಹಂತದ ಖಾದ್ಯ ತೈಲಗಳು ವಿಶೇಷವಾಗಿ ಆಮದು ಅವಲಂಬನೆ ತಗ್ಗಿಸಲು ರೈಸ್ ಬ್ರಾನ್ ಆಯಿಲ್ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಚಿಲ್ಲರೆ ಮಾರಾಟ ದರ 03/11/2021 ಅವಧಿಯಲ್ಲಿ 31/10/2021 (ಘಟಕ: ರೂಪಾಯಿ/ಕಿಲೋಗ್ರಾಮ್ ಗಳಲ್ಲಿ )
ತಾಳೆ ಎಣ್ಣೆ- ಇಳಿಕೆಯಾಗಿರುವುದು
• ದೆಹಲಿ – 6 ರೂ.
• ಆಲಿಘಡ್ - 18 ರೂ.
• ಜೊವಾಯಿ, ಮೇಘಾಲಯ-10 ರೂ.
• ದಿಂಡಿಗಲ್, ತಮಿಳುನಾಡು - 5 ರೂ.
• ಕಡಲೂರು, ತಮಿಳುನಾಡು -7 ರೂ.
ಶೇಂಗಾ ಎಣ್ಣೆ -ಇಳಿಕೆಯಾಗಿರುವುದು
• ದೆಹಲಿ - 7 ರೂ.
• ಸಾಗರ್ , ಮಧ್ಯಪ್ರದೇಶ - 10 ರೂ.
• ಜೊವಾಯಿ ಮೇಘಾಲಯ- 10 ರೂ.
• ಕಡಲೂರು, ತಮಿಳುನಾಡು - 10 ರೂ.
• ಕರೀಂನಗರ, ತೆಲಂಗಣಾ- 5 ರೂ.
• ಆಲಿಗಢ್, ಉತ್ತರ ಪ್ರದೇಶ - 5 ರೂ.
ಸೋಯಾ ಎಣ್ಣೆ-ಇಳಿಕೆಯಾಗಿರುವುದು
• ದೆಹಲಿ- 5 ರೂ.
• ಲೂಧಿಯಾನ, ಪಂಜಾಬ್ - 5 ರೂ.
• ಆಲಿಘಡ್, ಉತ್ತರ ಪ್ರದೇಶ - 5 ರೂ.
• ದುರ್ಗಾ, ಛತ್ತೀಸ್ ಗಢ -11 ರೂ.
• ಸಾಗರ್ , ಮಧ್ಯಪ್ರದೇಶ - 7 ರೂ.
• ನಾಗ್ಪುರ , ಮಹಾರಾಷ್ಟ್ರ - 7 ರೂ.
• ಜೊವಾಯಿ, ಮೇಘಾಲಯ - 5 ರೂ.
ಸೂರ್ಯಕಾಂತಿ ಎಣ್ಣೆ- ಇಳಿಕೆಯಾಗಿರುವುದು
• ದೆಹಲಿ – 10 ರೂ.
• ರೂರ್ಕೆಲಾ, ಒಡಿಶಾ - 5 ರೂ.
• ಜೊವಾಯಿ , ಮೇಘಾಲಯ -20 ರೂ.
***
(Release ID: 1769622)
Visitor Counter : 262